ಆಂಡ್ರಾಯ್ಡ್ ಮೇಸೇಜ್‌ನಲ್ಲಿ ವೆಬ್ ಅಕ್ಷರಗಳನ್ನು ಕಳುಹಿಸಬಹುದು..!

By GizBot Bureau
|

ಗೂಗಲ್ ಕೂಡ ಆಂಡ್ರಾಯ್ಡ್ ಪ್ಲಾಟ್ ಫಾರ್ಮ್ ನಲ್ಲಿ RCS- ಬೇಸ್ ಆಗಿರುವ ಮೇಸೇಜಿಂಗ್ ಗಳನ್ನು ಪ್ರಮಾಣೀಕರಿಸುವುದಕ್ಕೆ ಮುಂದಾಗುತ್ತಿದೆ ಯಾಕೆಂದರೆ, ಪ್ರತಿಯೊಬ್ಬರೂ ಕೂಡ ಸದ್ಯ ಇಂಟರ್ನೆಟ್ ಆಧಾರಿತ ಮೆಸೇಜಿಂಗ್ ಸೇವೆಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಂತ ಇದು ಆಶ್ಚರ್ಯ ಹುಟ್ಟಿಸುವ ಸುದ್ದಿಯೇನಲ್ಲ, ಯಾಕೆಂದರೆ ಈಗಾಗಲೇ ತಂತ್ರಜ್ಞಾನ ಆಸಕ್ತರು ಈ ಬಗ್ಗೆ ಸುಳಿವು ನೀಡಿದ್ದರು ಮತ್ತು
RCS ಬೇಸ್ ನ ಮೆಸೇಜಿಂಗ್ ಆಪ್ ಗಳಲ್ಲಿ ಬದಲಾವಣೆ ನಿಶ್ಚಿತ ಎಂಬುದು ಖಚಿತವಾಗಿತ್ತು.

ಆದರೆ ಗೂಗಲ್ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಮತ್ತು ಆಂಡ್ರಾಯ್ಡ್ ಮೇಸೇಜಿಂಗ್ ಮೂಲಕ ಬಳಕೆದಾರರು ವೆಬ್ ನಲ್ಲಿರುವ ಅಕ್ಷರಗಳನ್ನು ಕಳುಹಿಸಬಹುದು ಮತ್ತು ಪಡೆಯಲೂ ಬಹುದು ಎಂಬುದನ್ನು ಖಾತ್ರಿ ಪಡಿಸಿದೆ.

ಆಂಡ್ರಾಯ್ಡ್ ಮೇಸೇಜ್‌ನಲ್ಲಿ ವೆಬ್ ಅಕ್ಷರಗಳನ್ನು ಕಳುಹಿಸಬಹುದು..!

ಇನ್ನು ಮುಂದೆ ಬಳಕೆದಾರರು ತಮ್ಮ ಫೋನಿನಲ್ಲಿರುವ ಆಂಡ್ರಾಯ್ಡ್ ಮೆಸೇಜ್ ಆಪ್ ನ್ನು ವೆಬ್ ಇಂಟರ್ ಫೇಸ್ ಜೊತೆಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಈ ವೈಶಿಷ್ಟ್ಯವು ಎಲ್ಲಾ ಫಾರ್ಮೆಟ್ ಗಳನ್ನೂ ಬೆಂಬಲಿಸುತ್ತದೆಯಂತೆ ಉದಾಹರಣೆಗೆ ಅಕ್ಷರಗಳು, ಚಿತ್ರಗಳು, ಸ್ಟಿಕ್ಕರ್ ಗಳು, ಎಮೋಜಿಗಳು ಇತ್ಯಾದಿ.

ಆದರೆ, ಸಂಪೂರ್ಣ ಚಿತ್ರಣವು ಗೊತ್ತಾಗಬೇಕಿದ್ದರೆ ಈ ವೈಶಿಷ್ಟ್ಯವು ಬಿಡುಗಡೆಗೊಂಡರೆ ಮಾತ್ರ ಸಾಧ್ಯವಾಗುತ್ತದೆ. ಇನ್ನು ಈ ವೈಶಿಷ್ಟ್ಯವು ಎಲ್ಲರಿಗೂ ಲಭಿಸಲಿದ್ಯಾ ಎಂಬ ಬಗ್ಗೆ ಹೇಳುವುದಾದರೆ ಅದೂ ಕೂಡ ನೀವು ಬಳಸುವು ಫೋನ್ ಮತ್ತು ಅದು RCS ನ್ನು ಬೆಂಬಲಿಸುತ್ತದೆಯಾ ಅಥವಾ ಇಲ್ಲವಾ ಎಂಬುದರ ಆಧಾರದ ಮೇಲೆ ನಿರ್ಧರಿತವಾಗುತ್ತದೆಯಂತೆ.

ಆಂಡ್ರಾಯ್ಡ್ ಮೆಸೇಜ್ ನ್ನಲ್ಲಿ ವೆಬ್ ನ ಸಂದೇಶ ರವಾನಿಸಬೇಕು ಎಂದರೆ ಸದ್ಯ ವಾಟ್ಸ್ ಆಪ್ ಮತ್ತು ಅಲೋ ನಲ್ಲಿ ಹೇಗೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರೋ ಹಾಗೆ ಮಾಡಬೇಕಾಗುತ್ತದೆ. ಅಧಿಕೃತ ವೆಬ್ ಸೈಟ್ ಗೆ ಹೋದ ನಂತರ, ಮೊಬೈಲ್ ಆಪ್ ಮುಖಾಂತರ QR ಕೋಡನ್ನು ಸ್ಕ್ಯಾನ್ ಮಾಡಬೇಕು , ಆ ಮೂಲಕ ಡಿವೈಸ್ ಮತ್ತು ಆಪ್ ಎರಡೂ ಕೂಡ ಕನೆಕ್ಟ್ ಆಗಬೇಕು. ಒಮ್ಮೆ ಪೇರಿಂಗ್ ಆದ ನಂತರ, ಬಳಕೆದಾರರು ವೆಬ್ ಮುಖಾಂತರ ಮೆಸೇಜ್ ಗಳನ್ನು ಕಳುಹಿಸಬಹುದು ಮತ್ತು ನೋಡಬಹುದು, ಪಡೆಯಲೂ ಬಹುದಾಗಿರುತ್ತದೆ.

ಆದರೆ, ಅಲ್ಲಿ ಕ್ಯಾಚ್ ಇದೆ. ಒಂದು ವೇಳೆ ಬಳಕೆದಾರರು ನವೀನವಾದ ಆಂಡ್ರಾಯ್ಡ್ ಮೇಸೇಜ್ ಆಪ್ ಬಳಸುತ್ತಿದ್ದರೆ., ಈ ವೈಶಿಷ್ಟ್ಯವು ಸದ್ಯದಲ್ಲೇ ಲೈವ್ ಗೆ ಬರಲಿದೆ. ಗೂಗಲ್ ಈಗಾಗಲೇ ಇದನ್ನು ಬಿಡುಗಡೆಗೊಳಿಸಲು ಸನ್ದ್ಧವಾಗುತ್ತಿದ್ದು, ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ.

ಮೇಲಿನ ಬದಲಾವಣೆಗಳನ್ನು ಹೊರತು ಪಡಿಸಿದರೆ, ಮೇಸೇಜಸ್ ಆಪ್ ನಲ್ಲಿ ಇನ್ನಷ್ಟು ಹೊಸ ವೈಶಿಷ್ಟ್ಯಗಳೂ ಕೂಡ ಸೇರಿಕೊಳ್ಳಲಿವೆಯಂತೆ. ಬಳಕೆದಾರರು ಟೆಕ್ಸ್ಟ್ ಕಂಪೋಸ್ ಬಾರ್ ನಲ್ಲಿರುವ “ಪ್ಲಸ್” ಗುಂಡಿಯನ್ನು ಒತ್ತಿ GIFs ಗಳ ಹುಡುಕಾಟವನ್ನು ನಡೆಸಬಹುದು. ಇತರೆ ಇನ್ಸ್ಟಂಟ್ಪ್ ಮೆಸೇಜಿಂಗ್ ಆಪ್(IM) ಗಳಂತೆ ಅವರ ಮಾತುಕತೆಯ ನಡುವೆಯೇ ಲಿಂಕ್ ಗಳನ್ನು ನೋಡಲು ಅವಕಾಶವಿರುತ್ತದೆ.

ಆಂಡ್ರಾಯ್ಡ್ ಸ್ಮಾರ್ಟ್ ರಿಪ್ಲೇ ಯು ಸದ್ಯ ಎಲ್ಲಾ ಬಳಕೆದಾರರಿಗೆ ಇಂಗ್ಲೀಷ್ ನಲ್ಲಿ ಲಭ್ಯವಿದ್ದು, ಇತರೆ ಭಾಷೆಯಲ್ಲೂ ಕೂಡ ಮುಂದಿನ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಬಳಕೆದಾರರು ಯಾವುದೇ ಸ್ಮಾರ್ಟ್ ರಿಪ್ಲೈ ಗಳನ್ನು ಟ್ಯಾಪ್ ಮಾಡಬಹುದು ಮತ್ತು ಏನನ್ನೂ ಟೈಪ್ ಮಾಡದೇ ಕೂಡಲೇ ಮೆಸೇಜ್ ಗಳನ್ನು ಕಳುಹಿಸಲು ಅವಕಾಶ ಲಭ್ಯವಾಗಿದೆ.

Best Mobiles in India

English summary
Android “Messages” will soon allow users to send text from the web. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X