ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬ್ಲೂಟೂತ್‌ ಸ್ಪೀಕರ್ಸ್‌!..ಏನೆಲ್ಲಾ ಆಯ್ಕೆ ಇವೆ?

|

ನೀವೇನಾದರೂ ಸ್ಪೀಕರ್‌ ಖರೀದಿ ಮಾಡಬೇಕು ಎಂದರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಹಲವಾರು ಬ್ರ್ಯಾಂಡ್‌ನ ಡಿವೈಸ್ ಲಭ್ಯ ಇವೆ. ಆದರೆ, ಯಾವ ಬ್ರ್ಯಾಂಡ್‌ನ ಯಾವ ಸ್ಪೀಕರ್‌ ಏನೆಲ್ಲಾ ಫೀಚರ್ಸ್‌ ಪಡೆದಿರುತ್ತವೆ ಎಂಬುದರ ಬಗ್ಗೆ ಕೆಲವರಿಗೆ ತಿಳಿದಿರುವುದಿಲ್ಲ. ಅದರಲ್ಲೂ ಪ್ರಮುಖವಾಗಿ ರಿಟೇಲ್ ಸ್ಟೋರ್‌ಗಳಲ್ಲೂ ಸಹ ನಿಮಗೆ ಡಿವೈಸ್‌ಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡುವುದಿಲ್ಲ. ಈ ಕಾರಣಕ್ಕೆ ಇಲ್ಲಿ ನಿಮಗೆ ಅಗತ್ಯ ಎನಿಸುವ ಸ್ಪೀಕರ್‌ಗಳ ವಿವರಣೆ ನೀಡಿದ್ದೇವೆ.

ಗ್ರಾಹಕರು

ಹೌದು, ಸ್ಪೀಕರ್‌ ಆಯ್ಕೆಯ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆ ವಹಿಸಬೇಕಾಗಿದೆ. ಯಾಕೆಂದರೆ ಕೆಲವು ಸ್ಪೀಕರ್‌ ದೀರ್ಘ ಬಾಳಿಕೆ ಬಂದರೆ, ಇನ್ನೂ ಕೆಲವು ಸ್ಪೀಕರ್‌ಗಳು ಕೆಲ ದಿನಗಳನ್ನೇ ಹಾಳಾಗುವುದುಂಟು. ಸದ್ಯಕ್ಕೆ ವಾಯರ್‌ಲೆಸ್‌ ಬ್ಲೂಟೂತ್‌ ಸ್ಪೀಕರ್‌ ಖರೀದಿ ಮಾಡಬೇಕು ಎಂದು ಕೊಂಡಿರುವವರಿಗೆ ಅದರಲ್ಲೂ ಒಳ್ಳೆಯ ಬೆಲೆಯಲ್ಲಿ ಉತ್ತಮ ಕ್ವಾಲಿಟಿ ಇರುವ ಸ್ಪೀಕರ್ ಕೊಂಡುಕೊಳ್ಳಲು ಮುಂದಾಗುವವರಿಗೆ ಈ ಸ್ಪೀಕರ್‌ ಉತ್ತಮ ಆಯ್ಕೆಯಾಗಿವೆ.

ಸೌಂಡ್‌ಕೋರ್ 3

ಸೌಂಡ್‌ಕೋರ್ 3

ಆಂಕರ್ ಸೌಂಡ್‌ಕೋರ್‌ನ ಸೌಂಡ್‌ಕೋರ್ 3 ಡಿವೈಸ್‌ ಸ್ಟಿರಿಯೊ ಸೌಂಡ್‌ ಆಯ್ಕೆ ಹೊಂದಿದ್ದು, 24 ಗಂಟೆಗಳ ಪ್ಲೇಟೈಮ್, IPX7 ರೇಟಿಂಗ್‌ನ ವಾಟರ್‌ ರೆಸಿಸ್ಟೆಂಟ್‌ ಆಯ್ಕೆ, ಶುದ್ಧ ಟೈಟಾನಿಯಂ ಡಯಾಫ್ರಾಮ್ ಡ್ರೈವರ್‌ ಫೀಚರ್ಸ್‌ ಪಡೆದಿದ್ದು, ಉತ್ತಮ ಬೇಸ್‌ ಸೌಂಡ್ ನೀಡಲಿದೆ. ಜೊತೆಗೆ ಕಸ್ಟಮ್ ಇಕ್ಯೂ ಫೀಚರ್ಸ್‌ ಹೊಂದಿರುವ ಈ ಡಿವೈಸ್‌ ಅನ್ನು ಮನೆ, ಹೊರಾಂಗಣ ಹಾಗೂ ಬೀಚ್‌ ನಲ್ಲಿ ಬಳಕೆ ಮಾಡಬಹುದಾಗಿದೆ.

ಸೌಂಡ್‌ಕೋರ್ ಮೋಷನ್+

ಸೌಂಡ್‌ಕೋರ್ ಮೋಷನ್+

ಸೌಂಡ್‌ಕೋರ್ ಮೋಷನ್+ ಸ್ಪೀಕರ್‌ 30W ಸೌಂಡ್‌ ಔಟ್‌ಪುಟ್‌ ನೀಡಲಿದ್ದು, ಉತ್ತಮವಾದ ಆಡಿಯೋಗಾಗಿ aptX ಕೊಡೆಕ್ ಬೆಂಬಲ ಪಡೆದಿದೆ, ಹಾಗೆಯೇ ಬೇಸ್‌ ಆಯ್ಕೆ ಸಹ ಉತ್ತಮವಾಗಿದೆ. ಇನ್ನು ಕಸ್ಟಮ್ ಮಾಡಬಹುದಾದ ಇಕ್ಯೂ ಆಯ್ಕೆಯನ್ನು ಪಡೆದುಕೊಂಡಿದ್ದು, ಅದರಂತೆ ವಾಟರ್‌ಪ್ರೂಫ್ ಫೀಚರ್ಸ್‌ ಸಹ ಪಡೆದಿರುವ ಈ ಡಿವೈಸ್‌ 12 ಗಂಟೆಗಳ ಪ್ಲೇಟೈಮ್ ನೀಡಲಿದೆ. ಇದನ್ನು ಮನೆ ಹಾಗೂ ಆಫೀಸ್‌ ನಲ್ಲಿ ಬಳಕೆ ಮಾಡಬಹುದಾಗಿದೆ.

ಜೆಬಿಎಲ್ ಕ್ಲಿಪ್ 4 (5W)

ಜೆಬಿಎಲ್ ಕ್ಲಿಪ್ 4 (5W)

ಜೆಬಿಎಲ್ ಕ್ಲಿಪ್ 4 (5W) ಬ್ಲೂಟೂತ್‌ ಪೋರ್ಟಬಲ್ ಸ್ಪೀಕರ್, ವಾಟರ್‌ ಹಾಗೂ ಡಸ್ಟ್‌ ಪ್ರತಿರೋದಕವಾಗಿದ್ದು, ಇದಕ್ಕೆ IP67 ರೇಟಿಂಗ್ ನೀಡಲಾಗಿದೆ. ಜೊತೆಗೆ ಫೋನ್, ಟ್ಯಾಬ್ಲೆಟ್ ಅಥವಾ ಯಾವುದೇ ಇತರ ಬ್ಲೂಟೂತ್ ಸಕ್ರಿಯಗೊಳಿಸಿದ ಸಾಧನಕ್ಕೆ ಸಂಪರ್ಕಿಸಿಕೊಳ್ಳಬಹುದಾಗಿದ್ದು, 10 ಗಂಟೆಗಳವರೆಗೆ ಪ್ಲೇಬ್ಯಾಕ್ ನೀಡಲಿದೆ.

ಜೆಬಿಎಲ್ ಫ್ಲಿಪ್ 6

ಜೆಬಿಎಲ್ ಫ್ಲಿಪ್ 6

ಜೆಬಿಎಲ್ ಫ್ಲಿಪ್ 6 ಸ್ಪೀಕರ್ ಸಿಲಿಂಡರ್ ಆಕಾರದ ಶೈಲಿಯನ್ನು ಪಡೆದಿದ್ದು, ಅತ್ಯುತ್ತಮ ಸೌಂಡ್‌ ಔಟ್‌ಪುಟ್‌ ಹಾಗೂ ಡೀಪ್‌ ಬೇಸ್‌ ನೀಡಲಿದೆ. ಇನ್ನು IPX7 ರೇಟಿಂಗ್‌ನ ವಾಟರ್‌ ರೆಸಿಸ್ಟೆಂಟ್‌ಫೀಚರ್ಸ್‌ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 12 ಗಂಟೆಗಳ ವರೆಗೆ ಬಳಕೆ ಮಾಡಬಹುದು. ಇದನ್ನು ಪಾರ್ಟಿ, ಮನೆ, ಹೊರಾಂಗಣ ಮತ್ತು ಪ್ರಯಾಣದ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ.

ಜೆಬಿಎಲ್‌ ಎಕ್ಸ್‌ ಸ್ಟ್ರೀಮ್‌  3

ಜೆಬಿಎಲ್‌ ಎಕ್ಸ್‌ ಸ್ಟ್ರೀಮ್‌ 3

ಜೆಬಿಎಲ್ ಫ್ಲಿಪ್ 6 ಸ್ಪೀಕರ್ ಸಿಲಿಂಡರ್ ಆಕಾರದ ಶೈಲಿಯನ್ನು ಪಡೆದಿದ್ದು, ಅತ್ಯುತ್ತಮ ಸೌಂಡ್‌ ಔಟ್‌ಪುಟ್‌ ಹಾಗೂ ಡೀಪ್‌ ಬೇಸ್‌ ನೀಡಲಿದೆ. ಇನ್ನು IPX7 ರೇಟಿಂಗ್‌ನ ವಾಟರ್‌ ರೆಸಿಸ್ಟೆಂಟ್‌ಫೀಚರ್ಸ್‌ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 12 ಗಂಟೆಗಳ ವರೆಗೆ ಬಳಕೆ ಮಾಡಬಹುದು. ಇದನ್ನು ಪಾರ್ಟಿ, ಮನೆ, ಹೊರಾಂಗಣ ಮತ್ತು ಪ್ರಯಾಣದ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ.

ಜೆಬಿಎಲ್‌ ಪಾರ್ಟಿಬಾಕ್ಸ್ 310

ಜೆಬಿಎಲ್‌ ಪಾರ್ಟಿಬಾಕ್ಸ್ 310

ಜೆಬಿಎಲ್‌ ಪಾರ್ಟಿಬಾಕ್ಸ್ 310 ಸ್ಪೀಕರ್ ಸ್ವಲ್ಪ ಭಾರವಾಗಿದ್ದರೂ ಅದಕ್ಕೆ ತಕ್ಕಂತೆ ಉತ್ತಮ ಸೌಂಡ್‌ ನೀಡಲಿದೆ. ಈ ಡಿವೈಸ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಾಳಾಂತರಿಸುವ ಉದ್ದೇಶಕ್ಕಾಗಿ ಟೆಲಿಸ್ಕೋಪಿಕ್ ಹ್ಯಾಂಡಲ್ ಮತ್ತು ಚಕ್ರಗಳನ್ನು ನೀಡಲಾಗಿದೆ. ಹಾಗೆಯೇ ಆರ್‌ಜಿಬಿ ಲೈಟ್‌ಗಳನ್ನು ಹೊಂದಿರುವುದು ವಿಶೇಷ.

ಟ್ರಿಬಿಟ್ ಸ್ಟಾರ್ಮ್‌ಬಾಕ್ಸ್ ಮೈಕ್ರೋ

ಟ್ರಿಬಿಟ್ ಸ್ಟಾರ್ಮ್‌ಬಾಕ್ಸ್ ಮೈಕ್ರೋ

ಟ್ರಿಬಿಟ್ ಸ್ಟಾರ್ಮ್‌ಬಾಕ್ಸ್ ಮೈಕ್ರೋ ಸ್ಪೀಕರ್‌ 10W ಡ್ರೈವರ್‌ನೊಂದಿಗೆ ದುಂಡಾದ ಮೂಲೆಗಳ ಶೈಲಿಯನ್ನು ಹೊಂದಿದೆ. ಈ ಡಿವೈಸ್‌ ಡೀಪ್‌ ಬೇಸ್‌ ನೀಡಲಿದ್ದು, IP67 ರೇಟಿಂಗ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಪರಿಣಾಮ ನೀವು ಬೀಚ್‌ಗಳು ಮತ್ತು ಪ್ರವಾಸ ಸೇರಿದಂತೆ ಎಲ್ಲಿಗೆ ಬೇಕೆಂದರೂ ಸಹ ಇದನ್ನು ಕೊಂಡೊಯ್ದು ಬಳಕೆ ಮಾಡಬಹುದಾಗಿದೆ. ಪ್ರಮುಖವಾಗಿ ಒಂದು ಪೂರ್ಣ ಚಾರ್ಜ್‌ನಲ್ಲಿ 12 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ.

ಸೋನಿ SRS-XB33

ಸೋನಿ SRS-XB33

ಸೋನಿ SRS-XB33 ಸ್ಪೀಕರ್‌ ಇನ್‌ಬಿಲ್ಟ್‌ ಎಲ್ಇಡಿ ಲೈಟ್‌ ಆಯ್ಕೆಯನ್ನು ಪಡೆದಿದ್ದು, ಬೀಟ್‌ಗೆ ತಕ್ಕಂತೆ ಫ್ಲಾಶ್ ಆಗಲು ಕಸ್ಟಮೈಸ್ ಸಹ ಮಾಡಬಹುದಾಗಿದೆ. ಈ ಡಿವೈಸ್‌ ಸಹ ಡೀಪ್‌ ಬೇಸ್‌ ನೀಡಲಿದ್ದು, IP67 ರೇಟಿಂಗ್‌ ಪಡೆದಿರುವುದರಿಂದ ಇದನ್ನು ಬೀಚ್ ಪಾರ್ಟಿಗಳು ಹಾಗ ಇತರ ಪ್ರವಾಸದ ಸಮಯದಲ್ಲಿ ಬಳಕೆ ಮಾಡಬಹುದಾಗಿದೆ.

UE ಹೈಪರ್‌ಬೂಮ್

UE ಹೈಪರ್‌ಬೂಮ್

UE ಹೈಪರ್‌ಬೂಮ್ ಸ್ಪೀಕರ್‌ ಅನ್ನು ದೊಡ್ಡ ಜನಸಂದಣಿ ಇರುವ ಸ್ಥಳದಲ್ಲೂ ಬಳಕೆ ಮಾಡಬಹುದಾಗಿದೆ. ಇನ್ನು ಹೈಪರ್‌ಬೂಮ್ ಆಪ್ಟಿಕಲ್ ಇನ್‌ಪುಟ್‌ನೊಂದಿಗೆ ಪ್ಯಾಕ್‌ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೆ ಸಂಪರ್ಕಿಸಿಕೊಳ್ಳಬಹುದಾಗಿದೆ. ಹಾಗೆಯೇ ಸ್ಪ್ಲಾಶ್‌ಪ್ರೂಫ್ ಗಾಗಿ IPX4 ರೇಟಿಂಗ್‌ ಪಡೆದಿದೆ. ಜೊತೆಗೆ ಒಂದು ಪೂರ್ಣ ಚಾರ್ಜ್‌ನಲ್ಲಿ 24 ಗಂಟೆಗಳ ವರೆಗೆ ಇದನ್ನು ಬಳಕೆ ಮಾಡಬಹುದು.

Best Mobiles in India

English summary
If you have to buy speakers yourself, there are usually several brands of speakers available in the market. Check out some of the best speakers in this list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X