ಬಜೆಟ್‌ ಬೆಲೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳು!

|

ಟೆಕ್‌ ವಲಯದಲ್ಲಿ ಪೋರ್ಟಬಲ್‌ ಸ್ಪೀಕರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇನ್ನು ಈ ಪೋರ್ಟಬಲ್‌ ಸ್ಪೀಕರ್‌ಗಳನ್ನು ಸುಲಭವಾಗಿ ಕ್ಯಾರಿ ಮಾಡಬಹುದಾಗಿದ್ದು, ಪ್ರಯಾಣದ ಸಂದರ್ಭದಲ್ಲಿಯೂ ನಿಮ್ಮ ನೆಚ್ಚಿನ ಟ್ರ್ಯಾಕ್‌ಗಳನ್ನು ಕೇಳುವುದಕ್ಕೆ ಉತ್ತಮ ಆಯ್ಕೆಯಾಗಿವೆ. ಇವುಗಳಲ್ಲಿ ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ ಬಳಸುವ ಮೂಲಕ ಕಾಲ್‌ ರಿಸೀವ್‌ ಮಾಡಬಹುದಾಗಿರುವುದರಿಂದ ಪೋರ್ಟಬಲ್‌ ಸ್ಪೀಕರ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಪೋರ್ಟಬಲ್‌

ಹೌದು, ಪೋರ್ಟಬಲ್‌ ಸ್ಪೀಕರ್‌ಗಳು ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿವೆ. ಅದರಲ್ಲೂ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯಲು ಬಯಸುವವರು ಜೊತೆಗೊಂದು ಸ್ಪೀಕರ್‌ ಇರಲಿ ಎಂದು ಬಯಸುತ್ತಾರೆ. ಅದರಲ್ಲೂ ಯುವಜನತೆಯ ಪಾಲಿಗೆ ಪೋರ್ಟಬಲ್‌ ಸ್ಪೀಕರ್‌ಗಳು ಹಾಟ್‌ ಫೇವರಿಟ್‌ ಎನಿಸಿಕೊಂಡಿವೆ. ಸದ್ಯ ನೀವು 5,000ರೂ ಗಳಿಗಿಂತ ಕಡಿಮೆ ಬೆಲೆಯಲ್ಲಿ ಪೋರ್ಟಬಲ್ ಸ್ಪೀಕರ್ ಖರೀದಿಸುವುದಾದರೆ ಈ ಲೇಖನದಲ್ಲಿ ಅಂತಹ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

UE ವಂಡರ್‌ಬೂಮ್

UE ವಂಡರ್‌ಬೂಮ್

ಮ್ಯೂಸಿಕ್‌ ಪ್ರಿಯರು ಬಜೆಟ್‌ ಬೆಲೆಯಲ್ಲಿ ಆಯ್ಕೆ ಮಾಡಬಹುದಾದ ಸ್ಪೀಕರ್‌ಗಳಲ್ಲಿ ಯುಇ ವಂಡರ್‌ಬೂಮ್ ಸ್ಪೀಕರ್ ಕೂಡ ಒಂದಾಗಿದೆ. ಈ ಸ್ಪೀಕರ್‌ 10 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಸಾಮರ್ಥ್ಯ ಹೊಂದಿದ್ದು, 20,000KHz ಫ್ರಿಕ್ವೆನ್ಸಿ ರೇಂಜ್‌ ನೀಡಲಿದೆ. ಇದು‌ ಡ್ಯುಯಲ್-ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ ಆದರೆ ಮೈಕ್ರೊಫೋನ್ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಇದರ ಬೆಲೆ ಅಂದಾಜು 3,995ರೂ.ಆಗಿದೆ.

Zeb-ಮ್ಯೂಸಿಕ್ ಬಾಂಬ್

Zeb-ಮ್ಯೂಸಿಕ್ ಬಾಂಬ್

Zeb-ಮ್ಯೂಸಿಕ್ ಬಾಂಬ್ ಸ್ಪೀಕರ್‌ ಐಪಿಎಕ್ಸ್ 5 ವಾಟರ್‌ಪ್ರೂಫ್‌ ರೇಟಿಂಗ್ ಹೊಂದಿದೆ. ಇದು ಬ್ಲೂಟೂತ್, USB, AUX ನಂತಹ ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಪೀಕರ್‌ ಕಂಪ್ಲೀಟ್‌ ಚಾರ್ಜ್‌ನೊಂದಿಗೆ 10 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಜೊತೆಗೆ ಈ ಸ್ಪೀಕರ್‌ನಲ್ಲಿ ಕಾಲಿಂಗ್‌ ಬಟನ್‌ ಅನ್ನು ಸಹ ನೀಡಲಾಗಿದೆ. ಪ್ರಸ್ತುತ ಈ ಸ್ಪೀಕರ್‌ 1,945 ರೂ ಬೆಲೆಯನ್ನು ಹೊಂದಿದೆ.

ಸೋನಿ ಎಸ್‌ಆರ್‌ಎಸ್-ಎಕ್ಸ್‌ಬಿ 13

ಸೋನಿ ಎಸ್‌ಆರ್‌ಎಸ್-ಎಕ್ಸ್‌ಬಿ 13

ಸೋನಿ ಎಸ್‌ಆರ್‌ಎಸ್-ಎಕ್ಸ್‌ಬಿ 13 ಸ್ಪೀಕರ್‌ನ ವಿಶೇಷತೆ ಎಂದರೆ ಇದು ಐಪಿ 67 ರೇಟಿಂಗ್ ವಾಟರ್‌ಪ್ರೂಫ್‌ ಹೊಂದಿರುವುದು. ಇದನ್ನು ಹೊರಾಂಗಣದಲ್ಲಿ ಬಳಸುವುದಕ್ಕೆ ಸೂಕ್ತವಾಗಿದೆ. ಈ ಪೋರ್ಟಬಲ್ ಸ್ಪೀಕರ್ SBC ಮತ್ತು AAC ಬ್ಲೂಟೂತ್ ಕೋಡೆಕ್‌ಗಳ ಬೆಂಬಲದೊಂದಿಗೆ ಬ್ಲೂಟೂತ್ v4.2 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಪೀಕರ್‌ 20,000Hz ವರೆಗಿನ ಫ್ರಿಕ್ವೆನ್ಸಿ ರೇಂಜ್‌ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 16 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದರ ಬೆಲೆ 3,990ರೂ ಬೆಲೆಯನ್ನು ಹೊಂದಿದೆ.

ಬೋಟ್ ಸ್ಟೋನ್ 1400

ಬೋಟ್ ಸ್ಟೋನ್ 1400

ಬೋಟ್ ಸ್ಟೋನ್ 1400 ಸ್ಪೀಕರ್‌ 30W ಸೌಂಡ್‌ ಔಟ್‌ಪುಟ್‌ ಅನ್ನು ನೀಡಲಿದೆ. ಇನ್ನು ಈ ಸ್ಪೀಕರ್ 70 ಎಂಎಂ ಪ್ರೈಮರಿ ಆಡಿಯೋ ಡ್ರೈವರ್ ಮತ್ತು 30 ಎಂಎಂ ಸೆಕೆಂಡರಿ ಆಡಿಯೋ ಡ್ರೈವರ್‌ ಅನ್ನು ಪಡೆದುಕೊಂಡಿದೆ. ಈ ಸ್ಪೀಕರ್‌ Aux ಪೋರ್ಟ್ ಮತ್ತು USB ಪೋರ್ಟ್ ಹೊಂದಿದ್ದು, ಬ್ಲೂಟೂತ್ 4.2 ಕನೆಕ್ಟಿವಿಟಿ ಬೆಂಬಲಿಸಲಿದೆ. ಇನ್ನು ಈ ಸ್ಪೀಕರ್‌ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಏಳು ಗಂಟೆ ಅವಧಿ ಬರಲಿದೆ. ಇನ್ನು ಈ ಸ್ಪೀಕರ್‌ ಬೆಲೆ 4,999ರೂ ಆಗಿದೆ.

Best Mobiles in India

English summary
If you’re looking for a new portable speaker with these features under Rs 5,000, here are some options worth checking out.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X