ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 13 ಮೇಲೆ ಬಿಗ್‌ ಡಿಸ್ಕೌಂಟ್‌! ಷರತ್ತುಗಳು ಅನ್ವಯ!

|

ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಐಫೋನ್‌ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ. ಆಪಲ್‌ ಐಫೋನ್‌ 13 ಇದೀಗ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಭಾರಿ ರಿಯಾಯಿತಿ ಪಡೆದುಕೊಂಡಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಐಫೋನ್‌ಗಳಲ್ಲಿ ಒಂದಾಗಿರುವ ಐಫೋನ್‌ 13 ಅನ್ನು ನೀವು ಕೇವಲ 41,759 ರೂಗಳಿಗೆ ಪಡೆದುಕೊಳ್ಳುವ ಅವಕಾಶ ನೀಡಿದೆ. ಆದರೆ ಇದಕ್ಕಾಗಿ ನೀವು ಹಲವು ಆಫರ್‌ಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಐಫೋನ್‌ 13 ಭರ್ಜರಿ ಡಿಸ್ಕೌಂಟ್‌ ಪಡೆದಿದೆ. ಬಿಡುಗಡೆಯಾದ ದಿನದಿಂದಲೂ ಸಾಕಷ್ಟು ಗಮನಸೆಳೆದಿರುವ ಈ ಐಫೋನ್‌ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶವಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 62,999ರೂ. ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಹಲವು ಆಫರ್‌ಗಳನ್ನು ಪಡೆದುಕೊಂಡ ನಂತರ ಇದನ್ನು ನೀವು 41,759 ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಐಫೋನ್‌ 13 ಮೇಲೆ ಏನೆಲ್ಲಾ ಆಫರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನೆಲ್ಲಾ ಆಫರ್‌ ಲಭ್ಯ!

ಏನೆಲ್ಲಾ ಆಫರ್‌ ಲಭ್ಯ!

ಫ್ಲಿಪ್‌ಕಾರ್ಟ್‌ ನಲ್ಲಿ ಐಫೋನ್‌ 13 ಬೆಲೆ ಇದೀಗ 62,999 ರೂ. ಆಗಿದೆ. ಇದನ್ನು ಖರೀದಿಸುವಾಗ ನೀವು 20,500ರೂ. ವರೆಗಿನ ಎಕ್ಸ್‌ಚೇಂಜ್‌ ಆಫರ್‌(ನಿಮ್ಮ ಡಿವೈಸ್‌ನ ಗುಣಮಟ್ಟದ ಆಧಾರದ ಮೇಲೆ) ಕೂಡ ಲಭ್ಯವಿದೆ. ಎಕ್ಸ್‌ಚೇಂಜ್‌ ಆಫರ್‌ ಪಡೆದುಕೊಂಡ ಮೇಲೆ ಇದರ ಬೆಲೆ 42,499ರೂ.ಗಳಿಗೆ ಇಳಿಯಲಿದೆ. ಇದಲ್ಲದೆ ಹೆಚ್ಚುವರಿಯಾಗಿ, SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 750ರೂ. ರಿಯಾಯಿತಿ ಕೂಡ ಲಭ್ಯವಾಗಲಿದೆ. ಇದರಿಂದ ಅಂತಿಮವಾಗಿ ಐಫೋನ್‌ 13 ಅನ್ನು 41,749 ರೂ.ಬೆಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಬೆಲೆಯಲ್ಲಿ ಪ್ರಾಡಕ್ಟ್‌ ರೆಡ್‌, ನೀಲಿ, ಹಸಿರು, ಸ್ಟಾರ್‌ಲೈಟ್, ರೋಸ್‌ ಮತ್ತು ಮಿಡ್‌ನೈಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಸಬಹುದು.

ಆಪಲ್‌ ಐಫೋನ್‌ 13 ವಿಶೇಷತೆ ಏನು?

ಆಪಲ್‌ ಐಫೋನ್‌ 13 ವಿಶೇಷತೆ ಏನು?

ಆಪಲ್‌ ಐಫೋನ್‌ 13 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇದು ಸೂಪರ್‌ ರೆಟಿನಾ XDR OLED ಡಿಸ್‌ಪ್ಲೇ ಆಗಿದ್ದು, 1200ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಆಪಲ್‌ನ ಸೆರಾಮಿಕ್ ಶೀಲ್ಡ್ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ಆಪಲ್‌ ಐಫೋನ್‌ 13 A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. iOS 15 ನಲ್ಲಿ ಬಿಡುಗಡೆಯಾದ ಈ ಐಫೋನ್‌ ಅನ್ನು ಇತ್ತೀಚಿನ iOS 16 ಗೆ ಅಪ್‌ಗ್ರೇಡ್ ಮಾಡಬಹುದು. ಹಾಗೆಯೇ ಇದು 4GB RAM ಮತ್ತು 128GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಐಫೋನ್‌ 5G ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ಎಷ್ಟಿದೆ?

ಕ್ಯಾಮೆರಾ ಎಷ್ಟಿದೆ?

ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಇದು 4K ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಅಲ್ಲದೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಒಂದೇ 12MP ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಫೋನ್ 13 ಫೋನ್ 3,240mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಐಫೋನ್ 12 ಕ್ಕಿಂತ 15% ಅಪ್‌ಗ್ರೇಡ್ ಪಡೆದುಕೊಂಡಿದೆ. ನಿಮಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಸಹ ನೀಡಲಿದೆ.

Best Mobiles in India

English summary
Apple iPhone 13 gets massive discount on Flipkart Big Billion Day sale

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X