ಆಪಲ್‌ ವಾಚ್‌ ಅಲ್ಟ್ರಾ ಬಿಡುಗಡೆ! ಏನಿದರ ವಿಶೇಷತೆ?

|

ಆಪಲ್‌ ಕಂಪೆನಿ ತನ್ನ ಬಹು ನಿರೀಕ್ಷಿತ ಫಾರ್‌ ಔಟ್‌ ಈವೆಂಟ್‌ನಲ್ಲಿ ಆಪಲ್‌ ವಾಚ್‌ ಅಲ್ಟ್ರಾ, ಆಪಲ್‌ ವಾಚ್‌ ಸೀರಿಸ್‌ 8 ಮತ್ತು ವಾಚ್‌ SE 2 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಪಲ್‌ ವಾಚ್‌ ಅಲ್ಟ್ರಾ ಸಾಕಷ್ಟು ಗಮನ ಸೆಳೆದಿದೆ. ಇನ್ನು ಆಪಲ್ ವಾಚ್ ಅಲ್ಟ್ರಾ ರೂಪಾಂತರವು ಆಕರ್ಷಕವಾದ ಅಪ್ಡೇಟ್‌ಗಳನ್ನು ಪಡೆದುಕೊಂಡಿದ್ದು, 'ಅತ್ಯುತ್ತಮ ಆಪಲ್ ವಾಚ್ ಸರಣಿ' ಇದಾಗಿದೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ. ಈ ವಾಚ್‌ ನೀರಿನಲ್ಲಿ 100 ಅಡಿಗಳಷ್ಟು ಆಳದಲ್ಲಿರುವಾಗಲೂ ಆಕ್ಟಿವ್‌ ಆಗಿರಲಿದೆ.

ಆಪಲ್‌

ಹೌದು, ಟೆಕ್‌ ದೈತ್ಯ ಆಪಲ್‌ ಕಂಪೆನಿ ಹೊಸ ಆಪಲ್‌ ವಾಚ್‌ ಅಲ್ಟ್ರಾ ವನ್ನು ಪರಿಚಯಿಸಿದೆ. ಇದನ್ನು ಸ್ಪೋರ್ಟ್ಸ್‌ ಪ್ರಿಯರು ಮತ್ತು ಸಾಹಸ ಪ್ರಿಯರನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಏಕೆಂದರೆ ಇದು ಒರಟಾದ ಬಾಡಿ ವಿನ್ಯಾಸವನ್ನು ಹೊಂದಿರುವುದರಿಂದ ಎಂತಹದ್ದೆ ಪರಿಸ್ಥಿತಿಯಲ್ಲಿಯು ಕೂಡ ಬಳಸುವುದಕ್ಕೆ ಸೂಕ್ತವಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕನೆಕ್ಟಿವಿಟಿಗಾಗಿ 2 ಸ್ಪೀಕರ್‌ಗಳು, 3 ಮೈಕ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಆಪಲ್‌ ಕಂಪೆನಿ ಪರಿಚಯಿಸಿರುವ ಹೊಸ ಆಪಲ್‌ ವಾಚ್‌ ಅಲ್ಟ್ರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ವಾಚ್ ಅಲ್ಟ್ರಾ ವಿಶೇಷತೆ ಏನು?

ಆಪಲ್ ವಾಚ್ ಅಲ್ಟ್ರಾ ವಿಶೇಷತೆ ಏನು?

ಆಪಲ್ ವಾಚ್ ಅಲ್ಟ್ರಾ ಹೊಸ ವಿನ್ಯಾಸದೊಂದಿಗೆ ಎಂಟ್ರಿ ನೀಡಿದ್ದು, 2000 ನಿಟ್ಸ್‌ ಬ್ರೈಟ್‌ನೆಸ್‌ ನೀಡುವ ಡಿಸ್‌ಪ್ಲೇ ಹೊಂದಿದೆ. ಇದು ಬಿಗ್‌ 49 ಎಂಎಂ ಡಯಲ್‌ನೊಂದಿಗೆ ಬರಲಿದೆ. ಇದರಲ್ಲಿ ರಿ ಡಿಸೈನ್‌ ಮಾಡಲಾದ ಕ್ರೌನ್‌, ಹೆಚ್ಚುವರಿ ಬಟನ್ ಮತ್ತು ಬಿಗ್‌ ಬ್ಯಾಟರಿಯನ್ನು ಒಳಗೊಂಡಿದೆ. ಇದರಿಂದ ಈ ಸ್ಮಾರ್ಟ್‌ವಾಚ್‌ ಬ್ಯಾಟರಿ 60 ಗಂಟೆಗಳವರೆಗೆ ಬಾಳಿಕೆ ಬರಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಹೊಸ ಬಟನ್‌ಗಳು ಮತ್ತು ಕ್ರೌನ್‌ ಅನ್ನು ಕೈಗವಸು ಧರಿಸಿರುವಾಗಲೂ ಕೂಡ ಬಳಸಬಹುದು.

ಆಪಲ್ ವಾಚ್

ಇನ್ನು ಆಪಲ್ ವಾಚ್ ಅಲ್ಟ್ರಾ ಮಲ್ಟಿ-ಬ್ಯಾಂಡ್ ಜಿಪಿಎಸ್ ಜೊತೆಗೆ ಬರುತ್ತದೆ. ಇದರಲ್ಲಿರುವ ಹೊಸ ಬಟನ್ ಇತರ ವಿಷಯಗಳ ಜೊತೆಗೆ ಸ್ಪೋರ್ಟ್ಸ್‌ ಟ್ರ್ಯಾಕಿಂಗ್‌ನೊಂದಿಗೆ ಬಳಕೆದಾರರಿಗೆ ಸಹಾಯ ಮಾಡುವ ಕ್ರಿಯೆಯ ಬಟನ್ ಆಗಿ ಕಾರ್ಯನಿರ್ವಹಿಸಲಿದೆ. ಇನ್ನು ಈ ವಾಚ್‌ WR 100 ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಇದರಿಂದ ನೀವು ನೀರಿನಲ್ಲಿ ಸ್ವಿಮ್ಮಿಂಗ್‌ ಮಾಡುವಾಗಲೂ ಕೂಡ ಬಳಸಬಹುದು. ಅಲ್ಲದೆ ನೀರಿನಲ್ಲಿರುವಾಗಲೂ ಕೂಡ ಡೆಪ್ತ್‌, ಸಮಯ ಮತ್ತು ತಾಪಮಾನವನ್ನು ತೋರಿಸುವ ಹೊಸ ಡೆಪ್ತ್‌ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸುತ್ತದೆ.

ಆಪಲ್ ವಾಚ್ ಅಲ್ಟ್ರಾ

ಆಪಲ್ ವಾಚ್ ಅಲ್ಟ್ರಾ ಮೂರು ಹೊಸ ಬ್ಯಾಂಡ್‌ಗಳಲ್ಲಿ ಬರಲಿದೆ. ಇವುಗಳನ್ನು ಆಲ್ಪೈನ್, ಟ್ರಯಲ್ ಮತ್ತು ಓಷನ್ ಎಂದು ಹೆಸರಿಸಲಾಗಿದೆ. ಇನ್ನು ಈ ಮೂರು ರೂಪಾಂತರದ ವಾಚ್‌ಗಳು ಕೂಡ ಸೆಲ್ಯುಲಾರ್ ಹೊಂದಾಣಿಕೆಯೊಂದಿಗೆ ಬರುತ್ತದೆ. ಇವುಗಳಲ್ಲಿ ನೈಟ್‌ ಮೋಡ್ ಕೂಡ ಲಭ್ಯವಿದ್ದು, ರಾತ್ರಿ ಸಮಯದಲ್ಲಿಯೂ ಬಳಕೆಗೆ ಸೂಕ್ತವಾಗಿದೆ. ಇನ್ನು ಆಪಲ್ ವಾಚ್ ಅಲ್ಟ್ರಾದಲ್ಲಿ ಅಗತ್ಯವಿದ್ದಾಗ ಎಮರ್ಜೆನ್ಸಿ ಕರೆಗಳನ್ನು ಮಾಡಲು ಸೈರನ್‌ ಅನ್ನು ಕೂಡ ಒಳಗೊಂಡಿದೆ.

ಆಪಲ್‌ ವಾಚ್‌ ಸಿರೀಸ್‌ 8

ಆಪಲ್‌ ವಾಚ್‌ ಸಿರೀಸ್‌ 8

ಆಪಲ್‌ ವಾಚ್‌ ಸಿರೀಸ್‌ 8 ಫಾಲ್ ಡಿಟೆಕ್ಷನ್, ಮೆಡಿಕಲ್‌ ಎಮರ್ಜೆನ್ಸಿ ಸರ್ವಿಸ್‌ ನಂತಹ ಸೇವೆಗಳನ್ನು ಪಡೆದಿದೆ. ಈ ಸಿರೀಸ್‌ನ ವಾಚ್‌ಗಳು ಟೆಂಪ್‌ರೇಚರ್‌ ಸೆನ್ಸಾರ್‌ ಪ್ರತಿ 5 ಸೆಕೆಂಡಿಗೆ ಟೆಂಪ್‌ರೇಚರ್‌ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ. ಈ ಹೊಸ ಸ್ಮಾರ್ಟ್‌ವಾಚ್‌ ಕ್ರ್ಯಾಶ್ ಡಿಟೆಕ್ಟರ್ ಅನ್ನು ಸಹ ಒಳಗೊಂಡಿದೆ. ಇದು ಎರಡು ಮೋಷನ್ ಸೆನ್ಸರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ನೀವು ತೊಂದರೆಯಲ್ಲಿರುವುದು ಕಂಡು ಬಂದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ SOS ಕಾಲ್‌ ಕಳುಹಿಸುತ್ತದೆ. ಈ ಮೂಲಕ ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ತಕ್ಷಣವೇ ಸೂಚನೆ ನೀಡಲಿದೆ.

ಆಮ್ಲಜನಕದ

ಇದಲ್ಲದೆ ECG, ರಕ್ತದ ಆಮ್ಲಜನಕದ ಮಾನಿಟರಿಂಗ್ (SpO2), ಮತ್ತು ಫಾಲ್ ಡಿಟೆಕ್ಷನ್‌ ಫೀಚರ್ಸ್‌ಗಳನ್ನು ಕೂಡ ಹೊಂದಿದೆ. ಇನ್ನು ಆಪಲ್ ವಾಚ್ ಸರಣಿ 8 ನ್ಯೂ ಲೋ ಪವರ್ ಮೋಡ್‌ ಅನ್ನು ಒಳಗೊಂಡಿದೆ. ಇದು ಎಲ್ಲಾ ಅನಗತ್ಯ ಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ 36 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ಒದಗಿಸಲು ಸಹಾಯ ಮಾಡಲಿದೆ. ಇನ್ನು ಆಪಲ್ ವಾಚ್ ಸರಣಿ 8 ಸ್ಟ್ಯಾಂಡರ್ಡ್ ರೂಪಾಂತರ ನಾಲ್ಕು ಬಣ್ಣಗಳು ಮತ್ತು ಸ್ಟೇನ್‌ಲೆಸ್ ಸ್ಟೀಲ್ ರೂಪಾಂತರದ ಆಯ್ಕೆಯು ಮೂರು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ.

ಆಪಲ್ ವಾಚ್ SE

ಆಪಲ್ ವಾಚ್ SE

ಇನ್ನು ಇದೇ ಈವೆಂಟ್‌ನಲ್ಲಿ ಆಪಲ್ ತನ್ನ ಮತ್ತೊಂದು ಹೊಸ ವಾಚ್ SE ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಎಮರ್ಜೆನ್ಸಿ ಸರ್ವಿಸ್‌ ಸೇವೆಯನ್ನು ಒಳಗೊಂಡಿದೆ. ಇದಕ್ಕಾಗಿ ಕ್ರ್ಯಾಶ್‌ ಡಿಟೆಕ್ಷನ್‌ ಅನ್ನು ಸಹ ಹೊಂದಿದೆ. ಇನ್ನು ವಾಚ್‌ E ಡಿಸ್‌ಪ್ಲೇ ವಾಚ್ ಸೀರೀಸ್ 3 ಗಿಂತ 30% ದೊಡ್ಡದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಪಲ್‌ ವಾಚ್ ಅಲ್ಟ್ರಾ ಬೆಲೆ $799( ಅಂದಾಜು 63,700)ರೂ. ಆಗಿದೆ. ಆದರೆ ಭಾರತದಲ್ಲಿ ಇದರ ಬೆಲೆ 89,900ರೂ ಆಗಿದೆ. ಈ ಸ್ಮಾರ್ಟ್‌ವಾಚ್‌ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಯುಎಇ, ಯುಕೆ, ಯುಎಸ್ ಮತ್ತು 40 ಕ್ಕೂ ಹೆಚ್ಚು ಇತರ ದೇಶಗಳಲ್ಲಿ ಇದೇ ಸೆಪ್ಟೆಂಬರ್ 23 ರಿಂದ ಖರೀದಿಗೆ ಲಭ್ಯವಾಗಲಿದೆ.
ಇನ್ನು ಆಪಲ್‌ ವಾಚ್‌ ಸಿರೀಸ್‌ 8 GPS ಆವೃತ್ತಿಗೆ $399 (ಅಂದಾಜು 31,800ರೂ) ಬೆಲೆ ಹೊಂದಿದೆ. ಇದರ LTE ರೂಪಾಂತರದ ಬೆಲೆ $499 (ಅಂದಾಜು 39,800ರೂ.) ಬೆಲೆ ಹೊಂದಿದೆ.
ವಾಚ್ SE 2 ಅಥವಾ SE (2022) GPS ಆವೃತ್ತಿಗೆ $249 (ಸುಮಾರು 19,800ರೂ) ಮತ್ತು ಸೆಲ್ಯುಲಾರ್ ಆವೃತ್ತಿಗೆ $299 (ಅಂದಾಜು 23,800ರೂ) ಬೆಲೆಯನ್ನು ಹೊಂದಿದೆ.

Best Mobiles in India

English summary
Apple Watch Ultra With Rugged Design Launched: What’s new?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X