ಗೂಗಲ್ ಮ್ಯಾಪ್‌ನಲ್ಲಿ ಇನ್ಮುಂದೆ ಊಬರ್ ಬುಕ್ ಮಾಡಲು ಸಾಧ್ಯವಿಲ್ಲ...!

By GizBot Bureau
|

ಗೂಗಲ್ ಮ್ಯಾಪ್ ಓಪನ್ ಮಾಡಿದ್ರೆ ಸಾಕಿತ್ತು, ಆರಾಮಾಗಿ ಕ್ಯಾಬ್ ಬುಕ್ ಮಾಡಿ ಬಿಡಬಹುದಿತ್ತು, ಅದಕ್ಕಾಗಿ ಒಂದು ಹೊಸ ಆಪ್ ನ್ನು ಡೌನ್ ಲೋಡ್ ಮಾಡುವ ಅಗತ್ಯವೇ ಇರಲಿಲ್ಲ, ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ.. ಯಾಕೆ ಅಂತ ಕೇಳ್ತಾ ಇದ್ದೀರಾ? ಯಾಕೆಂದು ತಿಳಿಯಲು ಮುಂದೆ ಓದಿ..

ಕಳೆದ ವರ್ಷ, ಗೂಗಲ್ ಸಂಸ್ಥೆಯು ತನ್ನ ದಾರಿತೋರುಕ ಆಪ್ ಆಗಿರುವ ಗೂಗಲ್ ಮ್ಯಾಪ್ ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಸೇರಿಸಿ ಬಳಕೆದಾರರಿಗೆ ಅನುಕೂಲ ಮಾಡಿತ್ತು. ಅದುವೇ ಊಬರ್ ಕ್ಯಾಬ್ ಗಳನ್ನು ಬುಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ವೈಶಿಷ್ಟ್ಯದ ಮೂಲಕ ಗೂಗಲ್ ಮ್ಯಾಪ್ ನಲ್ಲಿ ಊಬರ್ ಕ್ಯಾಬ್ ಗಳನ್ನು ಊಬರ್ ಆಪ್ ಓಪನ್ ಮಾಡದೆಯೂ ಕೂಡ ಬುಕ್ ಮಾಡಬಹುದಿತ್ತು.

ಗೂಗಲ್ ಮ್ಯಾಪ್‌ನಲ್ಲಿ ಇನ್ಮುಂದೆ ಊಬರ್ ಬುಕ್ ಮಾಡಲು ಸಾಧ್ಯವಿಲ್ಲ...!

ಇದು ಡ್ರೈವರ್ ಗೆ ನಿಮ್ಮನ್ನು ಎಲ್ಲಿಂದ ಕರೆದೊಯ್ಯಬೇಕು ಎಂಬ ಮಾಹಿತಿಯನ್ನೂ ನೀಡುತ್ತಿತ್ತು, ಅಷ್ಟೇ ಯಾಕೆ, ಡ್ರೈವರ್ ನ್ನು ಸಂಪರ್ಕಿಸಲು ಮತ್ತು ನಿಮ್ಮ ಟ್ರಿಪ್ಪನ್ನು ಮಾನಿಟರ್ ಮಾಡಲು ಗೂಗಲ್ ಮ್ಯಾಪ್ ನಲ್ಲೇ ಅವಕಾಶವನ್ನು ಕಲ್ಪಿಸಿಕೊಡುತ್ತಿತ್ತು. ಆದರೆ ಈಗ, ಈ ವೈಶಿಷ್ಟ್ಯವನ್ನು ಕೆಲವು ಕಾರಣಗಳಿಂದಾಗಿ ಗೂಗಲ್ ಮ್ಯಾಪ್ ಆಪ್ ನಿಂದ ತೆಗೆಯಲಾಗಿದೆ. ಆದರೆ ಈ ನಿರ್ಧಾರದ ಹಿಂದಿನ ಕಾರಣವನ್ನು ಇದುವರೆಗೂ ಕಂಪೆನಿಯು ಪ್ರಕಟಿಸಿಲ್ಲ

ಆದರೆ ಕಂಪೆನಿಯ ಅಧಿಕೃತ ಪ್ರಕಟಣೆಯೊಂದರಲ್ಲಿ, “ ಗೂಗಲ್ ಮ್ಯಾಪ್ ಆಪ್ ನಲ್ಲಿ, ನೀವು ನಿಮ್ಮ ಪ್ರಯಾಣದ ಸೇವೆಯನ್ನು ಹೋಲಿಸಬಹುದು ಮತ್ತು ನೀವು ತಲುಪಬೇಕಾದ ಜಾಗದ ಮಾರ್ಗವನ್ನು ಹುಡುಕಬಹುದು ಅಂದರೆ ಯಾವುದೇ ಸಾರ್ವಜನಿಕ ಸಾರಿಗೆ ಅಥವಾ ನಡೆದುಕೊಂಡು ಹೋಗಲು ಬಳಸಬಹುದಾದ ಮಾರ್ಗವನ್ನು ತಿಳಿಯಬಹುದು. ಊಬರ್ ರೈಡನ್ನು ನೇರವಾಗಿ ಬುಕ್ ಮಾಡಲು ಗೂಗಲ್ ಮ್ಯಾಪ್ ನಲ್ಲಿ ಇನ್ನು ಮುಂದೆ ಅವಕಾಶವಿರುವುದಿಲ್ಲ.

ಆದರೆ ಮ್ಯಾಪ್ ಮುಖಾಂತರ ಮೂರ್ಗಸೂಚಿ ಬಳಸಬಹುದು. ಒಂದು ವೇಳೆ ಊಬರ್ ಸವಾರಿಯ ಅಗತ್ಯವಿದ್ದರೆ, ನೇರವಾಗಿ ಊಬರ್ ನ್ನೇ ಸಂಪರ್ಕಿಸಿ ಮತ್ತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದೂರುಗಳಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ” ಎಂದು ಗೂಗಲ್ ಸಂಸ್ಥೆ ಹೇಳಿದೆ.

ಗೂಗಲ್ ಮ್ಯಾಪ್‌ನಲ್ಲಿ ಇನ್ಮುಂದೆ ಊಬರ್ ಬುಕ್ ಮಾಡಲು ಸಾಧ್ಯವಿಲ್ಲ...!

ಬಿಡುಗಡೆಯ ಸಂದರ್ಬದಲ್ಲಿ iOS ಮತ್ತು ಆಂಡ್ರಾಯ್ಡ್ ಎರಡರಲ್ಲೂ ಕೂಡ ಈ ವೈಶಿಷ್ಟ್ಯವನ್ನು ಸೇರಿಸಲಾಗಿತ್ತು. ಆದರೆ, ಕಳೆದ ಅಗಸ್ಟ್ ನಲ್ಲೇ iOS ನಲ್ಲಿ ಈ ವೈಶಿಷ್ಟ್ಯವನ್ನು ತೆಗೆಯಲಾಗಿತ್ತು. ಸದ್ಯಕ್ಕೆ ಭಾರತದಲ್ಲಿ ಆಂಡ್ರಾಯ್ಡ್ ನಲ್ಲೂ ಈ ವೈಶಿಷ್ಟ್ಯವು ಲಭ್ಯವಾಗುತ್ತಿದೆ. ಆದರೆ ಕಂಪೆನಿಯು ಯಾವಾಗಿನಿಂದ ತೆಗೆಯುತ್ತದೆ ಎಂದು ತಿಳಿದಿಲ್ಲ.

ಇತ್ತೀಚೆಗಷ್ಟೇ, ಗೂಗಲ್ ಮ್ಯಾಪ್ ಗಳು ಸ್ಕ್ರೋಲಿಂಗ್ ಬಾರ್ನ ಒಂದು ವೈಶಿಷ್ಟ್ಯವನ್ನು ಪಡೆದಿವೆ, ಅದು ಮೇಲ್ಭಾಗದಲ್ಲಿ ಕಂಡುಬರುವ ಹುಡುಕಾಟ ಪಟ್ಟಿಯ ಅಡಿಯಲ್ಲಿ ಮಾತ್ರ ಇರಿಸಲ್ಪಟ್ಟಿದೆ. ಫ್ಲೋಟಿಂಗ್ ಬಾರ್ ನಲ್ಲಿ ವಿವಿಧ ಆಸ್ಪತ್ರೆಗಳು, ಪೆಟ್ರೋಲ್ ಪಂಪ್ಸ್ ಗಳು , ಔಷಧಾಲಯಗಳು, ರೆಸ್ಟೋರೆಂಟ್ ಗಳು, ಸೂಪರ್ ಮಾರ್ಕೆಟ್ ಗಳು, ಕೆಫೆಗಳು ಮತ್ತು ಇತ್ಯಾದಿಗಳನ್ನು ತೋರಿಸುತ್ತದೆ.

ಆದರೆ ವರದಿಯ ಪ್ರಕಾರ ಫ್ಲೋಟಿಂಗ್ ಬಾರ್ ವೈಶಿಷ್ಟ್ಯವು ಇನ್ನೂ ಕೂಡ ಟೆಸ್ಟಿಂಗ್ ನ ಹಂತದಲ್ಲೇ ಇದೆ ಮತ್ತು ಆಪ್ ನಲ್ಲಿ ಅದರ ಬೆಟಾ ವರ್ಷನ್ ಮಾತ್ರ ಕಾಣಲು ಸಿಗುತ್ತಿದೆ. ಸ್ಕ್ರೋಲಿಂಗ್ ಬಾರ್ ನ್ನು ಹೊರತು ಪಡಿಸಿ, ಬಟನ್ ಗಳ ಲೇಯರ್ ಕೂಡ ಮೇಲ್ಬಾಗದ ಎಡ ಕಾರ್ನರ್ ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Android users, you can no longer book Uber in Google Maps. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X