77 ಜನರಿಗೆ ವಂಚಿಸಿದ ಆಘಾತಕಾರಿ ಪ್ರಕರಣಕ್ಕೆ ಕಣ್ಣೀರಿಟ್ಟ 'ಸೈಬರ್ ಪೊಲೀಸರು'!

|

ವಂಚಕರಿಗೆ ಮಾನವೀಯತೆಯೇ ಇಲ್ಲ ಎಂಬುದನ್ನು ನಾವೇನು ಹೇಳಬೇಕಿಲ್ಲ. ಆದರೆ, ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರ ಹೆಸರಿನಲ್ಲಿ ವಂಚನೆ ನಡೆಸಿದರೆ ಅದಕ್ಕೆ ನಾವೇನು ಹೇಳಬೇಕು ಹೇಳಿ?. ಹೌದು, ಸಿಐಡಿ ಸೈಬರ್ ಕ್ರೈಮ್ ಪೊಲೀಸರು ಮತ್ತು ಮಾಧ್ಯಮಗಳ ಜನಜಾಗೃತಿ ಹೊರತಾಗಿಯೂ ರಾಜ್ಯದಲ್ಲಿ ಕಳೆದ ಮೂರೂವರೆ ತಿಂಗಳಲ್ಲಿ 77 ಜನರಿಗೆ ವಂಚಿಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದ ಸೈಬರ್ ಪೊಲೀಸರೋರ್ವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.

ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರ ಸೋಗಿನಲ್ಲಿ ಟೋಪಿ ಹಾಕುವ ಸೈಬರ್ ಖದೀಮರ ಉಪಟಳ ಎಲ್ಲೆ ಮೀರಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವಂಥ ಸೈನಿಕರ ಫೋಟೋ, ಹೆಸರು, ಗುರುತಿನ ಚೀಟಿ ಹಾಗೂ ಸೇನಾ ಶಿಬಿರ, ಕಚೇರಿಗಳ ಫೋಟೋ ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುವ ತಾಣ ಸಕ್ರೀಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಜಾಗೃತಿ ವಹಿಸಬೇಕು. ನಂಬಿಕೆ ಇಟ್ಟು ವಂಚಿತರಾಗಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

77 ಜನರಿಗೆ ವಂಚಿಸಿದ ಆಘಾತಕಾರಿ ಪ್ರಕರಣಕ್ಕೆ ಕಣ್ಣೀರಿಟ್ಟ 'ಸೈಬರ್ ಪೊಲೀಸರು'!

ಯೋಧರ ಬಗ್ಗೆ ಗೌರವ ಹಾಗೂ ಹೆಮ್ಮೆ ಹೊಂದಿರುವ ಕಾರಣಕ್ಕೆ ನಾಗರಿಕರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ವಂಚಕರು ಒಎಲ್​ಎಕ್ಸ್ ಮತ್ತು ಕ್ವಿಕರ್​ನಲ್ಲಿ ಕಾರು, ಬೈಕು ಮಾರಾಟಕ್ಕೆ ಇರುವ ಫೋಟೊಗಳನ್ನು ಹಾಕಿ, ಕರೆ ಮಾಡಿದವರಿಗೆ ಸೈನಿಕನೆಂದು ನಕಲಿ ಐಡಿ ಕಾರ್ಡ್​ನ್ನು ವಾಟ್ಸ್​ಆಪ್ ಮಾಡಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ನಂತರ ಕಡಿಮೆ ಬೆಲೆಗೆ ಅವುಗಳನ್ನು ಮಾರುವುದಾಗಿ ಹೇಳಿ, ಸೇನಾ ಕ್ಯಾಂಪ್​ನಿಂದ ಹೊರಬರಲು ಸಾಧ್ಯವಿಲ್ಲವಾದ್ದರಿಂದ ಆನ್​ಲೈನ್ ಹಣ ವರ್ಗಾವಣೆ ಮಾಡಲು ಕೇಳಿಕೊಳ್ಳುತ್ತಾರೆ.

ಕಡಿಮೆ ಬೆಲೆಗೆ ಕಾರು ಸಿಗುತ್ತದೆಂದು ಖರೀದಿಗೆ ಮುಂದಾಗುವ ನಾಗರಿಕರು, ಯೋಧರ ಬಗ್ಗೆ ಗೌರವ ಹಾಗೂ ಹೆಮ್ಮೆ ಹೊಂದಿರುವ ಕಾರಣಕ್ಕೆ ಆನ್​ಲೈನ್ ಮೂಲಕಹಣ ವರ್ಗಾವಣೆ ಮಾಡುತ್ತಾರೆ. ಆ ಹಣ ವಂಚಕರ ಖಾತೆಗೆ ಹಣ ಬಂದ ಕೂಡಲೇ ಡ್ರಾ ಮಾಡಿಕೊಂಡು ಆರೋಪಿಗಳು ಮೊಬೈಲ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಇಂತಹ ವಂಚನೆಗಳಿಗೆ ಬಲಿಯಾಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

77 ಜನರಿಗೆ ವಂಚಿಸಿದ ಆಘಾತಕಾರಿ ಪ್ರಕರಣಕ್ಕೆ ಕಣ್ಣೀರಿಟ್ಟ 'ಸೈಬರ್ ಪೊಲೀಸರು'!

ಇತ್ತೀಚಿಗೆ ಸೈಬರ್ ಕ್ರಿಮಿನಲ್‌ಗಳು ಈಗ ವಿವಿಧ ರೀತಿಯಲ್ಲಿ ಜನರನ್ನು ವಂಚಿಸಲು ತಯಾರಾಗಿದ್ದಾರೆ. ಈಗೆಲ್ಲಾ ತಂತ್ರಜ್ಞಾನ ಲೋಪದಿಂದ ಆದ ಆನ್‌ಲೈನ್ ವಂಚನೆ ಪ್ರಕರಣಗಳು ಕಡಿಮೆಯಾಗಿದ್ದು, ಜನರು ನೀಡುವ ಅತಿ ಸುರಕ್ಷಿತ ಕೆಲವು ಮಾಹಿತಿಗಳಿಂದ ಈ ವಂಚಕರು ಜನರನ್ನು ಯಾಮಾರಿಸುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು. ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ಕ್ರಿಮಿನಲ್‌ಗಳಿಂದ ನಾವು ಹೇಗೆಲ್ಲಾ ಸುರಕ್ಷಿತವಾಗಿ ಇರಬಹುದು ಎಂಬುದನ್ನು ನಾವು ತಿಳಿಯೋಣ.

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಿಮ್ಮ ಮೊಬೈಲ್ ನಂಬರ್‌ಗೆ ಗಿಫ್ಟ್ ಬಂದಿದೆ. ನಿಮಗೆ ಫಾರಿನ್ ಟ್ರಿಪ್ ಟಿಕೆಟ್ ಉಚಿತವಾಗಿ ಸಿಕ್ಕಿದೆ. ಉತ್ತಮ ಕೆಲಸ ಕೊಡಿಸುತ್ತೇನೆ ಎಂದು ಫೋನ್ ಅಥವಾ ಇಮೇಲ್‌ಗಳ ಮೂಲಕ ಸಂಪರ್ಕಿಸುವವರ ಬಗ್ಗೆ ಎಚ್ಚರವಾಗಿ. ಅವರೆಲ್ಲರೂ ನಿಮ್ಮ ಬಳಿ ಹಣವನ್ನು ದೂಚುವ ಸಲುವಾಗಿಯೇ ನಾಟಕ ಮಾಡುತ್ತಿರುತ್ತಾರೆ. ಇಂತಹ ಮೇಲ್‌ಗಳಿಗೆ ತಲೆಕೆಡಿಸಿಕೊಳ್ಳಲೇಬೇಡಿ.

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿದ್ದು ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ ಎಂಬುದನ್ನು ನೀವು ತಿಳಿದಿರಿ.

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಅಥವಾ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಯಾರಿಗೂ ನಿಮ್ಮ ಪಿನ್ ಮತ್ತು ಒಟಿಪಿಯನ್ನು ನೀಡಲೇಬೇಡಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಅಥವಾ ಒಟಿಪಿ ಸಂಖ್ಯೆ ಸಿಕ್ಕರೆ ಸಾಕು ನಿಮ್ಮ ಹಣಕ್ಕೆ ಪಂಗನಾಮ ಹಾಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ಸಂಖ್ಯೆ ನಿಮ್ಮನ್ನು ಬಿಟ್ಟು ಅನ್ಯರಿಗೆ ತಿಳಿಯಲೇಬಾರದು.

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಸಿಗುವ ಎಲ್ಲಾ ವಿಷಯಗಳು ಸಹ ನಿಜ ಎಂದು ನಂಬಬೇಡಿ. ಗೂಗಲ್‌ನಲ್ಲಿ ಖಾಸಾಗಿ ಜನರು ಸಹ ಮಾಹಿತಿಯನ್ನು ಎಡಿಟ್ ಮಾಡುವ ಆಯ್ಕೆ ಇದೆ. ಕೆಲವು ವೆಬ್‌ಸೈಟ್‌ಗಳು ನಂಬಿಕೆ ಬರುವಂತಹ ಬರಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತವೆ. ಹೀಗೆ ಮಾಡಿ ನಿಮ್ಮಿಂದ ಖಾಸಾಗಿ ಮಾಹಿತಿಯನ್ನು ಸಂಗ್ರಹಿಸುತ್ತವೆ ಎಂಬುದು ಗೊತ್ತಿರಲಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪ್ರಪಂಚದಲ್ಲಿ ಈಗ ಸುರಕ್ಷಿತ ಪಾಸ್‌ವರ್ಡ್‌ಗಳೇ ಮುಖ್ಯ. ಹಾಗಾಗಿ, ಯಾವಾಗಲೂ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ಬದಲಿಸುತ್ತಿರಿ. ಹೀಗೆ ಮಾಡುವುದರಿಂದ ಸೈಬರ್ ಕಳ್ಳರಿಗೆ ನಿಮ್ಮ ಪಾಸ್‌ವರ್ಡ್ ಕದಿಯಲು ಸುಲಭ ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದಿರಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ನೀವು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಅವುಗಳ ಸೆಕ್ಯುರಿಟಿ ಬಗ್ಗೆ ಎಚ್ಚರವಾಗಿರಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿದರೆ ಒಳ್ಳೆಯದು. ಇದರಿಂದ ಸೈಬರ್ ಫೈಲ್‌ಗಳು ನಿಮ್ಮ ಡಿವೈಸ್ ಅನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
Bengaluru: Impersonation, identity theft most common cyber crimes. cyber frauds in the name of soldier in karnataka. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X