ಆಪಲ್‌ ಸಂಸ್ಥೆಯಿಂದ ಹೊಸ ಏರ್‌ಟ್ಯಾಗ್‌ ಡಿಟೆಕ್ಟರ್‌ ಅಪ್ಲಿಕೇಶನ್‌ ಲಾಂಚ್‌!

|

ಆಪಲ್‌ ಕಂಪೆನಿ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇದರಿಂದ ಆಂಡ್ರಾಯ್ಡ್‌ ಬಳಕೆದಾರರು ಏರ್‌ಟ್ಯಾಗ್‌ ಅನ್ನು ಡಿಟೆಕ್ಟ್‌ ಮಾಡಬಹುದು ಎಂದು ಹೇಳಲಾಗಿದೆ. ಸದ್ಯ ಈ ಅಪ್ಲಿಕೇಶನ್‌ ಅನ್ನು ಟ್ರ್ಯಾಕರ್ ಡಿಟೆಕ್ಟ್ ಅಪ್ಲಿಕೇಶನ್ ಎಂದು ಹೆಸರಿಸಲಾಗಿದೆ. ಈ ಅಪ್ಲಿಕೇಶನ್‌ ಅನ್ನು ಆಪಲ್ ಕಂಪೆನಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್‌ ಬಳಕೆದಾರರಿಗೆ ಅನಿರೀಕ್ಷಿತ ಏರ್‌ಟ್ಯಾಗ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಟ್ರ್ಯಾಕರ್ ಡಿಟೆಕ್ಟ್ ಅಪ್ಲಿಕೇಶನ್

ಹೌದು, ಆಂಡ್ರಾಯ್ಡ್‌ ಬಳಕೆದಾರರ ಪ್ರೈವೆಸಿ ಬೂಸ್ಟ್‌ ಮಾಡಲು ಆಪಲ್‌ ಕಂಪೆನಿ ಮುಂದಾಗಿದೆ. ಅನಿರೀಕ್ಷಿತ ಏರ್‌ಟ್ಯಾಗ್‌ಗಳನ್ನು ಗುರುತಿಸುವುದಕ್ಕಾಗಿ ಟ್ರ್ಯಾಕರ್ ಡಿಟೆಕ್ಟ್ ಅಪ್ಲಿಕೇಶನ್ ಪರಿಚಯಿಸಿದೆ. ಈ ಅಪ್ಲಿಕೇಶನ್‌ ಸಮೀಪದಲ್ಲಿರುವ ಇತರ Find My ನೆಟ್‌ವರ್ಕ್-ಸಜ್ಜಿತ ಸೆನ್ಸಾರ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಯಾರಾದರೂ ಏರ್‌ಟ್ಯಾಗ್ ಬಳಸುತ್ತಿದ್ದಾರೆಯೇ ಅನ್ನೊದನ್ನ ಇದು ಸ್ಕ್ಯಾನ್‌ ಮಾಡಲಿದೆ. ಹಾಗಾದ್ರೆ ಆಪಲ್‌ ಕಂಪೆನಿ ಲಾಂಚ್‌ ಮಾಡಿರುವ ಟ್ರ್ಯಾಕರ್ ಡಿಟೆಕ್ಟ್ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌

ಆಪಲ್‌ ಕಂಪೆನಿ ಈಗಾಗಲೇ ಆಪಲ್‌ ಏರ್‌ಟ್ಯಾಗ್ಸ್‌ ಅನ್ನು ಈ ವರ್ಷದ ಆರಂಭದಲ್ಲಿಯೇ ಪ್ರಾರಂಭಿಸಿತ್ತು. ಕಾರ್‌ ಕೀಗಳು ಮತ್ತು ವ್ಯಾಲೆಟ್‌ಗಳಂತಹ ಐಟಂಗಳು ಕಳೆದುಹೋದಾಗ ಅವುಗಳನ್ನು ಪತ್ತೆ ಹಚ್ಚಲು ಈ ಟ್ರ್ಯಾಕರ್ ಸಹಾಯವನ್ನು ಮಾಡಲಿದೆ. ಈ ಟ್ರಾಕರ್ ಡಿಟೆಕ್ಟ್ ಅನ್ನು ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸಿರುವುದು ಅವರ ಪ್ರೈವೆಸಿಯನ್ನು ಕಾಪಾಡಲು ಅನುಕೂಲಕರವಾಗಿದೆ. ಇನ್ನು ಆಪಲ್‌ನ AirTag ಪ್ರಮುಖ ಗೌಪ್ಯತೆ ಮತ್ತು ಸೆಕ್ಯುರಿಟಿ ಫೀಚರ್ಸ್‌ಗಳನ್ನು ನೀಡಲಿದೆ.

ಆಂಡ್ರಾಯ್ಡ್‌

ಇನ್ನು ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಸಾಮರ್ಥ್ಯಗಳನ್ನು ನೀಡಲು ಆಪಲ್‌ ಮುಂದಾಗಿದೆ. ಟ್ರ್ಯಾಕರ್ ಡಿಟೆಕ್ಟ್ ಆಂಡ್ರಾಯ್ಡ್ ಬಳಕೆದಾರರಿಗೆ ಏರ್‌ಟ್ಯಾಗ್‌ಗಾಗಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಬೇರೆಯವರು ನಿಮ್ಮ ಸ್ಥಳವನ್ನು ಟ್ರ್ಯಾಕ್‌ ಮಾಡುತ್ತಿದ್ದರೆ ಅದನ್ನು ಡಿಟೆಕ್ಟ್‌ ಮಾಡುವಲ್ಲಿ ಇದು ಉತ್ತಮ ಪಾತ್ರವನ್ನು ನಿಭಾಯಿಸಲಿದೆ. ಇನ್ನು ಈ ಟ್ರ್ಯಾಕರ್ ಡಿಟೆಕ್ಟ್ ಅಪ್ಲಿಕೇಶನ್ ತನ್ನ ಮಾಲೀಕರಿಂದ ದೂರವಿರುವ ಅನಿರೀಕ್ಷಿತ ಏರ್‌ಟ್ಯಾಗ್ ಅನ್ನು ಪತ್ತೆ ಹಚ್ಚಲಿದೆ. ಇದು ಟ್ರ್ಯಾಕರ್ ಅನ್ನು ಗುರುತಿಸಿದ 10 ನಿಮಿಷಗಳಲ್ಲಿ ಸೌಂಡ್‌ ಪ್ಲೇ ಮಾಡಲಿದೆ.

ಸ್ಯಾಮ್‌ಸಂಗ್‌

ಇನ್ನು ಆಪಲ್‌ ಕಂಪೆನಿಯ ಏರ್‌ಟ್ಯಾಗ್‌ ಮಾದರಿಯಲ್ಲಿಯೇ ಸ್ಯಾಮ್‌ಸಂಗ್‌ ಕಂಪೆನಿ ಕೂಡ ಈಗಾಗಲೇ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಅನ್ನು ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಟ್ಯಾಗ್‌ ಬ್ಲೂಟೂತ್ ಲೋ ಎನರ್ಜಿ ಮತ್ತು ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ನ ಕ್ಯಾಮೆರಾದೊಂದಿಗೆ ಕಾಣೆಯಾದ ವಸ್ತುಗಳು ಎಲ್ಲಿವೆ ಎಂದು ಬಳಕೆದಾರರಿಗೆ ತಿಳಿಸಲು ಸಹಾಯ ಮಾಡಲಿದೆ. ಇನ್ನು ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಅನ್ನು ಬ್ಯಾಕ್‌ಪ್ಯಾಕ್ ಅಥವಾ ಕೀಚೈನ್‌ನಂತಹ ಯಾವುದೇ ದೈನಂದಿನ ಐಟಂಗೆ ಸುಲಭವಾಗಿ ಜೋಡಿಸಬಹುದು. ಈ ಡಿವೈಸ್‌ ಸಣ್ಣ ಟೈಲ್‌ನಂತೆ ಒಂದು ಬದಿಯಲ್ಲಿ ದುಂಡಗಿನ ರಂಧ್ರವನ್ನು ಹೊಂದಿದ್ದು ಅದನ್ನು ಮತ್ತೊಂದು ವಸ್ತುವಿಗೆ ಕಟ್ಟಬಹುದಾಗಿದೆ. ಇದನ್ನು ಒಮ್ಮೆ ಸಕ್ರಿಯಗೊಳಿಸಿದ ನಂತರ, ಸ್ಮಾರ್ಟ್‌ಫೋನ್‌ನಲ್ಲಿನ AR- ಫೈಂಡರ್ ಅನ್ನು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಬಳಸಿ "ನೋಡಲು" ಬಳಸಬಹುದು.

ಡಿವೈಸ್‌

ಈ ಡಿವೈಸ್‌ ಅನ್ನು ಕೀಗಳ ಜೊತೆಗೆ ಇರಿಸುವುದರಿಂದ ಎಆರ್-ಫೈಂಡರ್ ನಂತರ ಬಳಕೆದಾರರಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 21 ಅಥವಾ ಎಸ್ 21 + ಅಲ್ಟ್ರಾ ನಂತಹ ಯಾವುದೇ UWB-ಸುಸಜ್ಜಿತ ಸ್ಮಾರ್ಟ್‌ಫೋನ್‌ನಲ್ಲಿ ಅನುಸರಿಸಲು ಸುಲಭವಾದ ಇಂಟರ್ಫೇಸ್‌ನೊಂದಿಗೆ ಮಾರ್ಗದರ್ಶನ ನೀಡುತ್ತದೆ. ಇದು ಸ್ಮಾರ್ಟ್‌ಟ್ಯಾಗ್ + ಎಷ್ಟು ದೂರದಲ್ಲಿದೆ ಎಂಬುದನ್ನು ತೋರಿಸುತ್ತದೆ ಮತ್ತು ಅದರ ದಿಕ್ಕನ್ನು ತೋರಿಸುತ್ತದೆ. ಅಲ್ಲದೆ ಬಳಕೆದಾರರು ವಸ್ತುವಿನ ಹತ್ತಿರ ಬಂದಾಗ ಸ್ಮಾರ್ಟ್‌ಟ್ಯಾಗ್ ಜೋರಾಗಿ "ಪಿಂಗ್" ಅನ್ನು ಉಂಟುಮಾಡಲಿದೆ. ಆದ್ದರಿಂದ ಇದನ್ನು ಮಂಚದ ಕೆಳಗೆ ಅಥವಾ ಲಾಂಡ್ರಿಯಲ್ಲಿ ಮರೆಮಾಡಿದ್ದರೂ ಸಹ, ಕಂಡುಹಿಡಿಯುವುದು ಸುಲಭವಾಗಿದೆ.

ಸ್ಮಾರ್ಟ್

ಇನ್ನು ಸ್ಮಾರ್ಟ್ ಟ್ಯಾಗ್ + ಸ್ಮಾರ್ಟ್ ಥಿಂಗ್ಸ್ ಫೈಂಡ್ ಪ್ಲಾಟ್‌ಫಾರ್ಮ್ ನಲ್ಲಿಯೂ ಸಹ ಬಳಸಬಹುದು. ಇದು ಬಳಕೆದಾರರಿಗೆ ನಕ್ಷೆಯಲ್ಲಿ ಟ್ಯಾಗ್ ಮಾಡಲಾದ ವಸ್ತುಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ಎಲ್ಲೋ ದೂರದಲ್ಲಿ ಬಿದ್ದಿದ್ದರೂ ಸಹ ಹುಡಕಲು ಅನುಮತಿಸುತ್ತದೆ. ಈ ಟ್ಯಾಗ್‌ಗಳು ಬ್ಲೂಟೂತ್ ಲೋ ಎನರ್ಜಿ ಕನೆಕ್ಟಿವಿಟಿ ಮತ್ತು ನೆಟ್‌ವರ್ಕ್‌ನಲ್ಲಿರುವ ಇತರ ಗ್ಯಾಲಕ್ಸಿ ಸಾಧನಗಳ ಸಮೂಹವನ್ನು ಸ್ಮಾರ್ಟ್‌ಥಿಂಗ್ಸ್ ಮೂಲಕ ಮನೆಗೆ ಹೋಗುವ ಮಾರ್ಗವನ್ನು ಬಳಸುವುದರಿಂದ ಕಳೆದುಕೊಂಡ ಕೀ ಗಳನ್ನು ಹುಡುಕಲು ಸಹಾಯಕವಾಗಲಿದೆ. ಇತರ ಬಳಕೆದಾರರು ತಮ್ಮ ಸ್ಮಾರ್ಟ್‌ಟ್ಯಾಗ್ + ಡಿವೈಸ್‌ಗಳನ್ನು ಕಳೆದುಕೊಂಡರೆ ಅವುಗಳನ್ನು ಹುಡುಕಲು ಸಹಾಯ ಮಾಡಲು ಇತರ ಬಳಕೆದಾರರು ಸ್ಮಾರ್ಟ್‌ಥಿಂಗ್ಸ್ ಫೈಂಡ್ ಅನ್ನು ಆಯ್ಕೆ ಮಾಡಬಹುದು.

Best Mobiles in India

English summary
Apple has launched an Android app that will help boost privacy for Android users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X