ಜಸ್ಟ್‌ 100ರೂ. ಒಳಗೆ ಲಭ್ಯವಿರುವ ಜಿಯೋ, ಏರ್‌ಟೆಲ್‌, ವಿ ಪ್ಲ್ಯಾನ್‌ಗಳ ಮಾಹಿತಿ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಟೆಲಿಕಾಂಗಳು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಟೆಲಿಕಾಂಗಳು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಪ್ರೀಪೇಯ್ಡ್‌ ಯೋಜನೆಗಳ ಲಿಸ್ಟ್‌ ಹೊಂದಿದ್ದು, ಅವುಗಳಲ್ಲಿ ಅಗ್ಗದ ಬೆಲೆಯಲ್ಲಿಯೂ ಬೆಸ್ಟ್‌ ಪ್ಲ್ಯಾನ್‌ಗಳನ್ನು ಹೊಂದಿವೆ. ಇನ್ನು ಕೆಲವು ಯೋಜನೆಗಳು 100ರೂ. ಒಳಗೂ ಲಭ್ಯ ಇವೆ.

ವೊಡಾಫೋನ್‌

ಹೌದು, ಜಿಯೋ, ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಸಂಸ್ಥೆಗಳು 100ರೂ. ಒಳಗೆ ಕೆಲವು ಪ್ರೀಪೇಯ್ಡ್‌ ಯೋಜನೆಗಳನ್ನು ಹೊಂದಿವೆ. ಈ ಅಗ್ಗದ ಯೋಜನೆಗಳ ಡೇಟಾ ಸೌಲಭ್ಯ ಸೇರಿದಂತೆ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ನಂತಹ ಪ್ರಯೋಜನಗಳನ್ನು ಪಡೆದಿವೆ. ಹಾಗಾದರೇ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳ 100ರೂ ಬೆಲೆಯ ಒಳಗೆ ಇರುವ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್‌ ಅಗ್ಗದ ಯೋಜನೆಗಳು

ಏರ್‌ಟೆಲ್‌ ಅಗ್ಗದ ಯೋಜನೆಗಳು

ಏರ್‌ಟೆಲ್‌ ಪ್ರಸ್ತುತ 100ರೂ ಬೆಲೆಯ ಒಳಗೆ ನಾಲ್ಕು ಯೋಜನೆಗಳನ್ನು ಹೊಂದಿದೆ. ಏರ್‌ಟೆಲ್‌ 19ರೂ. ಪ್ಲ್ಯಾನ್ ಎರಡು ದಿನಗಳ ಮಾನ್ಯತೆಗಾಗಿ 200 ಎಂಬಿ ಡೇಟಾವನ್ನು ನೀಡುತ್ತದೆ. ಏರ್‌ಟೆಲ್‌ 49ರೂ. ಮತ್ತು ಏರ್‌ಟೆಲ್‌ 79ರೂ. ಪ್ರಿಪೇಯ್ಡ್ ಯೋಜನೆಗಳು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತವೆ. ಹಾಗೂ ಕ್ರಮವಾಗಿ 100MB ಮತ್ತು 200 MB ಡೇಟಾ ಸೌಲಭ್ಯ ಪಡೆದಿವೆ. ಹಾಗೆಯೇ ಏರ್‌ಟೆಲ್‌ 48ರೂ. ಪ್ಲ್ಯಾನ್ 28ದಿನಗಳ ವ್ಯಾಲಿಡಿಟಿ ಜೊತೆಗೆ 3GB ಡೇಟಾ ನೀಡುತ್ತದೆ.

ಜಿಯೋದ ಅಗ್ಗದ ಯೋಜನೆಗಳು

ಜಿಯೋದ ಅಗ್ಗದ ಯೋಜನೆಗಳು

ಜಿಯೋ ಟೆಲಿಕಾಂ ಸಹ 100ರೂ. ಒಳಗೂ ಆಕರ್ಷಕ ಯೋಜನೆಗಳನ್ನು ಹೊಂದಿದೆ. ಆರಂಭಿಕ ಜಿಯೋ 10ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 1 ಜಿಬಿ ಕಾಂಪ್ಲಿಮೆಂಟರಿ ಡೇಟಾದೊಂದಿಗೆ 124 ಐಯುಸಿ ನಿಮಿಷಗಳ ಟಾಕ್‌ಟೈಮ್ ಪ್ರಯೋಜನವನ್ನು ನೀಡುತ್ತದೆ. ಅದೇ ರೀತಿ ರೂ. 20 ಪ್ರಿಪೇಯ್ಡ್ ಯೋಜನೆ 249 ಐಯುಸಿ ನಿಮಿಷಗಳ ಟಾಕ್‌ಟೈಮ್ ಪ್ರಯೋಜನಗಳೊಂದಿಗೆ 2 ಜಿಬಿ 4 ಜಿ ಡೇಟಾವನ್ನು ನೀಡುತ್ತದೆ. ರೂ. 50 ಮತ್ತು ರೂ. 100 ಯೋಜನೆಗಳು ಕ್ರಮವಾಗಿ 5 ಜಿಬಿ ಮತ್ತು 10 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತವೆ. ಡೇಟಾದ ಜೊತೆಗೆ, ಎರಡು ಯೋಜನೆಗಳು ಕ್ರಮವಾಗಿ 656 ಮತ್ತು 1362 ಐಯುಸಿ ನಿಮಿಷಗಳನ್ನು ಸಹ ತರುತ್ತವೆ.

ವಿ ಟೆಲಿಕಾಂನ ಅಗ್ಗದ ಯೋಜನೆಗಳು

ವಿ ಟೆಲಿಕಾಂನ ಅಗ್ಗದ ಯೋಜನೆಗಳು

ವಿ ಟೆಲಿಕಾಂನಲ್ಲಿಯೂ ಅಗ್ಗದ ಪ್ರಿಪೇಯ್ಡ್‌ ಯೋಜನಗಳ ಆಯ್ಕೆ ಇದೆ. ವಿ 16ರೂ, ಪ್ಲ್ಯಾನಿನಲ್ಲಿ 24 ಗಂಟೆಗಳ ವ್ಯಾಲಿಡಿಟಿ ಜೊತೆಗೆ 1 ಜಿಬಿ ಡೇಟಾವನ್ನು ನೀಡುತ್ತದೆ. ವಿ 19ರೂ. ರೀಚಾರ್ಜ್ ಯೋಜನೆ, ಬಳಕೆದಾರರು 2 ದಿನಗಳ ಮಾನ್ಯತೆಗಾಗಿ 200 ಎಂಬಿ ಡೇಟಾ ಮತ್ತು ಅನಿಯಮಿತ ಟಾಕ್‌ಟೈಮ್ ಪಡೆಯುತ್ತಾರೆ. ಹಾಗೆಯೇ ವಿ 98ರೂ. ಯೋಜನೆಯಲ್ಲಿ 6 ಜಿಬಿ ಡೇಟಾ ಲಭ್ಯ, ಆದರೆ ಪ್ರಸ್ತುತ ಈ ಯೋಜನೆಗೆ ಆಫರ್ ಇದ್ದು, ಹೀಗಾಗಿ 6GB ಬದಲಾಗಿ 12 GB ಹೈಸ್ಪೀಡ್ ಡೇಟಾವನ್ನು ಲಭ್ಯ.

Most Read Articles
Best Mobiles in India

English summary
These are the best-prepaid recharge plans under Rs. 100 on Jio, Airtel and Vi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X