ಬೆಂಗಳೂರಿಗರೆ ವಿದ್ಯುತ್‌ ಬಿಲ್‌ ಪಾವತಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!

|

ಬೆಂಗಳೂರಿಗರೆ ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕವನ್ನು ತೆಗೆದುಹಾಕುವುದಾಗಿ ಸಂದೇಶ ಬರುತ್ತಿದೆಯಾ? ಕೂಡಲೇ ನಿಮ್ಮ ವಿದ್ಯುತ್‌ ಬಿಲ್‌ ಪಾವತಿಸಿ ಇಲ್ಲದಿದ್ದರೆ ನಿಮ್ಮ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಸಂದೇಶವನ್ನು ಸ್ವಿಕರಿಸಿದ್ದೀರಾ. ಅದಕ್ಕೂ ಮೊದಲು ಈ ಲೇಖನವನ್ನು ಸಂಪೂರ್ಣವಾಗಿ ಓದುವುದು ಉತ್ತಮ. ಯಾಕಂದ್ರೆ ಬೆಂಗಳೂರಿನಲ್ಲಿ ಬೆಸ್ಕಾಂ ಹೆಸರಿನಲ್ಲಿ ಸಂದೇಶ ಕಳುಹಿಸಿ ಲಕ್ಷಾಂತರ ರೂ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ವಿದ್ಯುತ್‌ ಬಿಲ್‌

ಹೌದು, ವಿದ್ಯುತ್‌ ಬಿಲ್‌ ಪಾವತಿಸಿ ಎಂಬ ಎಚ್ಚರಿಕೆ ಸಂದೇಶದ ಹೆಸರಿನಲ್ಲಿ ಈಗಾಗಲೇ ಹಲವು ವಂಚನೆಗಳು ನಡೆದಿವೆ. ಇದೀಗ ಬೆಂಗಳೂರಿನಲ್ಲಿಯೂ ಕೂಡ ಇದೇ ಮಾದರಿಯ ವಿದ್ಯುತ್‌ ಬಿಲ್‌ ಸ್ಕ್ಯಾಮ್‌ ನಡೆದಿದೆ. ಈಗಾಗಲೇ ಕರೆಂಟ್‌ ಬಿಲ್‌ ಹೆಸರಿನಲ್ಲಿ ಅನೇಕ ನಿವಾಸಿಗಳು ಸೈಬರ್‌ ವಂಚಕರಿಂದ ಮೋಸ ಹೋಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿಯೊಬ್ಬರು ಇಂತಹದ್ದೆ ವಂಚನೆಗೆ ಒಳಗಾಗಿದ್ದಾರೆ. ಹಾಗಾದ್ರೆ ಬೆಂಗಳೂರಿನಲ್ಲಿ ನಡೆದಿರುವ ವಿದ್ಯುತ್‌ ಬಿಲ್‌ ಹಗರಣದ ವಿವರ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿದ್ಯುತ್‌ ಬಿಲ್‌

ಬೆಂಗಳೂರಿನಲ್ಲಿಯೂ ಕೂಡ ವಿದ್ಯುತ್‌ ಬಿಲ್‌ ಸ್ಕ್ಯಾಮ್‌ ಇದೀಗ ಭಾರಿ ಸದ್ದು ಮಾಡಿದೆ. ಬೆಂಗಳೂರಿನ ಚಾಮರಾಜಪೇಟೆ ನಿವಾಸ ಅರವಿಂದ್ ಕುಮಾರ್ ಎಂಬ 56 ವರ್ಷದ ಉದ್ಯಮಿ ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಹೋಗಿ 4.9 ಲಕ್ಷ ರೂ.ಕಳೆದುಕೊಂಡಿದ್ದಾರೆ. ವಂಚಕರು ಬೆಸ್ಕಾಂ ಅಧಿಕಾರಿಯ ಸೋಗಿನಲ್ಲಿ ವಿದ್ಯುತ್‌ ಬಿಲ್‌ ಪಾವತಿಸಿ ಇಲ್ಲದಿದ್ದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದನ್ನು ನಂಬಿದ ಅರವಿಂದ್‌ ಕುಮಾರ್‌ ಹಣ ಕಳೆದುಕೊಂಡಿದ್ದಾರೆ.

ಬೆಸ್ಕಾಂ

ಬೆಸ್ಕಾಂ ಅಧಿಕಾರಗಳ ರೀತಿಯಲ್ಲಿ ಕರೆ ಮಾಡಿರುವ ವಂಚಕರು ವಿದ್ಯುತ್‌ ಬಿಲ್‌ ಪಾವತಿಸಲು ಹೇಳಿ ನಂತರ ಲಿಂಕ್‌ ಒಂದನ್ನು ಕಳುಹಿಸ್ದಾರೆ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿರುವ ಅರವಿಂದ್‌ ಕುಮಾರ್‌ ಅದರಲ್ಲಿ ನೀಡಿರುವ ಸೂಚನೆಗಳನ್ನು ಪಾವತಿಸಿ ಬ್ಯಾಂಕ್‌ ವಿವರಗಳನ್ನು ನಮೂದಿಸಿದ್ದಾರೆ. ಕೂಡಲೇ ವಂಚಕರು ಅರವಿಂದ್‌ ಕುಮಾರ್‌ ಅವರ ಬ್ಯಾಂಕ್ ಖಾತೆಗೆ ಪ್ರವೇಶ ನೀಡಿದ್ದಾರೆ, ಅಲ್ಲದೆ 4.9 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

ವಿದ್ಯುತ್‌

ವಿದ್ಯುತ್‌ ಬಿಲ್‌ ಹೆಸರಿನಲ್ಲಿ ನಡೆದಿರುವ ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಈ ವಂಚನೆ ಹೇಗೆ ನಡೆದಿದದೆ ಅನ್ನೊದು ಇನ್ನು ಪ್ರಶ್ನೆಯಾಗಿಯೆ ಉಳಿದಿದೆ. ಏಕೆಂದರೆ ಅರವಿಂದ್ ಅವರು ವಂಚಕರು ನೀಡಿರದ ಲಿಂಕ್‌ ಮೂಲಕ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಅದರಲ್ಲಿ ತಮ್ಮ ಬ್ಯಾಂಕ್‌ ಖಾತೆ ವಿವರ ನಮೂದಿಸಿದ್ದಾರೆ. ಈ ಅಪ್ಲಿಕೇಶನ್‌ ಮೂಲಕ ವಂಚಕರು ಟೀಮ್‌ವಿವರ್‌ ಕ್ವಿಕ್‌ ಸಪೋರ್ಟ್‌ ನಂತಹ ಅಪ್ಲಿಕೇಶನ್‌ ಮೂಲಕ ಅರ್‌ವಿಂದ ಅವರ ಸ್ಮಾರ್ಟ್‌ಫೋನ್‌ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ ಎನ್ನಲಾಗಿದೆ.

ವಿದ್ಯುತ್ ಬಿಲ್ ಸ್ಕ್ಯಾಮ್‌ ವಂಚಕರನ್ನು ಗುರುತಿಸುವುದು ಹೇಗೆ?

ವಿದ್ಯುತ್ ಬಿಲ್ ಸ್ಕ್ಯಾಮ್‌ ವಂಚಕರನ್ನು ಗುರುತಿಸುವುದು ಹೇಗೆ?

* ಹಣ ನೀಡದೆ ಹೋದರೆ ತಕ್ಷಣವೇ ನಿಮ್ಮ ವಿದ್ಯುತ್ ಕಡಿತಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇಂತಹ ಬೆದರಿಕೆಗಳನ್ನು ಯಾವುದೇ ಪೂರೈಕದಾರ ನಿಗಮ ಫೋನ್‌ ಕರೆಯಲ್ಲಿ ತಿಳಿಸುವುದಿಲ್ಲ. ಬದಲಿಗೆ ವಿದ್ಯುತ್‌ ಪೂರೈಕೆದಾರರ ನಿಗಮದ ಸಿಬ್ಬಂದಿ ನಿಮ್ಮ ಮನೆಯ ಬಳಿಗೆ ಬಂದು ಪರಿಸ್ಥಿತಿ ವಿವರಿಸುವ ಪ್ರಯತ್ನ ಮಾಡುತ್ತಾರೆ.

* ಇನ್ನು ನಿಮಗೆ ಕರೆ ಮಾಡುವ ವಂಚಕರಿಗೆ ನೀವು ಪಾವತಿಸಬೇಕಾದ ಪೂರ್ತಿ ಬಿಲ್ಲಿಂಗ್‌ ವಿವರ ಅವರ ಬಳಿ ಇರುವುದಿಲ್ಲ. ಅಂತಹವರ ಜೊತೆ ನೀವು ಮಾತನಾಡದೆ ಇರುವುದು ಸೂಕ್ತ.

ಯಾವಾಗಲೂ

* ವಂಚಕರು ಯಾವಾಗಲೂ ಆನ್‌ಲೈನ್‌ನಲ್ಲಿ ಹಣವನ್ನು ಪಾವತಿಸಲು ಕೇಳುತ್ತಾರೆ. ಇದು UPI ಮೂಲಕ ಆಗಿರಬಹುದು ಅಥವಾ ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ಕೇಳಬಹುದು ಇಂತಹ ಸಮಯದಲ್ಲಿ ನೀವು ಎಚ್ಚರ ವಹಿಸುವುದು ಸೂಕ್ತ.

Best Mobiles in India

English summary
Bengaluru residents have fallen into the trap of electricity bill scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X