Subscribe to Gizbot

2016ರಲ್ಲಿ ಬಿಡುಗಡೆಯಾಗಿ ವಿಫಲಗೊಂಡ ಆ್ಯಕ್ಸೆಸರೀಸ್ ಗಳು.

Written By:

ಮಾರುಕಟ್ಟೆಗೆ ಬಿಡುಗಡೆಗೊಂಡ ಉತ್ಪನ್ನಗಳೆಲ್ಲವೂ ಅತ್ಯುತ್ತಮವಾಗಿರುವುದಿಲ್ಲ. ಕಂಪನಿಗಳ ಹಲವು ಉತ್ಪನ್ನಗಳು ಸೋಲನ್ನಪ್ಪುತ್ತವೆ. ಈ ಸೋಲಿಗೆ ಹಲವು ಕಾರಣಗಳು, ಗ್ರಾಹಕರ ಪ್ರತಿಕ್ರಿಯೆ ಚೆನ್ನಾಗಿರುವುದಿಲ್ಲ ಅಥವಾ ಉತ್ಪನ್ನದಲ್ಲೇ ದೋಷವಿರುತ್ತದೆ.

2016ರಲ್ಲಿ ಬಿಡುಗಡೆಯಾಗಿ ವಿಫಲಗೊಂಡ ಆ್ಯಕ್ಸೆಸರೀಸ್ ಗಳು.

ಪ್ರಪಂಚದೆಲ್ಲೆಡೆ ಅಸಂಖ್ಯ ಗ್ಯಾಜೆಟ್ಟುಗಳು ಬಿಡುಗಡೆಯಾಗಿವೆ; ಈ ಉತ್ಪನ್ನಗಳ ಯಶಸ್ಸಿನ ಆಧಾರದ ಮೇಲೆ ಅವುಗಳನ್ನು ವಿಂಗಡಿಸಬಹುದು. ಇವತ್ತು ನಾವು 2016ರಲ್ಲಿ ಅತಿ ಹೆಚ್ಚು ಕಡೆಗಣನೆಗೊಳಗಾದ ಉತ್ಪನ್ನಗಳ ಪಟ್ಟಿ ಮಾಡುತ್ತಿದ್ದೇವೆ. ಇವುಗಳನ್ನು ಕೆಟ್ಟ ಉತ್ಪನ್ನಗಳೆಂದು ನಾವು ವಿಭಾಗೀಕರಿಸಿದ್ದೇವೆ. ಒಮ್ಮೆ ಕಣ್ಣಾಡಿಸಿ.

ಓದಿರಿ: ಮೇಲ್, ಕಾಂಟ್ಯಾಕ್ಟ್ಸ್ ಮತ್ತು ಕ್ಯಾಲೆಂಡರ್ ಅನ್ನು ಒಟ್ಟುಗೂಡಿಸುವ ಸ್ಯಾಮ್ಸಂಗ್ ಫೋಕಸ್ ಆ್ಯಪ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆ್ಯಪಲ್ ಏರ್ ಪಾಡ್ಸ್.

ಆ್ಯಪಲ್ ಏರ್ ಪಾಡ್ಸ್.

ಹೊಸ ಐಫೋನ್ 7 ಮತ್ತು 7 ಪ್ಲಸ್ ನಲ್ಲಿ ಎಂದಿನ ಹೆಡ್ ಫೋನ್ ಜ್ಯಾಕ್ ಇಲ್ಲದಿರುವ ಸಂಗತಿ ನಮಗೆಲ್ಲರಿಗೂ ಈಗ ತಿಳಿದಿದೆ. ಪ್ರಪಂಚವನ್ನು ವೈರ್ ಲೆಸ್ ಕಡೆಗೆ ತೆಗೆದುಕೊಂಡು ಹೋಗಲು ಆ್ಯಪಲ್ ನಡೆಸಿದ ಪ್ರಯತ್ನವಿದು. ಆ್ಯಪಲ್ ತುಂಬಾ ಕಾಂಪ್ಯಾಕ್ಟ್ ಆದ, ಕಡಿಮೆ ಬೆಲೆಯ ಏರ್ ಪಾಡ್ ಅನ್ನು ಬಿಡುಗಡೆಗೊಳಿಸಿತು. ಇದು ಆ್ಯಪಲ್ ಕಂಪನಿಯ ಮೊದಲ ಬ್ಲೂಟೂಥ್ ಹೆಡ್ ಫೋನುಗಳು, ನಿಜಾರ್ಥದಲ್ಲಿ ಇದು ವೈರ್ ಲೆಸ್. ಮಾರುಕಟ್ಟೆಯಲ್ಲಿರುವ ವಿವಿಧ ವೈರ್ ಲೆಸ್ ಹೆಡ್ ಫೋನುಗಳಿಗೆ ಹೋಲಿಸಿದರೆ ಆ್ಯಪಲ್ ನ ಏರ್ ಪಾಡ್ಸ್ ಸ್ವಲ್ಪ ವಿಚಿತ್ರವಾಗಿರುವಂತನ್ನಿಸುತ್ತದೆ, ಆ ಕಾರಣಕ್ಕಾಗಿಯೇ ಅವು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ!

ಗೂಗಲ್ ಡೇಡ್ರೀಮ್.

ಗೂಗಲ್ ಡೇಡ್ರೀಮ್.

ಗೂಗಲ್ ಸ್ಟ್ರೀಟ್ ವ್ಯೀವ್ ನಂತಹ ಆ್ಯಪ್ ಗಳ ಜೊತೆಗೆ ಗೂಗಲ್ ಡೇ ಡ್ರೀಮ್ ಅನ್ನು ಉಪಯೋಗಿಸಿದಾಗ ತುಂಬಾ ಒಳ್ಳೆಯ ವಿ.ಆರ್ ಅನುಭವ ದಕ್ಕುತ್ತದೆ, ಆದರೆ ಈ ಅನುಭವ ಸೀಮಿತವಾದದ್ದು. ಇದನ್ನು ಸೋನಿಯ ಪ್ಲೇಸ್ಟೇಷನ್ ವಿ.ಆರ್ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. ಡೇಡ್ರೀಮ್ ಗೂಗಲ್ ಕಾರ್ಡ್ ಬೋರ್ಡ್ ರೀತಿಯ ಅನುಭವವನ್ನು ಕೊಡುತ್ತದೆ ಮತ್ತು ಇದನ್ನು ಆಯ್ದ ಆ್ಯಂಡ್ರಾಯ್ಡ್ ಫೋನುಗಳಲ್ಲಷ್ಟೇ ಬಳಸಬಹುದು.

ಆ್ಯಪಲ್ ವಾಚ್ 2.

ಆ್ಯಪಲ್ ವಾಚ್ 2.

ಈ ವರುಷ ಬಿಡುಗಡೆಯಾದ ಆ್ಯಪಲ್ ವಾಚ್ 2ನಲ್ಲಿನ ಎರಡು ವಿಶೇಷತೆಗಳೆಂದರೆ ಜಲ ನಿರೋಧಕ ವಿನ್ಯಾಸ ಮತ್ತು ಜಿಪಿಎಸ್. ಇವೆರಡೂ ಉತ್ತಮ ವಿಶೇಷತೆಗಳೇ ಆದರೂ ಫಿಟ್ನೆಸ್ ಗಾಗಿಯೇ ತಯಾರಿಸಲಾಗಿರುವ ಫಿಟ್ ಬಿಟ್ ನಂತಹ ಗ್ಯಾಜೆಟ್ಟುಗಳು ಆ್ಯಪಲ್ ವಾಚ್ ಗಿಂತ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸುತ್ತವೆ ಎನ್ನುವುದು ಸತ್ಯ.

ಆಕ್ಯುಲಸ್ ರಿಫ್ಟ್.

ಆಕ್ಯುಲಸ್ ರಿಫ್ಟ್.

ಆಕ್ಯುಲಸ್ ರಿಫ್ಟ್ ವಿ.ಆರ್ ತುಂಬಾ ವಿವಾದಾತ್ಮಕ ಗ್ಯಾಜೆಟ್ ಎಂದೇ ಹೇಳಬಹುದು. ಯಾಕೆ ವಿವಾದಾತ್ಮಕವೆಂದರೆ ಈ ಉತ್ಪನ್ನವು ಹೇಳಿದ ಸಮಯಕ್ಕೆ ಗ್ರಾಹಕರಿಗೆ ತಲುಪಲಿಲ್ಲ. ಕಂಟ್ರೋಲರ್ ಗಳ ತಯಾರಿಯೂ ತಡವಾಯಿತು.ವಿ.ಆರ್ ಮಾರುಕಟ್ಟೆಯ ಅನಭಿಷಿಕ್ತ ದೊರೆಯಾಗಿರುವ ಸೋನಿ ಪ್ಲೇ ಸ್ಟೇಷನ್ ವಿ.ಆರ್ ಜೊತೆಗೆ ಸ್ಫರ್ಧೆ ನೀಡುವುದು ಆಕ್ಯುಲಸ್ ರಿಫ್ಟ್ ವಿ.ಆರ್ ಗೆ ಸಾಧ್ಯವಾಗಲಿಲ್ಲ.

ಗೂಗಲ್ ಕ್ರೋಮ್ ಕ್ಯಾಷ್ಟ್ 4ಕೆ.

ಗೂಗಲ್ ಕ್ರೋಮ್ ಕ್ಯಾಷ್ಟ್ 4ಕೆ.

ಗೂಗಲ್ ಕ್ರೋಮ್ ಕ್ಯಾಷ್ಟ್ 4ಕೆ ವಿಫಲವಾಗಿದ್ದಕ್ಕೆ ಪ್ರಮುಖ ಕಾರಣ ಅದರ ದುಬಾರಿ ಬೆಲೆ. ಈ ಸಾಧನದ ಬೆಲೆ 69 ಡಾಲರ್ (ಅಂದಾಜು 5,000 ರುಪಾಯಿ). ಈ ಸಾಧನವನ್ನು ಉಪಯೋಗಿಸಿಕೊಂಡು ನೀವು 125 ಚಿತ್ರಗಳನ್ನು 4ಕೆಯಲ್ಲಿ ನೋಡಬಹುದಷ್ಟೇ. ಈ 125 ಚಿತ್ರಗಳಲ್ಲಿ ಹಲವು ಹಳೆಯವು. ಇದು ವಿಫಲವಾಗಿದ್ದಕ್ಕೆ ಮತ್ತೊಂದು ಕಾರಣವೆಂದರೆ ಕ್ರೋಮ್ ಕ್ಯಾಷ್ಟ್ ಅನ್ನು ನಿಮ್ಮ ಆ್ಯಂಡ್ರಾಯ್ಡ್ ಫೋನಿಗೆ ಸಂಪರ್ಕಿಸಲು ನೀವು ಮತ್ತೊಂದು ಕೇಬಲ್ ಖರೀದಿಸಬೇಕು, ಅದಕ್ಕಾಗಿ 25 ಡಾಲರುಗಳನ್ನು (ಅಂದಾಜು 1,700ರುಪಾಯಿ) ವ್ಯಯಿಸಬೇಕು.

ಗೂಗಲ್ ಹೋಮ್.

ಗೂಗಲ್ ಹೋಮ್.

2016ರ ಪ್ರಾರಂಭದಲ್ಲಿ, ಗೂಗಲ್ ಅನೇಕ ಸ್ಮಾರ್ಟ್ ಅಸಿಸ್ಟೆಂಟ್ ಗಳನ್ನು ಗೂಗಲ್ ಹೋಮ್ ಹೆಸರಿನಲ್ಲಿ ಬಿಡುಗಡೆಗೊಳಿಸಿತ್ತು. ಇದು ಅಮೆಜಾನ್ ಎಕೊಗೆ ಸ್ಪರ್ಧಿಯಾಗಿತ್ತು. ನೀವು ಹೇಳುವುದೆಲ್ಲವನ್ನೂ ಇದು ಕೇಳಿಸಿಕೊಳ್ಳುತ್ತದೆ. ಅಮೆಜಾನ್ ಎಕೊ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಗೂಗಲ್ ಅಕ್ಷರಶಃ ಅಮೆಜಾನ್ ಎಕೊ ಅನ್ನು ನಕಲಿಸಿತು, ಜನರು ಅದನ್ನು ಇಷ್ಟಪಡಲಿಲ್ಲ.

ಸ್ಯಾಮ್ಸಂಗ್ ಗೇರ್ ಐಕಾನ್ ಎಕ್ಸ್.

ಸ್ಯಾಮ್ಸಂಗ್ ಗೇರ್ ಐಕಾನ್ ಎಕ್ಸ್.

ಆ್ಯಪಲ್ ಏರ್ ಪಾಡ್ ರೀತಿಯಲ್ಲಿಯೇ ಸ್ಯಾಮ್ಸಂಗ್ ಗೇರ್ ಐಕಾನ್ ಎಕ್ಸ್ ವೈರ್ ಲೆಸ್ ಹಿಯರ್ ಬಡ್ ಗಳು. ಜೊತೆಗೆ ಇದರಲ್ಲಿ ನಿಮ್ಮ ವ್ಯಾಯಾಮವನ್ನು ಅಳೆಯುವ ಮಾಪಕವೂ ಇದೆ. ಮಾರುಕಟ್ಟೆಯಲ್ಲಿರುವ ಇತರೆ ಹೆಡ್ ಫೋನುಗಳಿಗೆ ಹೋಲಿಸಿದಾಗ ಇದು ತುಂಬಾ ದುಬಾರಿ. ಜೊತೆಗೆ ವೈರ್ ಲೆಸ್ ಹಿಯರ್ ಬಡ್ ಗಳು ಇನ್ನೂ ಜನಪ್ರಿಯವೇ ಆಗದ ಸಮಯದಲ್ಲಿ ಗೇರ್ ಐಕಾನ್ ಎಕ್ಸ್ ಮಾರುಕಟ್ಟೆಗೆ ಬಂದುಬಿಟ್ಟಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
We have listed the worst tech accessories those were launched in 2016. Take a look!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot