ಗ್ರಾಹಕರಿಗೆ ಬಿಗ್‌ ಶಾಕ್‌! ಆಪಲ್‌ನ ಈ ಜನಪ್ರಿಯ ಸೇವೆ ಇನ್ಮುಂದೆ ಲಭ್ಯವಿಲ್ಲ!

|

ಹೊಸ ವರ್ಷಕ್ಕೆ ಎಂಟ್ರಿ ಆಗ್ತಿದ್ದ ಹಾಗೇ ಆಪಲ್‌ ಕಂಪೆನಿ ತನ್ನ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಇಷ್ಟು ದಿನ ತನ್ನ ಬಳಕೆದಾರರಿಗೆ ನೀಡ್ತಿದ್ದ ಜನಪ್ರಿಯ ವೆದರ್‌ ಅಪ್ಲಿಕೇಶನ್‌ ಡಾರ್ಕ್‌ ಸ್ಕೈ ಅನ್ನು ಸ್ಟಾಪ್‌ ಮಾಡಿದೆ. ಈಗಾಗಲೇ ಆಪ್‌ ಸ್ಟೋರ್‌ನಿಂದ ರಿಮೂವ್‌ ಮಾಡಿದ್ದ ಈ ಅಪ್ಲಿಕೇಶನ್‌ ಇದೀಗ ಅಧಿಕೃತವಾಗಿ ತನ್ನ ಕೆಲಸ ಮಾಡುವುದನ್ನು ಸ್ಟಾಪ್‌ ಮಾಡಿದೆ. ನೀವು ಕೂಡ ನಿಮ್ಮ ಐಫೋನ್‌ನಲ್ಲಿ ಡಾರ್ಕ್‌ ಸ್ಕೈ ಅಪ್ಲಿಕೇಶನ್‌ ಬಳಸುತ್ತಿದ್ದರೆ, ಇದಿನಿಂದ ಅದು ನಿರುಪಯುಕ್ತವೆನಿಸಲಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ತನ್ನ ಡಾರ್ಕ್‌ ಸ್ಕೈ ಅಪ್ಲಿಕೇಶನ್‌ ಅನ್ನು ಅಧಿಕೃತವಾಗಿ ಸ್ಟಾಪ್‌ ಮಾಡಿದೆ. ಡಾರ್ಕ್ ಸ್ಕೈ ಅಪ್ಲಿಕೇಶನ್‌ ಅನ್ನು ಅಧಿಕೃತವಾಗಿ ತೆಗೆದುಹಾಕುವ ಮೂಲಕ ಹೊಸ ವರ್ಷದ ಸಮಯದಲ್ಲಿ ಆಪಲ್‌ ಕಂಪೆನಿ ಹೊಸ ಹೆಜ್ಜೆ ಇಟ್ಟಿದೆ. ಸದ್ಯ ಆಫಲ್‌ ಕಂಪೆನಿ ವೆದರ್‌ ರಿಪೋರ್ಟ್‌ಗಾಗಿ ಡಾರ್ಕ್‌ ಸ್ಕೈ ಅಪ್ಲಿಕೇಶನ್‌ನಲ್ಲಿದ್ದ ಫೀಚರ್ಸ್‌ಗಳನ್ನು ತನ್ನ ವೆದರ್‌ ಅಪ್ಲಿಕೇಶನ್‌ನಲ್ಲಿ ಸಂಯೋಜಸಿದೆ. ಹಾಗಾದ್ರೆ ಡಾರ್ಕ್‌ ಸ್ಕೈ ಆ್ಯಪ್‌ ಅನ್ನು ಸ್ಟಾಪ್‌ ಮಾಡುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಐಫೋನ್‌ಗಳಲ್ಲಿ ಡಾರ್ಕ್‌ ಸ್ಕೈ ಅಪ್ಲಿಕೇಶನ್‌ ಇನ್ಮುಂದೆ ಅಧಿಕೃತವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಐಫೋನ್‌ಗಳಲ್ಲಿ ಡಾರ್ಕ್‌ ಸ್ಕೈ ಅಪ್ಲಿಕೇಶನ್‌ ಇದ್ದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಇನ್ಮುಂದೆ ನೀವು ವೆದರ್‌ ರಿಪೋರ್ಟ್‌ ತಿಳಿಯಬೇಕಾದರೆ ಐಫೋನ್‌ನಲ್ಲಿ ಪ್ರಿ ಲೋಡ್‌ ಆಗಿರುವ ಆಪಲ್‌ ವೆದರ್‌ ಅಪ್ಲಿಕೇಶನ್‌ನಲ್ಲಿ ತಿಳಿಯಬಹುದಾಗಿದೆ. ಡಾರ್ಕ್‌ ಸ್ಕೈ ಅಪ್ಲಿಕೇಶನ್‌ನಲ್ಲಿರುವ ಫೀಚರ್ಸ್‌ಗಳು ಆಪಲ್‌ ವೆದರ್‌ನಲ್ಲಿ ಸಂಯೋಜಿಸಲಾಗಿದೆ.

ಅಪ್ಲಿಕೇಶನ್‌

ಆಪಲ್‌ ವೆದರ್‌ ಅಪ್ಲಿಕೇಶನ್‌ ನಿಮಗೆ ಹೈಪರ್‌ಲೋಕಲ್ ಮುನ್ಸೂಚನೆಗಳನ್ನು ನೀಡುತ್ತದೆ. ಅಲ್ಲದೆ ಮುಂದಿನ ಸಮಯದಲ್ಲಿ ಬರುವ ಮಳೆ, ಮುಂದಿನ 10 ದಿನಗಳವರೆಗೆ ವೆದರ್‌ ಹೇಗಿರಲಿದೆ ಎಂಬ ಸೂಚನೆಗಳನ್ನು ನೀಡಲಿದೆ. ಜೊತೆಗೆ ಸಮಯದ ಮುನ್ಸೂಚನೆಗಳು, ಹೆಚ್ಚಿನ ರೆಸಲ್ಯೂಶನ್ ರಾಡಾರ್ ಮತ್ತು ಅಧಿಸೂಚನೆಗಳನ್ನು ನೀಡಲಿದೆ. ಇನ್ನು ಈ ಆ್ಯಪ್‌ iOS 16, iPadOS 16, ಮತ್ತು macOS 13 Ventura ಚಾಲನೆಯಲ್ಲಿರುವ ಡಿವೈಸ್‌ಗಳಲ್ಲಿ ಆಪಲ್‌ ವೆದರ್‌ ಆ್ಯಪ್‌ ಲಭ್ಯವಾಗಲಿದೆ.

ಆಪಲ್

ಇನ್ನು ಆಪಲ್ ಕಂಪೆನಿ ಡಾರ್ಕ್‌ ಸ್ಕೈ ಅನ್ನು ಜುಲೈ 2020ರಲ್ಲಿ ಸ್ವಾಧೀನಪಡಿಸಿಕೊಂಡಿತು. ಆದರೆ ಡಾರ್ಕ್‌ ಸ್ಕೈ ಅನ್ನು ಸಂಪೂರ್ಣವಾಗಿ ಸ್ಟಾಪ್‌ ಮಾಡಿದೆ. ಇನ್ನು ಈ ಅಪ್ಲಿಕೇಶನ್ ಅನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು. ಅದರಂತೆ ಇಂದಿನಿಂದ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದಲ್ಲದೆ, ಆಪಲ್‌ ಕಂಪನಿಯು ಮಾರ್ಚ್ 31, 2023 ರಂದು ಥರ್ಡ್‌ ಪಾರ್ಟಿ ವೆದರ್‌ ಅಪ್ಲಿಕೇಶನ್‌ಗಳಿಗಾಗಿ ಡಾರ್ಕ್ ಸ್ಕೈನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಸಹ ಕ್ಲೋಸ್‌ ಮಾಡಲಿದೆ. ಆಪಲ್‌ ಕಂಪೆನಿ ಇದಕ್ಕೆ ಬದಲಿಯಾಗಿ ತನ್ನದೇ ಆದ ವೆದರ್‌ಕಿಟ್ API ಅನ್ನು ಪರಿಚಯಿಸುತ್ತದೆ ಎಂದು ವರದಿಯಾಗಿದೆ.

ಆಪಲ್‌

ಆಪಲ್‌ ಕಂಪೆನಿ ಫೋಲ್ಡಬಲ್‌ ಐಫೋನ್‌ ಪರಿಚಯಿಸೋಕೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಫೋಲ್ಡಬಲ್‌ ಐಫೋನ್‌ 2025ಕ್ಕೆ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಇನ್ನು "iPhone ಫೋಲ್ಡ್" USB-C ಪೋರ್ಟ್ ಮತ್ತು ಮ್ಯಾಗ್‌ಸೇಫ್‌ ಸಪೋರ್ಟ್‌ ಅನ್ನು ಪಡೆದಿರುವ ಸಾಧ್ಯತೆಯಿದೆ. ಜೊತೆಗೆ ಇದು ಕನಿಷ್ಠ ಟಚ್ ಐಡಿಯನ್ನು ಬಳಸುವ ನಿರೀಕ್ಷೆಯಿದೆ. ಇದರ ನಡುವೆ ಐಫೋನ್‌ ಫೋಲ್ಡ್‌ಗಿಂತ ಮೊದಲು ಫೋಲ್ಡಬಲ್ ಐಪ್ಯಾಡ್ ಅನ್ನು ಪ್ರಾರಂಭಿಸಬಹುದು ಎನ್ನುವ ವರದಿ ಕೂಡ ಇದೆ. ಆಪಲ್ ಪ್ರಸ್ತುತ 20 ಇಂಚಿನ ಫೋಲ್ಡಬಲ್‌ ಡಿಸ್‌ಪ್ಲೇಗಾಗಿ ಡಿಸ್‌ಪ್ಲೇ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಇದರಿಂದ ಆಪಲ್‌ ಕಂಪೆನಿಯ ಐಫೋನ್‌ ಫೋಲ್ಡ್‌ 20 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಅನ್ನೊದು ಕನ್ಫರ್ಮ್‌ ಆಗಿದೆ.

Best Mobiles in India

Read more about:
English summary
Apple has officially shut down the popular weather app Dark Sky

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X