ಏರ್‌ಪಾಡ್ಸ್ ಪ್ರೊ 2 ಇಯರ್‌ಬಡ್ಸ್‌ ಲಾಂಚ್‌? ಅಪ್‌ಗ್ರೇಡೆಡ್‌ ಸೌಂಡ್‌ ಸಿಸ್ಟಂ?

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ತನ್ನ ಫಾರ್‌ ಔಟ್‌ ಈವೆಂಟ್‌ನಲ್ಲಿ ಐಫೋನ್‌ 14 ಶ್ರೇಣಿಯ ಜೊತೆಗೆ ಆಪಲ್‌ ಏರ್‌ಪಾಡ್ಸ್‌ ಪ್ರೊ 2 ಅನ್ನು ಕೂಡ ಪರಿಚಯಿಸಿದೆ. ಆಪಲ್‌ನ ಈ ಹೊಸ ಏರ್‌ಪಾಡ್‌ಗಳು ಉತ್ತಮ ಸೌಂಡ್‌ ಔಟ್‌ಪುಟ್ ಸೇರಿದಂತೆ ಹಲವು ವಿಶಿಷ್ಟ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಏರ್‌ಪಾಡ್ಸ್‌ ಉತ್ತಮ ಕನೆಕ್ಟಿವಿಟಿಗಾಗಿ ಅಪ್‌ಗ್ರೇಡೆಡ್‌ ನವೀಕರಿಸಿದ H2 ಚಿಪ್ ಅನ್ನು ಒಳಗೊಂಡಿದೆ. ಈ ಏರ್‌ಪಾಡ್ಸ್‌ 6 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದುಯ, ಚಾರ್ಜಿಂಗ್‌ ಕೇಸ್‌ನಲ್ಲಿ ಹೆಚ್ಚುವರಿ 30 ಗಂಟೆಗಳ ಬಾಳಿಕೆ ಬರಲಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ತನ್ನ ಹೊಸ ಏರ್‌ಪಾಡ್ಸ್‌ ಪ್ರೊ 2 ಅನ್ನು ಲಾಂಚ್‌ ಮಾಡಿದೆ. ಇದು ಡಾಲ್ಬಿ ಅಟ್ಮಾಸ್ ಮತ್ತು ಸ್ಪೇಷಿಯಲ್ ಆಡಿಯೊಗೆ ಹೆಡ್ ಟ್ರ್ಯಾಕಿಂಗ್‌ ಮೂಲಕ ಬೆಂಬಲವನ್ನು ನೀಡಲಿವೆ. ಅಲ್ಲದೆ ಈ ಏರ್‌ಪಾಡ್ಸ್‌ನಲ್ಲಿ ಅಡಾಪ್ಟಿವ್ ಟ್ರಾನ್ಸ್‌ಪರೆನ್ಸಿ ಮೋಡ್ ಸಹ ಇದೆ. ಇದರಲ್ಲಿ ಪ್ರತಿ ಏರ್‌ಪಾಡ್‌ಗಳು ಪ್ರತ್ಯೇಕವಾಗಿ ಧ್ವನಿಯನ್ನು ಪ್ಲೇ ಮಾಡುವ ಸಾಮರ್ಥ್ಯವನ್ನು ಪಡೆದಿವೆ. ಹಾಗಾದ್ರೆ ಆಪಲ್‌ ಏರ್‌ಪಾಡ್ಸ್‌ ಪ್ರೊ 2 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಪಾಡ್ಸ್ ಪ್ರೊ 2 ವಿಶೇಷತೆ ಏನು?

ಏರ್‌ಪಾಡ್ಸ್ ಪ್ರೊ 2 ವಿಶೇಷತೆ ಏನು?

ಏರ್‌ಪಾಡ್ಸ್ ಪ್ರೊ 2 ಉತ್ತಮ ಸಂಪರ್ಕ ಮತ್ತು ಅಪ್‌ಗ್ರೇಡೆಡ್‌ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಇದರಲ್ಲಿ ಉತ್ತಮ ಆಡಿಯೋ ಡ್ರೈವರ್‌ಗಳನ್ನು ನೀಡಲಾಗಿದ್ದು, ಹೊಸ ಆಂಪ್ಲಿಫೈಯರ್‌ಗಳನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಐಫೋನ್ ಮೂಲಕ ತಮ್ಮ ಆಡಿಯೊವನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದಾಗಿದೆ. ಇನ್ನು ಆಪಲ್ 2X ನಾಯ್ಸ್‌ ಕ್ಯಾನ್ಸಲೇಶನ್‌ ಮೂಲಕ ಈ ಏರ್‌ಪಾಡ್ಸ್‌ನಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸುಧಾರಿಸಲಾಗಿದೆ. ಇದರ ಹೊರತಾಗಿ, ಆಪಲ್ ಗರಿಷ್ಠ ಆರಾಮಕ್ಕಾಗಿ ಮತ್ತು ಪ್ರೇಕ್ಷಕರಿಗೆ ವ್ಯಾಪಕವಾಗಿ ತಲುಪಲು XS ಇಯರ್‌ ಟಿಪ್ಸ್‌ಗಳನ್ನು ಸಹ ಪರಿಚಯಿಸಿದೆ.

ಏರ್‌ಪಾಡ್ಸ್‌

ಇನ್ನು ಏರ್‌ಪಾಡ್ಸ್‌ ಪ್ರೊ 2 ನಲ್ಲಿ ಟಚ್‌ ಕಂಟ್ರೋಲ್‌ಗಳನ್ನು ಸಾಕಷ್ಟು ಅಪ್‌ಗ್ರೇಡ್‌ ಮಾಡಲಾಗಿದೆ. ಇದಲ್ಲದೆ ಇದರ ಬ್ಯಾಟರಿ ಅವಧಿಯನ್ನು ಕೂಡ ಸಾಕಷ್ಟು ಸುಧಾರಿಸಲಾಗಿದ್ದು, ಇದು ಸಿಂಗಲ್‌ ಚಾರ್ಜ್‌ನಲ್ಲಿ ಆರು ಗಂಟೆಗಳ ಆಲಿಸುವ ಸಮಯವನ್ನು ನೀಡುತ್ತದೆ. ಇದು ಮೊದಲನೇ ತಲೆಮಾರಿನ ಇಯರ್‌ಬಡ್ಸ್‌ಗಳಿಗಿಂತ 33% ಹೆಚ್ಚಳವಾಗಿದೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಹೆಚ್ಚುವರಿಯಾಗಿ ಬಳಕೆದಾರರು 30 ಗಂಟೆಗಳ ಬಾಳಿಕೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಅಪ್ಲಿಕೇಶನ್

ಇದಲ್ಲದೆ ಫೈಂಡ್ ಮೈ ಅಪ್ಲಿಕೇಶನ್ ಮೂಲಕ ಬಳಕೆದಾರರು ನಿಮ್ಮ ಏರ್‌ಪಾಡ್ ಅನ್ನು ಪತ್ತೆ ಹಚ್ಚಬಹುದಾಗಿದೆ. ಇನ್ನು ಅಡಾಪ್ಟಿವ್ ಟ್ರಾನ್ಸ್‌ಪರೆನ್ಸಿ ಮೋಡ್ ಅನ್ನು ಹೊಂದಿದ್ದು,ಪ್ರತಿ ಏರ್‌ಪಾಡ್‌ಗಳು ಪ್ರತ್ಯೇಕವಾಗಿ ಧ್ವನಿಯನ್ನು ಪ್ಲೇ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಕನೆಕ್ಟಿವಿಟಿ ಆಯ್ಕೆಯಲ್ಲಿ LE ಆಡಿಯೊದೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಮಿಡಿಯಾ ಪ್ಲೇಬ್ಯಾಕ್ ಅನ್ನು ಸ್ವಯಂಚಾಲಿತವಾಗಿ ಪ್ರಾರಂಭಿಸಲು ಅಥವಾ ನಿಲ್ಲಿಸಲು ಇಯರ್‌ಬಡ್‌ಗಳು ಸೆನ್ಸಾರ್ ಮೂಲಕ ಸ್ಕಿನ್‌-ಡಿಟೆಕ್ಷನ್‌ಗೆ ಬೆಂಬಲವನ್ನು ನೀಡಲಿದೆ. ಈ ಹೊಸ ಏರ್‌ಪಾಡ್‌ಗಳನ್ನು ಚಾರ್ಜ್ ಮಾಡಲು ಬಳಕೆದಾರರು ಆಪಲ್ ವಾಚ್ ಚಾರ್ಜರ್ ಮತ್ತು ಮ್ಯಾಗ್‌ಸೇಫ್ ಅಡಾಪ್ಟರ್ ಅನ್ನು ಬಳಸಬಹುದು.

ಏರ್‌ಪಾಡ್ಸ್‌

ಆಪಲ್‌ ಏರ್‌ಪಾಡ್ಸ್‌ ಪ್ರೊ 2 ಬೆಲೆ USD 249 (ಸುಮಾರು 19,835ರೂ)ಆಗಿದೆ. ಈ ಹೊಸ ಇಯರ್‌ಬಡ್ಸ್‌ ಪ್ರೀ ಆರ್ಡರ್‌ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 23 ರಂದು ಶಿಪ್ಪಿಂಗ್ ಪ್ರಾರಂಭವಾಗುತ್ತದೆ. ಭಾರತದಲ್ಲಿ ಇದರ ಬೆಲೆ 26,900ರೂ ಆಗಿದೆ.

Best Mobiles in India

English summary
he AirPods Pro (2nd Generation) are equipped with a new Apple H2 chip that the company says offers improved noise cancellation and support for Personalised Spatial Audio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X