ಐಫೋನ್‌ ಪ್ರಿಯರಿಗೆ ನಿಜಕ್ಕೂ ಇದು ಬಿಗ್‌ ಶಾಕ್‌!..ಇದೇ ನಿಜವಾಗುತ್ತಾ?

|

ಐಫೋನ್‌ ಪ್ರಿಯರಿಗೆ ಮುಂದಿನ ವರ್ಷ ಬಿಗ್‌ ಶಾಕ್‌ ಎದುರಾಗುವ ಸಾಧ್ಯತೆಯಿದೆ. ಆಪಲ್‌ ಕಂಪೆನಿ ಐಫೋನ್‌ ಪ್ರಿಯರಿಗಾಗಿ ಪ್ರತಿ ಸರಣಿಯನ್ನು ಬಿಡುಗಡೆ ಮಾಡಿದ ನಂತರ ಕಡಿಮೆ ಬೆಲೆಯಲ್ಲಿ ಐಫೋನ್‌ SE ಸರಣಿ ಪರಿಚಯಿಸುವುದು ಸಾಮಾನ್ಯವಾಗಿದೆ. ಈ ವರ್ಷವೂ ಕೂಡ ಇದು ಮುಂದುವರೆದಿದೆ, ಅದರಂತೆ ಐಫೋನ್‌ SE 3 ಅನ್ನು ಪರಿಚಯಿಸಿತ್ತು. ಆದರೆ ಮುಂದಿನ ವರ್ಷ ಐಫೋನ್‌ SE 4 ಬಿಡುಗಡೆ ಮಾಡೋದು ಅನುಮಾನ ಎಂದು ವರದಿಯಾಗಿದೆ. ಅಂದರೆ ಆಪಲ್‌ ಕಂಪೆನಿ ಇನ್ಮುಂದೆ ಐಫೋನ್‌ SE ಪರಿಚಯಿಸುವುದಿಲ್ಲ ಎಂದು ಹೇಳಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಮುಂದಿನ ದಿನಗಳಲ್ಲಿ ಐಫೋನ್‌ SE 4 ಫೋನ್‌ ಬಿಡುಗಡೆ ಮಾಡುವುದಿಲ್ಲ ಎಂದು ವರದಿಯಾಗಿದೆ. ಇದನ್ನು ಪ್ರಸಿದ್ಧ ವಿಶ್ಲೇಷಕ ಮಿಂಗ್ ಚಿ ಕುವೊ ಅವರು ತಮ್ಮ ಟ್ವೀಟ್‌ ಸರಣಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಗ್ಗದ ಐಫೋನ್ SE ಅಪ್‌ಗ್ರೇಡ್ ಕಲ್ಪನೆಯನ್ನು ಆಪಲ್ ಕಂಪೆನಿ ಸಂಪೂರ್ಣವಾಗಿ ತ್ಯಜಿಸಬಹುದು ಎಂದಿದ್ದಾರೆ. ಹಾಗಾದ್ರೆ ಆಪಲ್‌ ಕಂಪೆನಿಯ ಈ ನಿರ್ಧಾರಕ್ಕೆ ಕಾರಣವಾದ್ರೂ ಏನು? ಇದರಿಂದ ಮಾರುಕಟ್ಟೆಯಲ್ಲಿ ಆಗುವ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಆಪಲ್‌ ಕಂಪೆನಿ ಪ್ರತಿವರ್ಷವೂ ತನ್ನ ಗ್ರಾಹಕರಿಗೆ ಅಗ್ಗದ ಬೆಲೆಯ ಐಫೋನ್‌ ದೊರೆಯಲಿ ಎಂಬ ಕಾರಣಕ್ಕೆ ಐಫೋನ್‌ SE ಫೋನ್‌ ಆವೃತ್ತಿಯನ್ನು ಪರಿಚಯಿಸುತ್ತಾ ಬಂದಿದೆ. ಆದರೆ ಮುಂದಿನ ದಿನಗಳಲ್ಲಿ ಐಫೋನ್‌ SE ಪರಿಕಲ್ಪನೆ ಮಾಯವಾಗುವ ಸಾಧ್ಯತೆಯಿದೆ. ಯಾಕೆಂದರೆ ಐಫೋನ್‌ ಹೈ ಎಂಡ್‌ ಮಾಡೆಲ್‌ಗಳನ್ನು ದೊಡ್ಡ ಮಟ್ಟದಲ್ಲಿ ನೀಡಲು ಮುಂದಾಗಿದ್ದು, ಅಗ್ಗದ ಬೆಲೆಯ ಈ ಯೋಜನೆಯನ್ನು ಸ್ಟಾಪ್‌ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಐಫೋನ್‌ SE

ಐಫೋನ್‌ SE ವಿನ್ಯಾಸ ಹಾಗೂ ಸ್ಕ್ರೀನ್‌ ಗಾತ್ರದ ವೆಚ್ಚ ಇದೆಲ್ಲವೂ ಮಾರಾಟದ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದರಿಂದ ಅಗ್ಗದ ಬೆಲೆಯ ಐಫೋನ್‌ ಪರಿಕಲ್ಪನೆಯನ್ನು ಬಿಡುವುದಕ್ಕೆ ಆಪಲ್ ಮುಂದಾಗಿದೆ. ಹೆಚ್ಚಿನ ವೆಚ್ಚದ ಕಾರಣಕ್ಕೆ ಕಡಿಮೆ ಬೆಲೆಯನ್ನು ನಿಗಧಿಪಡಿಸುವುದಕ್ಕೆ ಆಪಲ್‌ ಮುಂದಾಗುವುದಿಲ್ಲ ಎಂಬ ವಾದವನ್ನು ಕುವೊ ಉಲ್ಲೇಖಿಸಿದ್ದಾರೆ. ಆದರಿಂದ SE 4 ಗಾಗಿ ಹೂಡಿಕೆಯನ್ನು ಮಾಡುವುದಕ್ಕೆ ಹಿಂತೆಗೆದುಕೊಳ್ಳವುದಕ್ಕೆ ಮುಂದಾಗಲಿದೆ. ಇದರಿಂದ 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಸವಾಲುಗಳನ್ನು ನ್ಯಾವಿಗೇಟ್ ಮಾಡಲು ಆಪಲ್‌ಗೆ ಇದು ಸಹಾಯ ಮಾಡುತ್ತದೆ ಎಂದಿದ್ದಾರೆ.

ಐಫೋನ್‌

ಇನ್ನು ಆಪಲ್‌ ಐಫೋನ್‌ SE ಆವೃತ್ತಿಯನ್ನು ಗಮನಿಸುವುದಾದರೆ ಈ ವರ್ಷ ಐಫೋನ್ SE (2022) ಬಿಡುಗಡೆ ಮಾಡಿತ್ತು. ಇದು 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750 x 1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರೆತೆಯು 326ppi ಆಗಿದ್ದು, 625 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಹೊಸ ಮಾದರಿಯು IP67 ಪ್ರಮಾಣೀಕೃತ ನಿರ್ಮಾಣದೊಂದಿಗೆ ಬರುತ್ತದೆ.

ಆಪಲ್‌

ಐಫೋನ್ SE (2022) ಆಪಲ್‌ ಕಂಪೆನಿ A 15 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 15 ಬೆಂಬಲ ನೀಡಲಿದೆ. ಇದರೊಂದಿಗೆ ಈ ಐಫೋನ್‌ 64GB, 128GB ಮತ್ತು 256GB ಸ್ಟೋರೇಜ್ ವೇರಿಯಂಟ್‌ ಮಾದರಿಗಳನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ. ಇದು ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಇದ್ದು, f/ 1.8 ಲೆನ್ಸ್‌ + ಒಐಎಸ್ ಹೊಂದಿದೆ.

Best Mobiles in India

English summary
Apple may ditch the idea of launching the iPhone SE in the market:Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X