ಗೂಗಲ್‌ನಿಂದ ಕನ್ನಡಕ್ಕೆ ಗೌರವ: ಬೆಲ್ಜಿಮ್ ನಲ್ಲಿ ಬಾರಿಸಿತು ಕನ್ನಡ ಡಿಂಡಿಮವ..!

|

ಗೂಗಲ್ ಇಂದಿನ ದಿನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಗೂಗಲ್ ಸ್ಟೀರ್ಟ್ ವ್ಯೂ ಜಾಹೀರಾತಿನಲ್ಲಿ ಕನ್ನಡ ಹಾಡೊಂದನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕನ್ನಡ ನಾಡಿನ ಸೊಗಡನ್ನು ದೂರ ದೂರದ ದೇಶಗಳಲಿಗೆ ಸಾಗಿಸುವ ಕಾರ್ಯವನ್ನು ಮಾಡುತ್ತಿದೆ.

ಗೂಗಲ್‌ನಿಂದ ಕನ್ನಡಕ್ಕೆ ಗೌರವ: ಬೆಲ್ಜಿಮ್ ನಲ್ಲಿ ಬಾರಿಸಿತು ಕನ್ನಡ ಡಿಂಡಿಮವ..!

ದೂರದ ಬೆಲ್ಜಿಮ್ ದೇಶದಲ್ಲಿ ಗೂಗಲ್ ಸ್ಟೀರ್ಟ್ ವ್ಯೂ ಜಾಹೀರಾತಿನಲ್ಲಿ ಪ್ರಸಾರ ಮಾಡಿದ್ದು, ಇದರಲ್ಲಿ 'ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ' ಹಾಡನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ಬೇರೆ ದೇಶದಲ್ಲಿ ನಮ್ಮೂರಿನ ಹಾಡನ್ನು ಕೇಳಿವ ಪ್ರಯತ್ನವನ್ನು ಮಾಡಿದೆ. ಸದ್ಯ ಈ ಜಾಹಿರಾತು ಯೂಟ್ಯೂಬ್‌ ನಲ್ಲಿಯೂ ಲಭ್ಯವಿದೆ.

ಬೇರೆ ಮಾದರಿಯ ಪಾಶ್ವಿಮಾತ್ಯ ಸಂಗೀತದೊಂದಿಗೆ ಕಾಣಿಸಿಕೊಂಡಿರುವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ' ಹಾಡು ಹೊಸ ರೀತಯ ಕಂಪೋಸಿಂಗ್‌ನಲ್ಲಿ ಕೇಳಲು ವಿಭಿನ್ನವಾಗಿದೆ. ಅಲ್ಲದೇ ಪುಟ್ಟ ಹುಡುಗಿಯ ದನಿಯಲ್ಲಿ ಮೂಡಿಬಂದಿರುವ ಹಾಡು ಕೇಳಲು ಇಂಪಾಗಿದೆ. ಈ ಮೂಲಕ ಗೂಗಲ್ ಮೇಲೆ ಕನ್ನಡಿಗರ ಅಭಿಮಾನ ಹೆಚ್ಚಾಗುವಂತೆ ಮಾಡಿದೆ.

ಇದೇ ಮಾದರಿಯಲ್ಲಿ ಗೂಗಲ್ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ಜಾಹೀರಾತು ನೀಡುವ ಸಂದರ್ಭದಲ್ಲಿ ಬೇರೆ ಬೇರೆ ದೇಶದ ಸಾಹಿತ್ಯ ಮತ್ತು ಸಂಗೀತವನ್ನು ಪರಿಚಯಿಸುವುದನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಕನ್ನಡ ಕಂಪನನ್ನು ಗೂಗಲ್ ಬೆಲ್ಜಿಮ್ ವರೆಗೂ ತೆಗೆದುಕೊಂಡು ಹೋಗಿದೆ. ನೀವು ಸಹ ಈ ವಿಡಿಯೋವನ್ನು ನೋಡಬೇಕು ಎನ್ನುವುದೇ ನಮ್ಮ ಆಶಯ.

Best Mobiles in India

English summary
Baarisu Kannada Dimdimava-Kannada song in Google Street View, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X