ಅಮೆಜಾನ್‌ನಲ್ಲಿ ಐಫೋನ್ 14 ಬೆಲೆ ಕೇವಲ 56,600ರೂ.! ಹೀಗೆ ಮಾಡಿದ್ರೆ ಮಾತ್ರ!

|

ಐಫೋನ್ 14 ಖರೀದಿಸಬೇಕೆಂದುಕೊಂಡವರಿಗೆ ಇದು ಖಂಡಿತ ಗುಡ್‌ ನ್ಯೂಸ್‌. ಯಾಕಂದ್ರೆ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಐಫೋನ್ 14 ಇದೀಗ ಭಾರತದಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಕೇವಲ 56,600ರೂ. ಬೆಲೆಯಲ್ಲಿ ಖರೀದಿಸಬಹುದು. ಆದರೆ ಇದಕ್ಕಾಗಿ ನೀವು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಐಫೋನ್ 14 ಅಮೆಜಾನ್‌ನಲ್ಲಿ ವಿವಿಧ ರೀತಿಯ ಆಫರ್‌ಗಳನ್ನು ಪಡೆದುಕೊಂಡಿದ್ದು, ಎಲ್ಲವನ್ನು ಪಡೆದುಕೊಂಡ ನಂತರ ಇದರ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ.

ಐಫೋನ್‌

ಹೌದು, ಐಫೋನ್‌ 14 ಅಮೆಜಾನ್‌ನಲ್ಲಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಹೊಸ ಬೆಲೆಯ ಜೊತೆಗೆ ವಿವಿಧ ಆಫರ್‌ಗಳನ್ನು ಅನ್ವಯಿಸಿದರೆ ಐಫೋನ್‌ 14 ಕೇವಲ 56,600ರೂ.ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ. ಈ ಆಫರ್‌ ಎಲ್ಲಿಯವರೆಗೆ ಲಭ್ಯವಾಗಲಿದೆ ಎಂಬುದು ಇನ್ನು ತಿಳಿದಿಲ್ಲ. ಸದ್ಯ ಲಾಂಚ್‌ ಆದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಈ ಪರಿಯ ಡಿಸ್ಕೌಂಟ್‌ನಲ್ಲಿ ಲಭ್ಯವಾಗುತ್ತೊರೊದ್ರಿಂದ ಐಫೋನ್‌ 14 ಖರೀದಿಗೆ ಇದುವೇ ಸೂಕ್ತ ಕಾಲವಾಗಿದೆ. ಹಾಗಾದ್ರೆ ಐಫೋನ್‌ 14 ಮೇಲೆ ಏನೆಲ್ಲಾ ಆಫರ್‌ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೆಲೆಯಲ್ಲಿ ಎಷ್ಟು ಇಳಿಕೆ?ಅಮೆಜಾನ್‌ ಆಫರ್‌ ಏನಿದೆ?

ಬೆಲೆಯಲ್ಲಿ ಎಷ್ಟು ಇಳಿಕೆ?ಅಮೆಜಾನ್‌ ಆಫರ್‌ ಏನಿದೆ?

ಐಫೋನ್ 14 ಭಾರತದಲ್ಲಿ 79,900ರೂ.ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಇದರ ಬೆಲೆಯಲ್ಲಿ ಇಳಿಕೆಯನ್ನು ಮಾಡಲಾಗಿದ್ದು, 77,900 ರೂ.ಗೆ ಮಾರಾಟವಾಗುತ್ತಿದೆ. ಇದರ ಮೇಲೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂಪಾಯಿ ತ್ವರಿತ ರಿಯಾಯಿತಿಯನ್ನು ಕೂಡ ಪಡೆದಿದೆ. ಅಲ್ಲದೆ 16,300 ರೂ.ವರೆಗಿನ ಎಕ್ಸ್‌ಚೇಂಜ್‌ ಆಫರ್‌ (ನಿಮ್ಮ ಡಿವೈಸ್‌ನ ಗುಣಮಟ್ಟದ ಮೇಲೆ) ಕೂಡ ದೊರೆಯಲಿದೆ. ಇದೆಲ್ಲದರ ಪರಿಣಾಮ ಐಫೋನ್‌ 14 ಕೇವಲ 56,600 ರೂ. ಬೆಲೆಗೆ ನಿಮ್ಮ ಕೈ ಸೇರಲಿದೆ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ಐಫೋನ್‌ 14 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. ಇದು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಆಗಿದೆ. ಇನ್ನು ಡಿಸ್‌ಪ್ಲೇ 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ ಆಪಲ್‌ನ ಸೆರಾಮಿಕ್ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಐಫೋನ್‌ 14 ಆಪಲ್‌ನ A15 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಇತ್ತೀಚಿನ iOS 16 ನಲ್ಲಿ ಬೂಟ್ ಆಗುತ್ತದೆ. ಅಲ್ಲದೆ ಈ ಐಫೋನ್‌ ಹೆಚ್ಚುವರಿ GPU ಕೋರ್ ಅನ್ನು ಹೊಂದಿದ್ದು, 5-ಕೋರ್ GPU ಅನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 512GB ವರೆಗಿನ ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದುಕೊಂಡಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಆಪಲ್‌ ಐಫೋನ್‌ 14 ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅನ್ನು ಹೊದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು 120 ಡಿಗ್ರಿ ವ್ಯೂ ಆಂಗಲ್‌ ಹೊಂದಿರುವ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ರಿಯರ್‌ ಕ್ಯಾಮೆರಾ 4K 60fps ನಲ್ಲಿ ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 12ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸಾಮರ್ಥ್ಯ

ಬ್ಯಾಟರಿ ಮತ್ತು ಇತರೆ ಸಾಮರ್ಥ್ಯ

ಆಪಲ್‌ ಐಫೋನ್‌ 14 3,279mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಫೇಸ್ ಐಡಿ ಬೆಂಬಲವನ್ನು ಪಡೆದಿದ್ದು, ಹೆಚ್ಚುವರಿ ಭದ್ರತೆಯನ್ನು ನೀಡುತ್ತದೆ. ಇನ್ನು ಈ ಐಫೋನ್‌ ಭಾರತದಲ್ಲಿ ಭೌತಿಕ ಮತ್ತು ಇ-ಸಿಮ್ ಬೆಂಬಲಿಸುವ 5G ಫೋನ್‌ ಇದಾಗಿದೆ.

Best Mobiles in India

Read more about:
English summary
Apple iPhone 14 has received a price drop on Amazon in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X