ನೌಕರರೇ ಗಮನಿಸಿ!..ನೀವು PF ಖಾತೆ ಹೊಂದಿದ್ರೆ, ಇದನ್ನು ಮರೆಯದೆ ಪಾಲಿಸಿ!

|

ಉದ್ಯೋಗಿಗಳ ಪಾಲಿಗೆ ಪಿಎಫ್‌ (PF) ಹಣ ಕಷ್ಟ ಕಾಲದಲ್ಲಿ ಆರ್ಥಿಕ ಭದ್ರತೆ ಒದಗಿಸುತ್ತದೆ. ಈ ನಿಟ್ಟಿನಲ್ಲಿ ನೌಕರರು ತನ್ನ ಪಿಎಫ್‌ ಖಾತೆಯ ಬಗ್ಗೆ ಎಚ್ಚರ ವಹಿಸುವುದು ಸೂಕ್ತವಾಗಿದೆ. ಈ ಕುರಿತಂತೆ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಕ್ರೆಡೆನ್ಷಿಯಲ್‌ ಹಾಗೂ ಓಟಿಪಿ ಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.

ಆರ್ಥಿಕತೆ

ಪ್ರಸ್ತುತ ಭಾರತದ ಆರ್ಥಿಕತೆಯು ಹೆಚ್ಚು ಡಿಜಿಟಲೀಕರಣಗೊಳ್ಳುತ್ತಿದ್ದಂತೆ, ಸೈಬರ್ ಕ್ರೈಮ್ ಘಟನೆಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ಅನೇಕರು ಈ ಸೈಬರ್ ಅಪರಾಧಿಗಳಿಂದ ಮೋಸ ಹೋಗುತ್ತಾರೆ. ವಂಚಕರು ವೈಯಕ್ತಿಕ ಡೇಟಾವನ್ನು ಕದ್ದು ಅವರ ಖಾತೆಗಳನ್ನು ಬರಿದಾಗಿಸುತ್ತಾರೆ. ಈ ರೀತಿಯ ವಂಚನೆಗಳನ್ನು ಆಗಬಾರದೆಂದು ಖಾತೆದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಎಚ್ಚರಿಕೆ ನೀಡಿದೆ.

ಲಕ್ಷಾಂತರ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ( EPFO ) ಲಕ್ಷಾಂತರ ಖಾತೆದಾರರನ್ನು ಹೊಂದಿದೆ. ಪ್ರತಿ ಉದ್ಯೋಗಿಯ ವೇತನದ ಶೇಕಡಾವಾರು ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆದಾರರು ನಿವೃತ್ತರಾದಾಗ, EPFO ಖಾತೆಗೆ ಠೇವಣಿ ಮಾಡಿದ ಸಂಪೂರ್ಣ ಮೊತ್ತ ಅವರದಾಗುತ್ತದೆ. ಹೆಚ್ಚುವರಿಯಾಗಿ, ವೈದ್ಯಕೀಯ ಬಿಲ್, ಕಾಲೇಜು ಶಿಕ್ಷಣ ಅಥವಾ ಮದುವೆಯಂತಹ ಅನಿರೀಕ್ಷಿತ ವೆಚ್ಚ ಗಳನ್ನು ಸರಿದೂಗಿಸಲು ಅಗತ್ಯ ಸಂದರ್ಭ ಗಳಲ್ಲಿ ಜಮಾ ಆಗಿರುವ ಹಣ ಪಡೆಯಬಹುದಾಗಿದೆ.

EPFO ಖಾತೆದಾರರಿಗೆ ಎಚ್ಚರಿಸಿದೆ

EPFO ಖಾತೆದಾರರಿಗೆ ಎಚ್ಚರಿಸಿದೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಂಸ್ಥೆಯು ಈ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿದ್ದು, ತನ್ನ ಪಿಎಫ್‌ ಖಾತೆದಾರರಿಗೆ OTP ಅನ್ನು ಎಂದಿಗೂ ವಿನಂತಿಸುವುದಿಲ್ಲ. ಹೀಗಾಗಿ ಯಾರಿಗೂ ಶೇರ್ ಮಾಡದಿರಿ ಎಂದಿದೆ. ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, UAN ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವ ಅಪರಿಚಿತ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ.

ನೌಕರರು ತಮ್ಮ PF ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:

ನೌಕರರು ತಮ್ಮ PF ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:

* ಅಧಿಕೃತ EPFO ವೆಬ್‌ಸೈಟ್‌ಗೆ ಭೇಟಿ ನೀಡಿ epfindia.gov.in.
* ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ತಿಳಿಸಲಾದ 'ಸರ್ವೀಸ್‌' ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದ ಅಡಿಯಲ್ಲಿ, 'ಉದ್ಯೋಗಿಗಳಿಗಾಗಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ, ಹೊಸ ಪೇಜ್ ತೆರೆಯುತ್ತೆ, 'ಸರ್ವೀಸ್‌' ಆಯ್ಕೆಯಲ್ಲಿ ಕಾಣಿಸುವ 'ಸದಸ್ಯ ಪಾಸ್‌ಬುಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

UAN

* 'ಸದಸ್ಯ ಪಾಸ್‌ಬುಕ್' ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್‌ಗೆ ನಿರ್ದೇಶಿಸಲಾಗುತ್ತದೆ.
* ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್‌ಗೆ ಉತ್ತರಿಸಿ. ನಂತರ 'ಲಾಗಿನ್' ಕ್ಲಿಕ್ ಮಾಡಿ.
* ಇದರ ನಂತರ, ಚಂದಾದಾರರನ್ನು ಮುಖ್ಯ EPF ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ಮಾಹಿತಿ ಕಾಣಬಹುದು.

ಎಸ್‌ಎಮ್‌ಎಸ್‌ ಮೂಲಕ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ?

ಎಸ್‌ಎಮ್‌ಎಸ್‌ ಮೂಲಕ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ?

ಪ್ರತಿಯೊಬ್ಬ EPFO ​​ಸದಸ್ಯರು ತಮ್ಮದೆ UAN ( ಸಾರ್ವತ್ರಿಕ ಖಾತೆ ಸಂಖ್ಯೆ) ಹೊಂದಿದ್ದಾರೆ. PF ಖಾತೆಯ ಬಾಕಿಯನ್ನು ತಿಳಿಯಲು, ನೌಕರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಯಿಂದ 7738299899 ಗೆ ' EPFOHO UAN ENG ' ಗೆ SMS ಕಳುಹಿಸಬಹುದು. ಈ ಮೂಲಕ ನೌಕರರು ಅವರ ಪಿಎಫ್‌ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ. ಉಮಂಗ್ ಆಪ್ ಮೂಲಕವು ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದು.

Best Mobiles in India

English summary
Attention EPFO ​​Subscribers! if you have PF account, than don't forget to these things.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X