ಆಂಡ್ರಾಯ್ಡ್ ಒರಿಯೋದಲ್ಲಿರುವ ಈ ಆಯ್ಕೆ ಆಪಲ್‌ನಲ್ಲಿಯೂ ಇಲ್ಲವಂತೆ..!

|

ಆಂಡ್ರಾಯ್ಡ್ ಒರಿಯೋ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದು, ಒರಿಯೋ ತನ್ನ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ಮತ್ತು ಅವಕಾಶವನ್ನು ನೀಡುತ್ತಿದೆ. ಇದೇ ಹಿನ್ನಲೆಯಲ್ಲಿ ಒರಿಯೋ ಬಳಕೆದಾರರು ಪಡೆದುಕೊಳ್ಳಲಿರುವ ವಿವಿಧ ಆಯ್ಕೆಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

ಆಂಡ್ರಾಯ್ಡ್ ಒರಿಯೋದಲ್ಲಿರುವ ಈ ಆಯ್ಕೆ ಆಪಲ್‌ನಲ್ಲಿಯೂ ಇಲ್ಲವಂತೆ..!

ಸದ್ಯ ಎಲ್ಲೆಡೆ ಸಾರ್ವಜನಿಕವಾಗಿ ಉಚಿತ ವೈ-ಫೈಗಳನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಒರಿಯೋ ತನ್ನ ಬಳಕೆದಾರರಿಗೆ ವೈ-ಫೈಗಳು ನೀಡುತ್ತಿರುವ ಇಂಟರ್ನೆಟ್ ವೇಗವನ್ನು ಮೊದಲೇ ಲೆಕ್ಕಹಾಕಿ, ಕೆನೆಕ್ಟ್ ಮಾಡುವ ಮುನ್ನವೇ ತೋರಿಸಲಿದೆ ಎನ್ನಲಾಗಿದೆ.

ಓದಿರಿ: ವಾಟ್ಸ್‌ಆಪ್‌ನಲ್ಲಿ ಕೇವಲ ಚಾಟಿಂಗ್ ಅಲ್ಲ, ದುಡ್ಡು ಮಾಡಿ..! ಹೇಗೆ..?

ನಾಲ್ಕು ಮಾದರಿಯಲ್ಲಿ ತೋರಿಸಲಿದೆ:

ನಾಲ್ಕು ಮಾದರಿಯಲ್ಲಿ ತೋರಿಸಲಿದೆ:

ಒರಿಯೋ ವೈ-ಫೈ ವೇಗವನ್ನು ನಾಲ್ಕು ವಿಭಾಗದಲ್ಲಿ ತೋರಿಸಲಿದೆ ಎನ್ನಲಾಗಿದೆ. 20 MBPSಗಿಂತಲೂ ವೇಗದ ವೈಫೈಯನ್ನು ಅತೀ ವೇಗದ ವೈ-ಫೈ ಎಂದು, 5 MBPS-20 MBPS ವೇಗದ ವೈ-ಫೈಯನ್ನು ವೇಗದ ವೈ-ಫೈ ಎಂದು ತೋರಿಸಲಿದ್ದು, ಹಾಗೆಯೇ 5 MBPS-1 MBPS ವೇಗದ ವೈ-ಫೈ ಅನ್ನು ಓಕೆ ಎಂದು ಇದಕ್ಕಿಂತ ಕಡಿಮೆ ವೇಗದ ವೈ-ಫೈ ಅನ್ನು ಸ್ಲೋ ಎಂದು ತೋರಿಸಲಿದೆ.

ಆಯ್ಕೆ ಸುಲಭ:

ಆಯ್ಕೆ ಸುಲಭ:

ಹೀಗೆ ವೈ-ಫೈ ವೇಗವನ್ನು ತಿಳಿಸುವುದರಿಂದಾಗಿ ಬಳಕೆದಾರರು ತಮಗೆ ಬೇಕಾದ ಇಲ್ಲವೇ ವೇಗದ ಇಂಟರ್ನೆಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಕಡಿಮೆ ವೇಗದ ವೈ-ಫೈ ಬಳಕೆ ಮಾಡಿಕೊಂಡು ತೊಂದರೆ ಅನುಭವಿಸುವುದು ತಪ್ಪಲಿದೆ.

ಡೌನ್‌ಲೋಡ್-ವಿಡಿಯೋ:

ಡೌನ್‌ಲೋಡ್-ವಿಡಿಯೋ:

ಇತ್ತೀಚಿನ ದಿನಗಳಲ್ಲಿ ವೈ-ಫೈ ನಲ್ಲಿ ವೇಗದ ಸೇವೆ ದೊರೆಯಲಿದ್ದು, ಹೀಗಾಗಿ ವೇಗವನ್ನು ನೋಡಿಕೊಂಡು ಬಳಕೆ ಮಾಡಿಕೊಂಡರೆ ಡೌನ್‌ಲೋಡ್ ಮತ್ತು ವಿಡಿಯೋಗಳನ್ನು ನೋಡಬಹುದಾಗಿದೆ. ಕಡಿಮೆ ವೇಗದಲ್ಲಿ ಇವುಗಳು ಕಾರ್ಯನಿರ್ವಹಿಸುವುದಿಲ್ಲ.

ಇನ್ನು ಇದೇ:

ಇನ್ನು ಇದೇ:

ಇದಲ್ಲದೇ ಆಂಡ್ರಾಯ್ಡ್ ಒರಿಯೋದಲ್ಲಿ ಸಾಕಷ್ಟು ಹೊಸ ತನಗಳನ್ನು ನೀಡಲು ಗೂಗಲ್ ಮುಂದಾಗಿದೆ. ಇದನ್ನು ಬಳಕೆ ಮಾಡಿಕೊಂಡು ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಒಟ್ಟಿನಲ್ಲಿ ಆಂಡ್ರಾಯ್ಡ್ ಓರಿಯೋ ಹಿಂದಿಗಿಂತಲೂ ಬೆಸ್ಟ್ ಆಗಿದೆ.

Best Mobiles in India

English summary
Android 8.1 Oreo now displays Wi-Fi speeds. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X