ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಆಪಲ್‌ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳು!

|

ನೀವು ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳು ಖರೀದಿಸಬೇಕಾ? ನೀವು ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳಲ್ಲಿ ಯಾವುದು ಅತ್ಯುತ್ತಮ ಎಂದು ಹುಡುಕುತ್ತೀದ್ದೀರಾ? ಒಂದು ವೇಳೆ ನೀವು ಆಪಲ್‌ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ ಖರೀದಿಸಲು ಬಯಸಿದರೆ ನಿಮ್ಮ ಆಯ್ಕೆ ಯಾವುದು ಅನ್ನೊದು ಪ್ರಮುಖವಾಗಲಿದೆ. ಏಕೆಂದರೆ ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳು ದುಬಾರಿ ಬೆಲೆ ಹೊಂದಿರುವುದರಿಂದ ನಿಮ್ಮ ಬಳಕೆಯ ಆಧಾರದ ಮೇಲೆ ಲ್ಯಾಪ್‌ಟಾಪ್‌ ಆಯ್ಕೆ ಮಾಡುವುದು ಸೂಕ್ತವಾಗಲಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳ ವಿಚಾರದಲ್ಲಿ ಮೊದಲು ಗಮನ ಸೆಳೆಯುವ ವಿಚಾರವೆಂದರೆ ಅದರ ಪ್ರೊಸೆಸರ್‌ ಸಾಮರ್ಥ್ಯ. ಜೊತೆಗೆ ಅದು ಒಳಗೊಂಡಿರುವ ಹೊಸ ಮಾದರಿಯ ಟೆಕ್ನಾಲಜಿ, ಇದಲ್ಲದೆ ಅದರ ಬೆಲೆ ಎಷ್ಟಿದೆ ಅನ್ನೊದು ಪ್ರಮುಖವಾಗುತ್ತದೆ. ಆದರಿಂದ ನೀವು ಅಗತ್ಯಗಳಿಗೆ ಅನುಗುಣವಾಗಿ ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದರೆ ಉತ್ತಮ ಎನಿಸಲಿದೆ. ಹಾಗಾದ್ರೆ ಭಾರತದಲ್ಲಿ ಪ್ರಸ್ತುತ ನೀವು ಖರೀದಿಸಬಹುದಾದ ಆಪಲ್‌ ಕಂಪೆನಿಯ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ ಮ್ಯಾಕ್‌ಬುಕ್ ಏರ್ (M1 ಚಿಪ್)

ಆಪಲ್‌ ಮ್ಯಾಕ್‌ಬುಕ್ ಏರ್ (M1 ಚಿಪ್)

ಮೊದಲ ಬಾರಿಗೆ ಆಪಲ್‌ ಕಂಪೆನಿಯ ಲ್ಯಾಪ್‌ಟಾಪ್‌ ಖರೀದಿಸಲು ಬಯಸುವವರಿಗೆ ಈ ಲ್ಯಾಪ್‌ಟಾಪ್‌ ಸೂಕ್ತವಾಗಲಿದೆ. ಇದಲ್ಲದೆ ಪ್ರಯಾಣಿಸುವಾಗ ಲ್ಯಾಪ್‌ಟಾಪ್‌ ಬಳಸುವುದಕ್ಕೆ ಇದು ಸೂಕ್ತವಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 13.3 ಇಂಚಿನ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದು M1 ಪ್ರೊಸೆಸರ್‌ ಅನ್ನು ಹೊಂದಿದ್ದು, ಇಂಟೆಲ್‌ ಪ್ರೊಸೆಸರ್‌ಗಳಿಗಿಂತ ಹೆಚ್ಚಿನ ವೇಗವನ್ನು ನೀಡಲಿದೆ. ಹಾಗೆಯೇ 8GB RAM ಮತ್ತು 512GB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಅನ್ನು ಪ್ರೀಮಿಯಂ ವಸ್ತುಗಳಿಂದ ಮಾಡಿರುವುದರಿಂದ ಹೆಚ್ಚಿನ ಬಾಳಿಕೆ ಬರಲಿದೆ. ಇದು ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ಟಚ್ ಐಡಿಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನ ಬ್ಯಾಟರಿಯು ಒಂದು ದಿನದ ಬಾಳಿಕೆ ಅವಧಿಯನ್ನು ಹೊಂದಿದ್ದು, 100% ಚಾರ್ಜ್ ಮಾಡಲು 1 ಗಂಟೆಯ ಸಮಯ ಬೇಕಾಗುತ್ತದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 1,17,900ರೂ.ಆಗಿದೆ.

ಆಪಲ್‌ ಮ್ಯಾಕ್‌ಬುಕ್‌ ಪ್ರೊ

ಆಪಲ್‌ ಮ್ಯಾಕ್‌ಬುಕ್‌ ಪ್ರೊ

ಆಪಲ್‌ ಕಂಪೆನಿಯ ಮ್ಯಾಕ್‌ಬುಕ್‌ ಪ್ರೊ ವೃತ್ತಿಪರ ಬಳಕೆದಾರರಿಗಾಗಿ ಸೂಕ್ತವಾದ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್‌ 13.3 ಇಂಚಿನ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕೂಡ ಮ್ಯಾಕ್‌ಬುಕ್‌ ಏರ್‌ ಮಾದರಿಯಲ್ಲಿಯೇ M1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಇದು ಫ್ಯಾನ್, ಸುಧಾರಿತ ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್‌ಗಳು ಮತ್ತು ದೀರ್ಘ ಬ್ಯಾಟರಿ ಅವಧಿಯೊಂದಿಗೆ ಬರಲಿದೆ. ಈ ಲ್ಯಾಪ್‌ಟಾಪ್‌ 8-ಕೋರ್ CPU ಸಪೋರ್ಟ್‌ ಹೊಂದಿದ್ದು, 2.8x ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಲ್ಯಾಪ್‌ಟಾಪ್‌ ಪ್ರಸ್ತುತ ಅಮೆಜಾನ್‌ನಲ್ಲಿ 1,22,900ರೂ. ಬೆಲೆಯಲ್ಲಿ ದೊರೆಯಲಿದೆ.

ಆಪಲ್ ಮ್ಯಾಕ್‌ಬುಕ್ ಪ್ರೊ 14

ಆಪಲ್ ಮ್ಯಾಕ್‌ಬುಕ್ ಪ್ರೊ 14

ಆಪಲ್ ಮ್ಯಾಕ್‌ಬುಕ್ ಪ್ರೊ 14 ಲ್ಯಾಪ್‌ಟಾಪ್‌ ಹೆಚ್ಚಿನ ಪವರ್‌ ಬಯಸುವವರಿಗೆ ಸೂಕ್ತವಾಗಿದೆ. ಇದು 14 ಇಂಚಿನ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಡೈನಾಮಿಕ್ ರೇಂಜ್‌ ಮತ್ತು ಕಾಂಟ್ರಾಸ್ಟ್ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ M1 ಪ್ರೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 16 GB RAM ಮತ್ತು 8TB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ ಅನ್ನು ನೀವು 2,24,900ರೂ. ಬೆಲೆಯಲ್ಲಿ ಖರೀದಿಸಬಹುದು.

ಆಪಲ್‌ ಮ್ಯಾಕ್‌ಬುಕ್‌ ಪ್ರೊ 16

ಆಪಲ್‌ ಮ್ಯಾಕ್‌ಬುಕ್‌ ಪ್ರೊ 16

ಆಪಲ್‌ ಮ್ಯಾಕ್‌ಬುಕ್‌ ಪ್ರೊ 16 ಲ್ಯಾಪ್‌ಟಾಪ್‌ ಹೈ ಎಂಡ್‌ ಯೂಸರ್ಸ್‌ ಮತ್ತು ಬ್ಯುಸಿನೆಸ್‌ ಬಳಕೆದಾರರಿಗೆ ಸೂಕ್ತವಾದ ಆಯ್ಕೆಯಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಸಾಫ್ಟ್‌ವೇರ್ ಡೆವಲಪರ್‌ಗಳು, ವೃತ್ತಿಪರ ಎಡಿಟರ್ಸ್‌ಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು M1 ಪ್ರೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 10-ಕೋರ್ CPU ಮತ್ತು 16-ಕೋರ್ GPU ಸಪೋರ್ಟ್‌ ಅನ್ನು ಹೊಂದಿದೆ. ಹಾಗೆಯೇ 16GB RAM ಮತ್ತು 512GB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ನಲ್ಲಿ 1080p ಫೇಸ್‌ಟೈಮ್ HD ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇದನ್ನು ನೀವು ಅಮೆಜಾನ್‌ನಲ್ಲಿ ಪ್ರಸ್ತುತ 2,39,900ರೂ. ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

English summary
Best Apple laptops you can buy in 2022 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X