ಆಂಡ್ರಾಯ್ಡ್‌ ಬಳಕೆದಾರರೆ ಈ ವರ್ಷ ನಿಮ್ಮ ಸ್ಮಾರ್ಟ್‌ಫೋನ್‌ ಬದಲಾಗಲಿದೆ!!

|

ಪ್ರಿಯ ಸ್ಮಾರ್ಟ್‌ಫೋನ್‌ ಬಳಕೆದಾರರೇ ಈ ವರ್ಷ ನಿಮ್ಮ ಸ್ಮಾರ್ಟ್‌ಫೋನ್ ಆಪರೇಟಿಂಗ್‌ನಲ್ಲಿ ಬದಲಾವಣೆ ಆಗಲಿದೆ. ಏಕೆಂದರೇ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್‌ ಸಿಸ್ಟಮ್ ಹೊಸ ಓಎಸ್‌ ಆಂಡ್ರಾಯ್ಡ್‌ Q ಓಎಸ್‌ಗೆ ಅಪ್‌ಡೇಟ್‌ ಆಗಲಿದೆ. ಅಪ್‌ಡೇಟ್‌ ನಂತರ ಭಾರಿ ಫೀಚರ್ಸ್‌ಗಳನ್ನು ಸೇರಿಕೊಳ್ಳಲಿದ್ದು, ಜೊತೆಗೆ ಫೋನ್‌ ಬಳಕೆಯಲ್ಲಿ ಹೊಸತನ ಎನಿಸಲಿದೆ.

ಆಂಡ್ರಾಯ್ಡ್‌ ಬಳಕೆದಾರರೆ ಈ ವರ್ಷ ನಿಮ್ಮ ಸ್ಮಾರ್ಟ್‌ಫೋನ್‌ ಬದಲಾಗಲಿದೆ!!

ಹೌದು, ಕ್ಯಾಲಿಫೊರ್ನಿಯಾದಲ್ಲಿ ನಡೆಯುತ್ತಿರುವ ಗೂಗಲ್ I/O ವಾರ್ಷಿಕ ಸಮ್ಮೇಳನದಲ್ಲಿ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಆಂಡ್ರಾಯ್ಡ್‌ Q ಓಎಸ್‌ ಅನ್ನು ಈ ವರ್ಷವೇ ರಿಲೀಸ್‌ ಮಾಡುವುದಾಗಿ ತಿಳಿಸಿದೆ. ಗೂಗಲ್ ತಯಾರಿಸಿರುವ ಈ ಆಂಡ್ರಾಯ್ಡ್‌ Q ಓಎಸ್‌ನಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನೂತನ ಫೀಚರ್ಸ್‌ಗಳನ್ನು ದೊರೆಯಲಿವೆ. ಹಾಗಾದರೇ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪ್ರೈವೆಸಿ ಆಯ್ಕೆಗಳು

ಪ್ರೈವೆಸಿ ಆಯ್ಕೆಗಳು

ಗೂಗಲ್ ಈ ವರ್ಷ ಬಿಡುಗಡೆ ಮಾಡಲಿರುವ ತನ್ನ ಹೊಸ ಆಂಡ್ರಾಯ್ಡ್‌ Q ಓಎಸ್‌ ನಲ್ಲಿ ಪ್ರೈವೆಸಿಗೆ ಹೆಚ್ಚಿನ ಗಮನ ನೀಡಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಪ್ರೈವೆಸಿ ಆಯ್ಕೆಗಳನ್ನು ಸೆಟ್ಟ್ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಪ್ರಮುಖ ಡೇಟಾ, ಗ್ಯಾಲ್ಯಾರಿ, ಕ್ಯಾಮೆರಾ, ಅಕೌಂಟ್‌ಗಳ ಸೇರಿದಂತೆ ಬಳಸುವ ಪ್ರತಿ ಆಪ್‌ಗೂ ಪ್ರೈವೆಸಿ ಆಯ್ಕೆಗಳು ದೊರೆಯಲಿವೆ.

ಫೋಕಸ್‌ ಮೋಡ್

ಫೋಕಸ್‌ ಮೋಡ್

ಆಂಡ್ರಾಯ್ಡ್‌ Q ಓಎಸ್‌ನಲ್ಲಿ ಫೋಕಸ್‌ ಎಂಬ ಹೊಸ ಆಯ್ಕೆಯನ್ನು ಪರಿಚಯಿಸಲಿದ್ದು, ಈ ಆಯ್ಕೆಯಲ್ಲಿ ಅನಗತ್ಯ ಅಲರ್ಟ್‌ ಮತ್ತು ನೋಟಿಫಿಕೇಶನಗಳನ್ನು ಬ್ಲಾಕ್‌ ಮಾಡುವ ಅವಕಾಶವು ದೊರೆಯಲಿದೆ. ಅಗತ್ಯವಿರುವ ನೋಟಿಫಿಕೇಶನಗಳು ಬಳಕೆದಾರರಿಗೆ ಕಾಣಿಸುತ್ತವೆ. ಮುಖ್ಯವೆನಿಸುವ ಕಾಂಟ್ಯಾಂಟ್‌ಗಳೊಂದಿಗೆ ಕನೆಕ್ಟ್‌ ಮಾಡುವ ಆಯ್ಕೆ ಇರಲಿದೆ.

ನೋಟಿಫಿಕೇಶನ ಕಂಟ್ರೊಲ್‌

ನೋಟಿಫಿಕೇಶನ ಕಂಟ್ರೊಲ್‌

ಸ್ಮಾರ್ಟ್‌ಫೋನ್‌ ಎಂದ ಮೇಲೆ ನೋಟಿಫಿಕೇಶನಗಳ ಪಟ್ಟಿ ಬರುತ್ತಲೇ ಇರುತ್ತವೆ. ಆದರೆ ಅವುಗಳಲ್ಲಿ ಹಲವು ಉಪಯುಕ್ತವಿರುವುದಿಲ್ಲ. ಅವುಗಳನ್ನು ನೀವು ಆಂಡ್ರಾಯ್ಡ್‌ Q ಓಎಸ್‌ ನಲ್ಲಿ ಕಂಟ್ರೊಲ್ ಮಾಡಬಹುದಾಗಿದೆ. 'ಶೋ ಸೈಲೆಂಟ್ಲಿ' ಮತ್ತು 'ಕಿಪ್ ಅಲರ್ಟ್‌' ಆಯ್ಕೆಗಳು ಲಭ್ಯವಾಗಲಿವೆ ಇವುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸೆಟ್ಟಿಂಗ್ ಮಾಡಬಹುದಾಗಿದೆ.

ಲೊಕೇಶನ್ ಶೇರ್‌ ಪ್ರೈವೆಸಿ

ಲೊಕೇಶನ್ ಶೇರ್‌ ಪ್ರೈವೆಸಿ

ಸ್ಮಾರ್ಟ್‌ಫೋನ್‌ ಲೊಕೇಶನ್‌ ಟ್ರಾಕ್‌ ಮಾಡುತ್ತಿರುತ್ತದೆ. ಸದ್ಯ ಲೊಕೇಶನ್ ಶೇರಿಂಗ್ ಆಯ್ಕೆಯನ್ನು ಸಹ ಕಾಣಿತ್ತಿದ್ದೆವೆ ಆದರೆ ಆಂಡ್ರಾಯ್ಡ್‌ Q ಓಎಸ್‌ ನಲ್ಲಿ ಲೊಕೇಶನ್ ಪ್ರೈವೆಸಿ ಆಯ್ಕೆ ದೊರೆಯಲಿದೆ. ಈ ಆಯ್ಕೆ ಮೂಲಕ ಅಗತ್ಯವಿದ್ದಾಗ ಮತ್ತು ಆಪ್‌ ಬಳಕೆ ಮಾಡುತ್ತಿರುವಾಗ ಮಾತ್ರ ಲೊಕೇಶನ್ ಶೇರ್‌ ಆಗುವಂತೆ ಸೆಟ್ಟ ಮಾಡಬಹುದು.

Undo ಆಯ್ಕೆ

Undo ಆಯ್ಕೆ

ಸ್ಮಾರ್ಟ್ಫೋನ್‌ಗಳಲ್ಲಿ ಅಪ್ಪಿತಪ್ಪಿ ಪ್ರಮುಖ ಆಪ್‌ ಏನಾದರೂ ಡಿಲೀಟ್ ಆದರೆ ಮತ್ತೆ ಮರಳಿ ಪಡೆಯುವ ಆಯ್ಕೆಯು ಆಂಡ್ರಾಯ್ಡ್ Q ಓಎಸ್‌ನಲ್ಲಿ ಲಭ್ಯವಾಗಲಿದೆ. ಅಂಡು ಆಯ್ಕೆಯನ್ನು ನೀಡಲಿದ್ದು, ಬಳಕೆದಾರುರು ಅಕಸ್ಮಿಕವಾಗಿ ಯಾವುದೇ ಆಪ್ ಡಿಲೀಟ್ ಮಾಡಿದರೇ ಈ ಆಯ್ಕೆ ಮೂಲಕ ಡಿಲೀಟ್ ಆಗಿರುವ ಆಪ್‌ ಅನ್ನು ಮರಳಿ ಪಡೆಯಬಹುದು.

ಡಾರ್ಕ್‌ ಮೋಡ್ ಆಯ್ಕೆ

ಡಾರ್ಕ್‌ ಮೋಡ್ ಆಯ್ಕೆ

ಸ್ಮಾರ್ಟ್‌ಫೋನ್‌ ಬಳಕೆದಾರರ ಬಹುನಿರೀಕ್ಷಿತ ಡಾರ್ಕ್‌ಮೋಡ್ ಆಯ್ಕೆಯು ಆಂಡ್ರಾಯ್ಡ್‌ Q ಓಎಸ್‌ನಲ್ಲಿ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಲಭ್ಯವಾಗಲಿದ್ದು, ಪ್ರಮುಖ ಆಪ್‌ಗಳಿಗೆ ಸಹ ಡಾರ್ಕ್‌ ಮೋಡ್‌ ಆಯ್ಕೆ ಅನ್ವಯವಾಗಲಿದೆ. ಬಳಕೆದಾರರು ಈ ಡಾರ್ಕ್‌ ಮೋಡ್ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ.

ಮೆಸೆಜ್‌ನಲ್ಲಿ ಹೊಸತನ

ಮೆಸೆಜ್‌ನಲ್ಲಿ ಹೊಸತನ

ಆಂಡ್ರಾಯ್ಡ್‌ Q ಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ನಾರ್ಮಲ್ ಟೆಕ್ಸ್ಟ್‌ ಮೆಸೆಜ್ ಆಯ್ಕೆ ಫೇಸ್‌ಬುಕ್‌ ಮೆಸೆಜ್‌ನಂತೆಯೇ ಹೊಸ ಲುಕ್ ಪಡೆದುಕೊಳ್ಳಲಿದೆ. ರೌಂಡ್‌ ಆಕಾರದಲ್ಲಿ ಮೆಸೆಜ್ ಮಾಡಿದವರ ಫೋಟೊ ನೋಟಿಫಿಕೇಶನಲ್ಲಿ ಕಾಣಿಸಿಕೊಳ್ಳಲಿದ್ದು, ಆ ಬಬಲ್‌ ಆಯ್ಕೆ ಟಚ್‌ ಮಾಡುವ ಮೂಲಕ ಮೆಸೆಜ್‌ಗೆ ರಿಪ್ಲೇ ಮಾಡಬಹುದಾಗಿದೆ.

ಶೇರಿಂಗ್ ವೈ-ಫೈ ನೆಟವರ್ಕ್

ಶೇರಿಂಗ್ ವೈ-ಫೈ ನೆಟವರ್ಕ್

ಆಂಡ್ರಾಯ್ಡ್ Q ಓಎಸ್‌ ನಲ್ಲಿ ವೈಫೈ ನೆಟವರ್ಕ್‌ ಬಳಕೆಯ ದಾರಿ ಸುಗಮವಾಗಲಿದ್ದು, ಬರಿ QR ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ವೈ ಫೈ ನೆಟವರ್ಕ್‌ಗೆ ಕನೆಕ್ಟ್‌ ಆಗಬಹುದು. ಯಾವ ಡಿವೈಸ್‌ನಿಂದ ವೈ ಫೈ ಪಡೆಯುತ್ತಿರೊ ಆ ಡಿವೈಸ್‌ನಲ್ಲಿನ QR ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ವೈ ಫೈ ಕನೆಕ್ಟ್ ಮಾಡಿಕೊಳ್ಳಬಹುದು.

ಸ್ಕ್ರೀನ್‌ಶಾರ್ಟ್ ಆಯ್ಕೆ

ಸ್ಕ್ರೀನ್‌ಶಾರ್ಟ್ ಆಯ್ಕೆ

ಗೂಗಲನ ಹೊಸ ಆಂಡ್ರಾಯ್ಡ್ Q ಓಎಸ್‌ ನಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್‌ಶಾರ್ಟ್‌ ತೆಗೆಯುವ ಆಯ್ಕೆಯಲ್ಲಿಯೂ ಸುಲಭ ಮಾರ್ಗವನ್ನು ಪರಿಚಯಿಸಲಿದ್ದು, ಸ್ಕ್ರೀನ್‌ಶಾರ್ಟ್ ನಾಚ್‌ ಇರಲಿವೆ. ಈ ಆಯ್ಕೆ ಮೂಲಕ ಗೂಗಲ್ ಬಳಕೆದಾರರಿಕೆ ಸ್ಕ್ರೀನ್‌ಶಾರ್ಟ್‌ ಕ್ಲಿಕ್ಕ ಸರಳಗೊಳಿಸಲು ಮುಂದಾಗಿದೆ.

ಓದಿರಿ : ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!ಓದಿರಿ : ಸೂಪರ್‌ ಫಾಸ್ಟ್‌ ವೇಗದಲ್ಲಿ ಕೆಲಸ ಮಾಡಲಿದೆ 'ಗೂಗಲ್ ಅಸಿಸ್ಟಂಟ್' ಹೊಸ ಆವೃತ್ತಿ!

Best Mobiles in India

English summary
Android users, 10 ways your smartphone will change this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X