ಆಪಲ್‌ ಬಳಕೆದಾರರು ಇನ್ಮುಂದೆ 'ಹೇ ಸಿರಿ' ಅನ್ನುವಂತಿಲ್ಲ!..ಯಾಕೆ ಗೊತ್ತಾ?

|

ಆಪಲ್‌ ಕಂಪೆನಿ ತನ್ನ ಜನಪ್ರಿಯ ವಾಯ್ಸ್‌ ಅಸಿಸ್ಟೆಂಟ್‌ ಸಿರಿಯಲ್ಲಿ ಪ್ರಮುಖ ಬದಲಾವಣೆಗೆ ಮುಂದಾಗಿದೆ. ಅದರಂತೆ ಆಪಲ್‌ ಡಿವೈಸ್‌ ಬಳಕೆದಾರರು ಇನ್ಮುಂದೆ 'ಹೇ ಸಿರಿ' ಎಂದು ಹೇಳುವ ಬದಕು ಕೇವಲ 'ಸಿರಿ' ಎಂದು ಹೇಳಿದರೆ ಸಾಕು ವಾಯ್ಸ್‌ ಅಸಿಸ್ಟೆಂಟ್‌ ತನ್ನ ಕಾರ್ಯವನ್ನು ಪ್ರಾರಂಭಿಸಲಿದೆ ಎಂದು ಹೇಳಿದೆ. ಅಂದರೆ ಆಪಲ್‌ ಕಂಪೆನಿ ಹೇ ಸರಿ ಎಂಬ ಪದಗುಚ್ಛವನ್ನು ಬದಲಾಯಿಸಿದ್ದು, ಸರಳವಾಗಿ ಸಿರಿ ಎಂಬ ಪದಕ್ಕೆ ಸೀಮಿತಗೊಳಿಸಿದೆ.

ಆಪಲ್‌

ಹೌದು, ಆಪಲ್‌ ತನ್ನ ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಪದಗುಚ್ಛವನ್ನು ಬದಲಾಯಿಸಲು ಮುಂದಾಗಿದೆ. ಹೇ ಸಿರಿ ಎಂದು ಹೇಳುವ ಬದಲು ಕೇವಲ ಸಿರಿ ಎಂಬ ಪದಕ್ಕೆ ಸೀಮಿತಗೊಳಿಸಲು ತಯಾರಿ ನಡೆಸಿದೆ. ಒಮ್ಮೆ ಆಪಲ್‌ ಸಿರಿಯನ್ನು ನೀವು ಕಾರ್ಯಗತಗೊಳಿಸಿದ ನಂತರ ಬೆಂಬಲಿತ ಡಿವೈಸ್‌ಗಳಲ್ಲಿ ಕೇವಲ ಸಿರಿ ಎಂದು ಕರೆಯುವ ಮೂಲಕ ನಿಮ್ಮ ಆಜ್ಞೆಗಳನ್ನು ನೀಡಬಹುದು. ಆದರೆ ಆಪಲ್‌ನ ಈ ಪ್ರಯತ್ನ ಸಾಧ್ಯವಾಗಲಿದೆಯಾ? ಅಷ್ಟಕ್ಕೂ ಸಿರಿಯಲ್ಲಿ ಬದಲಾವಣೆ ಮಾಡಲು ಮುಂದಾಗಿರುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಯ್ಸ್‌

ಆಪಲ್‌ ವಾಯ್ಸ್‌ ಅಸಿಸ್ಟೆಂಟ್‌ ಸಿರಿ ಪದಬಳಕೆಯನ್ನು ಸಾಕಷ್ಟು ಸರಳಮಾಡಲು ಮುಂದಾಗಿದೆ. ಇದರಿಂದ ಹೇ ಸರಿ ಬದಲಿಗೆ ಸಿರಿ ಎಂದರೆ ಸಾಕು ಎನ್ನಲಾಗಿದೆ. ಆದರೆ ವರದಿಯ ಪ್ರಕಾರ ಇದು AI ತರಬೇತಿ ಮತ್ತು ಹೆಚ್ಚಿನ ಎಂಜಿನಿಯರಿಂಗ್ ಕೆಲಸವನ್ನು ಒಳಗೊಂಡಿರುವುದರಿಂದ ಬದಲಾವಣೆಯು ತಾಂತ್ರಿಕವಾಗಿ ಸವಾಲಿನದಾಗಿದೆ ಎಂದು ಹೇಳಲಾಗಿದೆ. ಏಕೆಂದರೆ ಪದಗುಚ್ಛದಲ್ಲಿನ ಹೆಚ್ಚಿನ ಪದಗಳು ಸಾಮಾನ್ಯವಾಗಿ ವಾಯ್ಸ್‌ ಅಸಿಸ್ಟೆಂಟ್‌ ಇನ್‌ವೋಕ್‌ ಅರ್ಥಮಾಡಿಕೊಳ್ಳಲು ವಾಯ್ಸ್‌ ಅಸಿಸ್ಟೆಂಟ್‌ಗೆ ಸುಲಭವಾಗಿಸಲಿದೆ. ಇದೇ ಕಾರಣಕ್ಕೆ ಪದಗಳ ಬಳಕೆಯನ್ನು ಸರಳೀಕರಿಸುವ ಆಪಲ್‌ ಪ್ರಯತ್ನ ಸವಾಲಗಿರುತ್ತದೆ ಎನ್ನಲಾಗಿದೆ.

ಆಪಲ್‌

ಇನ್ನು ಆಪಲ್‌ ಹೇ ಸಿರಿಯಲ್ಲಿನ ಪದ ಬದಲಾವಣೆಗೆ ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಸಿರಿಯು ವೇಕ್ ಪದಗುಚ್ಛದ ಮೂಲಕ ದೀರ್ಘಕಾಲ ಬೆಂಬಲಿತ ವಾಯ್ಸ್‌ ಇನ್ ವೊಕೇಷನ್ ಹೊಂದಿದೆ. ಪ್ರಸ್ತುತ ಅಮೆಜಾನ್‌ ಕೂಡ ತನ್ನ ವಾಯ್ಸ್‌ ಅಸಿಸ್ಟೆಂಟ್‌ನಲ್ಲಿ ಕೇವಲ ಅಲೆಕ್ಸಾ ಎಂದು ಸರಳವಾದ ಪದವನ್ನು ಬಳಸುತ್ತದೆ. ಇದೇ ಮಾದರಿಯಲ್ಲಿ ಕೇವಲ ಸಿರಿ ಎನ್ನುವ ಮೂಲಕ ಇನ್ ವೊಕ್‌ ಮಾಡಲು ಆಪಲ್‌ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ದೋಷಗಳನ್ನು

ಸಾಮಾನ್ಯವಾಗಿ ಹೆಚ್ಚು ಉದ್ದವಿರುವ ಪದಗುಚ್ಛಗಳು ಸಾಮಾನ್ಯವಾಗಿ ದೋಷಗಳನ್ನು ಉಂಟುಮಾಡುತ್ತಬೆ. ಆದರಿಂದ ಸಾಧ್ಯವಾದಷ್ಟು ಪದಗುಚ್ಛವನ್ನು ಸರಳೀಕರಿಸಿದರೆ ದೋಷಗಳನ್ನು ಕಡಿಮೆ ಮಾಡಬಹುದು ಅನ್ನೊದು ಆಪಲ್‌ನ ಉದ್ದೇಶವಾಗಿದೆ. ಪ್ರಪಂಚದಾದ್ಯಂತದ ಭಾಷೆಗಳು ಮತ್ತು ಉಚ್ಚಾರಣೆಗಳ ಪ್ರಕಾರ ಚಿಕ್ಕ ಪದಗುಚ್ಛಗಳನ್ನು ವಿಭಿನ್ನವಾಗಿ ಹೇಳಬಹುದು. ಇದೇ ಕಾರಣಕ್ಕೆ ಈಗಾಗಲೇ ಆಪಲ್‌ ಕಂಪನಿಯು ತನ್ನ ಉದ್ಯೋಗಿಗಳೊಂದಿಗೆ ಸರಳೀಕೃತ ಪದಗುಚ್ಛವನ್ನು ಪರೀಕ್ಷಿಸುತ್ತಿದೆ.

ಕಂಪೆನಿ

ಆಪಲ್‌ ಕಂಪೆನಿ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ iOS, macOS, WatchOS, tvOS, ಮತ್ತು HomePod ಸಾಧನಗಳಲ್ಲಿನ ಆಪಲ್ ಉತ್ಪನ್ನಗಳು ಸೇರಿದಂತೆ ಸರಳೀಕೃತ 'ಸಿರಿ' ವೇಕ್ ವರ್ಡ್‌ನೊಂದಿಗೆ ಕಾರ್ಯನಿರ್ವಹಿಸುವುದನ್ನು ನೋಡಬಹುದಾಗಿದೆ. ಇನ್ನು ವಾಯ್ಸ್‌ ಅಸಿಸ್ಟೆಂಟ್‌ ಮೂಲಕ ತಮ್ಮ ಅಜ್ಞೆಗಳನ್ನು ನೀಡುವಾದ ಪದಗಳ ಬಳಕೆಯಲ್ಲಿ ದೋಷವನ್ನು ತಪ್ಪಿಸಬಹುದಾಗಿದೆ. ಸದ್ಯ ಆಪಲ್‌ ಹೋಮ್‌ಪಾಡ್ ಮಿನಿ ಮತ್ತು ಆಪಲ್ ವಾಚ್ ಶ್ರೇಣಿಯನ್ನು ಒಳಗೊಂಡಂತೆ ಆಪಲ್‌ನ ಹಲವು ಸಾಧನಗಳಲ್ಲಿ ಸಿರಿ ಡಿಫಾಲ್ಟ್ ವಾಯ್ಸ್‌ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತದೆ. ವಾಯ್ಸ್‌ ಅಸಿಸ್ಟೆಂಟ್‌ಗಳ ಬಳಕೆ ಮೂಲಕ ಪ್ರತಿಯೊಂದು ಕೆಲಸವು ಇಂದಿನ ದಿನಗಳಲ್ಲಿ ಸಾಕಷ್ಟು ಸುಲಭವಾಗಿದೆ. ವಾಯ್ಸ್‌ ಅಸಿಸ್ಟೆಂಟ್‌ಗಳ ಕಾರ್ಯನಿರ್ವಹಣೆ ಇಂದಿನ ಟೆಕ್ನಾಲಜಿ ಜಮಾನದಲ್ಲಿ ಎಲ್ಲರ ಗಮನಸೆಳೆಯುತ್ತಿರುವುದನ್ನು ಸಹ ಕಾಣಬಹುದಾಗಿದೆ.

Best Mobiles in India

English summary
Apple will change the phrase from ‘Hey Siri' to simply ‘Siri'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X