ನಮ್ಮ ಮೆಟ್ರೋದಲ್ಲಿ ಓಡಾಡ್ತಿರಾ..? ಹಾಗಿದ್ರೆ ಜಿಯೋ ಬೇಕೆ ಬೇಕು..! ಯಾಕೆ ಗೊತ್ತಾ..?

ನೀವು ಮೆಟ್ರೋದಲ್ಲಿ ಪ್ರಯಾಣ ಮಾಡಬೇಕು ಎಂದರೆ ನಿಮ್ಮ ಬಳಿ ಜಿಯೋ ಇರಲೇ ಬೇಕೆಂದು . ಕೆಂಪೇಗೌಡ ನಿಲ್ದಾಣ, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ ನಿಲ್ದಾಣದ ಮೊಬೈಲ್ ನಾಟ್ ರೀಚಬಲ್ ಆಗಲಿದ್ದು, ಜಿಯೋ ಮಾತ್ರವೇ ಕಾರ್ಯನಿರ್ಹವಹಿಸುತ್ತಿದೆ.

|

ಬೃಹತ್ ಬೆಂಗಳೂರಲ್ಲಿ ನಮ್ಮ ಮೆಟ್ರೋ ಶುರುವಾದ ನಂತರದಲ್ಲಿ ಹೆಚ್ಚು ಮಂದಿ ತಮ್ಮ ದಿನನಿತ್ಯದ ಸಂಚಾರಕ್ಕೆ ಮೆಟ್ರೋವನ್ನು ಅವಲಂಬಿಸುತ್ತಿದ್ದಾರೆ. ಆದರೆ ಇವರೆಲ್ಲರೂ ಒಂದೇ ಸಮಸ್ಯೆಯನ್ನು ಅನುಭವಿಸುತ್ತಿರುವುದು ಅದೇ ಮೊಬೈಲ್‌ ಸಿಗ್ನಲ್ ತೊಂದರೆ. ಮೆಟ್ರೋ ಬಹುಪಾಲು ಸುರಂಗದಲ್ಲಿ ಸಾಗಲಿದ್ದು, ಈ ಹಿನ್ನಲೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ.

ನಮ್ಮ ಮೆಟ್ರೋದಲ್ಲಿ ಓಡಾಡ್ತಿರಾ..? ಹಾಗಿದ್ರೆ ಜಿಯೋ ಬೇಕೆ ಬೇಕು..! ಯಾಕೆ ಗೊತ್ತಾ..

ಓದಿರಿ: ಸ್ವೈಪ್ ನಿಂದ ಎರಡು ಹೊಸ ಮಾದರಿಯ ಪವರ್ ಬ್ಯಾಂಕ್ ಲಾಂಚ್..!

ಆದರೆ ಜಿಯೋ ಗ್ರಾಹಕರು ಮಾತ್ರವೇ ಈ ಸಮಸ್ಯೆಯಿಂದ ಪಾರಾಗಿದ್ದಾರೆ. ಇದಕ್ಕಾಗಿಯೇ ಹೇಳಿದ್ದು, ನೀವು ಮೆಟ್ರೋದಲ್ಲಿ ಪ್ರಯಾಣ ಮಾಡಬೇಕು ಎಂದರೆ ನಿಮ್ಮ ಬಳಿ ಜಿಯೋ ಇರಲೇ ಬೇಕೆಂದು. ಕೆಂಪೇಗೌಡ ನಿಲ್ದಾಣ, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ ನಿಲ್ದಾಣದ ಮೊಬೈಲ್ ನಾಟ್ ರೀಚಬಲ್ ಆಗಲಿದ್ದು, ಜಿಯೋ ಮಾತ್ರವೇ ಕಾರ್ಯನಿರ್ಹವಹಿಸುತ್ತಿದೆ.

ಜಿಯೋ ಬಿಟ್ಟು ಇನ್ಯಾವುದು ಇಲ್ಲ:

ಜಿಯೋ ಬಿಟ್ಟು ಇನ್ಯಾವುದು ಇಲ್ಲ:

ನಮ್ಮ ಮೆಟ್ರೋದಲ್ಲಿ ಅದರಲ್ಲೂ ಸುರಂಗ ಮಾರ್ಗದಲ್ಲಿ ಜಿಯೋ ಹೊರತುಪಡಿಸಿ ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳ ಸಿಗ್ನಲ್ ಕಡಿತಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಜಿಯೋ ಬಿಟ್ಟು ಬೇರೆ ಕಂಪನಿಗಳ ಗ್ರಾಹಕರು ಪರದಾಡುವಂತಾಗಿದೆ.

ಸಿಗ್ನಲ್ ಯಾಕಿಲ್ಲ?

ಸಿಗ್ನಲ್ ಯಾಕಿಲ್ಲ?

ಮೆಟ್ರೋ ಸುರಂಗ ಮಾರ್ಗದಲ್ಲಿ ಸಿಗ್ನಲ್ ಸಿಗಬೇಕಾದರೆ ಟೆಲಿಕಾಂ ಕಂಪನಿಗಳು ಅಮೆರಿಕನ್ ಟವರ್ ಕಾರ್ಪೊರೇಶನ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ ದುಬಾರಿ ಬೆಲೆ ಎನ್ನುವ ಕಾರಣಕ್ಕೆ ಒಪ್ಪಂದ ಮಾಡಿಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ. ಆದರೆ ಜಿಯೋ ಕಂಪನಿ ಮಾತ್ರ ಒಡಂಬಡಿಕೆ ಮಾಡಿಕೊಂಡಿದೆ. ಹಾಗಾಗಿ ಜಿಯೋ ಗ್ರಾಹಕರು ಮಾತ್ರ ಸದ್ಯ ಮೆಟ್ರೋ ಸುರಂಗ ನಿಲ್ದಾಣ ಹಾಗೂ ಸುರಂಗ ಮಾರ್ಗದಲ್ಲಿಯೂ ಮೊಬೈಲ್ ಸೇವೆ ಪಡೆಯುತ್ತಿದ್ದಾರೆ.

ಏನೀದು ಒಪ್ಪಂದ:

ಏನೀದು ಒಪ್ಪಂದ:

ಮೆಟ್ರೋ ಮಾರ್ಗದ ಸುರಂಗ ಮಾರ್ಗ ಸೇರಿದಂತೆ ಎಲ್ಲಾ 40 ನಿಲ್ದಾಣಗಳಲ್ಲಿಯೂ ಮೊಬೈಲ್ ನೆಟ್‌ವರ್ಕ್ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿ ಅಮೆರಿಕನ್ ಟವರ್ ಕಾರ್ಪೊರೇಶನ್ 700 ಚದರ ಜಾಗ ಪಡೆದಿದ್ದು, 8,500 ರೂ. ಮಾಸಿಕ ಬಾಡಿಗೆ ನೀಡುತ್ತಿದೆ. ಈ ಕಂಪನಿ 59.90ಲಕ್ಷ ಮಾಸಿಕದಂತೆ ನೀಡುವ ಬಾಡಿಗೆ ಹಣದಿಂದ 7.14 ಕೋಟಿ ವಾರ್ಷಿಕ ಆದಾಯ ಬಿಎಂಆರ್‌‌‌ಸಿಎಲ್‌‌ಗೆ ಲಭಿಸುತ್ತಿದೆ.

Best Mobiles in India

English summary
Bangalore Metro Mobile Network coverage, to Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X