ಮೇಲ್, ಕಾಂಟ್ಯಾಕ್ಟ್ಸ್ ಮತ್ತು ಕ್ಯಾಲೆಂಡರ್ ಅನ್ನು ಒಟ್ಟುಗೂಡಿಸುವ ಸ್ಯಾಮ್ಸಂಗ್ ಫೋಕಸ್ ಆ್ಯಪ್.

|

ಹೊಸತೊಂದು ಮೇಲ್ ತಂತ್ರಾಂಶವನ್ನು ಹುಡುಕುತ್ತಿದ್ದಾಗ ಸ್ಯಾಮ್ಸಂಗ್ ಫೋಕಸ್ ಆ್ಯಪ್ ಕಣ್ಣಿಗೆ ಬಿತ್ತು. ಕೊರಿಯಾದ ಸ್ಯಾಮ್ಸಂಗ್ ಇತ್ತೀಚೆಗಷ್ಟೇ ಅಭಿವೃದ್ಧಿಗೊಳಿಸಿರುವ ಈ ಆ್ಯಪ್ ನಿಮ್ಮ ಕೆಲಸವನ್ನು ಸಲೀಸಾಗಿಸುತ್ತದೆ.

ಸ್ಯಾಮ್ಸಂಗ್ ಫೋಕಸ್ ಆಪ್‌ನಲ್ಲಿ ಮೇಲ್ ಮತ್ತು ಕಾಂಟ್ಯಾಕ್ಟ್ ಒಟ್ಟುಗೂಡಿಸಿ!

ಬ್ಲ್ಯಾಕ್ ಬೆರಿ ಹಬ್ ನಿಂದ ಸ್ಪೂರ್ತಿ ಪಡೆದಿರುವ ಸ್ಯಾಮ್ಸಂಗ್ ಫೋಕಸ್ ಮೊಬೈಲ್ ಆ್ಯಪ್ ನಾಲ್ಕು ಅಂಶಗಳನ್ನು ಒಂದೆಡೆಗೆ ಸೇರಿಸುತ್ತದೆ - ಕಾಂಟ್ಯಾಕ್ಟ್ಸ್, ಮೇಲ್ಸ್, ಕ್ಯಾಲೆಂಡರ್ ಮತ್ತು ಮೆಮೋಸ್. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಹೊಂದಿರುವ ಸ್ಯಾಮ್ಸಂಗ್ ಸಾಧನಗಳಿಗೆ ಈ ಆ್ಯಪ್ ಲಭ್ಯವಿದೆ.

ಓದಿರಿ: ಎಂಐ ಪಿಸ್ಟನ್ ಫ್ರೆಶ್ ಹಿಯರ್ ಮಫ್ಸ್ ಮತ್ತು ಓವರ್ ಹಿಯರ್ ಹೆಡ್ ಫೋನುಗಳನ್ನು ಬಿಡುಗಡೆಗೊಳಿಸಿದ ಶಿಯೋಮಿ.

ಸ್ಯಾಮ್ಸಂಗ್ ಫೋಕಸ್ ಯುನಿಫೈಡ್ ಪ್ರೊಡಕ್ಟಿವಿಟಿ ತಂತ್ರಾಂಶವಾಗಿ ಕೆಲಸ ಮಾಡುತ್ತದೆ. ನಿಮ್ಮ ಮೇಲ್, ಕ್ಯಾಲೆಂಡರ್, ಮೆಮೊ ಮತ್ತು ಕಾಂಟ್ಯಾಕ್ಟುಗಳು ಒಂದೆಡೆಯೇ ಲಭ್ಯವಾಗುವುದರಿಂದ ನಿಮ್ಮ ಕೆಲಸ ಸರಳವಾಗುತ್ತದೆ.

ಸ್ಯಾಮ್ಸಂಗ್ ಫೋಕಸ್ ಆಪ್‌ನಲ್ಲಿ ಮೇಲ್ ಮತ್ತು ಕಾಂಟ್ಯಾಕ್ಟ್ ಒಟ್ಟುಗೂಡಿಸಿ!

ಸ್ಮಾರ್ಟ್ ಫೋನನ್ನು ತಮ್ಮ ಕೆಲಸಗಳಿಗಾಗಿ ಉಪಯೋಗಿಸುವ ಜನರಿಗೆ ಇದು ತುಂಬಾ ಉಪಯುಕ್ತವಾಗಿದೆ. ಈ ಆ್ಯಪ್ ನ ಕೆಲವು ವಿಶೇಷತೆಗಳೆಂದರೆ:

1. ಐ.ಎಂ.ಎ.ಪಿ ಮತ್ತು ಪಿ.ಒ.ಪಿ 3 ಜೊತೆಗೆ ಎಕ್ಸ್ಚೇಂಜ್ ಸರ್ವರ್ ಗಳಿಗೂ ಇದು ಬೆಂಬಲ ನೀಡಲಿದೆ. ನೀವು ನಿಮ್ಮ ಎಲ್ಲಾ ಇಮೇಲ್ ಗಳನ್ನು ಈ ಆ್ಯಪ್ ಮೂಲಕ ಬಳಸಲು ಸಾಧ್ಯ.

2. ಎಕ್ಸ್ಚೇಂಜ್ ಆ್ಯಕ್ಟೀವ್ ಸಿಂಕ್ ಜೊತೆಗೆ ಸಿನ್ಕ್ರೊನೈಜ್ ಮಾಡುವ ಸೌಲಭ್ಯ.

3. ಇಮೇಲ್ ಮೂಲಕ ಇವೆಂಟ್ ಅಥವಾ ಟ್ಯಾಸ್ಕ್ ಅನ್ನು ಸೃಷ್ಟಿಸಬಹುದು.

4. ಇಮೇಲ್, ಇವೆಂಟ್, ಮೆಮೊ, ಟ್ಯಾಸ್ಕ್, ಕಾಂಟ್ಯಾಕ್ಟುಗಳನ್ನು ಇದರಲ್ಲಿಯೇ ಹುಡುಕುವ ಸಲುವಾಗಿ ಯುನಿಫೈಡ್ ಸರ್ಚ್ ಸಪೋರ್ಟ್.

ಸ್ಯಾಮ್ಸಂಗ್ ಫೋಕಸ್ ಆಪ್‌ನಲ್ಲಿ ಮೇಲ್ ಮತ್ತು ಕಾಂಟ್ಯಾಕ್ಟ್ ಒಟ್ಟುಗೂಡಿಸಿ!

5. ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕಾಂಟ್ಯಾಕ್ಟ್ ತಂತ್ರಾಂಶವಿದು.

6. ಕ್ಯಾಲೆಂಡರ್ ಗೆ ಬೆಂಬಲ ನೀಡುತ್ತದೆ.

7. ಮೆಮೊಗಳನ್ನು ಸೇರಿಸಬಹುದು, ಎಡಿಟ್ ಮಾಡಬಹುದು, ತೆಗೆದುಹಾಕಬಹುದು.

8. ಪ್ರಿಯಾರಿಟಿ ಸೆಂಡರ್ ಗಳನ್ನು ಸೇರಿಸಿಕೊಳ್ಳಬಹುದು.

ಇದರಲ್ಲಿನ ಖಾಸಗಿತನ ಮತ್ತು ರಕ್ಷಣೆಯ ಬಗ್ಗೆ ನನಗೆ ಪ್ರಶ್ನೆಗಳಿದ್ದವು, ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿದ ನಂತರ ಸ್ಯಾಮ್ಸಂಗ್ ಫೋಕಸ್ ಯಾವುದೇ ಕ್ಲೌಡ್ ಸರ್ವರ್ ಗಳನ್ನು ಉಪಯೋಗಿಸುವುದಿಲ್ಲ ಎನ್ನುವುದು ತಿಳಿಯಿತು. ಇದು ನಮ್ಮ ಇಮೇಲ್ ಸರ್ವರುಗಳನ್ನಷ್ಟೇ ಸಂಪರ್ಕಿಸುತ್ತದೆ. ನಿಮ್ಮ ಖಾತೆಯ ವಿವರಗಳು ನಿಮ್ಮ ಮೊಬೈಲಿನಲ್ಲಿ ಮಾತ್ರ ಇರುತ್ತದೆ ಮತ್ತು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಯಾವತ್ತಿಗೂ ನಿಮ್ಮ ವಿವರಗಳನ್ನು ಪಡೆಯುವುದಿಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ನಲ್ಲಿರುವ ಇಮೇಲ್ ತಂತ್ರಾಂಶ ಅಷ್ಟೇನೂ ಸರಿ ಇಲ್ಲದ ಕಾರಣದಿಂದಾಗಿ ಸ್ಯಾಮ್ಸಂಗ್ ಫೋಕಸ್ ಅನ್ನು ಇನ್ಸ್ಟಾಲ್ ಮಾಡಿಕೊಂಡೆ. ಯೂಸರ್ ಇಂಟರ್ ಫೇಸ್ ಸರಳವಾಗಿದೆ, ಚೆಂದಾಗಿದೆ.

ನಾನಂತೂ ಈ ತಂತ್ರಾಂಶವನ್ನು ನನ್ನ ಇಮೇಲ್ ನೋಡಲು, ಕಾಂಟ್ಯಾಕ್ಟ್ಸ್, ಕ್ಯಾಲೆಂಡರ್ ಅನ್ನು ನೋಡಲು ಬಳಸುತ್ತೇನೆ. ನೀವು?

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Samsung Focus app let you access mails, check calendar, browse contacts and add/edit memos all through one single app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X