Just In
Don't Miss
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏನಾಶ್ಚರ್ಯ! ಹೊಟ್ಟೆ ಸೇರಿದ ಆಪಲ್ ಏರ್‌ಪೋಡ್ ಅಲ್ಲೂ ತಾಳ ಹಾಕುತ್ತಿದೆ
ಇಂದಿನ ಆಧುನಿಕ ಯುಗದಲ್ಲಿ ಕೂಡ ಕೆಲವೊಂದು ಸುಳ್ಳುಗಳು ನಾವು ನಂಬುವಂತೆ ಇರುತ್ತದೆ. ಕೆಲವೊಂದು ಘಟನೆಗಳು ಪವಾಡದಂತೆ ಇದ್ದು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಆಧುನಿಕ ಯುಗದಲ್ಲಿ ಕೂಡ ಇಂತಹ ಘಟನೆಗಳು ಸಾಧ್ಯವೇ ಎಂದು ನಾವು ಆಶ್ಚರ್ಯ ಪಡುತ್ತೇವೆ. ಉದಾಹರಣೆಗೆ ಸಯಾಮಿ ಕರುಗಳ ಜನನ, ನೆತ್ತಿಯಲ್ಲಿ ಕೋಡು ಮೂಡಿದ ಕರುವಿನ ಜನನ, ಹುಲಿ ಮರಿ ದನದ ಕರುಗಳೊಂದಿಗೆ ಬೆಳೆಯುವುದು ಇಂಹುದೇ ಪವಾಡ ಸದೃಶ ಘಟನೆಗಳನ್ನು ನಾವು ಕಾಣುತ್ತೇವೆ.
ಬರಿಯ ಪ್ರಾಣಿಗಳಲ್ಲಿ ಮಾತ್ರವಲ್ಲದೆ ಮನುಷ್ಯರಲ್ಲಿ ಕೂಡ ಕೆಲವೊಂದು ಅಚ್ಚರಿಯ ಘಟನೆಗಳು ನಡೆಯುತ್ತವೆ. ವಿಜ್ಞಾನಿಗಳು ಇದಕ್ಕೆ ವೈಜ್ಞಾನಿಕ ಪುರಾವೆಗಳನ್ನು ನೀಡಿ ಇದು ಸತ್ಯ ಎಂಬುದನ್ನು ಸಾಬೀತಪಡಿಸಿದರೆ ಇನ್ನು ಕೆಲವರು ಬೇರೆ ಬೇರೆ ಕಥೆಗಳನ್ನು ಇದಕ್ಕೆ ಪೂರಕಾಗಿ ಸೇರಿಸಿ ನಂಬುವಂತೆ ಮಾಡುತ್ತಾರೆ. ಅಂತೂ ಪವಾಡಗಳು ಈ ಜಗತ್ತಿನಲ್ಲಿ ನಡೆಯುತ್ತವೆ ಎಂಬುದನ್ನು ನಾವು ನಂಬಲೇಬೇಕು.
ನಮ್ಮ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹದ್ದು ಅತ್ಯಂತ ಅದ್ಭುತವಾದ ರಹಸ್ಯವಾಗಿದೆ. ಇದು ನಂಬಲು ಸಾಧ್ಯವೇ ಎಂಬ ಸಂಶಯ ನಮ್ಮಲ್ಲಿ ಮೂಡಬಹುದು. ಆದರೆ ಈ ಘಟನೆ ನಡೆದದ್ದಂತ ಸತ್ಯ. ತೈವಾನೀ ಯುವಕನೊಬ್ಬ ತನ್ನ ಆಪಲ್ ಏರ್ ಪೋಡ್‌ಗಳನ್ನು ನುಂಗಿದ್ದು ಅದು ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂಬುದು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವ ಘಟನೆಯಾಗಿದೆ. ಇದು ನಿಜಕ್ಕೂ ನಂಬಲೂ ಅನರ್ಹವಾಗಿರುವ ಸುದ್ದಿಯಾಗಿದ್ದು ವೈದ್ಯಕೀಯ ಸಾಕ್ಷಿಗಳು ಈ ಘಟನೆ ನಡೆದದ್ದು ಸತ್ಯ ಎಂಬುದನ್ನು ತಿಳಿಸಿವೆ.
ಹಾಗಿದ್ದರೆ ಈ ಘಟನೆಯ ಕುರಿತು ಇನ್ನಷ್ಟು ವಿವರಗಳನ್ನು ಮುಂದಿನ ಸ್ಲೈಡ್‌ಗಳಲ್ಲಿ ನೋಡೋಣ.

1.ಆಪಲ್ ಏರ್‌ಪೋಡ್‌ಗಳನ್ನು ನುಂಗಿ ಪವಾಡ
ಏರ್‌ಪೋಡ್‌ಗಳನ್ನು ನುಂಗುವುದು ಹೇಗೆ ಸಾಧ್ಯ ಎಂಬುದು ಆಶ್ಚರ್ಯವನ್ನುಂಟು ಮಾಡುವ ಮಾಹಿತಿಯಾಗಿದೆ. ಡೈಲಿ ಮೇಲ್‌ನಲ್ಲಿ ಈ ಸುದ್ದಿ ಬಂದಿದ್ದು ತೈವಾನ್‌ನ ಬೆನ್ ಹುಸು ಏರ್‌ಪೋಡ್ ಅನ್ನೇ ನುಂಗಿದ್ದಾನೆ.

2.ಕಿವಿಯಲ್ಲಿದ್ದ ಏರ್‌ಪೋಡ್ ಹೊಟ್ಟೆ ಸೇರಿದ್ದು ಹೇಗೆ
ಬೆನ್ ನಿದ್ರಿಸುತ್ತಿರುವಾಗ ಏರ್‌ಪೋಡ್ ಅನ್ನು ಕಿವಿಗೆ ಸಿಕ್ಕಿಸಿ ಹಾಡು ಕೇಳುತ್ತಿದ್ದ. ಆದರೆ ಮರುದಿನ ಎದ್ದು ಏರ್‌ಪೋಡ್‌ಗಾಗಿ ಬೆನ್ ಶೋಧಿಸಿದ್ದಾನೆ. ತನ್ನ ಐಫೋನ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಬಳಸಿಕೊಂಡು ಬೆನ್ ಏರ್‌ಪೋಡ್‌ಗಾಗಿ ತಲಾಶೆ ನಡೆಸಿದ್ದಾನೆ.

3.ಪತ್ತೆಯಾದ ಏರ್‌ಪೋಡ್
ಟ್ರ್ಯಾಕ್ ಮಾಡುತ್ತಿರುವ ಸಮಯದಲ್ಲಿ ಏರ್‌ಪೋಡ್ ತನ್ನ ಸಮೀಪದಲ್ಲೇ ಇರುವುದು ಬೆನ್ ಗಮನಕ್ಕೆ ಬಂದಿದೆ. ತಾನಿದ್ದ ಕೊಠಡಿಯಲ್ಲಿಯೇ ಏರ್‌ಪೋಡ್ ಸದ್ದು ಮಾಡುತ್ತಿರುವುದನ್ನು ಬೆನ್ ಗಮನಿಸಿದ್ದಾನೆ.

4. ಬೆನ್ ತನಗಾದ ಅನುಭವವನ್ನು ಪತ್ರಿಕೆಗೆ ತಿಳಿಸಿರುವುದು
ನನ್ನ ಹೊದಿಕೆ, ಸುತ್ತಮುತ್ತಲಿನ ಜಾಗವನ್ನೆಲ್ಲಾ ನಾನು ಶೋಧಿಸಿದೆ. ಆದರೆ ನಂತರ ತಿಳಿಯಿತು ಈ ಸದ್ದು ಬರುತ್ತಿರುವುದು ನನ್ನ ಹೊಟ್ಟೆಯಿಂದ ಎಂದು. ನಿಜಕ್ಕೂ ಇದು ಆಶ್ಚರ್ಯವನ್ನುಂಟು ಮಾಡಿದೆ ಮತ್ತು ನನ್ನನ್ನು ದಿಗ್ಭ್ರಾಂತಿಗೊಳಿಸಿದೆ.

5.ಆಸ್ಪತ್ರೆಯಲ್ಲಿ ಪರೀಕ್ಷೆ
ಕೂಡಲೇ ಆಸ್ಪತ್ರೆಗೆ ಧಾವಿಸಿದ ಬೆನ್ ಎಕ್ಸರೇ ಮಾಡಿಸಿದ್ದಾನೆ ಮತ್ತು ಏರ್‌ಪೋಡ್ ತನ್ನ ಹೊಟ್ಟೆಯಲ್ಲಿರುವುದನ್ನು ವೈದ್ಯರ ಮೂಲಕ ಖಾತ್ರಿಪಡಿಸಿಕೊಂಡಿದ್ದಾನೆ. ನೈಸರ್ಗಿಕವಾಗಿ ಏರ್‌ಪೋಡ್ ಹೊರಗೆ ಬಂದಿಲ್ಲ ಎಂದಾದಲ್ಲಿ ಆಪರೇಶನ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

6.ಹೊಟ್ಟೆಯಲ್ಲಿ ತಾಳ ಹಾಕುತ್ತಿರುವ ಏರ್‌ಪೋಡ್
ಏರ್‌ಪೋಡ್ ಬ್ಯಾಟರಿ ಇನ್ನೂ 41 ಶೇಕಡಾ ಇದೆ ಎಂದು ಬೆನ್ ತಿಳಿಸಿದ್ದಾನೆ. ನಿಜಕ್ಕೂ ಆ್ಯಪಲ್ ಉತ್ಪನ್ನ ಮಾಂತ್ರಿಕ ಎಂಬುದು ಬೆನ್ ಅಭಿಪ್ರಾಯವಾಗಿದೆ.

7.ಇದು ಪ್ರಪ್ರಥಮ ಪ್ರಕರಣವಾಗಿದೆ
ಆಪಲ್ ಏರ್‌ಪೋಡ್‌ಗಳನ್ನು ನುಂಗಿದ ಪ್ರಥಮ ಪ್ರಕರಣ ಇದಾಗಿದೆ. ಅದಾಗ್ಯೂ ಏರ್‌ಪೋಡ್‌ಗಳು ಕಾರ್ಯನಿರ್ವಹಿಸುತ್ತಿರುವುದು ಮತ್ತೊಂದು ಆಶ್ಚರ್ಯದ ಸುದ್ದಿಯಾಗಿದೆ. ಈ ಏರ್‌ಪೋಡ್ ಅನ್ನು ಬೆನ್ ಹೇಗೆ ಹೊರತೆಗೆಸಿಕೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.

8. ಆ್ಯಪಲ್ ಉತ್ಪನ್ನದ ಗುಣಮಟ್ಟ ಖಾತ್ರಿ
ಆ್ಯಪಲ್ ಉತ್ಪನ್ನಗಳೆಂದರೆ ತಮ್ಮದೇ ಆದ ಟ್ರೇಡ್ ಮಾರ್ಕ್ ಅನ್ನು ಪಡೆದುಕೊಂಡಿವೆ. ಅದರಲ್ಲೂ ಏರ್‌ಪೋಡ್ ಹೊಟ್ಟೆಯಲ್ಲಿದ್ದರೂ ಕಾರ್ಯನಿರ್ವಹಿಸುತ್ತಿದೆ ಎಂಬುದು ಆಶ್ಚರ್ಯವನ್ನುಂಟು ಮಾಡುತ್ತಿರುವ ಅಂಶವಾಗಿದೆ. ಬೇರೆ ಎಲ್ಲಾ ಆಹಾರದೊಂದಿಗೆ ಇದೂ ಕೂಡ ಬೆನ್ ಹೊಟ್ಟೆಯಲ್ಲಿದೆ.

9.ಏರ್‌ಪೋಡ್ ಬಳಕೆದಾರರೇ ಎಚ್ಚರಿಕೆ
ಆದ್ದರಿಂದ ನಿದ್ದೆ ಸಮಯದಲ್ಲಿ ಹಾಡು ಆಲಿಸುವವರು ಇನ್ನು ಮುಂದೆ ಏರ್‌ಪೋಡ್ ಅನ್ನು ತೆಗೆದಿಟ್ಟು ನಂತರ ನಿದ್ದೆಗೆ ಜಾರುವುದು ಒಳಿತು. ಇಲ್ಲದಿದ್ದರೆ ಬೆನ್ ಫಜೀತಿ ನಿಮಗೂ ಬರಬಹುದು.

10.ವಿಜ್ಞಾನ ವಿಸ್ಮಯ
ನಿಜಕ್ಕೂ ಇದೊಂದು ವಿಸ್ಮಯವಾಗಿರುವ ಪ್ರಕರಣವಾಗಿದ್ದು ಏರ್‌ಪೋಡ್ ಬೆನ್‌ನ ಹೊಟ್ಟೆಯನ್ನು ಹೇಗೆ ಹೊಕ್ಕಿತು ಎಂಬುದು ನಿಗೂಢವಾಗಿದೆ. ಅದರಲ್ಲೂ ಈ ಏರ್‌ಪೋಡ್ ಕಾರ್ಯನಿರ್ವಹಿಸುತ್ತಿರುವುದು ಆ್ಯಪಲ್ ಉತ್ಪನ್ನದ ಗುಣಮಟ್ಟವನ್ನು ಜಗತ್ತಿಗೆ ಸಾರಿ ಹೇಳುವಂತಿದೆ.
image source 1
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470