ಫೇಸ್‌ಬುಕ್ ಆಪ್ ಡಿಲೀಟ್ ಮಾಡಲು ಮತ್ತೊಂದು ಕಾರಣ ಹೇಳಿದರು ತಜ್ಞರು!

|

ಆಂಡ್ರಾಯ್ಡ್ ವಥವಾ ಐಫೋನ್ ಸ್ಮಾರ್ಟ್‌ಪೋನ್‌ಗಳ ಬೆಲೆ ಎಷ್ಟೇ ಆಗಿರಲಿ ಅಥವಾ ಅವುಗಳ ಬ್ಯಾಟರಿ ಎಷ್ಟೇ ಸಾಮರ್ಥ್ಯ ಎಷ್ಟೇ ಇರಲಿ. ಪ್ರತಿ ದಿನ ಅವುಗಳನ್ನು ಚಾರ್ಜ್ ಮಾಡಲು ಕನೆಕ್ಟ್ ಮಾಡಲೇಬೇಕು. ಏಕೆಂದರೆ, ಇಂದು ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೋರ್ವರು ಉಪಯೋಗಿಸುವುದು ಒಂದು ಅಥವಾ ಎರಡು ಆಪ್‌ಗಳು ಮಾತ್ರವಲ್ಲ, ಬದಲಿಗೆ ನೂರಾರು.

ಫೇಸ್‌ಬುಕ್ ಆಪ್ ಡಿಲೀಟ್ ಮಾಡಲು ಮತ್ತೊಂದು ಕಾರಣ ಹೇಳಿದರು ತಜ್ಞರು!

ಇವುಗಳು ನಿಮಗೆ ಸಮಸ್ಯೆಯಾಗುತ್ತಿಲ್ಲ. ಆದರೆ. ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಫೇಸ್‌ಬುಕ್‌ ಆಪ್‌ ಹೀರಿಕೊಳ್ಳುವಷ್ಟು ಬ್ಯಾಟರಿ ಪವರ್‌ ಅನ್ನು ಬೇರೆ ಯಾವುದೇ ಆಪ್‌ ಹೀರಿಕೊಳ್ಳುವುದಿಲ್ಲ. ಹಾಗಾಗಿ, ನಿಮ್ಮ ಫೋನ್‌ ಬ್ಯಾಟರಿಯ ದೀರ್ಘ ಬಾಳಿಕೆಗಾಗಿ ಫೇಸ್‌ಬುಕ್‌ ಆಪ್‌ ಅನ್ನು ಮೊಬೈಲ್‌ನಲ್ಲಿ ಡಿಲೀಟ್‌ ಮಾಡಲೇಬೇಕು ಏಕೆ ಎಂಬ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

1

1

ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡ 20 ರಷ್ಟು ಬ್ಯಾಟರಿ ಪವರ್‌ ಅನ್ನು ಫೇಸ್‌ಬುಕ್‌ ಆಪ್‌ ಬಳಸಿಕೊಳ್ಳುತ್ತಿದೆ. ಇದನ್ನು ಆಂಡ್ರಾಯ್ಡ್ ಕೇಂದ್ರ ಕಛೇರಿ ಪರೀಕ್ಷೆ ನಡೆಸಿ ಸಾಬೀತುಪಡಿಸಿದೆ.

2

2

ಗಾರ್ಡಿಯನ್ ಸ್ಯಾಮ್ಯುಯೆಲ್ ಗಿಬ್ಸ್ ಎಂಬುವವರು ಐಫೋನ್‌ನಲ್ಲಿ ಫೇಸ್‌ಬುಕ್‌ ಆಪ್ಲಿಕೇಶನ್‌ ತೆಗೆದುಹಾಕಿ 1 ವಾರಗಳ ಕಾಲ ಐಫೋನ್‌ ಬಳಕೆಮಾಡಿದ್ದಾರೆ. ಇದರಿಂದ ಬ್ಯಾಟರಿ ಬಾಳಿಕೆಯಲ್ಲಿ ಶೇಕಡ 15 ರಷ್ಟು ಉಳಿತಾಯವಾಗಿರುವುದು ಕಂಡುಬಂದಿದೆ.

 3

3

ಫೇಸ್‌ಬುಕ್‌ ಆಪ್‌ ಅನ್ನು ಪೋನ್‌ನಲ್ಲಿ ಹೊಂದುವುದರ ಬದಲು ಗಿಬ್ಬಾಸ್‌ರವರು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ವೆಬ್‌ ಬ್ರೌಸರ್‌ ಮೂಲಕ ಬಳಕೆಮಾಡಿದ್ದಾರೆ. ಉದಾಹರಣೆಗೆ ಗೂಗಲ್‌ ಸರ್ಚ್‌ ಇಂಜಿನ್‌ ಮೂಲಕ ಫೇಸ್‌ಬುಕ್‌ ಬಳಕೆ ಮಾಡುವುದು.

4

4

ಐಫೋನ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣ ಆಪ್‌ಗಳನ್ನು ಡಿಲೀಟ್‌ ಮಾಡುವುದರಿಂದ ಫೋನ್‌ನ ಸ್ಟೋರೇಜ್‌ ಉಳಿತಾಯವಾಗುತ್ತದೆ. ಇದರಿಂದ ಫೋನ್‌ ಕಾರ್ಯಚಟುವಟಿಕೆ ವೇಗವಾಗುತ್ತದೆ.

5

5

ನಿಮ್ಮ ಫೋನ್‌ನಲ್ಲಿನ ಫೇಸ್‌ಬುಕ್‌ ಆಪ್‌ 111MB ಸ್ಟೋರೇಜ್‌ ಆವರಿಸುತ್ತದೆ. ಅಲ್ಲದೇ ಅದನ್ನು ಹೆಚ್ಚು ಬಳಸಿದಂತೆಲ್ಲಾ ಕ್ಯಾಚಿ ಡೇಟಾ ಹೆಚ್ಚಾಗುತ್ತಾ ಫೋನ್‌ ವೇಗ ಕಡಿಮೆಯಾಗುತ್ತದೆ ಮತ್ತು ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ.

6

6

ಮೊಬೈಲ್‌ ವೆಬ್‌ಸೈಟ್‌ನಲ್ಲಿ ಫೇಸ್‌ಬುಕ್‌ ಬಳಸುವುದರಿಂದ, ಆಪ್‌ಗಿಂತ ಹೆಚ್ಚು ಫೀಚರ್‌ಗಳನ್ನು ಪಡೆಯಬಹುದಾಗಿದೆ.

7

7

ಬ್ಯಾಟರಿ ಬಾಳಿಕೆ ದೀರ್ಘತೆಗಾಗಿ ನೀವು ಫೇಸ್‌ಬುಕ್‌ ಆಪ್‌ ಮತ್ತು ಸ್ನ್ಯಾಪ್‌ಚಾಟ್‌ ಆಪ್‌ ಅನ್ನು ಸಹ ಡಿಲೀಟ್‌ ಮಾಡಿದರೆ ನಿಮ್ಮ ಬ್ಯಾಟರಿ ಬಾಳಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

Best Mobiles in India

English summary
To disable background app refresh, tap Settings > General > Background App Refresh. Scroll down to the Facebook entry and toggle it off.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X