iOS 16 ಆಪರೇಟಿಂಗ್‌ ಸಿಸ್ಟಂ ವಿಶೇಷತೆ ಏನು? ಏನೆಲ್ಲಾ ಫೀಚರ್‌ ಲಭ್ಯವಾಗಲಿದೆ?

|

ಟೆಕ್‌ ಲೋಕದ ದೈತ್ಯ ಆಪಲ್‌ ಕಂಪೆನಿ ನೆನ್ನೆ ತಡರಾತ್ರಿ ನಡೆದ ಆಪಲ್‌ ಫಾರ್‌ ಔಟ್‌ ಈವೆಂಟ್‌ನಲ್ಲಿ ತನ್ನ ಹೊಸ ಐಫೋನ್ ಮಾಡೆಲ್‌ಗಳನ್ನು ಪರಿಚಯಿಸಿದೆ. ಜೊತೆಗೆ ಸ್ಮಾರ್ಟ್‌ವಾಚ್‌ಗಳು ಮತ್ತು ಏರ್‌ಪಾಡ್‌ ಪ್ರೊ 2 ಅನ್ನು ಲಾಂಚ್‌ ಮಾಡಿದೆ. ಇದರೊಂದಿಗೆ ಆಪಲ್‌ನ ಹೊಸ ಆಪರೇಟಿಂಗ್‌ ಸಿಸ್ಟಮ್‌ iOS 16 ಅನ್ನು ಕೂಡ ಘೋಷಣೆ ಮಾಡಿದೆ. ಈ ಹೊಸ ಆಪರೇಟಿಂಗ್‌ ಸಿಸ್ಟಂ ಇದೇ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ ಎಂದು ಆಪಲ್‌ ಕಂಪೆನಿ ಹೇಳಿಕೊಂಡಿದೆ.

iOS 16

ಆಪಲ್‌ ಕಂಪೆನಿ ತನ್ನ ಹೊಸ iOS 16 ಅನ್ನು ಘೋಷಣೆ ಮಾಡಿದೆ. ಈ ಆಪರೇಟಿಂಗ್‌ ಸಿಸ್ಟಂ ಸಾಫ್ಟ್‌ವೇರ್ ಅಪ್‌ಗ್ರೇಡ್ ಸುಧಾರಣೆಗಳು ಮತ್ತು ಕಸ್ಟಮೈಸೇಶನ್‌ಗಾಗಿ ಹಲವು ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ iOS 16ನಲ್ಲಿ ಫೋಕಸ್ ಮೋಡ್, ಹೊಸ ಲಾಕ್ ಸ್ಕ್ರೀನ್ ಮತ್ತು ಹೆಚ್ಚಿನ ಪ್ರೈವೆಸಿ ಲೇಯರ್‌ಗಳನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ iOS 16ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ಕಾಣಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

iOS 16 ವಿಶೇಷತೆ ಏನು?

iOS 16 ವಿಶೇಷತೆ ಏನು?

iOS 16 ಹೊಸ ತಲೆಮಾರಿನ ಆಪರೇಟಿಂಗ್‌ ಸಿಸ್ಟಂ ಆಗಿದೆ. ಇದರಿಂದ ಹೊಸ ಮಾದರಿಯ ಪ್ರೈವೆಸಿ ಲೇಯರ್‌ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಪ್ರಮುಖವಾಗಿ ನೀವು ಆಲ್ಬಮ್‌ಗಳನ್ನು ಪ್ರವೇಶಿಸಬೇಕಾದರೆ ಪಾಸ್‌ಕೋಡ್ ಅಥವಾ ಬಯೋಮೆಟ್ರಿಕ್‌ಗಳನ್ನು ಬಳಸುವುದನ್ನು ಕಡ್ಡಾಯಮಾಡಿದೆ. ಇದರಿಂದ ಬೇರೆಯವರು ನಿಮ್ಮ ಆಲ್ಬಮ್‌ಗಳನ್ನು ಪ್ರವೇಶಿಸದಂತೆ ರಕ್ಷಣೆ ನೀಡಲಿದೆ. ಇದಲ್ಲದೆ iOS 16 ನಲ್ಲಿ ಅಪ್ಡೇಟ್‌ ಮೆಸೇಜ್‌, ಶೇರ್‌ಪ್ಲೇ, ನೋಟಿಫಿಕೇಶನ್‌, ಮ್ಯಾಪ್ಸ್‌, ಸಫಾರಿ, ವಾಲೆಟ್ ಗಳಿಗೆ ಹೊಸ ಫೀಚರ್‌ಗಳನ್ನು ತರಲಿದೆ.

iOS 16 ಫೀಚರ್‌ಗಳು!

iOS 16 ಫೀಚರ್‌ಗಳು!

iOS 16 ಅಪ್‌ಡೇಟ್‌ನಲ್ಲಿ ಹೆಚ್ಚು ವೈಯಕ್ತೀಕರಣ ಫೀಚರ್‌ಗಳೊಂದಿಗೆ ಪರಿಷ್ಕರಿಸಿದ ಲಾಕ್ ಸ್ಕ್ರೀನ್ ಅನ್ನು ನೀಡಲಿದೆ. ಇದರಿಂದ ಫೋಟೋಗಳು ಮತ್ತು ವಿಷಯಾಧಾರಿತ ಸ್ಟೋರೇಜ್‌ಗಳೊಂದಿಗೆ ವಾಲ್‌ಪೇಪರ್‌ ಗ್ಯಾಲರಿಯನ್ನು ಬಳಕೆದಾರರು ಪ್ರವೇಶಿಸಬಹುದು. ಇದು ಬಳಕೆದಾರರಿಗೆ ಸಮಯ ಮತ್ತು ದಿನಾಂಕಕ್ಕಾಗಿ ಫಾಂಟ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡಲಿದೆ. ಹವಾಮಾನ, ಆಲರ್ಟ್‌, ಆಕ್ಟಿವಿಟಿ ರಿಂಗ್ಸ್‌ ಮತ್ತು ಕ್ಯಾಲೆಂಡರ್‌ಗಾಗಿ ಲಾಕ್ ಸ್ಕ್ರೀನ್ ವಿಜೆಟ್‌ಗಳನ್ನು ಸೇರಿಸಲು ಅನುಮತಿಸುತ್ತದೆ.

iOS 16

ಇನ್ನು iOS 16 ನಲ್ಲಿ ನೋಟಿಫಿಕೇಶನ್‌ಗಳು ಮತ್ತು ಆಲರ್ಟ್‌ಗಳನ್ನು ಡಿಸ್‌ಪ್ಲೇ ಡೌನ್‌ಸೈಡ್‌ನಲ್ಲಿ ಕಾಣಬಹುದಾಗಿದೆ. ಇದರಿಂದ ಟ್ಯಾಪ್‌ ಮಾಡುವುದು ಹಾಗೂ ವೀಕ್ಷಿಸುವುದು ಸುಲಭವಾಗಲಿದೆ. ಆಪಲ್ ಪ್ರಕಾರ ಬಳಕೆದಾರರು ಲಾಕ್ ಸ್ಕ್ರೀನ್‌ನಿಂದ ಕೆಲವು ಅಪ್ಲಿಕೇಶನ್‌ಗಳನ್ನು ಪರಿಶೀಲಿಸಬಹುದಾಗಿದೆ. ಲೈವ್ ಆಕ್ಟಿವಿಟಿಸ್‌ ಎಂಬ ಹೊಸ ಟೂಲ್‌ ಮೂಲಕ ಬಳಕೆದಾರರು ಲಾಕ್ ಸ್ಕ್ರೀನ್‌ನಿಂದ ರಿಯಲ್‌ ಟೈಂ ನಡೆಯುತ್ತಿರುವ ಕಂಟೆಂಟ್‌ ಅನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಡಿವೈಸ್‌ ಅನ್ನು ಅನ್‌ಲಾಕ್ ಮಾಡದೆಯೇ Now Playing ಕಂಟ್ರೋಲ್‌ಗಳನ್ನು ಬಳಸಲು ಲೈವ್ ಆಕ್ಟಿವಿಟಿಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

iOS 16

iOS 16 ನಲ್ಲಿ ಲಾಕ್ ಸ್ಕ್ರೀನ್‌ನಿಂದ ಸ್ವೈಪ್ ಮಾಡುವ ಮೂಲಕ ಫೋಕಸ್ ಮೋಡ್ ಅನ್ನು ಪ್ರವೇಶಿಸಬಹುದಾಗಿದೆ. ಇದರಲ್ಲಿ ನೀವು ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಎಡಿಟ್‌ ಮಾಡುವುದಕ್ಕೆ ಮತ್ತು ಡಿಲೀಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಒಂದು ವೇಳೆ ನೀವು ಸಂದೇಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ ನೀವು ಓದದಿರುವ ಸಂದೇಶವನ್ನು ಸಹ ಗುರುತಿಸಬಹುದಾಗಿದೆ. ಶೇರ್‌ ನೋಟ್ಸ್‌, ಪ್ರಸ್ತುತಿಗಳು, ಜ್ಞಾಪನೆಗಳು, ಸಫಾರಿ ಟ್ಯಾಬ್ ಗುಂಪುಗಳನ್ನು ಕೂಡ ಇದರಲ್ಲಿ ಸೇರಿಸಲಾಗಿದೆ.

iOS 16

iOS 16 ಅಪ್‌ಡೇಟ್ ಐಕ್ಲೌಡ್ ಶೇರ್‌ ಫೋಟೋ ಲೈಬ್ರರಿಯನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಇತರ ಐದು ಬಳಕೆದಾರರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಫೋಟೋ ಲೈಬ್ರರಿಯಲ್ಲಿ ನೀವು ನಿರ್ದಿಷ್ಟ ವ್ಯಕ್ತಿಗಳ ಫೋಟೋಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಶೇರ್‌ ಲೈಬ್ರರಿಯನ್ನು ಸೆಟ್‌ ಮಾಡಿದ ನಂತರ, ಬಳಕೆದಾರರು ಕ್ಯಾಮೆರಾದಿಂದಲೇ ಫೋಟೋಗಳನ್ನು ನೇರವಾಗಿ ಶೇರ್‌ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

iOS 16 ಅನ್ನು ಬೆಂಬಲಿಸುವ ಐಫೋನ್‌ ಡಿವೈಸ್‌ಗಳು

iOS 16 ಅನ್ನು ಬೆಂಬಲಿಸುವ ಐಫೋನ್‌ ಡಿವೈಸ್‌ಗಳು

ಐಫೋನ್‌ 14, ಐಫೋನ್‌ 14 ಪ್ಲಸ್‌, ಐಫೋನ್‌ 14 ಪ್ರೊ, ಐಫೋನ್‌ 14 ಪ್ರೊ ಮ್ಯಾಕ್ಸ್‌, ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್‌, ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್‌ 12 ಪ್ರೊ ನಲ್ಲಿ ಲಭ್ಯವಾಗಲಿದೆ. ಇದಲ್ಲದೆ ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್‌ 11, ಐಫೋನ್‌ 11 ಪ್ರೊ, ಐಫೋನ್‌ 11 ಪ್ರೊ ಮ್ಯಾಕ್ಸ್‌, ಐಫೋನ್‌ XS, ಐಫೋನ್‌ XS ಮ್ಯಾಕ್ಸ್‌, ಐಫೋನ್‌ XR, ಐಫೋನ್‌ X, ಐಫೋನ್‌ 8, ಐಫೋನ್‌ 8 ಪ್ಲಸ್‌, ಮತ್ತು ಐಫೋನ್‌ SE (2ನೇ ತಲೆಮಾರಿನ ಅಥವಾ ನಂತರದ) ಅನ್ನು ಬೆಂಬಲಿಸಲಿದೆ.

Best Mobiles in India

English summary
Apple iOS 16 With Focus Mode and more privacy layers Releasing on September 12

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X