ಅಮೆರಿಕದ ಸೈಬರ್‌ ಬೇಹುಗಾರಿಕೆ ವಿರುದ್ಧ ಒಂದಾದ ಟೆಕ್‌ ಕಂಪೆನಿಗಳು

By Ashwath
|

ತಮ್ಮ ಬಳಕೆದಾರರ ಡೇಟಾಗಳನ್ನು ಪಡೆದುಕೊಳ್ಳುವ ಅಮೆರಿಕದ ವಿರುದ್ಧ ವಿಶ್ವದ ಪ್ರಭಾವಿ ಟೆಕ್‌ ಕಂಪೆನಿಗಳು ಮೊದಲ ಬಾರಿಗೆ ಒಂದಾಗಿದ್ದು,ಬಳಕೆದಾರ ಡೇಟಾವನ್ನು ಪಡೆಯುವ ಬಗ್ಗೆ ಮಾಗದರ್ಶಿ ಸೂತ್ರಗಳನ್ನು ಅನುಸರಿಸಬೇಕೆಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದೆ.

ವಿಶ್ವದ ಬ್ರ್ಯಾಂಡ್‌ ಟೆಕ್‌ ಕಂಪೆನಿಗಳಾದ ಅಮೆರಿಕ ಮೂಲದ ಗೂಗಲ್‌,ಆಪಲ್‌,ಮೈಕ್ರೋಸಾಫ್ಟ್‌, ಫೇಸ್‌ಬುಕ್‌,ಯಾಹೂ,ಎಒಎಲ್‌,ಲಿಂಕ್ಡಿನ್‌,ಟ್ವೀಟರ್‌ ಒಂದಾಗಿ ಜಿಜಿಎಸ್‌ಆರ್‌(Global Government Surveillance Reform)ಹೆಸರಿನಡಿ ಪ್ರಚಾರ ಆರಂಭಿಸಿ, ಸಾರ್ವ‌ಜನಿಕರಿಗೆ ಅಮೆರಿಕದ ಬೇಹುಗಾರಿಕೆಯ ನಿಯಮವನ್ನು ವಿವರಿಸಿವೆ.

ಈ ಸಂಬಂಧ ಈ ಎಲ್ಲಾ ಕಂಪೆನಿಗಳು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಕಾಂಗ್ರೆಸ್‌ ಸದಸ್ಯರಿಗೆ ಬಹಿರಂಗ ಪತ್ರವನ್ನು ಬರೆದು ಬಳಕೆದಾರರ ಡೇಟಾಗಳನ್ನು ಪಡೆಯುವ ಬಗ್ಗೆ ಸರಿಯಾದ ನೀತಿ ನಿಯಮವನ್ನು ಅನುಸರಿಬೇಕೆಂದು ಮನವಿ ಮಾಡಿದೆ.

ಸರ್ಕಾರಗಳು ಬಳಕೆದಾರರ ಮಾಹಿತಿಗಳನ್ನು ಕೇಳಿದ ಬಳಿಕ ನಾವು ಹೇಗೆ ಪಾರದರ್ಶಕವಾಗಿ ಮಾಹಿತಿಗಳನ್ನು ಬಹಿರಂಗ ಪಡಿಸುತ್ತೇವೋ ಅದೇ ರೀತಿಯಾಗಿ ಸರ್ಕಾರಗಳು ತಮ್ಮಿಂದ ಪಡೆದ ಮಾಹಿತಿಗಳನ್ನು ಬಹಿರಂಗ ಪಡಿಸಬೇಕು ಎಂದು ಕಂಪೆನಿಗಳು ಒತ್ತಾಯಿಸಿವೆ.

ಯಾಹೂ ಸಿಇಒ ಮರಿಸ್ಸಾ ಮೇಯರ್‌ ಸರ್ಕಾರದ ಬೇಹುಗಾರಿಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ,ಯಾಹೂ ಯಾವಾಗಲೂ ಬಳಕೆದಾರರ ಡೇಟಾಗಳನ್ನು ಗೌಪ್ಯವಾಗಿಡಲು ಬಯಸುತ್ತದೆ. ಆದರೆ ಇತ್ತೀಚಿನ ಕೆಲವು ಸರ್ಕಾರದ ಘಟನೆಗಳಿಂದಾಗಿ ನಮಗೆ ಹೆದರಿಕೆಯಾಗುತ್ತಿವೆ.ಬಳಕೆದಾರರು ನಮ್ಮ ಮೇಲೆ ಇರಿಸಿದ ನಂಬಿಕೆಯನ್ನು ಉಳಿಸಲು ಎಲ್ಲಾ ಟೆಕ್ ಕಂಪೆನಿಗಳು ಒಂದಾಗಿದ್ದು,ಅಮೆರಿಕ ಸರ್ಕಾರ ತನ್ನ ಸೈಬರ್‌ ಪತ್ತೆದಾರಿಕೆಯ ಬಗ್ಗೆ ತನ್ನ ನೀಯಮದಲ್ಲಿ ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.

 ಅಮೆರಿಕದ ಸೈಬರ್‌ ಬೇಹುಗಾರಿಕೆ ವಿರುದ್ಧ ಒಂದಾದ ಟೆಕ್‌ ಕಂಪೆನಿಗಳು

ಟೆಕ್‌ ಕಂಪೆನಿಗಳು ಒಂದಾಗಿದ್ದು ಯಾಕೆ?
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಕೆಲ ತಿಂಗಳ ಹಿಂದೆ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ.ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಮೆರಿಕ ಸೈಬರ್‌ ಪತ್ತೆದಾರಿಕೆಯಿಂದ ಪಾರಾಗಲು ಈ ಕಂಪೆನಿಗಳ ಮೂಲಕ ಸಂವಹನ ಸೇರಿದಂತೆ ಇನ್ನಿತರ ವ್ಯವಹಾರ ಪದ್ದತಿಗೆ ಬ್ರೇಕ್‌‌ ಹಾಕಲು ಮುಂದಾಗಿವೆ. ಉಳಿದ ದೇಶಗಳು ಅಮೆರಿಕದ ಎನ್ಎಸ್ಎ ಬೇಹುಗಾರಿಕೆಯಿಂದಾಗಿ ತಮ್ಮ ಕಂಪೆನಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಟೆಕ್‌ ಕಂಪೆನಿಗಳು ಒಂದಾಗಿ ಅಮೆರಿಕದ ಅಧ್ಯಕ್ಷರಿಗೆ ಪತ್ರ ಬರೆದಿವೆ.

ಭಾರತ ಸರ್ಕಾರ ಇದೀಗ ಎಚ್ಚೆತ್ತಿದ್ದು ತನ್ನ ನೌಕರರಿಗೆ ಅಮೆರಿಕದಲ್ಲಿ ಸರ್ವರ್‌ ಹೊಂದಿರುವ ಕಂಪೆನಿಗಳ ಇಮೇಲ್‌ ಬಳಕೆಯನ್ನು ಬಳಸದಂತೆ ಸೂಚನೆ ನೀಡಿದೆ. ಯಾಹೂ,ಜಿಮೇಲ್‌,ಹಾಟ್‌ಮೇಲ್‌ ಖಾತೆಗಳ ಬದಲಾಗಿ ಸರ್ಕಾರದ್ದೇ ಆದ ಎನ್‌ಐಸಿ(National Informatics Centre)ಸಿದ್ದ ಪಡಿಸಿರುವ ಇಮೇಲ್‌ ಖಾತೆಗಳ ಮೂಲಕ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಂವಹನ ನಡಸುವುದು ಕಡ್ಡಾಯ ಮಾಡಿದೆ.

ಇದನ್ನೂ ಓದಿ: ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X