ಎಎಮ್‌ಡಿಯಿಂದ ಹೈ-ಎಂಡ್ ಗೇಮಿಂಗ್ ಜಿಪಿಯುಗಳ ಘೋಷಣೆ; ಫೀಚರ್ಸ್‌ ಏನು?

|

ಅಡ್ವಾನ್ಡಡ್ ಮೈಕ್ರೋ ಡಿವೈಸ್ (AMD) ಬಹುರಾಷ್ಟ್ರೀಯ ಸೆಮಿಕಂಡಕ್ಟರ್ ಕಂಪೆನಿಯಾಗಿದ್ದು, ಇದು ಕಂಪ್ಯೂಟರ್ ಪ್ರೊಸೆಸರ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್‌ ಮಾಡಲಾದ ಡಿವೈಸ್‌ಗಳನ್ನು ಮಾರುಕಟ್ಟೆಗೆ ಲಾಂಚ್‌ ಮಾಡುತ್ತಿದ್ದು, ಇದರ ಜೊತೆಗೆ ಹೈ-ಎಂಡ್ ಗೇಮಿಂಗ್ ಜಿಪಿಯುಗಳನ್ನು ಪರಿಚಯಿಸುತ್ತಿದೆ.

 ಸ್ಕೇಲೆಬಲ್ ಚಿಪ್ಲೆಟ್‌

ಹೌದು, ಸ್ಕೇಲೆಬಲ್ ಚಿಪ್ಲೆಟ್‌ಗಳನ್ನು ಬಳಸಿಕೊಂಡು ರೂಪಿಸಲಾದ ಮೊದಲ ಗೇಮಿಂಗ್ ಜಿಪಿಯುಗಳು ಇವಾಗಿದ್ದು, ಹೆಚ್ಚಿನ ಉತ್ತಮ ಕಾರ್ಯಕ್ಷಮತೆ ಹೊಂದಿರಲಿವೆ. ಅದರಂತೆ ಎಎಮ್‌ಡಿ ಹೊಸ ರೇಡಿಯನ್ RX 7900 XT ಹಾಗೂ ರೇಡಿಯನ್ RX 7900 XTX ಎಂಬ ಎರಡು ಜಿಪಿಯುಗಳನ್ನು ಅನಾವರಣ ಮಾಡಿದೆ. ಇವು RDNA 3 ಆರ್ಕಿಟೆಕ್ಚರ್ ಅನ್ನು ಆಧರಿಸಿ ಕೆಲಸ ಮಾಡಲಿವೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ವಿವರವನ್ನು ಇಲ್ಲಿ ನೀಡಲಾಗಿದೆ ಈ ಲೇಖನ ಓದಿ.

ಪ್ರಮುಖ ಫೀಚರ್ಸ್‌ ವಿವರ

ಪ್ರಮುಖ ಫೀಚರ್ಸ್‌ ವಿವರ

ಈ ಎರಡು ಡಿವೈಸ್‌ಗಳು RDNA 3 ಆರ್ಕಿಟೆಕ್ಚರ್ ಅನ್ನು ಆಧರಿಸಿದ ಇತ್ತೀಚಿನ ಉನ್ನತ ಮಟ್ಟದ ಜಿಪಿಯುಗಳಾಗಿವೆ. ಹಾಗೆಯೇ 5nm ಪ್ರಕ್ರಿಯೆಯಲ್ಲಿ ತಯಾರಿಸಲಾದ ಬಹು ಸ್ಕೇಲೆಬಲ್ ಚಿಪ್ಲೆಟ್‌ಗಳನ್ನು ಬಳಸಿ ಇವುಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಈ ಹಿಂದಿನ ವೇರಿಯಟ್‌ ಆದ RDNA 2 ಗೆ ಹೋಲಿಕೆ ಮಾಡಿಕೊಂಡರೆ ಪ್ರತಿ ವ್ಯಾಟ್‌ಗೆ 70 ಪ್ರತಿಶತದಷ್ಟು ಉತ್ತಮ ಕಾರ್ಯಕ್ಷಮತೆ ಅಥವಾ 54 ಪ್ರತಿಶತ ಹೆಚ್ಚಿನ ಕಾರ್ಯಕ್ಷಮತೆಯನ್ನು ಇವು ನೀಡುತ್ತವೆ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

ಎನ್‌ವಿಡಿಯಾದ ಜೀಫೋರ್ಸ್‌ RTX 4000 ಸರಣಿಯ ಡಿವೈಸ್‌ಗಳಿಗೆ ಈ ರೇಡಿಯನ್ RTX 7900 XTX ಘಟಕಗಳು ಪ್ರತಿಸ್ಪರ್ಧಿ ಆಗಲಿವೆ. ಹಾಗೆಯೇ ರೇಡಿಯನ್ RTX 7900 XTX ಡಿವೈಸ್‌ 2.3GHz ವರೆಗಿನ ಗಡಿಯಾರದ ವೇಗ ಮತ್ತು 24GB RAM ಆಯ್ಕೆಯನ್ನು ಪಡೆದಿದ್ದು, ಇದರಲ್ಲಿ ಒಟ್ಟು ಬೋರ್ಡ್ ವಿದ್ಯುತ್ ಬಳಕೆ ರೇಟ್ 355W ನಷ್ಟಿದೆ. ಇದರ ಜೊತೆಗೆ ರೇಡಿಯನ್ RX 7900 XT 84 ಡಿವೈಸ್‌ 2GHz ಗಡಿಯಾರದ ವೇಗ ಮತ್ತು 20GB RAM ಆಯ್ಕೆ ಪಡೆದಿದ್ದು, ಈ ವೇರಿಯಂಟ್ ವಿದ್ಯುತ್ ಬಳಕೆ 300W ಆಗಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಎರಡೂ ಡಿವೈಸ್‌ಗಳಿಗೆ ಪ್ರಮಾಣಿತ 8 ಪಿನ್ PCIe ಪವರ್ ಕನೆಕ್ಟರ್‌ ಆಯ್ಕೆ ನೀಡಲಾಗಿದ್ದು, ಇದರ ಜೊತೆಗೆ ಡಿಸ್‌ಪ್ಲೇ ಪೋರ್ಟ್, ಹೆಚ್‌ಡಿಎಮ್‌ಐ ಹಾಗೂ ಯುಎಸ್‌ಬಿ ಟೈಪ್-ಸಿ ವಿಡಿಯೋ ಔಟ್‌ಪುಟ್‌ ಕನೆಕ್ಟಿವಿಟಿ ಆಯ್ಕೆ ಇದರಲ್ಲಿದೆ. ಇದರ ಜೊತೆಗೆ ಪಾಲುದಾರ ಬ್ರ್ಯಾಂಡ್‌ಗಳ ಮೂಲಕ ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆ ಸಹ ನೀಡಲಾಗಿದೆ. ಇನ್ನು 480Hz ರಿಫ್ರೆಶ್ ರೇಟ್‌ ಆಯ್ಕೆಯಲ್ಲಿ 4K, 165Hz ರಿಫ್ರೆಶ್ ರೇಟ್‌ನಲ್ಲಿ 8K ಔಟ್‌ಪುಟ್‌ ಗೆ ಬೆಂಬಲ ನೀಡಲಿವೆ. ಇದರೊಂದಿಗೆ AVC ಮತ್ತು HEVC ಕೋಡೆಕ್‌ಗಳೊಂದಿಗೆ ಎನ್‌ಕೋಡ್/ಡಿಕೋಡ್ ಸಹ ಮಾಡಬಹುದಾಗಿದೆ.

ರೇಡಿಯನ್

ರೇಡಿಯನ್ RX 7900 XTX ಆರು MCD ಗಳನ್ನು ಹೊಂದಿದ್ದು, ಪ್ರತಿಯೊಂದೂ 64 ಬಿಟ್ ಅಗಲದ ಬಸ್‌ನಲ್ಲಿ 384 ಬಿಟ್‌ಗಳಷ್ಟಿರುತ್ತದೆ ಹಾಗೆಯೇ ರೇಡಿಯನ್ RX 7900 XT ಐದು ಸಕ್ರಿಯ MCD ಗಳನ್ನು ಹೊಂದಿದ್ದು, 320 ಬಿಟ್ ಗಳನ್ನು ಹೊಂದಿದೆ. ಇದನ್ನು ಒಳಗೊಂಡಂತೆ ಗ್ರಾಫಿಕ್ಸ್ ಕಂಪ್ಯೂಟ ಡೈ (ಜಿಸಿಡಿ) ಅನ್ನು 5nm ನೋಡ್‌ನಲ್ಲಿ ತಯಾರಿಸಲಾಗಿದ್ದು, MCD ಗಳು 6nm ಪ್ರಕ್ರಿಯೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿದೆ. ಇದೆಲ್ಲದರ ಜೊತೆಗೆ ಉತ್ಪಾದನಾ ಸಂಪನ್ಮೂಲಗಳು ಮತ್ತು ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಎಎಮ್‌ಡಿಯು ಈಡಿವೈಸ್‌ಗಳಲ್ಲಿನ ಘಟಕಗಳನ್ನು ಮಿಕ್ಸ್‌ ಮಾಡಲು ಅನುವು ಮಾಡಿಕೊಡುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಎರಡೂ ಡಿವೈಸ್‌ಗಳು ಡಿಸೆಂಬರ್ 13 ರಿಂದ ಜಾಗತಿಕವಾಗಿ ಲಭ್ಯವಿರುತ್ತವೆ. ಇದರಲ್ಲಿ ರೇಡಿಯನ್ RX 7900 XTX ಗೆ $999 (ಭಾರತದಲ್ಲಿ ಸುಮಾರು 81,875 ರೂ.ಗಳು), ಹಾಗೆಯೇ ರೇಡಿಯನ್ RX 7900 XT ಬೆಲೆ $899 (ಸುಮಾರು ರೂ. 73,680) ನಿಗದಿ ಮಾಡಲಾಗಿದೆ.

Best Mobiles in India

Read more about:
English summary
Advanced Micro Devices (AMD) is a multinational semiconductor company. Meanwhile, it has made announcements about high-end gaming GPUs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X