Just In
- 4 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 7 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ 'ಆಂಡ್ರಾಯ್ಡ್ 10 ಓಎಸ್'ನಲ್ಲಿ ಲಭ್ಯವಾಗುವ ಫೀಚರ್ಸ್ ಯಾವುವು ಗೊತ್ತಾ?
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಈಗಾಗಲೇ ಹಲವು ಅಪ್‌ಡೇಟ್ ವರ್ಷನ್‌ಗಳನ್ನು ಕಂಡಿದ್ದು, ಪ್ರಸ್ತುತ ಆಂಡ್ರಾಯ್ಡ್ 9 ಪೈ ಓಎಸ್ ಬಳಕೆಯಲ್ಲಿದೆ. ಹಾಗೆಯೇ ಈಗ ಮತ್ತೆ ಅಪ್‌ಡೇಟ್ ಆಗುತ್ತಿರುವ ಸಮಾಚಾರ ಗೊತ್ತಿರುವುದೇ ಆಗಿದೆ. ಹೊಸ ಅಪ್‌ಡೇಟ್ ವರ್ಷನ್ ಹೆಸರು ಆಂಡ್ರಾಯ್ಡ್ Q ಎಂಬುದಾಗಿ ಸುದ್ದಿಯಾಗಿತ್ತು. ಆದ್ರೆ ವಿಶೇಷವೆಂದರೇ ಗೂಗಲ್ ಸಂಸ್ಥೆಯು ನೂತನ ಅಪ್‌ಡೇಟ್ ಆವೃತ್ತಿಯ ಹೆಸರು 'ಆಂಡ್ರಾಯ್ಡ್ 10' ಎಂದು ಅಧಿಕೃತವಾಗಿ ತಿಳಿಸಿದೆ.

ಹೌದು, ಗೂಗಲ್ ಸಂಸ್ಥೆಯು ಇದೀಗ ತನ್ನ ಬಹುನಿರೀಕ್ಷಿತ ಆಂಡ್ರಾಯ್ಡ್ 10 ಓಎಸ್ ಅನ್ನು ಅಧಿಕೃತವಾಗಿ ಘೋಷಿಸಿದ್ದು, ಮುಂದಿನ ಆವೃತ್ತಿ ಆಂಡ್ರಾಯ್ಡ್ 11 ಓಎಸ್ ಆಗಿರಲಿದೆ ಎಂದು ತಿಳಿಸಿದೆ. ಹಾಗೆಯೇ ಕಂಪನಿಯು ಆಂಡ್ರಾಯ್ಡ್ 10 ಓಎಸ್ ಆವೃತ್ತಿಯ ಲೊಗೊವನ್ನು ಗ್ರೀನ್ ನಿಂದ ಬ್ಲ್ಯಾಕ್‌ಗೆ ಚೇಂಜ್ ಮಾಡಿದ್ದು, ಅಪ್‌ಡೇಟ್ ವರ್ಷನ್‌ನಲ್ಲಿ ಹಲವು ಮಹತ್ತರ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್ ಸೇರಿಕೊಳ್ಳಲಿವೆ.

ಈಗಾಗಲೇ ಗೂಗಲ್ ಹಂತ ಹಂತವಾಗಿ ಅಪ್‌ಡೇಟ್ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯಿಂದ, ಜೆಲ್ಲಿಬಿನ್, ಲಾಲಿಪಾಪ್ ಮತ್ತು ಓರಿಯೊ ಓಎಸ್ ಪರಿಚಯಿಸಿದ್ದು, ಇದೀಗ ಆಂಡ್ರಾಯ್ಡ್ 9 ಪೈ ಆವೃತ್ತಿಯೂ ಎಂಡ್ ಆಗುವ ಸಮಯ ಹತ್ತಿರವಿದೆ. ಹಾಗಾದರೇ ಗೂಗಲ್‌ನ ಹೊಸ ಆಂಡ್ರಾಯ್ಡ್ 10 ಓಎಸ್‌ನಲ್ಲಿ ಯಾವೆಲ್ಲಾ ನೂತನ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಲೊಕೇಶನ್ ಪರ್ಮಿಶನ್ ಆಯ್ಕೆ
ಬಹುತೇಕ ಆಪ್‌ಗಳು ಲೊಕೇಶನ್ ಆಕ್ಸಸ್ ಬೇಡುತ್ತವೆ. ಬಳಕೆದಾರರು ಸಹ ಆಕ್ಸಸ್ ನೀಡಿರುತ್ತಾರೆ. ಆದ್ರೆ ಆಪ್ ಬಳಕೆ ಮಾಡದಿದ್ದಾಗೂ ಆಪ್‌ಗಳ ಬ್ಯಾಕ್‌ಗ್ರೌಂಡ್‌ನಲ್ಲಿ ಬಳಕೆದಾರರ ಲೊಕೇಶನ್ ಟ್ರಾಕ್ ಮಾಡುತ್ತಿರುತ್ತವೆ. ಹೊಸ ಆಂಡ್ರಾಯ್ಡ್ 10 ಓಎಸ್ ಬಳಕೆದಾರರಿಗೆ ಲೊಕೇಶನ್ ಕಂಟ್ರೋಲ್ ಮಾಡುವ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದ್ದು, ಆಪ್ ಬಳಸದಿದ್ದಾಗ ಲೊಕೇಶನ್ ಟ್ರಾಕ್ ಮಾಡುವುದಿಲ್ಲ.

ಹೊಸ ಪ್ರೈವಸಿ ಫೀಚರ್
ಆಂಡ್ರಾಯ್ಡ್ 10 ಓಎಸ್ ಪ್ರೈವಸಿ ಆಯ್ಕೆಯಲ್ಲಿಯೂ ಹೊಸ ಬದಲಾವಣೆಯ ಆಯ್ಕೆಗಳು ಸೇರಲಿವೆ. ಕೆಲವು ಆಪ್‌ಗಳು ಅನಗತ್ಯವಾಗಿ ಸ್ಮಾರ್ಟ್‌ಫೋನ್‌ನ ಕಾಂಟ್ಯಾಕ್ಟ್ ಮತ್ತು ಗ್ಯಾಲರಿ ಆಕ್ಸಸ್ ಕೇಳುತ್ತವೆ. ಅನಗತ್ಯ ಆಸ್ಸಸ್ ನಿಯಂತ್ರಿಸುವ ಆಯ್ಕೆಗಳು ಇರಲಿವೆ. ಹಾಗೆಯೇ ಸ್ಮಾರ್ಟ್‌ಫೋನಿನಲ್ಲಿ ಏನೇ ಬದಲಾವಣೆ ಮಾಡಿದರೂ, ಬಳಕೆದಾರ ಪರ್ಮಿಶನ್ ಕೇಳುವ ಆಯ್ಕೆ ಇರಲಿದೆ.

ವಿಶೇಷ ಆಡಿಯೊ ಫೀಚರ್
ಸ್ಮಾರ್ಟ್‌ಫೋನ್‌ನಲ್ಲಿ ಆಡಿಯೊ ಕೇಳುತ್ತಿರುವಾಗ, ಅದೇ ಸಮಯಕ್ಕೆ ಆಡಿಯೊ ರೆಕಾರ್ಡ್ ಮಾಡಿಕೊಳ್ಳಬೇಕಾದರೇ ರೆಕಾರ್ಡಿಂಗ್ ಸರಿಯಾಗಿ ಆಗುವುದಿಲ್ಲ. ಆದ್ರೆ ಆಂಡ್ರಾಯ್ಡ್ 10 ಓಎಸ್‌ನಲ್ಲಿ ಒಂದೇ ವೇಳೆಗೆ ಆಡಿಯೊ ಕೇಳಲೂ ಬಹುದು ಮತ್ತು ಆಡಿಯೊ ರೆಕಾರ್ಡ್ ಸಹ ಮಾಡಬಹುದಾದ ಆಯ್ಕೆ ಸೇರಿಕೊಳ್ಳಲಿದೆ. ವಾಯಿಸ್ ರೆಕಾರ್ಡಿಂಗ್ ಆಪ್ ಮತ್ತು ಗೂಗಲ್ ಅಸಿಸ್ಟಂಟ್ ಒಟ್ಟಿಗೆ ಬಳಸಬಹುದಾಗಿದೆ.

ಬಬಲ್ಸ್ ನೋಟಿಫಿಕೇಶನ್
ಆಂಡ್ರಾಯ್ಡ್ 10 ಓಎಸ್ ನೋಟಿಫೀಕೇಶನ್ ಆಯ್ಕೆಯಲ್ಲಿ ಹೊಸದಾಗಿ ಬಬಲ್ಸ್ ಆಯ್ಕೆ ಪರಿಚಯವಾಗಲಿದೆ. ಮಲ್ಟಿಟಾಸ್ಕ್ ಕೆಲಸಗಳ ನಡುವೆಯೂ ನೋಟಿಫಿಕೇಶನ್ ನೋಡುವ ಆಯ್ಕೆ ಇರಲಿದೆ. ಹಾಗೂ ನೋಟಿಫಿಕೇಶನ್‌ಗಳ ಕಿರಿಕಿರಿ ಬೇಡವಾಗದರೇ ಸೆಟ್ಟಿಂಗ್‌ನಲ್ಲಿ ಆಫ್ ಮಾಡಿಕೊಳ್ಳುವ ಆಯ್ಕೆ ಸಹ ಇರಲಿದೆ. ಬಳಕೆದಾರರಿಗೆ ನೋಟಿಫಿಕೇಶನ್ ಈಗ ಮತ್ತಷ್ಟು ಸುಲಭವಾಗಲಿದೆ.

ಪೋಲ್ಡೆಬಲ್ ಡಿವೈಸ್
ಮಾರುಕಟ್ಟೆಗೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡಲಿವೆ ಈ ಫೋನ್‌ಗಳಿಗೆ ಆಂಡ್ರಾಯ್ಡ್ 10 ಓಎಸ್ ಪೂರಕವಾಗಿ ಕಾರ್ಯಮಾಡಲಿದ್ದು, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫೋಲ್ಡೆ, ಹುವಾವೆ ಮೇಟ್ ಎಕ್ಸ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಪ್‌ಗಳ ಸ್ಕ್ರೀನ್ ಗಾತ್ರ ಬದಲಿಸಬಹುದು, ಮಲ್ಟಿವಿಂಡೊದಲ್ಲಿ ಕೆಲಸ ಮಾಡಬಹುದು ಮತ್ತು ಡಿಸ್‌ಪ್ಲೇಯಲ್ಲಿ ಮತ್ತಷ್ಟು ಬದಲಾವಣೆ ಮಾಡಬಹುದಾಗಿದೆ.

ಡಾರ್ಕ್ ಮೋಡ್ ಆಯ್ಕೆ
ಸದ್ಯ ಜನಪ್ರಿಯ ಆಪ್ಸ್‌ಗಳು ಸಹ ಡಾರ್ಕ್‌ಮೋಡ್ ಫೀಚರ್ ಅನ್ನು ಅಳವಡಿಸಿಕೊಳ್ಳುತ್ತಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳ ಸೆಟ್ಟಿಂಗ್‌ನಲ್ಲಿಯೂ ನೋಡಬಹುದಾಗಿದೆ. ಹೊಸ ಆಂಡ್ರಾಯ್ಡ್ 10 ಓಎಸ್‌ಬಲ್ಲಿಯೂ ಈ ಫೀಚರ್ ಸೇರಲಿದ್ದು, ಫೋನ್ ಮತ್ತು ಆಪ್ಸ್‌ಗಳಲ್ಲಿ ಡಾರ್ಕ್‌ಮೋಡ್ ಆಯ್ಕೆ ಬಳಸಬಹುದಾಗಿದೆ. ಈ ಆಯ್ಕೆಯು ಬ್ಯಾಟರಿ ಉಳಿಕೆಗೆ ಮತ್ತು ರಾತ್ರಿ ಸಮಯದಲ್ಲಿ ಅನುಕೂಲಕರ ಎನಿಸಲಿದೆ.

QR ಕೋಡ್ ಮತ್ತು ವೈಫೈ
ಪ್ರಸ್ತುತ ಇತರರ ಸ್ಮಾರ್ಟ್‌ಫೋನ್ ಮೂಲಕ ವೈಫೈ ಕನೆಕ್ಟ್ ಮಾಡಿಕೊಳ್ಳಬೇಕಿದ್ದರೇ ಅವರ ಪಾಸ್‌ವರ್ಡ್ ಎಂಟ್ರಿ ಮಾಡಬೇಕಿದೆ. ಆದ್ರೆ ಹೊಸ ಆಂಡ್ರಾಯ್ಡ್ 10 ಓಎಸ್ ಫೋನ್‌ನಲ್ಲಿ ವೈಫೈ ಕನೆಕ್ಟ್ ಬಳಸಲು ಪಾಸ್‌ವರ್ಡ್ ಬದಲು QR ಕೋಡ್ ಸ್ಕ್ಯಾನ್ ಮಾಡುವ ಆಯ್ಕೆ ಕಾಣಿಸಿಕೊಳ್ಳಲಿದೆ. ಹೊಸ ಓಎಸ್ ಬೆಂಬಲಿತ ಸ್ಮಾರ್ಟ್‌ಫೋನಿನ ವೈಫೈ ಕೋಡ್ ಜನರೇಟ್ ಆಗುತ್ತದೆ, ಆ ಕೋಡ್ ಸ್ಕ್ಯಾನ್ ಮಾಡಿ ವೈಫೈ ಕನೆಕ್ಟ್ ಮಾಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470