ನಿಮ್ಮ ಕಣ್ಸೆಳೆಯುವ ಮನಮೋಹಕ ಗ್ಯಾಜೆಟ್‌ಗಳಿವು

Written By:

ಗ್ಯಾಜೆಟ್ ಅಭಿಮಾನಿಗಳಿಗೆ ಎಂದಿಗೂ ಆಯ್ಕೆಗಳಲ್ಲಿ ಕೊರತೆ ಇದ್ದೇ ಇರುತ್ತದೆ. ಆದರೆ ಒಮ್ಮೊಮ್ಮೆ ಆಯ್ಕೆ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟದ ಕೆಲಸವಾಗಿರುತ್ತದೆ. ಟೆಕ್ ಜಗತ್ತು ಸಾಕಷ್ಟು ಉತ್ತಮವಾಗಿರುವುದನ್ನೇ ಒದಗಿಸುವ ಭಾಷೆಯನ್ನು ನೀಡುತ್ತದೆ ಆದರೆ ದೊರಕುವುದು ಮಾತ್ರ ತುಂಬಾ ಸಣ್ಣದಾಗಿರುತ್ತದೆ. ಆದ್ದರಿಂದಲೇ ಗ್ಯಾಜೆಟ್ ಆಯ್ಕೆಯಲ್ಲಿ ಯಾವಾಗಲೂ ನೀವು ಸೋಲನ್ನು ಕಾಣುತ್ತೀರಿ.

ಆದ್ದರಿಂದಲೇ ಇಂದಿನ ಲೇಖನದಲ್ಲಿ ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ನೀಡಿದ್ದು ಇದು ತುಂಬಾ ಪ್ರಯೋಜನಕಾರಿ ಎಂದೆನಿಸಲಿದೆ. ಇದರಲ್ಲಿ ನಿಮ್ಮ ಮೆಚ್ಚಿನ ಗ್ಯಾಜೆಟ್‌ಗಳನ್ನು ಆಯ್ಕೆ ಮಾಡಬಹುದಾಗಿದ್ದು ನಿಮ್ಮ ಮನತಣಿಸುವ ಗ್ಯಾಜೆಟ್‌ಗಳು ಇವುಗಳಾಗಿವೆ. ಹಾಗಿದ್ದರೆ ತಡ ಮಾಡದೇ ನಾವು ಕೆಳಗಿನ ಪಟ್ಟಿಯಲ್ಲಿ ನೀಡಿರುವ ಗ್ಯಾಜೆಟ್‌ಗಳತ್ತ ಗಮನ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆಕ್ಸಸ್ 6

ನೆಕ್ಸಸ್ 6

#1

5.9 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ನೆಕ್ಸಸ್ 6 ಐಫೋನ್ 6 ಪ್ಲಸ್ ಮತ್ತು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 4 ಗಿಂತ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. ನೆಕ್ಸಸ್ ಫೋನ್‌ಗಳಲ್ಲೇ ಇದು ದೊಡ್ಡದು ಎಂಬ ಖ್ಯಾತಿಗೆ ಭಾಜನವಾಗಿದೆ. ಹೊಸ ಲಾಲಿಪಪ್ ಓಎಸ್ ಅನ್ನು ಹೊಂದಿರುವ ಗೂಗಲ್‌ನ ಹೊಸ ಫ್ಲ್ಯಾಗ್‌ಶಿಪ್ ಸ್ವಿಶ್ ಅನಿಮೇಶನ್, ಸುಂದರ ಅಪ್ಲಿಕೇಶನ್ ಮತ್ತು ಆಕರ್ಷಕ ವಿನ್ಯಾಸಗಳಿಂದ ಮನಸೆಳೆಯುವಂತಿದೆ. ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಇದರಲ್ಲಿದ್ದು 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮೋಟೋರೋಲಾ ಇದರಲ್ಲಿ ಹೊಸ ಟರ್ಬೋ ಚಾರ್ಜರ್ ಅನ್ನು ಸೇರಿಸಿದೆ. ಇದರಿಂದಾಗಿ 5 ಗಂಟೆಗಳ ಚಾರ್ಜ್ ಸೌಲಭ್ಯ ಕೇವಲ 30 ನಿಮಿಷಗಳಲ್ಲಿ ನಿಮಗೆ ಲಭಿಸಲಿದೆ.

ಎಲ್‌ಜಿ ಜಿ ವಾಚ್ ಆರ್

ಎಲ್‌ಜಿ ಜಿ ವಾಚ್ ಆರ್

#2

ಎಲ್‌ಜಿ ಯ ಎರಡನೆಯ ಪ್ರಯತ್ನವೆಂಬಂತೆ ಆಂಡ್ರಾಯ್ಡ್ ವೇರ್ ಜನ್ಮತಾಳಿದೆ. ನೋಡಲು ಅತ್ಯಾಕರ್ಷಕವಾಗಿರುವ ಈ ವಾಚ್ ಪೂರ್ಣ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ. ಮತ್ತು ಇದರ ವಿನ್ಯಾಸ ವಾಚ್‌ನಂತೆ ನಮಗೆ ತೋರುತ್ತದೆ. ಇದರ ಸ್ಕ್ರೀನ್ 320x320 ಯಾಗಿದ್ದು, ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, 512 ಎಮ್‌ಬಿ RAM ಮತ್ತು 4 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ವೇರಿಯೇಬಲ್ ಹೊಂದಿದೆ.

ಏಸರ್ ಸ್ವಿಚ್ 12 ಇಂಚಿನದ್ದು

ಏಸರ್ ಸ್ವಿಚ್ 12 ಇಂಚಿನದ್ದು

#3

ಈ ದಿನಗಳಲ್ಲಿ ಟ್ಯಾಬ್ಲೆಟ್‌ಗಳು ಅದರಂತಿರದೇ, ಅವುಗಳನ್ನು ಭಿನ್ನ ಭಿನ್ನವಾಗಿ ನೀವು ಬಳಸುವಂತಿದೆ. ಏಸರ್‌ನ ಹೊಸ ಡಿವೈಸ್ ನಿಮಗೆ ಐದು ಪ್ರತ್ಯೇಕ ಆಯ್ಕೆಗಳನ್ನು ಒದಗಿಸುತ್ತಿದೆ, ಇದರಲ್ಲಿ ನಿಮಗೆ ಸಾಮಾನ್ಯ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಆವೃತ್ತಿಗಳನ್ನು ಇದು ಒಳಗೊಂಡಿದೆ.

ಕಿಂಡಲ್ ವ್ಯೋಜ್

ಕಿಂಡಲ್ ವ್ಯೋಜ್

#4

ಕಿಂಡಲ್ ಪೇಜ್ ವ್ರೈಟ್ ಅನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಅಮೆಜಾನ್‌ನ ಹೊಸ ವ್ಯೋಜ್ ಇ ರೀಟರ್ ಹೆಚ್ಚು ತಿಳಿಯುವಂತೆ ನಮ್ಮನ್ನು ಮಾಡುತ್ತದೆ. ಇದು ಗ್ಲಾಸ್ ಕವರ್ ಡಿಸ್‌ಪ್ಲೇಯನ್ನು ಒಳಗೊಂಡು ಬಂದಿದ್ದು, ನಿಜಕ್ಕೂ ಅತ್ಯದ್ಭುತವಾಗಿದೆ. ಇದು 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡು ಬಂದಿದೆ. ಇದರ ಬ್ಯಾಟರಿ ಕೂಡ ತಿಂಗಳವರೆಗೆ ಬಾಳಿಕೆ ಬರಲಿದೆ. ಮತ್ತು 3 ಜಿಯನ್ನು ಅಳವಡಿಸುವ ಆಯ್ಕೆಯನ್ನು ಇದು ಹೊಂದಿದೆ.

ಖರೀದಿ ತಾಣ: ಅಮೆಜಾನ್

ಮ್ಯಾಕ್‌ಬುಕ್ ಪ್ರೊ

ಮ್ಯಾಕ್‌ಬುಕ್ ಪ್ರೊ

#5

ಲ್ಯಾಪ್‌ಟಾಪ್‌ಗಳ ವಿಷಯಕ್ಕೆ ಬಂದಾಗ, ಮ್ಯಾಕ್ ಬುಕ್ ಪ್ರೊವನ್ನು ಸೋಲಿಸಲು ಅಸಾಧ್ಯ. ಇದು 13 ಹಾಗೂ 15 ಇಂಚಿನ ಡಿಸ್‌ಪ್ಲೇ ಗಾತ್ರಗಳೊಂದಿಗೆ ಬಂದಿದ್ದು ಇದರ ರೆಟೀನಾ ಡಿಸ್‌ಪ್ಲೇ ನಿಜಕ್ಕೂ ಅಸಾಧಾರಣವಾಗಿದೆ.
ಖರೀದಿ ತಾಣ: ಅಮೆಜಾನ್

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 3

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 3

#6

ಮೈಕ್ರೋಸಾಫ್ಟ್‌ನ ಸರ್ಫೇಸ್ ಪ್ರೊ 3 ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಇದು ನಿಜಕ್ಕೂ ಪರಿಪೂರ್ಣವಾಗಿದೆ. ಇದು 12 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಡ್ರಾಯಿಂಗ್ ಮತ್ತು ಟಿಪ್ಪಣಿಗಳನ್ನು ಬರೆದುಕೊಳ್ಳಲು ಹೇಳಿಮಾಡಿಸಿರುವಂಥದ್ದಾಗಿದೆ.
ಖರೀದಿ ತಾಣ: ಅಮೆಜಾನ್

ಅಸೂಸ್ ಕ್ರೋಮ್‌ಬುಕ್ ಸಿ200

ಅಸೂಸ್ ಕ್ರೋಮ್‌ಬುಕ್ ಸಿ200

#7

ನಿಜಕ್ಕೂ ಅತ್ಯಾಕರ್ಷಕವಾಗಿರುವ ಅಸೂಸ್ ಕ್ರೋಮ್‌ಬುಕ್ ಸಿ200 ಕಂಪ್ಯೂಟರ್ ಬಳಸುವವರಿಗೆ ಸರ್ವೋತ್ತಮವಾಗಿದೆ. ವೆಬ್ ಬ್ರೌಸ್ ಮಾಡಲು, ಫೇಸ್‌ಬುಕ್ ವೀಕ್ಷಣೆ ಮತ್ತು ವೀಡಿಯೊಗಳ ವೀಕ್ಷಣೆಗೆ ಸೂಕ್ತವಾಗಿದೆ. ಗೂಗಲ್‌ನ ಕ್ರೋಮ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದ್ದು 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. 32 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಡಿವೈಸ್ ಹೊಂದಿದೆ.
ಖರೀದಿ ತಾಣ: ಅಮೆಜಾನ್

ನೋಕಿಯಾ ಲ್ಯೂಮಿಯಾ 930

ನೋಕಿಯಾ ಲ್ಯೂಮಿಯಾ 930

#8

ನೋಕಿಯಾ ಲ್ಯೂಮಿಯಾ 930 ಅತ್ಯಾಧುನಿಕವಾಗಿರುವ ವಿಂಡೋಸ್ 8 ಸ್ಮಾರ್ಟ್‌ಫೋನ್ ಆಗಿದೆ. ಗಾಢ ಕಿತ್ತಳೆ ಮತ್ತು ಹಸಿರು ಬಣ್ಣದಲ್ಲಿ ಈ ಫೋನ್ ಬಂದಿದ್ದು ಎಂದಿನಂತೆ ಬರುವ ಕಪ್ಪು ಮತ್ತು ಬಿಳಿ ಬಣ್ಣಕ್ಕಿಂತ ಇದು ವ್ಯತ್ಯಾಸ ಬಣ್ಣದಿಂದ ಕಂಗೊಳಿಸಲಿದೆ. 20 ಮೆಗಾಪಿಕ್ಸೆಲ್ ಕ್ಯಾಮೆರಾ, ವಿಂಡೋಸ್ 8.1, ವೈರ್‌ಲೆಸ್ ಚಾರ್ಜಿಂಗ್, 4 ಜಿ ಬೆಂಬಲ ಮತ್ತು ಶಕ್ತಿಯುತ ಪ್ರೊಸೆಸರ್ ನಿಜಕ್ಕೂ ಫೋನ್‌ನ ಬಗೆಗೆ ನಮ್ಮ ಕುತೂಹಲವನ್ನು ಹೆಚ್ಚಿಸಲಿದೆ.
ಖರೀದಿ ತಾಣ: ಅಮೆಜಾನ್

ಬಯೋನ್ ಆಡಿಯೊ ಸೌಂಡ್ ಬುಕ್

ಬಯೋನ್ ಆಡಿಯೊ ಸೌಂಡ್ ಬುಕ್

#9

ಬ್ಲ್ಯೂಟೂತ್ ಸ್ಪೀಕರ್‌ಗಳಂತೆ, ಬಯಾನ್ ಆಡಿಯೊ ಸೌಂಡ್ ಬುಕ್ ಉತ್ತಮ ಸಾಧನವಾಗಿದೆ.
ಖರೀದಿ ತಾಣ: ಅಮೆಜಾನ್

ಏಸರ್ ಅಸ್ಪೈರ್ ಸ್ವಿಚ್ 10

ಏಸರ್ ಅಸ್ಪೈರ್ ಸ್ವಿಚ್ 10

#10

ವಿಂಡೋಸ್ 8 ಏಸರ್ ಅಸ್ಪೈರ್ ಸ್ವಿಚ್ 10 ಉತ್ತಮ ಬಜೆಟ್ ಲ್ಯಾಪ್‌ಟಾಪ್ ಆಗಿದ್ದು ಟ್ಯಾಬ್ಲೆಟ್‌ನಂತೆ ಕಂಡುಬಂದಿದೆ.
ಖರೀದಿ ತಾಣ: ಅಮೆಜಾನ್

ಎಲ್‌ಜಿ ಲೈಫ್‌ಬ್ಯಾಂಡ್ ಟಚ್

ಎಲ್‌ಜಿ ಲೈಫ್‌ಬ್ಯಾಂಡ್ ಟಚ್

#11

ಮಾರುಕಟ್ಟೆಗೆ ವೇರಿಯೇಬಲ್ ನಿಜಕ್ಕೂ ಮೋಡಿಯನ್ನು ಮಾಡಿದ್ದು, ಫಿಟ್‌ನೆಸ್ ಟ್ರ್ಯಾಕರ್ ಮತ್ತು ಸ್ಮಾರ್ಟ್‌ವಾಚ್ ನಡುವಿನ ಅಂತರ ಮರೆಯಾಗುತ್ತಾ ಹೋಗುತ್ತಿದೆ. ಇದು ನಿಮ್ಮ ಫೋನ್‌ನಿಂದ ಕರೆ ಮಾಡುವ ಮತ್ತು ಪಠ್ಯ ಅಧಿಸೂಚನೆಗಳನ್ನು ಕಳುಹಿಸುವ ಸೌಲಭ್ಯವನ್ನು ಇದು ಒದಗಿಸುತ್ತದೆ.

ಖರೀದಿ ತಾಣ: ಜಾನ್ ಲಿವೀಸ್

ಸೋನಿ ಶಾರ್ಟ್ ತ್ರೊ ಪ್ರೊಜೆಕ್ಟರ್

ಸೋನಿ ಶಾರ್ಟ್ ತ್ರೊ ಪ್ರೊಜೆಕ್ಟರ್

#12

ನೀವು ನಿರೀಕ್ಷಿಸದೇ ಇರುವ ಅದ್ಭುತ ಜಾದೂವನ್ನು ಸೋನಿ ಶಾರ್ಟ್ ತ್ರೊ ಪ್ರೊಜೆಕ್ಟರ್ ಮಾಡಲಿದೆ. 147 ಇಂಚಿನ ಚಿತ್ರಗಳನ್ನು ಪ್ರೊಜೆಕ್ಟ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದ್ದು ಮನೆಯಲ್ಲೇ ಸಿನಿಮಾಗಳನ್ನು ನೋಡುವ ಅದ್ಭುತ ಅನುಭವವನ್ನು ಇದು ನಿಮಗೆ ನೀಡಲಿದೆ.

ಫಿಲಿಪ್ಸ್ ಸರೌಂಡ್ ಬೇಸ್

ಫಿಲಿಪ್ಸ್ ಸರೌಂಡ್ ಬೇಸ್

#13

ಹೋಮ್ ಸಿನಿಮಾಗಳಿಗೆ ನಿಮ್ಮ ಸರೌಂಡಿಂಗ್ ಅನ್ನು ಪರಿವರ್ತಿಸುವ ಇರಾದೆ ನಿಮ್ಮದಾಗಿದ್ದರೆ, ಫಿಲಿಪ್ಸ್ ಸರೌಂಡ್ ಬೇಸ್ ಅತ್ಯುತ್ತಮವಾಗಿದೆ. ವೀಕ್ಷಣೆ ಮತ್ತು ಧ್ವನಿಯ ಉತ್ತಮ ಗುಣಮಟ್ಟವನ್ನು ಇದು ನಿಮಗೆ ನೀಡಲಿದೆ.

ಪೆಬ್ಬಲ್ ಸ್ಟೀಲ್

ಪೆಬ್ಬಲ್ ಸ್ಟೀಲ್

#14

ನಿಜಕ್ಕೂ ಕಣ್ಮನಸೆಳೆಯುವ ವಿನ್ಯಾಸದಲ್ಲಿ ಈ ಪೆಬ್ಬಲ್ ವಾಚ್ ನಿಮ್ಮ ಮನವನ್ನು ಕದಿಯಲಿದೆ. ಕಣ್ಮನಸೆಳೆಯುವ ನೋಟದಲ್ಲಿ ಈ ವಾಚ್ ಬಂದಿದ್ದು ನಿಜಕ್ಕೂ ವಾಚ್ ಬಯಕೆಯ ನಿಮ್ಮ ಹಸಿವನ್ನು ಇದು ತಣಿಸಲಿದೆ.

ಖರೀದಿ ತಾಣ: ಅಮೆಜಾನ್

ಮೋನ್‌ಸ್ಟರ್ ಪ್ರೊ ವೈರ್‌ಲೆಸ್

ಮೋನ್‌ಸ್ಟರ್ ಪ್ರೊ ವೈರ್‌ಲೆಸ್

#15

ಇದು ಬ್ಲ್ಯೂಟೂತ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಬಟನ್ ಲೆಸ್ ಇಂಟರ್ಫೇಸ್‌ನೊಂದಿಗೆ ಇದು ಬಂದಿದೆ.

ಸ್ಯಾಮ್‌ಸಂಗ್ NX300

ಸ್ಯಾಮ್‌ಸಂಗ್ NX300

#16

ಸ್ಯಾಮ್‌ಸಂಗ್‌ನ ವೈಫೈ ಆಧಾರಿತ NX300 ಸುಂದರವಾದ ರೆಟ್ರೋ ಸ್ಟೈಲಿಂಗ್‌ನೊಂದಿಗೆ ಬಂದಿದೆ. ಇದರ ಅತಿ ದೊಡ್ಡದಾದ 20.3 ಮೆಗಾಪಿಕ್ಸೆಲ್ ಎಪಿಎಸ್ - ಸಿ ಸೆನ್ಸಾರ್‌ಗೆ ನಿಜಕ್ಕೂ ನಾವು ಅಭಾರಿಯಾಗಿರಬೇಕು.

ಖರೀದಿ ತಾಣ: ಅಮೆಜಾನ್

ಆಪಲ್ ಮ್ಯಾಕ್‌ ಬುಕ್ ಏರ್ 2013

ಆಪಲ್ ಮ್ಯಾಕ್‌ ಬುಕ್ ಏರ್ 2013

#17

ಆಪಲ್‌ನ ಮ್ಯಾಕ್‌ಬುಕ್ ಏರ್ ಲ್ಯಾಪ್‌ಟಾಪ್ ವಿನ್ಯಾಸದಲ್ಲಿದೆ. ಇದು 4 ಜಿಬಿ RAM ಅನ್ನು ಪಡೆದುಕೊಂಡಿದ್ದು 256ಜಿಬಿ ಎಸ್‌ಎಸ್‌ಡಿ ಇದರಲ್ಲಿದೆ.
ಖರೀದಿ ತಾಣ: ಅಮೆಜಾನ್

ಸೆನ್‌ಹೈಸರ್ ಮೊಮೆಂಟಮ್

ಸೆನ್‌ಹೈಸರ್ ಮೊಮೆಂಟಮ್

#18

ಮಕ್ಕಳೊಂದಿಗೆ ಮೋಜಿನ ಕ್ಷಣಗಳನ್ನು ಕಳೆಯಲು ಮತ್ತು ನಿಮ್ಮಲ್ಲಿ ಮೋಜನ್ನುಂಟು ಮಾಡಲು ಸನ್‌ಹೈಸರ್ ಮೊಮೆಂಟಮ್ ಉತ್ತಮವಾಗಿದೆ.
ಖರೀದಿ ತಾಣ: ಅಮೆಜಾನ್

ಯೂನಿಫಾರ್ಮ್ ವೇರ್ಸ್ 100 ಸಿರೀಸ್

ಯೂನಿಫಾರ್ಮ್ ವೇರ್ಸ್ 100 ಸಿರೀಸ್

#19

ಅಲ್ಯುಮಿನಿಯಮ್ ನಿರ್ಮಾಣದ ಜಲ ಪ್ರತಿರೋಧಕ ಈ ವೇರಿಯೇಬಲ್ ನಿಜಕ್ಕೂ ಮನವನ್ನು ಕದಿಯುವಂತಿದೆ.

ಟೈಮೆಕ್ಸ್ ವೀಕೆಂಡರ್

ಟೈಮೆಕ್ಸ್ ವೀಕೆಂಡರ್

#20

ಈ ಸರಳವಾದ ಸುಂದರ ಟೈಮೆಕ್ಸ್ ವಾಚ್ ನಿಜಕ್ಕೂ ನಿಮ್ಮ ಮನವನ್ನು ಕದಿಯಲಿದೆ. ಈ ಸ್ಟೀಲ್ ಕವಚ ಮತ್ತು ಕಾಟನ್ ಸ್ಟ್ರಾಪ್ ನಿಜಕ್ಕೂ ಅತ್ಯುತ್ತಮ ಆಯ್ಕೆಯಾಗಿದೆ.
ಖರೀದಿ ತಾಣ: ಅಮೆಜಾನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Best gadgets for men: New gadgets and gizmos 2014.Really interesting and helpful gadgets we can Find here...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot