Subscribe to Gizbot

ಆಪಲ್ ತರಬಹುದು ಐಫೋನ್ 8 ಮತ್ತು ಐಫೋನ್ 8 ಪ್ಲಸ್ ನ ಕೆಂಪು ಬಣ್ಣದ ಆವೃತ್ತಿ!

Posted By: Tejaswini P G

ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಬಿಡುಗಡೆಯಾದ 6 ತಿಂಗಳಲ್ಲಿ ಆಪಲ್ ಈ ಫೋನ್ಗಳ ಹೊಸ ಆವೃತ್ತಿಯನ್ನು ಹೊಸ ಬಣ್ಣದಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿದೆ. ವರ್ಜಿನ್ ಮೊಬೈಲ್ ಮೆಮೋ ಒಂದು ಮ್ಯಾಕ್ರೂಮರ್ಸ್ ಕೈಸೇರಿದ್ದು ಆಪಲ್ ಶೀಘ್ರದಲ್ಲಿಯೇ ಕೆಂಪು ವರ್ಣದ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಗಳನ್ನು ಲಾಂಚ್ ಮಾಡಲಿರುವ ಸುಳಿವು ನೀಡಿದೆ. ಆಪಲ್ ಸಂಸ್ಥೆಯು ಈ ಹೊಸ ಆವೃತ್ತಿಗಳನ್ನು ಏಪ್ರಿಲ್ 9ರಂದು ಲಾಂಚ್ ಮಾಡುವ ಸಾಧ್ಯತೆ ಇದೆ.

ಆಪಲ್ ತರಬಹುದು ಐಫೋನ್ 8 ಮತ್ತು ಐಫೋನ್ 8 ಪ್ಲಸ್ ನ ಕೆಂಪು ಬಣ್ಣದ ಆವೃತ್ತಿ!

ಈ ಸುದ್ದಿ ಯಾವುದೇ ಅಧಿಕೃತ ಮೂಲಗಳಿಂದ ಬಂದಿಲ್ಲವಾದರೂ, ಬ್ಲೂಮ್ಬರ್ಗ್ ನ ಮಾರ್ಕ್ ಗುರ್ಮ್ಯಾನ್( ಇವರ್ ಭವಿಷ್ಯವಾಣಿಗಳು ಬಹುತೇಕ ನಿಜವಾಗಿದೆ) ಕೂಡ ಈ ಮಾಹಿತಿಯನ್ನು ಅನುಮೋದಿಸಿದ್ದಾರೆ. ಸೋರಿಕೆಯಾಗಿರುವ ಮಾಹಿತಿಯಲ್ಲಿ ಐಫೋನ್ X ನ ಉಲ್ಲೇಖವಿಲ್ಲ. ಐಫೋನ್ X ಬಹಳ ದುಬಾರಿ ಫೋನ್ ಆಗಿರುವ ಕಾರಣ ಇದರ 'ರೆಡ್' ಆವೃತ್ತಿ ಬರಬಹುದೆಂಬ ನಿರೀಕ್ಷೆಯಿಲ್ಲ. ಆಪಲ್ ಕೂಡ ಚೆನ್ನಾಗಿ ಮಾರಾಟವಾಗವುದೆಂಬ ಖಚಿತತೆ ಇಲ್ಲದ ಕಾರಣ ಐಫೋನ್ X ನ ವಿಶೇಷ ಆವೃತ್ತಿ ಲಾಂಚ್ ಮಾಡುವ ಸಾಹಸ ಮಾಡಲಾರದು.

ಸೋರಿಕೆಯಾಗಿರುವ ಮಾಹಿತಿ ನಿಜವೇ ಆಗಿದ್ದಲ್ಲಿ, ಆಪಲ್ ಸಂಸ್ಥೆಯು ತನ್ನ ಐಫೋನ್ಗಳ ಮಾರಾಟ ಹೆಚ್ಚಿಸುವ ಸಲುವಾಗಿಯೇ ಹೊಸ ಬಣ್ಣದ ಆವೃತ್ತಿಗಳನ್ನು ಲಾಂಚ್ ಮಾಡಹೊರಟಿದೆ. ಈ ಹೊಸ ಬಣ್ಣದ ಆವೃತ್ತಿ ಜನರ ಮನಗೆದ್ದು ಐಫೋನ್ಗಳ ಮಾರಾಟದಲ್ಲಿ ಸುಧಾರಿಕೆ ಕಂಡುಬರುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಐಫೋನ್ 8 ನ 64GB ಆವೃತ್ತಿಯ ಬೆಲೆ ಭಾರತದಲ್ಲಿ ರೂ 64,000 ಆಗಿದ್ದು, 256GB ಆವೃತ್ತಿಯ ಬೆಲೆ ರೂ 77,000 ಆಗಿದೆ. ಇನ್ನು ಐಫೋನ್ 8 ಪ್ಲಸ್ ನ 64GB ಆವೃತ್ತಿಯ ಬೆಲೆ ಭಾರತದಲ್ಲಿ ರೂ 73,000 ಆಗಿದ್ದು, 256GB ಆವೃತ್ತಿಯ ಬೆಲೆ ರೂ 86,000 ಆಗಿದೆ. ಕಸ್ಟಮ್ಸ್ ಡ್ಯೂಟಿ ಯ ಹೆಚ್ಚಳದ ಬಳಿಕ ಇವುಗಳ ಬೆಲೆಯೂ ಸ್ವಲ್ಪ ಏರಿಕೆಯಾಗಿದೆ.

How to view all photos, pages, comments and posts you liked on Facebook (KANNADA)
ಇದೇ ರೀತಿಯಾಗಿ, ಮತ್ತೊಬ್ಬ ವ್ಯಕ್ತಿಯು ಆಪಲ್ ಸಂಸ್ಥೆಯು ಐಫೋನ್ X ನ ಬ್ಲಶ್ ಗೋಲ್ಡ್ ಬಣ್ಣದ ಆವೃತ್ತಿಯನ್ನು ಲಾಂಚ್ ಮಾಡುವ ಇರಾದೆ ಹೊಂದಿದೆ ಎಂಬ ಮಾಹಿತಿಯನ್ನು ನೀಡಿದ್ದ. ಆತ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬ್ಲಶ್ ಗೋಲ್ಡ್ ಬಣ್ಣದ ಐಫೋನ್ X ನ ಚಿತ್ರವೊಂದನ್ನು ಕೂಡ ಹಂಚಿಕೊಂಡಿದ್ದ. ಅವನು ಪೋಸ್ಟ್ ಮಾಡಿದ ಎರಡು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ಗೋಲ್ಡ್ ಬಣ್ಣದ ಸಿಮ್ ಕಾರ್ಡ್ ಟ್ರೇಯನ್ನು ಕಾಣಬಹುದಾಗಿದೆ. ಆದರೆ ಆ ವ್ಯಕ್ತಿ ಈ ಆವೃತ್ತಿ ಯಾವಾಗ ಲಾಂಚ್ ಆಗಬಹುದು, ಅದರೆ ಲಭ್ಯತೆ ಮತ್ತು ಬೆಲೆಯ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಸ್ನಾಪ್‌ಚಾಟ್‌ನಲ್ಲಿ IPL ಸ್ಟೋರಿ: ನಾಲ್ಕು ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ಸ್ನಾಪ್‌ಚಾಟ್..!

ಐಫೋನ್ 8 ಅಥವಾ ಐಫೋನ್ 8 ಪ್ಲಸ್ ನ ಕೆಂಪು ಬಣ್ಣದ ಆವೃತ್ತಿಯನ್ನು ಖರೀದಿಸಲು ನೀವು ಉತ್ಸುಕರಾಗಿದ್ದೀರೇ ಎಂಬುದನ್ನು ಕಮೆಂಟ್ಸ್ ವಿಭಾಗದಲ್ಲಿ ತಿಳಿಸಲು ಮರೆಯದಿರಿ.

English summary
Six months after the official unveiling, the iPhone 8 and iPhone 8 Plus may get a Red color variant. MacRumors have found a Virgin Mobile memo that hints Apple will soon be announcing Red colored iPhone 8 and iPhone 8 Plus. In fact, the company is speculated to unveil the new color variant of the smartphones later today.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot