Subscribe to Gizbot

ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ

Posted By:

ಈ ವರ್ಷ ಭಾರತ 2,691 ಬಳಕೆದಾರರ ಡೇಟಾವನ್ನು ತನ್ನ ಬಳಿ ಕೇಳಿದೆ ಎಂದು ಗೂಗಲ್‌ ಹೇಳಿದೆ. ಈ ಮೂಲಕ ಅತಿ ಹೆಚ್ಚು ಬಳಕೆದಾರರ ಡೇಟಾವನ್ನು ಕೇಳಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಗೂಗಲ್‌ ಈ ವರ್ಷದ ಜನವರಿಯಿಂದ ಜೂನ್‌ವರೆಗಿನ ಪಾರದರ್ಶಕ ವರದಿಯನ್ನು ಪ್ರಕಟಿಸಿದ್ದು,ಅಮೆರಿಕ ಗೂಗಲ್‌ನಲ್ಲಿ ಅತಿ ಹೆಚ್ಚು ಬಳಕೆದಾರರ ಡೇಟಾವನ್ನು ಕೇಳಿದೆ.ಅಮೆರಿಕ ಇದುವರೆಗೆ 10,918 ಬಳಕೆದಾರರ ಬಗ್ಗೆ ಮಾಹಿತಿಯನ್ನ ಕೇಳಿದೆ ಎಂದು ವರದಿಯಲ್ಲಿ ಗೂಗಲ್‌ ಹೇಳಿದೆ.

ಗೂಗಲ್‌ನಲ್ಲಿ 2,691 ಬಳಕೆದಾರರ ಡೇಟಾವನ್ನುಕೇಳಿದ ಭಾರತ

ವಿವಿಧ ರಾಷ್ಟ್ರಗಳು ‌ ಒಟ್ಟು 25,879 ಬಳಕೆದಾರರ ಡೇಟಾದ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಕೇಳಿದ್ದು, 2010ಕ್ಕೆ ಹೋಲಿಸಿದ್ದಲ್ಲಿ ಈ ಸಂಖ್ಯೆ ದ್ವಿಗುಣವಾಗಿದೆ ಎಂದು ಗೂಗಲ್‌ ಹೇಳಿದೆ.

ಭಾರತದ ಬಳಿಕ ಜರ್ಮ‌ನಿ(2,311),ಫ್ರಾನ್ಸ್‌(2,011) ಇಂಗ್ಲೆಂಡ್‌ (1,274) ದೇಶಗಳು ಅತಿ ಹೆಚ್ಚಿನ ಸಂಖ್ಯೆಯ ಬಳಕೆದಾರರ ಡೇಟಾದ ಬಗ್ಗೆ ಮಾಹಿತಿಯನ್ನು ಕೇಳಿದೆ ಎಂದು ಗೂಗಲ್‌ನ ಪಾರದರ್ಶಕ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಗೂಗಲ್‌ನಲ್ಲಿ ಸಿಗುತ್ತೆ ಅಂತಾ ಏನೇನು ಹುಡಕಬೇಡಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot