ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಅಸುಸ್‌ ಕಂಪೆನಿ ಹೊಸ ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ ಅನ್ನು ಲಾಂಚ್‌ ಮಾಡಿದೆ. ಈ ಲ್ಯಾಪ್‌ಟಾಪ್‌ನ ಟಾಪ್‌ ವರ್ಷನ್‌ ರೈಜೆನ್‌ 9 6900HX ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ 165Hz ರಿಫ್ರೆಶ್ ರೇಟ್‌ ಬೆಂಬಲಿಸುವ 17.3 ಇಂಚಿನ WQHD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎನ್‌ವಿಡಿಯಾ ಜಿಫೋರ್ಸ್‌ RTX 3050 ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿರಲಿದೆ.

ಅಸುಸ್‌ ಜೆನ್‌ಬುಕ್‌ ಪ್ರೊ 17

ಹೌದು, ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇದು ಹೆಚ್‌ಡಿ ವೆಬ್‌ಕ್ಯಾಮ್ ಮತ್ತು ಹರ್ಮನ್ ಕಾರ್ಡನ್ ಆಡಿಯೊದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಬ್ಯಾಕ್‌ಲಿಟ್ ಅಸುಸ್‌ ErgoSense ಕೀಬೋರ್ಡ್ ಮತ್ತು ಟಚ್‌ಪ್ಯಾಡ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸುಸ್‌

ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ 17.3 ಇಂಚಿನ WQHD ಐಪಿಎಸ್‌ ಲೆವೆಲ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,560x1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 165Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ AMD ರೈಜೆನ್‌ 6000 ಸರಣಿಯ ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮೀಸಲಾದ ಎನ್‌ವಿಡಿಯಾ ಜಿಫೋರ್ಸ್‌ RTX 3050 (4GB) ಗ್ರಾಫಿಕ್ಸ್ ಕಾರ್ಡ್ ಮತ್ತು ಸಂಯೋಜಿತ AMD Radeon R7 ಗ್ರಾಫಿಕ್ಸ್ ಅನ್ನು ಹೊಂದಿರಲಿದೆ.

ಲ್ಯಾಪ್‌ಟಾಪ್‌

ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ 32GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿಯಾಗಿ M.2 PCIe 4x4 ಸ್ಟೋರೇಜ್ ವಿಸ್ತರಣೆ ಮಾಡುವ ಸ್ಲಾಟ್ ಕೂಡ ಒಳಗೊಂಡಿದೆ. ಇದು ಫುಲ್‌-ಹೆಚ್‌ಡಿ ವೆಬ್‌ಕ್ಯಾಮ್ ಮತ್ತು ಹರ್ಮನ್ ಕಾರ್ಡನ್ ಆಡಿಯೊದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಬ್ಯಾಕ್‌ಲಿಟ್ Asus ErgoSense ಕೀಬೋರ್ಡ್ ಮತ್ತು ಟಚ್‌ಪ್ಯಾಡ್ ಅನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್‌

ಅಸುಸ್‌ ಜೆನ್‌ಬುಕ್‌ ಪ್ರೊ 17 ಲ್ಯಾಪ್‌ಟಾಪ್‌ ಐಸ್‌ಕೂಲ್‌ ಪ್ಲಸ್‌ ಥರ್ಮಲ್ ಕೂಲಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದಲ್ಲದೆ ವರ್ಧಿತ ಕೂಲಿಂಗ್‌ಗಾಗಿ ಡ್ಯುಯಲ್ ಹೀಟ್ ಪೈಪ್‌ಗಳೊಂದಿಗೆ ಡ್ಯುಯಲ್-ಫ್ಯಾನ್ ವ್ಯವಸ್ಥೆಯನ್ನು ಸಹ ಪಡೆದಿದೆ. ಇದು ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಎರ್ಗೋಲಿಫ್ಟ್ ಹಿಂಜ್ ಅನ್ನು ಹೊಂದಿದೆ. ಜೊತೆಗೆ ಇದು 76Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 14 ಗಂಟೆಗಳ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಪ್ರಸ್ತುತ ಈ ಲ್ಯಾಪ್‌ಟಾಪ್‌ ಯುಎಸ್‌ನಲ್ಲಿ ಬಿಡುಗಡೆಯಾಗಿದೆ. ಯುಎಸ್‌ನಲ್ಲಿ ಇದರ ಬೆಲೆ $999 (ಅಂದಾಜು 81,000ರೂ) ನಿಂದ ಪ್ರಾರಂಭವಾಗುತ್ತದೆ. ಈ ಲ್ಯಾಪ್‌ಟಾಪ್‌ನ ಮೊದಲ ಮಾರಾಟದ ದಿನಾಂಕವನ್ನು ಇನ್ನು ಕೂಡ ಬಹಿರಂಗವಾಗಿಲ್ಲ. ಇದು Asus ಆನ್ಲೈನ್ ​​ಸ್ಟೋರ್ ಮತ್ತು Amazon ಮೂಲಕ ಖರೀದಿಸಲು ಲಭ್ಯವಿರುತ್ತದೆ. ಈ ಲ್ಯಾಪ್‌ಟಾಪ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಅಸುಸ್‌

ಇದಲ್ಲದೆ ಅಸುಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಅಸುಸ್‌ ವಿವೋಬುಕ್‌ 14 (X1402) ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು 82% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಕ್ವೈಟ್ ಬ್ಲೂ ಮತ್ತು ಐಸ್ಲೈಟ್ ಸಿಲ್ವರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Asus Zenbook Pro 17 With WQHD IPS-level display Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X