ಜಿಮೇಲ್,ಯಾಹೂಗೆ ಸರ್ಕಾರಿ ಕಚೇರಿಗಳಲ್ಲಿ ನಿಷೇಧ

Posted By:

ಅಮೆರಿಕದ ಸೈಬರ್‌ ಪತ್ತೆದಾರಿಕೆಗೆ ತುತ್ತಾಗದಂತೆ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು, ತನ್ನೆಲ್ಲಾ ಸರ್ಕಾರಿ ನೌಕರರಿಗೆ ಜಿ ಮೇಲ್‌ನಂತಹ ಇಮೇಲ್‌ ಬಳಕೆಯ ಮೇಲೆ ನಿಷೇಧ ಹೇರಲು ಚಿಂತನೆ ನಡೆಸಿದ್ದು,ಡಿಸೆಂಬರ್‌ನಲ್ಲಿ ಈ ಯೋಜನೆ ಪೂರ್ಣವಾಗಿ ಜಾರಿಗೆ ಬರುವ ಸಾಧ್ಯತೆ ಇದೆ.

ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳ ಜಿಮೇಲ್‌‌,ಯಾಹೂ,ಹಾಟ್‌ಮೈಲ್‌ ಇಮೇಲ್‌ ಖಾತೆಗಳ ಬದಲಾಗಿ ಸರ್ಕಾರದ್ದೇ ಆದ ಎನ್‌ಐಸಿ(National Informatics Centre)ಸಿದ್ದ ಪಡಿಸಿರುವ ಇಮೇಲ್‌ ಖಾತೆಗಳ ಮೂಲಕ ಸಂವಹನ ನಡಸುವುದು ಕಡ್ಡಾಯವಾಗಲಿದೆ.ಈ ಹೊಸ ವ್ಯವಸ್ಥೆಗೆ ಆರಂಭದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎನ್‌ಐಸಿಗೆ 5 ಕೋಟಿ ವೆಚ್ಚವಾಗಲಿದ್ದು.ಒಟ್ಟು ಈ ವ್ಯವಸ್ಥೆ ಪೂರ್ಣ‌ಗೊಳ್ಳಲು 50 - 100 ಕೋಟಿ ಅಗತ್ಯವಿದೆ.

 ಜಿಮೇಲ್,ಯಾಹೂಗೆ ಸರ್ಕಾರಿ ಕಚೇರಿಗಳಲ್ಲಿ ನಿಷೇಧ

ಕೇಂದ್ರ ಸರ್ಕಾರದ ಡಿಇಐಟಿ(Department of Electronics and Information Technology) ಸಿದ್ದಪಡಿಸಿರುವ ಈ ಪ್ರಸ್ತಾವನೆ ಸದ್ಯಕ್ಕೆ ಪ್ರಯೋಗಿಕ ಹಂತದಲ್ಲಿದ್ದು,ವರ್ಷಾಂತ್ಯದಲ್ಲಿ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.ಇದೇ ಅಗಸ್ಟ್‌ನಲ್ಲಿ ಈ ಸಂಬಂಧ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸರ್ಕಾರದ ಐದು ಲಕ್ಷ ನೌಕರರಿಗೆ ಜಿಮೇಲ್‌ ಬಳಸದಂತೆ ಔಪಚಾರಿಕ ಸೂಚನೆ ನೀಡಿತ್ತು.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಕೆಲ ತಿಂಗಳ ಹಿಂದೆ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ.ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎಚ್ಚೆತ್ತುಕೊಳ್ಳುತ್ತಿದ್ದು ತನ್ನ ನೌಕರರಿಗೆ ಅಮೆರಿಕದಲ್ಲಿ ಸರ್ವರ್‌ ಹೊಂದಿರುವ ಕಂಪೆನಿಗಳ ಇಮೇಲ್‌ ಬಳಕೆಯನ್ನು ಬಳಸದಂತೆ ಈ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ.

ಇದನ್ನೂ ಓದಿ: ಇಮೇಲ್‌ನ್ನು ಸುರಕ್ಷಿತವಾಗಿಡಲು 8 ಟಿಪ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot