ಆಪಲ್‌ ದೀಪಾವಳಿ ಸೇಲ್‌ ಘೋಷಣೆ! ಏನೆಲ್ಲಾ ಡಿಸ್ಕೌಂಟ್‌ ಲಭ್ಯ!

|

ಭಾರತದಲ್ಲಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ವಿಶೇಷ ಡಿಸ್ಕೌಂಟ್‌ ಸೇಲ್‌ಗಳನ್ನು ನಡೆಸುತ್ತಿವೆ. ಇದೀಗ ಆಪಲ್‌ ಕಂಪೆನಿ ಕೂಡ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೀಪಾವಳಿ ಸೇಲ್‌ ಆಯೋಜಿಸುವುದಾಗಿ ಘೋಷಣೆ ಮಾಡಿದೆ. ಇನ್ನು ಈ ಸೇಲ್‌ ಇದೇ ಸೆಪ್ಟೆಂಬರ್‌ 26 ರಂದು ಲೈವ್‌ ಆಗಲಿದೆ ಎಂದು ಆಪಲ್‌ ಕಂಪೆನಿ ದೃಢಪಡಿಸಿದೆ. ಆಪಲ್‌ ದೀಪಾವಳಿ ಸೇಲ್‌ನ ಡೀಲ್ಸ್‌ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಕೆಲವು ಸೀಮಿತ ಅವಧಿಯ ಆಫರ್‌ಗಳು ಲಭ್ಯವಾಗಲಿವೆ ಎಂದು ಆಪಲ್‌ ಕಂಪೆನಿ ಹೇಳಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ದೀಪಾವಳಿ ಸೇಲ್‌ ಆಯೋಜಿಸುವುದಾಗಿ ಘೋಷಣೆ ಮಾಡಿದೆ. ಈ ಸೇಲ್‌ನಲ್ಲಿ ಐಫೋನ್‌ ಖರೀದಿಯ ಮೇಲೆ ಫ್ರೀ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಸಮಯದಲ್ಲಿ ಐಫೋನ್‌ 13 ಮತ್ತು ಐಫೋನ್‌ 13 ಮಿನಿ ಖರೀದಿಸುವವರಿಗೆ ಉಚಿತ ಏರ್‌ಪಾಡ್‌ ಅನ್ನು ನೀಡುವ ನಿರೀಕ್ಷೆಯಿದೆ. ಹಾಗಾದ್ರೆ ಆಪಲ್‌ ದೀಪಾವಳಿ ಸೇಲ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್‌ಗಳನ್ನು ನಿರೀಕ್ಷಿಸಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೀಪಾವಳಿ

ಆಪಲ್ ದೀಪಾವಳಿ ಸೇಲ್‌ನಲ್ಲಿ ಐಫೋನ್‌ಗಳ ಮೇಲೆ ಯಾವ ರೀತಿಯ ಫ್ಲಾಟ್ ರಿಯಾಯಿತಿಯನ್ನು ನೀಡುತ್ತದೆಯೇ ಎಂಬುದು ಬಹಿರಂಗವಾಗಿಲ್ಲ. ಈಗಾಗಲೆ ಐಫೋನ್ 14 ಸರಣಿ ಲಾಂಚ್‌ ಆದ ನಂತರ ಐಫೋನ್ 13 ಬೆಲೆಯನ್ನು ಕಡಿತಗೊಳಿಸಿದೆ. ಆದ್ದರಿಂದ, ಆಪಲ್ ದೀಪಾವಳಿ ಸೇಲ್‌ನಲ್ಲಿ ಇನ್ನು ಹೆಚ್ಚಿನ ಡಿಸ್ಕೌಂಟ್‌ ನೀಡುವ ಸಾಧ್ಯತೆಯಿದೆ. ಇದು ಬ್ಯಾಂಕ್ ಕಾರ್ಡ್‌ಗಳ ಆಧಾರದ ಮೇಲೆ ರಿಯಾಯಿತಿಗಳನ್ನು ನೀಡುವ ಸಾಧ್ಯತೆಗಳಿವೆ.

ಐಫೋನ್

ಪ್ರಸ್ತುತ ಐಫೋನ್ 13 ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ 56,990 ರೂ. ಬೆಲೆಯಲ್ಲಿ ಸೇಲ್‌ ಆಗ್ತಿದೆ. ಇದೇ ಸಮಯದಲ್ಲಿ ಐಫೋನ್‌ 12 ಅಮೆಜಾನ್‌ ಸೇಲ್‌ನಲ್ಲಿ 42,999 ರೂ.ಗಳಿಗೆ ಲಭ್ಯವಿತ್ತು, ಆದರೆ ಇದೀಗ 44,999 ರೂಗಳಿಗೆ ಮಾರಾಟವಾಗ್ತಿದೆ. ಇನ್ನು ಐಪ್ಯಾಡ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಇಯರ್‌ಫೋನ್‌ಗಳಂತಹ ಉತ್ಪನ್ನಗಳ ಮೇಲೆ ಆಪಲ್ ರಿಯಾಯಿತಿ ನೀಡುವುದರ ಬಗ್ಗೆ ಯಾವುದೇ ವಿಚಾರ ಬಹಿರಂಗವಾಗಿಲ್ಲ.

ಐಫೋನ್ 14 ಫೀಚರ್ಸ್‌

ಐಫೋನ್ 14 ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್

ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್

6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇ ನೀಡುತ್ತದೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್‌ ಆನ್ ಕಾರ್ಯವನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ. ಐಫೋನ್ 14 ಪ್ರೊ ಆಕ್ಷನ್ ಮೋಡ್ ಅನ್ನು ನೀಡುತ್ತದೆ.

Best Mobiles in India

English summary
Apple Diwali sale begins on September 26 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X