ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಿದ್ದು ಆಪಲ್‌ವಾಚ್‌ ಎಂದರೆ ನೀವು ನಂಬಲೇಬೇಕು?

|

ಆಪಲ್‌ ಕಂಪೆನಿಯ ಡಿವೈಸ್‌ಗಳನ್ನು ಯಾಕೆ ಬಳಸಬೇಕು ಅನ್ನೊದಕ್ಕೆ ಈಗಾಗಲೇ ಹಲವು ನಿದರ್ಶನಗಳು ಸಾಕ್ಷಿಯಾಗಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಆದರೆ ಈ ಬಾರಿ ಆಪಲ್‌ ವಾಚ್‌ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸಿರುವ ಘಟನೆ ನಡೆದಿದೆ. ಆಪಲ್‌ ಕಂಪೆನಿ ತನ್ನ ಡಿವೈಸ್‌ಗಳಲ್ಲಿ ಅಳವಡಿಸಿರುವ ಹೆಲ್ತ್‌ ಫೀಚರ್ಸ್‌ಗಳು ಎಷ್ಟು ಉಪಯುಕ್ತ ಎನ್ನುವುದಕ್ಕೆ ಇದೊಂದು ಸಾಕ್ಷಿಯೆಂಬಂತಿದೆ.

ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಿದ್ದು ಆಪಲ್‌ವಾಚ್‌ ಎಂದರೆ ನೀವು ನಂಬಲೇಬೇಕು?

ಹೌದು, ಆಪಲ್‌ ವಾಚ್‌ ಬಳಕೆಯಿಂದಾಗಿ ಪತ್ರಕರ್ತರೊಬ್ಬರ ಮಗನ ಜೀವ ಉಳಿದಿದೆ ಎನ್ನಲಾಗಿದೆ. ಇದನ್ನು ಸ್ವತಃ ಆ ಪ್ರತಕರ್ತೆ ಬಹಿರಂಗಪಡಿಸಿದ್ದು, ಆಪಲ್‌ ವಾಚ್‌ ಬಳಕೆದಾರರು ಮತ್ತೊಮ್ಮೆ ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಆಪಲ್‌ ವಾಚ್‌ ಬಳಸುತ್ತಿದ್ದರಿಂದ 16 ವರ್ಷದ ಮಗನ ಜೀವವನ್ನು ಕಾಪಾಡಲು ಸಾಧ್ಯವಾಯಿತು ಟಿವಿ ರಿಪೋರ್ಟರ್‌ ಹೇಳಿರುವುದು ಇದೀಗ ಭಾರಿ ವೈರಲ್‌ ಆಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆಪಲ್‌ ವಾಚ್‌ 16 ವರ್ಷದ ಮಗನ ಜೀವ ಉಳಿಸುವಲ್ಲಿ ಹೇಗೆ ಸಹಾಯವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌ ವಾಚ್‌ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಟ್ರೆಂಡ್‌ ಸೃಷ್ಟಿಸಿರುವ ವಾಚ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಹಲವು ಅನುಕೂಲಕ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ SpO2 ಲೆವೆಲ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಕೂಡ ಒಂದಾಗಿದೆ. ಇದರಿಂದ ರಕ್ತದ ಆಮ್ಲಜನಕದ ಮಟ್ಟವನ್ನು ಪತ್ತೆಹಚ್ಚಬಹುದಾಗಿದೆ. ಈ ಘಟನೆಯಲ್ಲಿ ಟಿವಿ ವರದಿಗಾರ್ತಿಯೊಬ್ಬರ 16 ವರ್ಷದ ಮಗ ಅನಾರೋಗ್ಯದಿಂದ ಬಳಲಿದ್ದಾನೆ. ಈ ಸಮಯದಲ್ಲಿ ಆತನ ರಕ್ತದ ಆಮ್ಲಜನಕದ ಮಟ್ಟ ತುಂಬಾ ಕಡಿಮೆ ಇದೆ ಎಂದು ಆಫಲ್‌ವಾಚ್‌ನಲ್ಲಿ ತಿಳಿದುಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಆತ ಬದುಕುಳಿದಿದ್ದಾನೆ.

ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಿದ್ದು ಆಪಲ್‌ವಾಚ್‌ ಎಂದರೆ ನೀವು ನಂಬಲೇಬೇಕು?

CBS 8 ನ್ಯೂಸ್‌ ಆಂಕರ್ ಮಾರ್ಸೆಲ್ಲಾ ಲೀ ಹೇಳಿರುವಂತೆ ಅವರು ಕುಟುಂಬ ಸದಸ್ಯರೆಲ್ಲರೂ USನ ಡೆನ್ವರ್‌ಗೆ ಸ್ಕೀಯಿಂಗ್ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಸಮಯದಲ್ಲಿ ಅವರ ಹದಿನಾರು ವರ್ಷದ ಮಗನಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದೆ. ಅಲ್ಲದೆ ಆತನ ತುಟಿಗಳು ಮತ್ತು ಬೆರಳುಗಳ ಮೇಲೆ ನೀಲಿ ಬಣ್ಣದ ಗುರುತುಗಳು ಕಾಣಿಸಿಕೊಂಡಿವೆ. ಕೂಡಲೇ ಲೀ ಆಪಲ್‌ ವಾಚ್‌ನಲ್ಲಿ ಆತನ SpO2 ಲೆವೆಲ್‌ ಅನ್ನು ಚೆಕ್‌ ಮಾಡಿದ್ದಾರೆ. ಇದರಲ್ಲಿ ಅವನ SpO2 ಲೆವೆಲ್‌ ಕೇವಲ 66 ಮತ್ತು 77% ನಡುವೆ ಕಾಣಿಸಿದೆ. ಇದು ಹೆಚ್ಚಿನ ಅಪಾಯದ ಮುನ್ಸೂಚನೆ ಎಂದರಿತ ಲೀ ತನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ವೇಳೆ ಇದರಲ್ಲಿ ತಡವಾಗಿದ್ದಾರೆ ಅವರ ಮಗ ಕೋಮಾಗೆ ಹೋಗುವ ಸಾದ್ಯತೆಯಿತ್ತು ಎಂದು ಹೇಳಿದ್ದಾರೆ.

ಇಲ್ಲಿ ವ್ಯಕ್ತಿಯೊಬ್ಬನ ಜೀವ ಉಳಿಸಿದ್ದು ಆಪಲ್‌ವಾಚ್‌ ಎಂದರೆ ನೀವು ನಂಬಲೇಬೇಕು?

ಸಾಮಾನ್ಯವಾಗಿ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕೇವಲ 66% ಇದ್ದರೆ ಅಂತಹ ವ್ಯಕ್ತಿ ಕೋಮಾಗೆ ಹೋಗುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಅವರ ಮೆದುಳಿನಲ್ಲಿ ಆಮ್ಲಜನಕದ ಕೊರತೆ ಉಂಟಾಗುವ ಸಾದ್ಯತೆಯಿದೆ. ಅಷ್ಟೇ ಅಲ್ಲ ಆಂತಹವರ ದೇಹದ ಅಂಗಾಂಗಗಳು ವಿಫಲಗೊಳ್ಳವ ಸಾಧ್ಯತೆ ಇರಲಿದೆ. ಇನ್ನು ಇತ್ತೀಚಿನ ಸ್ಮಾರ್ಟ್‌ವಾಚ್‌ ಗಳಲ್ಲಿ SpO2 ಮಾನಿಟರ್ ಫೀಚರ್ಸ್‌ ಅಳವಡಿಸಿರುವುದು ಸಾಮಾನ್ಯವಾಗಿದೆ. ಕೊರೊನಾ ನಂತರ ಈ ಫೀಚರ್ಸ್‌ ಎಲ್ಲಾ ಸ್ಮಾರ್ಟ್‌ವಾಚ್‌ಗಳು ಕೂಡ ಅಳವಡಿಸುತ್ತಿವೆ ಅನ್ನೊದು ಗಮನಿಸಬಹುದಾಗಿದೆ.

ಇನ್ನು ಇತ್ತೀಚಿಗೆ ಆಪಲ್‌ ಕಂಪೆನಿಯ ಐಪೋನ್‌ ಡಿವೈಸ್‌ನಲ್ಲಿರುವ ಫೀಚರ್ಸ್‌ ಮೂಲಕ ಇಬ್ಬರು ವ್ಯಕ್ತಿಗಳನ್ನು ರಕ್ಷಣೆ ಮಾಡಿದ ಘಟನೆ ಕೂಡ ನಡೆದಿತ್ತು. ಕ್ಯಾಲಿಫೋರ್ನಿಯಾದ ಏಂಜಲೀಸ್ ರಾಷ್ಟ್ರೀಯ ಅರಣ್ಯದ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಇದರಿಂದ ಇಬ್ಬರು ವ್ಯಕ್ತಿಗಳು ಅರಣ್ಯದ ಅಳವಾದ ಕಣಿವೆಯಲ್ಲಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಐಫೋನ್‌ 14ನಲ್ಲಿರುವ ಎಮರ್ಜೆನ್ಸಿ SOS ಫೀಚರ್ಸ್‌ ಉಪಯೋಗಕ್ಕೆ ಬಂದಿದೆ. ಅಪಘಾತವಾಗ್ತಿದ್ದ ಹಾಗೇ ಆಕ್ಸಿಡೆಂಟ್‌ ಅನ್ನು ರೆಕಾರ್ಡ್‌ ಮಾಡಿರುವ ಐಫೋನ್‌ 14 ತಕ್ಷಣವೇ ಬಳಕೆದಾರರ ಹೊಂದಿದ್ದ ತುರ್ತು ಸಂಪರ್ಕಗಳಿಗೆ ತುರ್ತು SOS ಅನ್ನು ಕಳುಹಿಸಿದೆ. ಇದರಿಂದ ಸೂಕ್ತ ಸಮಯದಲ್ಲಿ ಅವರನ್ನು ರಕ್ಷಿಸುವುದಕ್ಕೆ ಸಾದ್ಯವಾಗಿದೆ.

Best Mobiles in India

English summary
Apple SmartWatch saves TV reporter's 16-year-old son by detected SpO2 levels

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X