ದೀಪಾವಳಿ ಪ್ರಯುಕ್ತ 2,500ರೂ. ಒಳಗೆ ನೀವು ನೀಡಬಹುದಾದ ಬೆಸ್ಟ್‌ ಗಿಫ್ಟ್‌ಗಳು!

|

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಇದೇ ಸಂದರ್ಭದಲ್ಲಿ ದೀಪಾವಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಇ-ಕಾಮರ್ಸ್‌ ತಾಣಗಳು ಹಬ್ಬದ ಸೀಸನ್‌ನ ಸೇಲ್‌ಗಳನ್ನು ನಡೆಸುತ್ತಿವೆ. ಈ ವಿಶೇಷ ಸೇಲ್‌ಗಳಲ್ಲಿ ನೀವು ಖರೀದಿಸುವ ಪ್ರತಿ ಪ್ರಾಡಕ್ಟ್‌ನ ಮೇಲೂ ವಿಶೇಷ ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ದೀಪಾವಳಿ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡುವುದಕ್ಕಾಗಿ ಶಾಪಿಂಗ್‌ ಮಾಡಲು ಬಯಸಿದರೆ ಇ-ಕಾಮರ್ಸ್‌ ತಾಣಗಳು ಉತ್ತಮ ಆಯ್ಕೆಯಾಗಿವೆ.

ದೀಪಾವಳಿ

ಹೌದು, ದೀಪಾವಳಿ ಸಂಭ್ರಮವನ್ನು ಇ-ಕಾಮರ್ಸ್‌ ತಾಣಗಳು ಇನ್ನಷ್ಟು ಕಲರ್‌ಫುಲ್‌ ಮಾಡಿವೆ. ಈ ಸನ್ನಿವೇಶದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನೀಡಬಹುದಾದ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡಲಾಗ್ತಿದೆ. ಅಲ್ಲದೆ ಐಸಿಐಸಿಐ ಬ್ಯಾಂಕ್, ಸಿಟಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 10% ವರೆಗೆ ತ್ವರಿತ ರಿಯಾಯಿತಿ ಕೂಡ ಲಭ್ಯವಾಗ್ತಿದೆ. ಹಾಗಾದ್ರೆ ದೀಪಾವಳಿ ಸಂಭ್ರಮಕ್ಕೆ ನೀವು ಉಡುಗೊರೆ ನೀಡಲು ಬಯಸಿದರೆ ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಗ್ಯಾಜೆಟ್‌ಗಳ ವಿವರ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

RGB LED ಲ್ಯಾಂಪ್‌

RGB LED ಲ್ಯಾಂಪ್‌

ದೀಪಾವಳಿ ಪ್ರಯುಕ್ತ ಆಕರ್ಷಕವಾದ ಟೆಂಬಲ್‌ ದೀಪವನ್ನು ಉಡುಗೊರೆ ನೀಡಲು ಬಯಸಿದರೆ ಓಡ್ಜೆನಿ ಕ್ರಿಸ್ಟಲ್ ರೋಸ್ ಡೈಮಂಡ್ 16 ಬಣ್ಣ Rgb ಚೇಂಜಿಂಗ್ ಮೋಡ್ ಲೆಡ್ ಲ್ಯಾಂಪ್ ಸೂಕ್ತವಾಗಿದೆ. ಇದು ರಿಮೋಟ್‌ ಕಂಟ್ರೋಲ್‌ ಟೇಬಲ್‌ ಲ್ಯಾಂಪ್‌ ಆಗಿದ್ದು, ನೋಡಲು ಆಕರ್ಷಕವಾಗಿದೆ. ಸಿಂಗಲ್‌ ಚಾರ್ಜ್‌ನಲ್ಲಿ 8 ಗಂಟೆಗಳವರೆಗಿನ ಬಾಳಿಕೆ ನಿಡಲಿದೆ. ಇದು ಮೂರು ಹಂತದ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಡಿವೈಸ್‌ ಅಮೆಜಾನ್‌ನಲ್ಲಿ 64% ಡಿಸ್ಕೌಂಟ್‌ ಪಡೆದಿದ್ದು, ರಿಯಾಯಿತಿ ದರದಲ್ಲಿ 1,299ರೂ. ಬೆಲೆಗೆ ಲಭ್ಯವಾಗಲಿದೆ.

ಸರಿಗಮ ಕಾರ್‌ವಾನ್‌ ಮಿನಿ ಹಿಂದಿ 2.0- ಮ್ಯೂಸಿಕ್ ಪ್ಲೇಯರ್

ಸರಿಗಮ ಕಾರ್‌ವಾನ್‌ ಮಿನಿ ಹಿಂದಿ 2.0- ಮ್ಯೂಸಿಕ್ ಪ್ಲೇಯರ್

ದೀಪಾವಳಿಯಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನೀಡಬಹುದಾದ ಗಿಫ್ಟ್‌ಗಳಲ್ಲಿ ಸರಿಗಮ ಕಾರ್ವಾನ್ ಮಿನಿ ಹಿಂದಿ 2.0- ಮ್ಯೂಸಿಕ್ ಪ್ಲೇಯರ್ ಕೂಡ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಇದು ಅಮೆಜಾನ್‌ ಸೇಲ್‌ನಲ್ಲಿ 19% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ ಈ ಡಿವೈಸ್‌ ಅನ್ನು 2190ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ನೀವು ನಿಮ್ಮ ವೈಯಕ್ತಿಕ ಹಾಡುಗಳ ಸಂಗ್ರಹವನ್ನು ಆನಂದಿಸಲು ನಿಮಗೆ ಅವಕಾಶವಿದೆ. ಇದಕ್ಕಾಗಿ USB ಮತ್ತು ಬ್ಲೂಟೂತ್ ಮೋಡ್‌ಗಳನ್ನು ಸಹ ನೀಡಲಾಗಿದೆ.

ಒನ್‌ಪ್ಲಸ್‌ ಸ್ಮಾರ್ಟ್ ಬ್ಯಾಂಡ್

ಒನ್‌ಪ್ಲಸ್‌ ಸ್ಮಾರ್ಟ್ ಬ್ಯಾಂಡ್

ಒನ್‌ಪ್ಲಸ್‌ ಸ್ಮಾರ್ಟ್‌ಬ್ಯಾಂಡ್‌ ಅನ್ನು ನೀವು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ 1,499ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ 1.1 ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಇದು 100mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 14 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಈ ಡಿವೈಸ್‌ 5ATM ವಾಟರ್‌ ಪ್ರೂಫ್‌ ಅನ್ನು ಹೊಂದಿದ್ದು, 13 ವ್ಯಾಯಾಮ ವಿಧಾನಗಳನ್ನು ಹೊಂದಿದೆ.

LTETTES ಫ್ಲೇಮ್‌ಲೆಸ್ ಲೆಡ್ ಗ್ಲಾಸ್

LTETTES ಫ್ಲೇಮ್‌ಲೆಸ್ ಲೆಡ್ ಗ್ಲಾಸ್

LTETTES ಫ್ಲೇಮ್‌ಲೆಸ್ ಲೆಡ್ ಗ್ಲಾಸ್ ಅಮೇಜಾನ್‌ನಲ್ಲಿ 1,995ರೂ. ಬೆಲೆಗೆ ಸೇಲ್‌ ಆಗ್ತಿದೆ. ಇನ್ನು ಈ ಗಾಜಿನ ಕಪ್ ಮೇಣದಬತ್ತಿಗಳನ್ನು Aa ಬ್ಯಾಟರಿಯಿಂದ ಚಾಲಿತಗೊಳಿಸಲಾಗುತ್ತದೆ. ಇದನ್ನು ರಿಮೋಟ್ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಇದು ಮಿನುಗುವ ಮತ್ತು ನಿರಂತರ ಬೆಳಕು, ಮತ್ತು ನಾಲ್ಕು ಬ್ರೈಟ್‌ನೆಸ್‌ ಲೆವೆಲ್‌ ಅನ್ನು ಹೊಂದಿರಲಿದೆ.

ವಿಪ್ರೋ 9W LED ಸ್ಮಾರ್ಟ್ ಕಲರ್ ಬಲ್ಬ್‌

ವಿಪ್ರೋ 9W LED ಸ್ಮಾರ್ಟ್ ಕಲರ್ ಬಲ್ಬ್‌

ವಿಪ್ರೋ ಬಲ್ಬ್ ಕಾಂಬೊದೊಂದಿಗೆ ಅಮೆಜಾನ್‌ ಎಕೋ ಡಾಟ್‌ ಅನ್ನು ಅಮೆಜಾನ್‌ನಲ್ಲಿ 2,499ರೂ. ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

English summary
Best 5 gadgets to buy under Rs.2,500 as Diwali gifts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X