ನಿಮ್ಮ FB ಪೋಸ್ಟ್ ನಿಮ್ಮನ್ನು ಕಟಕಟೆಯಲ್ಲೂ ನಿಲ್ಲಿಸಬಹುದು...ಪೋಸ್ಟ್ ಗೂ ಮುನ್ನ ಯೋಚಿಸಿ..!

|

ನೀವು ಹಾಕುವ ಫೇಸ್ ಬುಕ್ ಸ್ಟೇಟಸ್ ನಿಮ್ಮನ್ನು ಜೈಲಿಗೆ ಹೋಗುವಂತೆಯೂ ಮಾಡಬಹುದು. ಒಂದು ವೇಳೆ ನೀವು ಶ್ರೀಮಂತ ಮತ್ತು ಶಕ್ತಿಶಾಲಿ ರಾಜಕಾರಣಿಗಳನ್ನು ಫೇಸ್ ಬುಕ್ ನಲ್ಲಿ ಎದುರು ಹಾಕಿಕೊಳ್ಳುವುದಕ್ಕಿಂತ ಮುನ್ನ ಒಮ್ಮೆ ಯೋಚಿಸಿ. ಈ ವಾರ , ಏಳು ಮಂದಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಹಾಕಿರುವ ಕಾರಣದಿಂದಾಗಿ ಬಂಧನಕ್ಕೆ ಒಳಗಾಗಿದ್ದಾರೆ.

ಏರ್ ಟೆಲ್ ನಿಂದ ಜಿಯೋಗೆ ಮತ್ತೊಂದು ಶಾಕ್...!ಏರ್ ಟೆಲ್ ನಿಂದ ಜಿಯೋಗೆ ಮತ್ತೊಂದು ಶಾಕ್...!

ಮೊನ್ನೆ ಗುರುವಾರ 22 ವರ್ಷದ ರಾಹತ್ ಖಾನ್ ಗ್ರೇಟರ್ ನೋಯ್ಡಾ ಪೋಲೀಸರಿಂದ ಅರೆಸ್ಟ್ ಆಗಿದ್ದು ಮಾರ್ಚ್ 21 ನೇ ತಾರೀಖಿನಂದು ಆದಿತ್ಯನಾಥ್ ಪ್ರತಿಜ್ಞಾವಿಧಿ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಫೇಸ್ಬುಕ್ ನಲ್ಲಿ ಆತ ಹಾಕಿದ ಸ್ಟೇಟಸ್ ನ ಕಾರಣದಿಂದಾಗಿ. ಉತ್ತರ ಪ್ರದೇಶದಲ್ಲಿ ಇದೇ ರೀತಿ ಆದಿತ್ಯನಾಥ್ ವಿರುದ್ಧ ಪೋಸ್ಟ್ ಹಾಕಿ ಕನಿಷ್ಠ ನಾಲ್ಕು ಮಂದಿ ಬಂಧಿಸಲ್ಪಟ್ಟಿದ್ದಾರೆ.,ಇದಕ್ಕೂ ಮುನ್ನ ಬೆಂಗಳೂರಿನ ಮಹಿಳೆಯೊಬ್ಬರ ಮೇಲೆ ಕೂಡ ಆದಿತ್ಯನಾಥರನ್ನು ಕಳಪೆ ಎಂಬಂತೆ ಬಿಂಬಿಸಿದ ಕಾರಣದಿಂದಾಗಿ ಎಫ್.ಐ.ಆರ್ ಲಾಡ್ಜ್ ಆಗಿತ್ತು.

ನಿಮ್ಮ FB ಪೋಸ್ಟ್ ನಿಮ್ಮನ್ನು ಕಟಕಟೆಯಲ್ಲೂ ನಿಲ್ಲಿಸಬಹುದು..!


ಇದೇನು ಮೊದಲ ಬಾರಿಯಲ್ಲ. ಇದಕ್ಕೂ ಮುನ್ನವೂ ಹಲವು ಮಂದಿ ಪೇಸ್ ಬುಕ್ ನಲ್ಲಿ ರಾಜಕಾರಣಿಗಳ ವಿರುದ್ಧ ಸ್ಟೇಟಸ್ ಹಾಕಿದ ಕಾರಣದಿಂದಾಗಿ ಅರೆಸ್ಟ್ ಆಗಿದ್ದಾರೆ. ಇಲ್ಲಿ ನಾವು ಅಂತಹ 7 ಪ್ರಕರಣಗಳನ್ನು ಹೇಳುತ್ತಿದ್ದೇವೆ, ಗಮನಿಸಿ..

* 10 ನೇ ತರಗತಿ ವಿದ್ಯಾರ್ಥಿ, ರಾಮಪುರ , ಮಾರ್ಚ್ 2015 :
ಉತ್ತರ ಪ್ರದೇಶದ ಸಚಿವರಾಗಿದ್ದ ಅಜಮ್ ಖಾನ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ ಕಾರಣದಿಂದಾಗಿ 10 ನೇ ತರಗತಿ ಓದುತ್ತಿದ್ದ ಹದಿಹರೆಯದ ಹುಡುಗನೊಬ್ಬ ಅರೆಸ್ಟ್ ಆಗಿದ್ದ. ನಂತರ ಬೇಲ್ ಪಡೆದು ಆತ ಹೊರಬಂದಿದ್ದ ಮತ್ತು ಸಂಬಂಧಪಟ್ಟವರಿಂದ ವಿವರಣೆ ಪಡೆಯಲಾಯಿತು.

* ರಾಜೇಶ್ ಕುಮಾರ್, ಕೇರಳ, ಅಗಸ್ಟ್ 2014:
ಸಿಪಿಐಎಮ್ ಕೆಲಸಗಾರನಾಗಿದ್ದ ರಾಜೇಶ್ ಕುಮಾರ್ ನಿಂದನಾತ್ಮಕ ಕಮೆಂಟ್ ಮತ್ತು ಪೋಟೋ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಾಕಿರುವುದಕ್ಕಾಗಿ ಪೋಲೀಸರಿಂದ ಬಂಧಿಸಲ್ಪಟ್ಟಿದ್ದ. ಪೋಲೀಸರು ತಿಳಿಸಿರುವಂತೆ ಈತ ತನ್ನ ಒಂದು ಪೋಸ್ಟಿನ ಫೋಟೋದಲ್ಲಿ ಮೋದಿಯ ಮುಖಕ್ಕೆ ಚಪ್ಪಲಿ ತೋರಿಸಿದ್ದ. ಇದು ಮೋದಿಯ ವಿರುದ್ಧ ನಿಂದನಾತ್ಮಕ ಕಮೆಂಟ್ ಗಳಿಗೆ ಕಾರಣವಾಗಿ, ಕೋಮು ದ್ವೇಷಕ್ಕೆ ಕಾರಣವಾಗುತ್ತೆ ಎಂಬ ಆರೋಪದಿಂದ ಈತನನ್ನು ಬಂಧಿಸಲಾಗಿತ್ತು.

13,999 ಸಾವಿರದ ಈ ನೋಕಿಯಾ ಫೋನಿನಲ್ಲಿದೆ ನೋಚ್ ಡಿಸ್‌ಪ್ಲೇ!!13,999 ಸಾವಿರದ ಈ ನೋಕಿಯಾ ಫೋನಿನಲ್ಲಿದೆ ನೋಚ್ ಡಿಸ್‌ಪ್ಲೇ!!

* ದೇವು ಚೂಡಾಂಕರ್, ಗೋವಾ, ಮೇ 2014 :
ಹಡಗು ನಿರ್ಮಾಣ ಉದ್ಯೋಗದಲ್ಲಿದ್ದ ಚೂಡಾಂಕರ್ ಮೋದಿ ವಿರುದ್ಧ ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿದ ಕಾರಣದಿಂದ ಅರೆಸ್ಟ್ ಆಗಿದ್ದರು. ಪೋಲೀಸರು ಈತನ ವಿರುದ್ಧ ಸೆಕ್ಷನ್ 153(a) ಮತ್ತು ಐಪಿಸಿ 295(A), section 125, ಐಟಿ ಆಕ್ಟ್ ನ 66(A) ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿದ್ದರು. ಸಾಮಾಜಿಕ ಮತ್ತು ಕೋಮು ಸೌಹಾರ್ಧತೆಯನ್ನು ರಾಜ್ಯದಲ್ಲಿ ಹಾಳು ಮಾಡುವ ಗೇಮ್ ಪ್ಲಾನ್ ನಂತೆ ಈತ ಈ ಪೋಸ್ಟ್ ಹಾಕಿದ್ದನಂತೆ. ಆದರೆ ವಿರೋಧ ಪಕ್ಷಗಳು ಇದನ್ನು ಮೋದಿಯನ್ನು ವಿಮರ್ಷೆ ಮಾಡಿದ್ದು ಎಂದು ಹೇಳಿದ್ದವು.

* ಪಾಲ್ ಗರ್ ನ ಹುಡುಗಿಯರು, ಮುಂಬೈ, ನವೆಂಬರ್ 2012
ಪಾಲ್ ಗರ್ ನ ಇಬ್ಬರು ಸಣ್ಣ ವಯಸ್ಸಿನ ಹುಡುಗಿಯರು, ಶಹೀನ್ ದಾದಾ ಮತ್ತು ರೇಣು ಶ್ರೀನಿವಾಸನ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬಾಳಾ ಠಾಕ್ರೆ ತೀರಿಕೊಂಡಾಗ ಯಾಕೆ ಇಡೀ ನಗರ ಸ್ತಬ್ಧವಾಗಿದೆ? ಎಂಬ ಪ್ರಶ್ನೆ ಕೇಳಿದ್ದಕ್ಕಾಗಿ ಅರೆಸ್ಟ್ ಆಗಿದ್ದರು. ಒಬ್ಬಳು ಸ್ಟೇಟಸ್ ಹಾಕಿದ್ದರೆ, ಇನ್ನೊಬ್ಬಳು ಈ ಸ್ತಬ್ಧ ಗೌರವದಿಂದಲ್ಲ ಬದಲಾಗಿ ಭಯದಿಂದ ಎಂದು ಕಮೆಂಟಿಸಿದ್ದಳು. ಇನ್ನೊಬ್ಬಳು ಈ ಸ್ಟೇಟಸ್ ನ್ನು ಲೈಕ್ ಮಾಡಿದ್ದಕ್ಕಾಗಿ ಅರೆಸ್ಟ್ ಆಗಿದ್ದಳು. ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸೆಕ್ಷನ್ 295(a), ಐಟಿ ಆಕ್ಟ್ ಅಡಿಯ ಐಪಿಸಿ ಸೆಕ್ಷನ್ 66(a) ಅಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ನಂತರ ಕೋರ್ಟ್ ನಿಂದ ಅವರಿಗೆ ಮುಕ್ತಿ ಸಿಕ್ಕಿತ್ತು.

* ರವಿ ಶ್ರೀನಿವಾಸನ್, ಅಕ್ಟೋಬರ್, 2012:
ಪುದುಚೇರಿಯ ಬ್ಯೂಸಿನೆಸ್ ಮ್ಯಾನ್ ಆಗಿದ್ದ ರವಿ ಶ್ರೀನಿವಾಸನ್, ಪಿ. ಚಿದಂಬರಂ ಮಗ ಕಾರ್ತಿ ಚಿದಂಬರಂ ಬಗ್ಗೆ ಟ್ವೀಟರ್ ನಲ್ಲಿ ಆಕ್ರಮಣಕಾರಿ ಪೋಸ್ಟ್ ಕಳಿಸಿದ್ದಕ್ಕಾಗಿ ಬಂಧನಕ್ಕೆ ಒಳಪಟ್ಟಿದ್ದರು.

ನಿಮ್ಮ FB ಪೋಸ್ಟ್ ನಿಮ್ಮನ್ನು ಕಟಕಟೆಯಲ್ಲೂ ನಿಲ್ಲಿಸಬಹುದು..!


* ಏರ್ ಇಂಡಿಯಾ ಉದ್ಯೋಗಿಗಳು, ಮುಂಬೈ, ಮೇ 2012:
ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಮಾಯಾಂಕ್ ಮೋಹನ್ ಶರ್ಮಾ ಮತ್ತು ಕೆವಿಜೆ ರಾವ್ ಸೈಬರ್ ಕ್ರೈಮ್ ಸೆಲ್ ಮುಂಬೈ ಪೋಲೀಸರಿಂದ ಅರೆಸ್ಟ್ ಆಗಿದ್ದರು. ಮನಮೋಹನ್ ಸಿಂಗ್ ಮತ್ತು ಇತರೆ ರಾಜಕಾರಣಿಗಳ ಬಗ್ಗೆ ಅಶಿಸ್ತಿನ ಜೋಕ್ಸ್ ಗಳನ್ನು ಪೋಸ್ಟ್ ಮಾಡಿದ ಕಾರಣದಿಂದ ಅರೆಸ್ಟ್ ಆಗಿದ್ದೂ ಅಲ್ಲದೆ, ದೇಶದ ಬಾವುಟಕ್ಕೆ ಅಪಮಾನ ಮಾಡಿದ ಆರೋಪ ಎದುರಿಸುತ್ತಿದ್ದರು. ಸುಲಭದಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಶೇರ್ ಆಗುವ ಕಾರಣದಿಂದ ತಾವು ಇದನ್ನು ಮಾಡಿರುವುದಾಗಿ ಅವರು ಹೇಳಿದ್ದರು. 12 ದಿನ ಜೈಲಿನಲ್ಲಿದ್ದ ನಂತರ ಇವರ ಮೇಲಿನ ಕೇಸುಗಳು ಬಿದ್ದು ಹೋದವು ಮತ್ತು ಜೈಲಿನಿಂದ ಬಿಡುಗಡೆಗೊಂಡರು.

* ಅಂಬಿಕೇಷ್ ಮಹಾಪತ್ರ ಮತ್ತು ಸುಬ್ರತಾ ಸೇನ್ ಗುಪ್ತಾ, ಜಾದವ್ ಪುರ್, ಎಪ್ರಿಲ್ 2012:
ಜಾದವಪುರದ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ಅಂಬಿಕೇಷ್ ಮಹಾಪತ್ರ ಮತ್ತು ಅವರ ಪಕ್ಕದ ಮನೆಯ ಸುಬ್ರತಾ ಸೇನ್ ಗುಪ್ತಾ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅವಹೇಳನಕಾರಿಯಾಗಿ ಬಿಂಬಿಸುವ ಕಾರ್ಟೂನ್ ಗಳನ್ನು ಹಂಚಿದ್ದಕ್ಕಾಗಿ ಅರೆಸ್ಟ್ ಆಗಿದ್ದರು.ಸತ್ಯಜಿತ್ ರಾಯ್ ಅವರ ಪ್ರಸಿದ್ಧ ಮೂವಿ ಸೋನರ್ ಕೆಲ್ಲಾ ಚಿತ್ರದ ದೃಶ್ಯಗಳನ್ನು ಬಳಸಿ ಕಾರ್ಟೂನ್ ಬೇಸ್ ಮಾಡಿ ಅವರು ಇ-ಮೇಲ್ ಹಂಚಿದ್ದರು. ಇವರ ವಿರುದ್ಧ ಪೋಲೀಸರು 93 ಪೇಜಿನ ಚಾರ್ಜ್ ಶೀಟ್ ದಾಖಲಿಸಿದ್ದರು.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ನಿಮ್ಮ FB ಪೋಸ್ಟ್ ನಿಮ್ಮನ್ನು ಕಟಕಟೆಯಲ್ಲೂ ನಿಲ್ಲಿಸಬಹುದು..!

ಈ ಸಂದರ್ಬದಲ್ಲಿ ಮಮತಾ ಬ್ಯಾನರ್ಜಿ ಆಕೆಯನ್ನು ಸಾಯಿಸುವ ಉದ್ದೇಶದ ಕೋಡೆಡ್ ಮೆಸೇಜ್ ಗಳನ್ನು ಕೂಡ ಇವರು ಕಳಿಸಿದ್ದರು ಎಂದು ಆರೋಪ ಮಾಡಿದ್ದರು. ಆದರೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಮಾರ್ಚ್ 2015 ರಲ್ಲಿ ಕಲ್ಕತ್ತಾ ಹೈಕೋರ್ಟ್ ಇವರಿಗೆ ರಿಲೀಫ್ ನೀಡಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ 50,000 ರೂಪಾಯಿ ನೀಡುವಂತೆ ಆದೇಶಿಸಿತ್ತು.

Best Mobiles in India

English summary
Arrest over a Facebook status: 7 times people landed in jail for posts against politicians. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X