ಎರಡು ಹೊಸ ಸ್ಮಾರ್ಟ್‌ ಡೆಸ್ಕ್‌ಟಾಪ್‌ ಪರಿಚಯಿಸಿದ ಅಸುಸ್‌! ಫೀಚರ್ಸ್‌ಗೆ ಫಿದಾ ಆಗೋದು ಪಕ್ಕಾ!

|

ಟೆಕ್‌ ವಲಯದಲ್ಲಿ ಅಸುಸ್‌ ಕಂಪೆನಿ ಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಪ್ರಸಿದ್ಧಿ ಪಡೆದಿದೆ. ಆಕರ್ಷಕ ಲ್ಯಾಪ್‌ಟಾಪ್‌ಗಳ ಜೊತೆಗೆ ಡೆಸ್ಕ್‌ಟಾಪ್‌ಗಳ ಮೂಲಕವೂ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಅಸುಸ್‌ ಕಂಪೆನಿ ಭಾರತದಲ್ಲಿ ಎರಡು ಹೊಸ ಸ್ಮಾಲ್‌ ಫಾರ್ಮ್‌ ಫ್ಯಾಕ್ಟರ್‌ ಡೆಸ್ಕ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಅಸುಸ್‌ ಎಕ್ಸ್‌ಪರ್ಟ್‌ಸೆಂಟರ್‌ D500SD ಮತ್ತು ಅಸುಸ್‌ S500SD ಎಂದು ಹೆಸರಿಸಲಾಗಿದೆ. ಇದರಲ್ಲಿ ಅಸುಸ್‌ ಎಕ್ಸ್‌ಫರ್ಟ್‌ ಸೆಂಟರ್‌ D500SD ಡೆಸ್ಕ್‌ಟಾಪ್‌ ವ್ಯಾಪಾರದ ಉದ್ದೇಶಕ್ಕೆ ಸೂಕ್ತವಾಗಿದೆ.

ಅಸುಸ್‌

ಹೌದು, ಅಸುಸ್‌ ಕಂಪೆನಿ ಎರಡು ಹೊಸ ಡೆಸ್ಕ್‌ಟಾಪ್‌ಗಳನ್ನು ಪರಿಚಯಿಸಿದೆ. ಇನ್ನು ಅಸುಸ್‌ ಪರಿಚಯಿಸಿರುವ ಅಸುಸ್‌ S500SD ಡೆಸ್ಕ್‌ಟಾಪ್‌ ಪರ್ಸನಲ್‌ ಯೂಸ್‌ಗೆ ಸೂಕ್ತವಾಗಿದೆ. ಇದನ್ನು ನಿಮ್ಮ ಮನೆಯಲ್ಲಿ ದೈನಂದಿನ ಕಾರ್ಯಗಳಿಗೆ ಸೂಕ್ತವಾಗಿದೆ.ಈ ಎರಡೂ ಮಾದರಿಗಳು ಹೆಚ್ಚಿನ ಸಂಖ್ಯೆಯ ಪೋರ್ಟ್‌ಗಳಲ್ಲಿ ಪ್ಯಾಕ್ ಮಾಡುತ್ತವೆ. ಜೊತೆಗೆ ಸುಲಭವಾದ ಅಪ್‌ಗ್ರೇಡ್ ಮತ್ತು ನಿರ್ವಹಣೆಗಾಗಿ ಪ್ರಮಾಣಿತ ಗಾತ್ರದ ಹಾರ್ಡ್ ಡಿಸ್ಕ್ ಸ್ಲಾಟ್ ಅನ್ನು ಒಳಗೊಂಡಿವೆ. ಹಾಗಾದ್ರೆ ಈ ಡೆಸ್ಕ್‌ಟಾಪ್‌ಗಳು ಏನೆಲ್ಲಾ ವಿಶೇಷತೆ ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸುಸ್‌ ಎಕ್ಸ್‌ಪರ್ಟ್‌ಸೆಂಟರ್‌ D500SD

ಅಸುಸ್‌ ಎಕ್ಸ್‌ಪರ್ಟ್‌ಸೆಂಟರ್‌ D500SD

ಅಸುಸ್‌ ಎಕ್ಸ್‌ಪರ್ಟ್‌ಸೆಂಟರ್‌ D500SD ಡೆಸ್ಕ್‌ಟಾಪ್‌ ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಪಿಸಿಯಾಗಿದೆ. ಇದರಲ್ಲಿ ಟ್ರಸ್ಟೆಡ್ ಪ್ಲಾಟ್‌ಫಾರ್ಮ್ ಮಾಡ್ಯೂಲ್ 2.0 ಅನ್ನು ನೀಡಲಾಗಿದ್ದು, ಸಿಸ್ಟಮ್‌ಗೆ ಸೆಕ್ಯೂರ್‌ ಅನ್ನು ನೀಡಲಿದೆ. ಇನ್ನು ಈ ಡೆಸ್ಕ್‌ಟಾಪ್‌ ಇಂಟೆಲ್ ಕೋರ್ i5-12400 ಆರು-ಕೋರ್ ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು 2.5GHz ವರೆಗೆ 4.4GHz ಟರ್ಬೊ ಬೂಸ್ಟ್‌ನೊಂದಿಗೆ ನಿಯಂತ್ರಿಸಲ್ಪಡುತ್ತದೆ. ಈ ಡೆಸ್ಕ್‌ಟಾಪ್‌ 64GB RAM ಸಾಮರ್ಥ್ಯವನ್ನು ಹೊಂದಿದೆ.

ಡೆಸ್ಕ್‌ಟಾಪ್‌

ಈ ಡೆಸ್ಕ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ LAN RJ45 ಪೋರ್ಟ್, ಡ್ಯುಯಲ್-ಬ್ಯಾಂಡ್ Wi-Fi 6, ಬ್ಲೂಟೂತ್ 5.2, ಒಂದು ಹೆಡ್‌ಫೋನ್ ಜ್ಯಾಕ್, ಒಂದು ಲೈನ್-ಇನ್, ಒಂದು ಮೈಕ್ ಇನ್, ಒಂದು HDMI 1.4 ಪೋರ್ಟ್, ಒಂದು VGA ಪೋರ್ಟ್, ಎರಡು PS2 ಮತ್ತು ನಾಲ್ಕು USB ಹೊಂದಿದೆ. ಇದಲ್ಲದೆ ಡೆಸ್ಕ್‌ಟಾಪ್‌ನ ಮುಂಭಾಗದಲ್ಲಿ ಹೆಡ್‌ಫೋನ್ ಜ್ಯಾಕ್, 3.5mm ಕಾಂಬೊ ಆಡಿಯೊ ಜ್ಯಾಕ್, ಎರಡು USB 3.2 Gen 1 ಟೈಪ್-A ಪೋರ್ಟ್‌ ಮತ್ತು ಎರಡು USB 3.2 Gen 2 Type-A ಪೋರ್ಟ್‌ ಆಯ್ಕೆಗಳನ್ನು ನೀಡಲಾಗಿದೆ. ಅಲ್ಲದ ಒಂದು M.2 Wi-Fi ಕನೆಕ್ಟರ್, ಎರಡು M.2 ಸ್ಟೋರೇಜ್ ಕನೆಕ್ಟರ್ ಮತ್ತು ಎರಡು DDR4 U-DIMM ಸ್ಲಾಟ್‌ಗಳನ್ನು ಸಹ ನೀಡಲಾಗಿದೆ. ಈ ಡೆಸ್ಕ್‌ಟಾಪ್‌ನಲ್ಲಿ MyASUS ಇನ್‌ಬಿಲ್ಟ್‌ ಅಪ್ಲಿಕೇಶನ್‌ ಕೂಡ ನೀಡಲಾಗಿದೆ. ಇನ್ನು ಈ ಪಿಸಿಯ ಬೆಲೆ ಎಷ್ಟಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ಅಸುಸ್‌ S500SD ಫೀಚರ್ಸ್‌ ಹೇಗಿದೆ?

ಅಸುಸ್‌ S500SD ಫೀಚರ್ಸ್‌ ಹೇಗಿದೆ?

ಅಸುಸ್‌ S500SD ಪರ್ಸನಲ್‌ ಪಿಸಿಯಾಗಿದೆ. ಇದನ್ನು ಮನೆ ಮತ್ತು ಕಚೇರಿ ಕೆಲಸಗಳಲ್ಲಿ ಉಪಯೋಗಿಸಲು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಕಂಪ್ಯೂಟರ್‌ TPM 2.0 ಅನ್ನು ಹೊಂದಿದ್ದು, ಸಿಸ್ಟಂಗೆ ಸೂಕ್ತ ಭದ್ರತೆ ನೀಡಲಿದೆ. ಇದು ಇಂಟೆಲ್ ಕೋರ್ i-12400 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, 4.4GHz ಟರ್ಬೊ ಬೂಸ್ಟ್ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡೆಸ್ಕ್‌ಟಾಪ್‌ 64GB ವರೆಗೆ ಮೆಮೊರಿ ಹೊಂದಿದೆ. ಆದರೆ ಈ PC ಯಲ್ಲಿ ಯಾವುದೇ ಆಪ್ಟಿಕಲ್ ಡ್ರೈವ್ ನೀಡಲಾಗಿಲ್ಲ.

ಡೆಸ್ಕ್‌ಟಾಪ್‌

ಇನ್ನು ಈ ಡೆಸ್ಕ್‌ಟಾಪ್‌ ತನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಂದು ಹೆಡ್‌ಫೋನ್ ಔಟ್, ಒಂದು ಲೈನ್-ಇನ್, ಒಂದು ಮೈಕ್ ಇನ್, ಒಂದು RJ45 ಗಿಗಾಬಿಟ್ ಈಥರ್ನೆಟ್ ಪೋರ್ಟ್ ಅನ್ನು ಬೆಂಬಲಿಸಲಿದೆ. ಮುಂಭಾಗದಲ್ಲಿ ಒಂದು ಹೆಡ್‌ಫೋನ್ ಜ್ಯಾಕ್, ಒಂದು 3.5mm ಕಾಂಬೊ ಆಡಿಯೊ ಜ್ಯಾಕ್, ಎರಡು USB 3.2 Gen 1 Type-A ಪೋರ್ಟ್‌ಗಳು ಮತ್ತು ಎರಡು USB 3.2 Gen 2 Type-A ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಪ್ರಸ್ತುತ ಇದರ ಬೆಲೆ 34,790ರೂ. ಆಗಿದ್ದು,ಅಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Asus has launched two new small form factor desktops in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X