ಮರೆಗುಳಿಗಳಿಗೆ ವರದಾನವಾಗಿರುವ ಅಪ್ಲಿಕೇಶನ್‌ಗಳು

By Shwetha
|

ವಿಷಯಗಳನ್ನು ಮರೆತು ಬಿಡುವುದು ಮಾನವರಾದ ನಾವು ಮಾಡುವ ಸರ್ವೇ ಸಾಮಾನ್ಯ ಕೆಲಸವಾಗಿದೆ. ಆದರೆ ತಂತ್ರಜ್ಞಾನದ ಮೂಲಕ ಈ ಮರೆಗುಳಿ ವ್ಯಕ್ತಿತ್ವಕ್ಕೆ ತಿಲಾಂಜಲಿ ಇಡಬಹುದು. ಹೌದು ಅಪ್ಲಿಕೇಶನ್‌ಗಳು ನಿಮಗೆ ಮರೆಯದಂತೆ ನೆನಪಿಸುವ ಸಾಮರ್ಥ್ಯವನ್ನು ನೀಡಲಿವೆ. ಈ ಅಪ್ಲಿಕೇಶನ್‌ಗಳನ್ನು ಸುಮ್ಮನೆ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ ನಿರ್ದೇಶನಗಳನ್ನು ಪಾಲಿಸಿ ನಿಮ್ಮ ಅಗತ್ಯದ ಅಂಶಗಳನ್ನು ನಿತ್ಯವೂ ಇದು ನಿಮಗೆ ಜ್ಞಾಪಿಸುತ್ತಿರುತ್ತದೆ.

ಓದಿರಿ: ನಿಮ್ಮ ನಿದ್ದೆಗೆಡಿಸಲಿರುವ ತಂತ್ರಜ್ಞಾನ ಆವಿಷ್ಕಾರಗಳು

ಈ ಅಪ್ಲಿಕೇಶನ್‌ಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆ ಬಲವಾಗುತ್ತಿದೆಯೇ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಮಾಹಿತಿಗಳನ್ನು ಅವಲೋಕಿಸಿ.

ಲೆವೆಲ್ ಮನಿ

ಲೆವೆಲ್ ಮನಿ

ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಅನ್ನು ಹೊಂದಿರುವ ಈ ಅಪ್ಲಿಕೇಶನ್ ನೀವು ದಿನದಲ್ಲಿ ಎಷ್ಟು ಖರ್ಚು ಮಾಡುತ್ತಿದ್ದೀರಿ, ಎಂಬುದನ್ನು ಟ್ರ್ಯಾಕ್ ಮಾಡುತ್ತದೆ. ಹೆಚ್ಚು ಹಣ ಖರ್ಚು ಮಾಡಬೇಡಿ ಎಂಬ ಜ್ಞಾಪನೆಯನ್ನು ಇದು ನಿಮಗೆ ನೀಡುತ್ತಿರುತ್ತದೆ.

ಎವರ್ ನೋಟ್

ಎವರ್ ನೋಟ್

ನೋಟ್ ಟೇಕಿಂಗ್ ಅಪ್ಲಿಕೇಶನ್ ಆದ ಎವರ್ ನೋಟ್ ನಿಮ್ಮ ಸಂಪೂರ್ಣ ಜೀವನದ ಅತಿಮುಖ್ಯ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಸಂದರ್ಶನ, ಬ್ಯುಸಿನೆಸ್ ಕಾರ್ಡ್ಸ್, ಅಡುಗೆ ಮೊದಲಾದ ಅಂಶಗಳನ್ನು ನಿಮಗೆ ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು.

ಪಾಕೆಟ್

ಪಾಕೆಟ್

ಯಾವುದೇ ಲೇಖನಗಳನ್ನು ಡಿವೈಸ್‌ಗೆ ಕಳುಹಿಸಿ ನಂತರ ಓದಿಕೊಳ್ಳಬಹುದಾದ ಸೌಲಭ್ಯವನ್ನು ಪಾಕೆಟ್ ಅಪ್ಲಿಕೇಶನ್ ನಿಮಗೆ ಒದಗಿಸುತ್ತದೆ.

ಹ್ಯುಮಿನ್

ಹ್ಯುಮಿನ್

ಸಣ್ಣ ವಿಚಾರಗಳನ್ನು ನಿಮಗೆ ಮರೆಯದೇ ತಿಳಿಸುವ ಅಪ್ಲಿಕೇಶನ್ ಹ್ಯುಮಿನ್ ಆಗಿದೆ. ನೆನಪಿಸಿಕೊಳ್ಳುವುದರ ಜೊತೆಗೆ ಆ ಕ್ಷಣದ ನೆನಪನ್ನು ಇದು ತರುತ್ತದೆ.

ಫೈಂಡ್ ಮೈ ಫೋನ್

ಫೈಂಡ್ ಮೈ ಫೋನ್

ನಿಮ್ಮ ಐಫೋನ್ ಕಳೆದುಹೋದಲ್ಲಿ ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಐಫೋನ್, ಐಪ್ಯಾಡ್ ಕಳೆದು ಹೋದಲ್ಲಿ ಈ ಅಪ್ಲಿಕೇಶನ್ ಮೂಲಕ ಕಂಡುಕೊಳ್ಳಬಹುದಾಗಿದೆ.

ಮಿಂಟ್ ಬಿಲ್ಸ್ ಏಂಡ್ ಮನಿ ಪೇಸ್

ಮಿಂಟ್ ಬಿಲ್ಸ್ ಏಂಡ್ ಮನಿ ಪೇಸ್

ಬಿಲ್ ಪಾವತಿಯನ್ನು ನಿಮಗೆ ಮರೆಯದಂತೆ ಅದನ್ನು ಕಟ್ಟಲು ಪ್ರೇರೇಪಿಸುವ ಅಪ್ಲಿಕೇಶನ್ ಇದಾಗಿದೆ. ಈ ಅಪ್ಲಿಕೇಶನ್ ಮೂಲಕ ಇದರಲ್ಲೇ ಪಾವತಿಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Some apps aren't like that. They will help you remember everything from your mundane tasks, to your bills, to where you first met someone.They can even improve your memory.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X