ಆಪಲ್ ಐಫೋನ್ 7 ಲಾಂಚ್: ಟಿಮ್ ಕುಕ್ ಮಾಡಿರುವ ಮಾರ್ಪಾಡುಗಳೇನು?

By Shwetha
|

ಆಪಲ್‌ನ ಮುಂದಿನ ಅತಿ ದೊಡ್ಡ ಲಾಂಚ್ ಸಪ್ಟೆಂಬರ್ 7 ಕ್ಕೆ ನಿಗದಿಯಾಗಿದೆ. ಆಪಲ್ ತನ್ನ ಹೊಸ ಐಫೋನ್‌ನಲ್ಲಿ ಏನೆಲ್ಲಾ ಬದಲಾವಣೆ, ಮಾರ್ಪಾಡುಗಳನ್ನು ತರಲಿದೆ ಎಂಬುದನ್ನು ಕಾದು ನೋಡಬೇಕಾದ ಸುಸಮಯ ಇದಾಗಿದೆ. ಬಳಕೆದಾರರ ನಿರೀಕ್ಷೆಗೂ ಮೀರಿ ಆಪಲ್ ಹೊಸ ಐಫೋನ್‌ನಲ್ಲಿ ಹೊಸ ಮಾರ್ಪಾಡುಗಳನ್ನು ತರುವುದು ನಿಚ್ಚಳವಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಪಲ್ ತನ್ನ ಹೊಸ ಐಫೋನ್ ಅನ್ನು ಲಾಂಚ್ ಮಾಡುವ ತಯಾರಿಯನ್ನು ಮಾಡಿಕೊಂಡಿದ್ದು ಇದರಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಅರಿತುಕೊಳ್ಳೋಣ.

ಆಪಲ್ ಐಫೋನ್ 7 ಲಾಂಚ್: ಟಿಮ್ ಕುಕ್ ಮಾಡಿರುವ ಮಾರ್ಪಾಡುಗಳೇನು?

ಏನೆಲ್ಲಾ ಲಾಂಚ್ ಆಗುತ್ತದೆ?
ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಆಪಲ್ ಲಾಂಚ್ ಮಾಡಲಿದೆ ಎಂಬುದು ಮೂಲಗಳ ಮೂಲಕ ಬಂದಿರುವ ಮಾಹಿತಿಯಾಗಿದೆ. ಸಿಇಒ ಟಿಮ್ ಕುಕ್ ಬುಧವಾರ ಏನನ್ನು ಜಗತ್ತಿಗೆ ಅರ್ಪಿಸಲಿದ್ದಾರೆ ಎಂಬುದನ್ನು ಕಂಡುಕೊಂಡ ನಂತರವೇ ನಮಗೆ ನಿರ್ಧರಿಸಲು ಸಾಧ್ಯವಾಗುತ್ತದೆ. ಆಪಲ್ ವಾಚ್ ಕೂಡ ಲಾಂಚ್ ಆಗುವ ಸಾಧ್ಯತೆ ಇದೆ. ಹೊಸ ಶ್ರೇಣಿಯ ಐಫೋಡ್ಸ್ ಮತ್ತು ಹೊಸ ಆವೃತ್ತಿಯ ಮ್ಯಾಕ್ ಬುಕ್ ಅನ್ನು ಈ ಸಂದರ್ಭದಲ್ಲಿ ಟಿಮ್ ಕುಕ್ ಅನಾವರಣ ಮಾಡಲಿದ್ದಾರೆ.

ಆಪಲ್ ಐಫೋನ್ 7 ಲಾಂಚ್: ಟಿಮ್ ಕುಕ್ ಮಾಡಿರುವ ಮಾರ್ಪಾಡುಗಳೇನು?

ಐಫೋನ್ 7 ಫೀಚರ್‌ಗಳೇನು?
ಐಫೋನ್ 7 ಕುರಿತು ಸಾಕಷ್ಟು ಸುದ್ದಿಗಳು ಬಿತ್ತರಗೊಳ್ಳುತ್ತಿವೆ. ಡ್ಯುಯಲ್ ಕ್ಯಾಮೆರಾ ರಿಗ್, 256 ಜಿಬಿ ಆಂತರಿಕ ಸ್ಟೋರೇಜ್ ಮತ್ತು 3.5mm ಆಡಿಯೊ ಜಾಕ್ ಅನ್ನು ಫೋನ್‌ಗಳಲ್ಲಿ ಕಂಡುಕೊಳ್ಳಬಹುದಾಗಿದೆ. ಬೇಸ್ ಮಾಡೆಲ್‌ನಲ್ಲಿ 32 ಜಿಬಿ ಸಂಗ್ರಹಣೆಯನ್ನು ಆಪಲ್ ಮಾಡಲಿದೆ.

ಆಪಲ್ ಐಫೋನ್ 7 ಲಾಂಚ್: ಟಿಮ್ ಕುಕ್ ಮಾಡಿರುವ ಮಾರ್ಪಾಡುಗಳೇನು?

ಟಿಮ್ ಕುಕ್ ಏನೆಲ್ಲಾ ಲಾಂಚ್ ಮಾಡಲಿದ್ದಾರೆ ಮತ್ತು ಹೊಸ ಐಫೋನ್ ಉತ್ಪನ್ನಗಳಲ್ಲಿ ಅವರು ಏನೆಲ್ಲಾ ಬೇಕು ಬೇಡಗಳನ್ನು ಇರಿಸಲಿದ್ದಾರೆ ಎಂಬುದನ್ನು ಲಾಂಚ್ ಬಳಿಕವೇ ನಮಗೆ ಕಂಡುಕೊಳ್ಳಬಹುದಾಗಿದೆ.

Best Mobiles in India

English summary
Apple event in San Francisco on September 7 and there will be a bunch of new devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X