ಭಾರತದಲ್ಲಿ ಆಸುಸ್‌ ಕಂಪೆನಿಯ ಮೂರು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!

|

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಆಸುಸ್‌ ಕಂಪೆನಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಮೂರು ಹೊಸ ಆಸುಸ್‌ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ವಿವೋಬುಕ್ 15 ಟಚ್, ವಿವೋಬುಕ್ ಎಸ್ 14 ಫ್ಲಿಪ್ ಮತ್ತು ಜೆನ್‌ಬುಕ್ 14 ಫ್ಲಿಪ್ OLED ಲ್ಯಾಪ್‌ಟಾಪ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ನಯವಾದ ವಿನ್ಯಾಸ, ಅತ್ಯುತ್ತಮ ಬ್ಯಾಟರಿ ಬಾಳಿಕೆ, ಸುಧಾರಿತ ಟಚ್‌ಸ್ಕ್ರೀನ್ ಟೆಕ್ನಾಲಜಿಯನ್ನು ಒಳಗೊಂಡಿದೆ.

ಆಸುಸ್‌

ಹೌದು, ಆಸುಸ್‌ ಕಂಪೆನಿ ಭಾರತದಲ್ಲಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಲ್ಯಾಪ್‌ಟಾಪ್‌ಗಳು ಕಾಂಪ್ಯಾಕ್ಟ್ ಮತ್ತು ಮಲ್ಟಿಫೇಸ್‌ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿವೆ. ಇದರಲ್ಲಿ ವಿವೋಬುಕ್‌ S 14 ಫ್ಲಿಪ್ AMD ಮತ್ತು Intel ಎರಡು ಪ್ರೊಸೆಸರ್ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಆಸುಸ್‌ ವಿವೋಬುಕ್ 15 ಟಚ್ ಲ್ಯಾಪ್‌ಟಾಪ್‌ ಬ್ಯಾಟರಿ 42 ಗಂಟೆಗಳ ಬಾಳಿಕೆಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಆಸುಸ್‌

ಇನ್ನು ಆಸುಸ್‌ ಕಂಪೆನಿಯ ಮೂರು ಲ್ಯಾಪ್‌ಟಾಪ್‌ಗಳು ಹೊಸ ಮಾದರಿಯ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಜೆನ್‌ಬುಕ್ 14 ಫ್ಲಿಪ್ OLED ಲ್ಯಾಪ್‌ಟಾಪ್‌ 14 ಇಂಚಿನ, 2.8K 90Hz OLED ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು 360-ಡಿಗ್ರಿ ಎರ್ಗೋಲಿಫ್ಟ್ ಹಿಂಜ್ ಅನ್ನು ಹೊಂದಿದೆ ಆದ್ದರಿಂದ ನೀವು ಡಿಸ್‌ಪ್ಲೇಯನ್ನು ಯಾವುದೇ ದಿಕ್ಕಿನಲ್ಲಿ ತಿರುಗಿಸಬಹುದು. ಇನ್ನುಳಿದಂತೆ ಈ ಮೂರು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋಬುಕ್‌ S 14 ಫ್ಲಿಪ್

ವಿವೋಬುಕ್‌ S 14 ಫ್ಲಿಪ್

ವಿವೋಬುಕ್‌ S 14 ಫ್ಲಿಪ್ ಲ್ಯಾಪ್‌ಟಾಪ್‌ 14 ಇಂಚಿನ IPS ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಟಚ್‌ಸ್ಕ್ರೀನ್ 300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ TUF ರೈನ್‌ಲ್ಯಾಂಡ್ ಪ್ರಮಾಣೀಕೃತವಾಗಿದೆ. ಇದು AMD ಮತ್ತು Intel ಎರಡು ಪ್ರೊಸೆಸರ್ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ AMD ರೈಜೆನ್‌ 5 5600H ಮತ್ತು ಇಂಟೆಲ್‌ ಕೋರ್‌ i512500H ಪ್ರೊಸೆಸರ್‌ಗಳ ಆಯ್ಕೆಗಳಲ್ಲಿ ವಿವೋಬುಕ್‌ S 14 ಫ್ಲಿಪ್‌ ಲಭ್ಯವಾಗಲಿದೆ.

ಲ್ಯಾಪ್‌ಟಾಪ್‌

ಇನ್ನು ಈ ಪ್ರೊಸೆಸರ್‌ಗಳು ಕ್ರಮವಾಗಿ AMD ರೇಡಿಯನ್ ಗ್ರಾಫಿಕ್ಸ್ ಮತ್ತು ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಎರಡು ಹೆವಿ-ಡ್ಯೂಟಿ ಹೀಟ್ ಪೈಪ್‌ಗಳು ಮತ್ತು ಸಮರ್ಥ 79 ಬ್ಲೇಡ್ ಕೂಲಿಂಗ್ ಫ್ಯಾನ್ ಯಾವಾಗಲೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. ಈ ಲ್ಯಾಪ್‌ಟಾಪ್‌ ಬ್ಯಾಟರಿಯು 50 ಗಂಟೆಗಳ ಬಾಳಿಕೆಯನ್ನು ನೀಡಲಿದೆ. ಜೊತೆಗೆ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಂಯೋಜಿಸಲಿದೆ.

ಆಸುಸ್‌ ವಿವೋಬುಕ್‌ 15 (ಟಚ್)

ಆಸುಸ್‌ ವಿವೋಬುಕ್‌ 15 (ಟಚ್)

ಆಸುಸ್‌ ವಿವೋಬುಕ್‌ 15 (ಟಚ್) ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ತೆಳುವಾದ ಬೆಜೆಲ್‌ಗಳು ಮತ್ತು 82% ರ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ಕೇವಲ 1.7 ಕೆಜಿ ತೂಕವನ್ನು ಹೊಂದಿದ್ದು, ನಯವಾದ ನೋಟ್‌ಬುಕ್ ಆಗಿದೆ. ವಿವೋಬುಕ್‌ 15 (ಟಚ್) ಕೂಡ ಎರಡು ಇಂಟೆಲ್ ಪ್ರೊಸೆಸರ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬ್ಯಾಟರಿಯು 42 ಗಂಟೆಗಳ ಬಾಳಿಕೆಯನ್ನು ನೀಡಲಿದೆ. ಈ ಲ್ಯಾಪ್‌ಟಾಪ್‌ 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ವಿವೋಬುಕ್‌ 15 ಲ್ಯಾಪ್‌ಟಾಪ್‌ US MIL-STD 810H ಪ್ರಮಾಣೀಕರಣವನ್ನು ಹೊಂದಿದೆ. ಹಾಗೆಯೇ ಇದು ವಿಂಡೋಸ್‌ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಆಸುಸ್‌ ಜೆನ್‌ಬುಕ್‌ 14 ಫ್ಲಿಪ್

ಆಸುಸ್‌ ಜೆನ್‌ಬುಕ್‌ 14 ಫ್ಲಿಪ್

ಆಸುಸ್‌ ಜೆನ್‌ಬುಕ್‌ 14 ಫ್ಲಿಪ್ ಲ್ಯಾಪ್‌ಟಾಪ್‌ 14 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 2.8K 90Hz OLED ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು 16:19 ರಚನೆಯ ಅನುಪಾತವನ್ನು ಹೊಂದಿದೆ. ಇದರ ಸ್ಕ್ರೀನ್-ಟು-ಬಾಡಿ ಅನುಪಾತ 88% ಹೊಂದಿದೆ. ಈ ಲ್ಯಾಪ್‌ಟಾಪ್ 4,096 ಹಂತದ ಸ್ಟೈಲಸ್ ಪ್ರೆಸರ್‌ ಅನ್ನು ಪತ್ತೆ ಮಾಡುತ್ತದೆ. ಇನ್ನು ಜೆನ್‌ಬುಕ್‌ 14 ಫ್ಲಿಪ್‌ OLED 4 ಬದಿಯ ನ್ಯಾನೋಎಡ್ಜ್‌ ವಿನ್ಯಾಸವನ್ನು ಹೊಂದಿದೆ.

OLED

ಇದು ತೆಳುವಾದ ಕನ್ವರ್ಟಿಬಲ್ OLED ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು 360 ಡಿಗ್ರಿ ಎರ್ಗೋಲಿಫ್ಟ್ ಹಿಂಜ್ ಅನ್ನು ಹೊಂದಿದೆ. ಆದ್ದರಿಂದ ನೀವು ಡಿಸ್ಪ್ಲೇಯನ್ನು ಯಾವುದೇ ದಿಕ್ಕಿನಲ್ಲಿ ತಿರುಗಿಸಬಹುದು. ಇನ್ನು ಈ ಲ್ಯಾಪ್‌ಟಾಪ್ ಗೇಮಿಂಗ್ ಅಪ್ಲಿಕೇಶನ್‌ಗಳಿಗಾಗಿ ಇಂಟೆಲ್ 12 ನೇ ತಲೆಮಾರಿನ H ಸರಣಿ ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಇದರಿಂದ ಗೇಮಿಂಗ್‌ ಪ್ರಿಯರು ಈ ಲ್ಯಾಪ್‌ಟಾಪ್‌ನಲ್ಲಿ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸುಸ್‌ ವಿವೋಬುಕ್‌ S 14 ಫ್ಲಿಪ್ ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 49,990ರೂ. ಆಗಿದೆ. ಆಸುಸ್‌ ವಿವೋಬುಕ್‌ 15 (ಟಚ್) ಲ್ಯಾಪ್‌ಟಾಪ್‌ 66,990ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಜೆನ್‌ಬುಕ್‌ 14 ಲ್ಯಾಪ್‌ಟಾಪ್‌ ಭಾರತದಲ್ಲಿ 99,990ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಮೂರು ಲ್ಯಾಪ್‌ಟಾಪ್‌ಗಳು ಭಾರತದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಆಸುಸ್‌

ಇನ್ನು ಆಸುಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ ಹೊಸ ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ತನ್ನ ಡಿಸ್‌ಪ್ಲೇ ಗಾತ್ರದ ಮೂಲಕವೇ ಸಾಕಷ್ಟು ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ 5.9 ಇಂಚಿನ SAMOLED ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ ಬೆಂಬಲ ಪಡೆದಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8+ ಜೆನ್‌ 1 SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್ ಹೊಂದಿದೆ.

Best Mobiles in India

Read more about:
English summary
asus vivobook 15 touch, vivobook s 14 flip, and zenbook 14 flip OLED laptops launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X