ಇವು ಈ ವರ್ಷದ ಬೆಸ್ಟ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು!

|

ಇತ್ತಿಚೀನ ದಿನಗಳಲ್ಲಿ ಪೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಒಂದು ರೀತಿಯ ಹವ್ಯಾಸ ಆಗಿ ಬಿಟ್ಟಿದೆ. ಉತ್ತಮ ಗುಣಮಟ್ಟದ ಪೋಟೋ ಹಾಗೂ ವಿಡಿಯೋ ತೆಗೆಯಬೇಕು ಅನ್ನೊ ಹಂಬಲ ಇದ್ದೆ ಇರುತ್ತದೆ. ಇದಕ್ಕೆ ತಕ್ಕಂತೆ ಎಲ್ಲಾ ಸ್ಮಾರ್ಟ್‌ಫೋನ್‌ಗಳು ತಮ್ಮ ಕ್ಯಾಮೆರಾ ಫಿಚರ್ಸ್‌ಗಳನ್ನ ಸುಧಾರಿಸರುವುದಲ್ಲದೆ ಹೆಚ್ಚಿನ ಆಯ್ಕೆಯ ಕ್ಯಾಮೆರಾಗಳನ್ನು ಸಹ ನೀಡಿವೆ. ನೈಟ್‌ಪೋಟೋಗ್ರಫಿ, ವೈಡ್‌ ಆಂಗಲ್‌ ಪೋಟೋಗ್ರಫಿ, ವಿಡಿಯೋ, ಜೂಮ್‌ ಕ್ಯಾಮೆರಾ ಕ್ಯಾಟಗರಿಯಲ್ಲಿ ಕೆಲ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳು ಉತ್ತಮವಾಗಿವೆ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

ಹೌದು ಕ್ಯಾಮೆರಾಗಳು ಸೆರೆ ಹಿಡಿಯುವ ಚಿತ್ರಗಳು ಹಾಗೂ ವಿಡಿಯೋಗಳು ವಸ್ತುಸ್ಥಿತಿಯ ಭಾವನೆಗಳನ್ನ ವ್ಯಕ್ತಪಡಿಸುತ್ತವೆ. ಸುಂದರ ಕ್ಷಣಗಳನ್ನ ಸೆರೆ ಹಿಡಿಯುತ್ತವೆ. ಇಂತಹ ಕ್ಷಣಗಳನ್ನ ಸೆರೆ ಹಿಡಿಯೋದಕ್ಕೆ ಅಂತಾನೆ ಸ್ಮಾರ್ಟ್‌ಫೋನ್‌ ಪ್ರಿಯರು ಉತ್ತಮ ಕ್ಯಾಮೆರಾ ಫಿಚರ್ಸ್‌ ಪೋನ್‌ಗಳನ್ನ ಆಯ್ಕೆ ಮಾಡುತ್ತಾರೆ. ಸಧ್ಯ ಡಿಎಕ್ಸ್‌ಮಾರ್ಕ್ ಈ ವರ್ಷ ಒಟ್ಟು 31 ಸ್ಮಾರ್ಟ್‌ಫೋನ್‌ಗಳನ್ನು ಪರಿಶೀಲಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಪಟ್ಟಿಯನ್ನ ನೀಡಿದೆ. ಈ ಪಟ್ಟಿಯಲ್ಲಿ ಶಿಯೋಮಿ, ಹುವಾವೇ, ಸ್ಯಾಮ್‌ಸಂಗ್ ಮತ್ತು ಆಪಲ್ ನಂತಹ ದೈತ್ಯಕಂಪೆನಿಗಳ ಹೆಸರು ಕೂಡ ಸೇರಿದ್ದು. ಆಯ್ಕೆ ಮಾಡಿರುವ ಪಟ್ಟಿ ಹೇಗಿದೆ ಅನ್ನೊದನ್ನ ತಿಳಿಯೋಣ ಬನ್ನಿ

ದಿ ಬೆಸ್ಟ್‌ ಆಲ್‌ ರೌಂಡರ್‌

ದಿ ಬೆಸ್ಟ್‌ ಆಲ್‌ ರೌಂಡರ್‌

ಕ್ಯಾಮೆರಾಗಳಲ್ಲಿ ಉತ್ತಮ ಪೋಟೋ ಹಾಗೂ ವಿಡಿಯೋಗ್ರಫಿ ಎರಡನ್ನು ಸೆರೆ ಹಿಡಿಯಬಲ್ಲ ದಿ ಬೆಸ್ಟ್‌ ಆಲ್‌ ರೌಂಡರ್‌ ವಿಭಾಗವನ್ನ ಹುವಾವೇ ಮೇಟ್ 30 ಪ್ರೊ ಮತ್ತು ಶಿಯೋಮಿ CC9 ಪ್ರೊ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಪಡೆದುಕೊಂಡಿವೆ. ಹುವಾವೆ ಮೇಟ್‌ 30 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 40ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಶಿಯೋಮಿ CC9 ಪ್ರೊ ಪ್ರೀಮಿಯಂ ಕ್ವಾಡ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 108MP ಹೊಂದಿದೆ.

ವಿಡಿಯೋಗ್ರಫಿ ಕೇಟಗರಿ

ವಿಡಿಯೋಗ್ರಫಿ ಕೇಟಗರಿ

ಇನ್ನು ವಿಡಿಯೋಗ್ರಫಿಯನ್ನ ಮಾಡುವವರಿಗೆ ಆಪಲ್‌ ಐಫೋನ್‌ 11ಪ್ರೋ ಮ್ಯಾಕ್ಸ್‌ ಅತ್ಯುತ್ತಮವಾದುದ್ದಾಗಿದೆ. ಇದರಲ್ಲಿರುವ ಹೆಚ್‌ಡಿಆರ್‌ ಗುಣಮಟ್ಟ ಇನ್ನುಳಿದ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿದ್ದು ವಿಡಿಯೋಗ್ರಫಿಗೆ ಹೇಳಿ ಮಾಡಿಸಿದಂತಿದೆ. ಆಪಲ್‌ ಐಫೋನ್‌ 11ಪ್ರೋ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ ಆಪ್ಗ್ ಹೊಂದಿದ್ದು ಮುಖ್ಯ ಕ್ಯಾಮೆರಾ 12ಮೆಗಾಫಿಕ್ಸೆಲ್‌ ನಿಂದ ಕೂಡಿದೆ

ಜೂಮ್‌ ಕ್ಯಾಮೆರಾ ಕೇಟಗರಿ

ಜೂಮ್‌ ಕ್ಯಾಮೆರಾ ಕೇಟಗರಿ

ದೂರದ ಸ್ಥಳವನ್ನ ಬಹಳ ಹತ್ತಿರ ಸೆಳೆದಂತೆ ಜೂಮ್‌ ಮಾಡಿ ಸುಂದರವಾದ ಪೋಟೋ ಕ್ಲಿಕಿಸೋದಕ್ಕೆ ಶಿಯೋಮಿ cc9ಪ್ರೊ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಅತ್ಯತ್ತಮವಾಗಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಟೆಲಿಫೋಟೋ ಆಪ್ಟಿಕಲ್ ಲೆನ್ಸ್‌ ಅನ್ನ ಉತ್ತಮವಾಗಿರೊದ್ರಿಂದ ಜೂಮ್ ಪೋಟೋ ಚೆನ್ನಾಗಿ ಮೂಡಿ ಬರೋಧಕ್ಕೆ ಸಾಧ್ಯವಾಗಲಿದೆ. ಇನ್ನು ಶಿಯೋಮಿ CC9 ಪ್ರೊ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 108MP ಹೊಂದಿದೆ.

ಅಲ್ಟ್ರಾವೈಡ್‌ ಆಂಗಲ್‌

ಅಲ್ಟ್ರಾ-ವೈಡ್‌ ಆಂಗಲ್‌ನಿಂಡ ಪೋಟೋ ತೆಗೆಯ ಬಯಸೋರಿಗೆ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಆಗಿದೆ. ಈ ಮಾದರಿಯ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಗ್ರೂಪ್‌ ಫೋಟೋ ಅಥವಾ ಲ್ಯಾಂಡ್‌ಸ್ಕೇಪ್ ಪೋಟೋಗಳನ್ನ ಉತ್ತಮವಾಗಿ ಚಿತ್ರಿಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ನಲ್ಲಿಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಉನ್ನತ-ಮಟ್ಟದಿಂದ ಕೂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ಹೊಂದಿದ್ದು ಮುಖ್ಯ ಕ್ಯಾಮೆರಾ 12MP ಆಗಿದೆ.

ನೈಟ್ ಫೋಟೋಗ್ರಫಿಗೆ

ನೈಟ್ ಫೋಟೋಗ್ರಫಿಗೆ

ಇನ್ನು ನೈಟ್‌ ಪೋಟೋಗ್ರೋಫಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್‌ ಅಂದ್ರೆ ಅದು ಹುವಾವೇ ಮೇಟ್ 30 ಪ್ರೊ ಉತ್ತಮ ಸ್ಮಾರ್ಟ್‌ಫೋನ್‌ ಆಗಿದೆ. ಕಡಿಮೆ ಬೆಳಕಿನಲ್ಲೂ ಸುಂದರವಾದ ಪೋಟೋ ಕ್ಲಿಕಿಸೋ ಕ್ಯಾಮೆರಾವನ್ನ ಹುವಾವೇ ಮೇಟ್ 30 ಪ್ರೊ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

Best Mobiles in India

English summary
DxOMark has just unveiled its pick for the best smartphone cameras of 2019. Previously, the company’s primary focus was on DSLR’s and digital cameras but have since started testing smartphones as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X