ನವೆಂಬರ್ 29 ಕ್ಕೆ ಬಿಡುಗಡೆಗೊಳ್ಳುತ್ತಿದೆ ಆಸೂಸ್ ನ ಮೊದಲ ಗೇಮಿಂಗ್ ಫೋನ್

|

ಆಸೂಸ್ ಸಂಸ್ಥೆಯ ಮೊದಲ ಗೇಮಿಂಗ್ ಫೋನ್ ಭಾರತದಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ದೇಶದಲ್ಲಿ ನವೆಂಬರ್ 29 ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಲಾಗಿದೆ. ಇದಕ್ಕಾಗಿ ಥೈವಾನಿನ ಫೋನ್ ತಯಾರಿಕಾ ಸಂಸ್ಥೆ ಆಸೂಸ್ ಈಗಾಗಲೇ ಮಾಧ್ಯಮ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದೆ. ಈ ಸ್ಮಾರ್ಟ್ ಫೋನ್ ನ್ನು ಮೊದಲ ಬಾರಿಗೆ ಥೈವಾನಿನಲ್ಲಿ ನಡೆದ ಕಂಪ್ಯೂಟೆಕ್ಸ್ ಕಾನ್ಫರೆನ್ಸ್ ನಲ್ಲಿ ತೋರಿಸಲಾಗಿತ್ತು.

ನವೆಂಬರ್ 29 ಕ್ಕೆ ಬಿಡುಗಡೆಗೊಳ್ಳುತ್ತಿದೆ ಆಸೂಸ್ ನ ಮೊದಲ ಗೇಮಿಂಗ್ ಫೋನ್

ಆಸೂಸ್ RoG ಫೋನ್: ವೈಶಿಷ್ಟ್ಯತೆಗಳು

ಅಲ್ಟಿಮೇಟ್ ಗೇಮ್ ಚೇಂಜರ್ ಎಂದೇ ಹೇಳಲಾಗುತ್ತಿರುವ ದಿ ಆಸೂಸ್ ರಿಪಬ್ಲಿಕ್ ಆಫ್ ಗೇಮರ್ಸ್(RoG) 90Hz ರಿಫ್ರೆಶ್ ರೇಟ್ ಮತ್ತು 1ಎಂಎಸ್ ರೆಸ್ಪಾನ್ಸ್ ನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಆಗಿದೆ.ಇದು 6-ಇಂಚಿನ AMOLED ಸ್ಕ್ರೀನ್ ಜೊತೆಗೆ ಫುಲ್ HD+ ರೆಸಲ್ಯೂಷನ್ ನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ Adreno 630 GPU ನಿಂದ ಇದು ಪವರ್ಡ್ ಆಗಿದೆ.

ಆಸೂಸ್ RoG ಫೋನ್ 8ಜಿಬಿ ಮೆಮೊರಿ ಜೊತೆಗೆ 512 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ ಓರಿಯೋ 8.1 ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.

ಕ್ಯಾಮರಾ ಬಗ್ಗೆ ಹೇಳುವುದಾದರೆ ಇದು ಡುಯಲ್ ಹಿಂಭಾಗದ ಕ್ಯಾಮರಾ ಲೆನ್ಸ್ ಗಳನ್ನು ಹೊಂದಿದ್ದು ಪ್ರೈಮರಿ 12ಮೆಗಾಪಿಕ್ಸಲ್ ಸೆನ್ಸರ್ ಮತ್ತು ಸೆಕೆಂಡರಿ 8 ಮೆಗಾಪಿಕ್ಸಲ್ ಸೆನ್ಸರ್ ನ್ನು ಹೊಂದಿದೆ. ಸೆಲ್ಫೀ ತೆಗೆದುಕೊಳ್ಳಲು 8 ಮೆಗಾಪಿಕ್ಸಲ್ ನ ಕ್ಯಾಮರಾವನ್ನು ಅಳವಡಿಸಲಾಗಿದೆ.

4000 4000mAh ಬ್ಯಾಟರಿ ಜೊತೆಗೆ ಹೈಪರ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ. 33 ನಿಮಿಷದಲ್ಲಿ 60% ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.ಕುತೂಹಲಕಾರಿ ವಿಚಾರವೇನೆಂದರೆ, ಈ ಸ್ಮಾರ್ಟ್ ಫೋನ್ ಡುಯಲ್ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಹೊಂದಿದ್ದು ಒಂದು ಸಾಮಾನ್ಯದಂತೆ ಫೋನಿನ ಕೆಳಭಾಗದಲ್ಲಿ ಅಳಡಿಸಲಾಗಿದ್ದು ಆದರೆ ಮತ್ತೊಂದನ್ನು ಫೋನಿನ ಬದಿಯ ಭಾಗದಲ್ಲಿ ಅಳವಡಿಸಲಾಗಿದೆ.

ಫೋನ್ ಚಾರ್ಜ್ ಆಗುತ್ತಲೇ ಲ್ಯಾಂಡ್ ಸ್ಕೇಪ್ ಮೋಡ್ ನಲ್ಲಿ ಆಡುವುದು ಸ್ವಲ್ಪ ಕಿರಿಕಿರಿಯಾಗುತ್ತದೆ. ಅದಕ್ಕೆ ನೆರವಾಗುವ ಉದ್ದೇಶದಿಂದ ಈ ರೀತಿ ಸೌಲಭ್ಯವನ್ನು ಅಳಡಿಸಲಾಗಿದೆ. ಅಂದರೆ ಬಳಕೆದಾರರು ಸೈಡ್ ನಲ್ಲಿ ಚಾರ್ಜ್ ಹಾಕಿ ಆಟವನ್ನು ಉತ್ತಮ ರೀತಿಯಲ್ಲಿ ಮುಂದುವರಿಸಲು ಇದು ನೆರವು ನೀಡುವ ಉದ್ದೇಶವನ್ನು ಹೊಂದಿದೆ.

ಇನ್ನೊಂದು ಕುತೂಹಲಕಾರಿ ಅಂಶವೇನೆಂದರೆ ROG ಫೋನ್ ನ್ನು ದೊಡ್ಡ ಮಾನಿಟರ್ ಗೆ ಕನೆಕ್ಟ್ ಮಾಡಬಹುದು ಮತ್ತು ಸಪರೇಟ್ ಡಾಕ್ ಆಕ್ಸಸರೀಸ್ ಗಳನ್ನು ಅಳಡಿಸಬಹುದು. ಸೆಕ್ಯುರಿಟಿ ಫೀಚರ್ ಗಳಾದ ಫಿಂಗರ್ ಸೆನ್ಸರ್ ಕೂಡ ಫೋನಿನ ಹಿಂಭಾಗದಲ್ಲಿದೆ. 3.5ಎಂಎಂನ ಹೆಡ್ ಫೋನ್ ಜ್ಯಾಕ್ ನ್ನು ಸೇರಿಸಲಾಗಿದ್ದು ಡುಯಲ್ ಸ್ಪೀಕರ್ ಇದೆ.

Best Mobiles in India

Read more about:
English summary
Asus’s first gaming phone set to launch on November 29

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X