ದೀಪಾವಳಿ ಪ್ರಯುಕ್ತ ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಬೆಸ್ಟ್‌ ಲ್ಯಾಪ್‌ಟಾಪ್‌ಗಳು!

|

ದೀಪಾವಳಿ ಪ್ರಯುಕ್ತ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ಗಳನ್ನು ನಡೆಸುತ್ತಿವೆ. ದೀಪಾವಳಿ ಸಂಭ್ರಮದಲ್ಲಿ ಬಂದಿರುವ ಈ ಸೇಲ್‌ನಲ್ಲಿ ಗ್ರಾಹಕರು ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳ ಮೇಲೆ ಕೂಡ ಉತ್ತಮವಾದ ರಿಯಾಯಿತಿ ದೊರೆಯುತ್ತಿದೆ. ಸದ್ಯ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ನೀವು ಅತ್ಯುತ್ತಮ ಲ್ಯಾಪ್‌ಟಾಪ್‌ಗಳನ್ನು ಭಾರಿ ಡಿಸ್ಕೌಂಟ್‌ನಲ್ಲಿ ಖರೀದಿಸುವುದಕ್ಕೆ ಬೆಸ್ಟ್‌ ಟೈಂ ಇದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ದೀಪಾವಳಿ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್‌ ಆಫರ್‌ ಪಡೆದುಕೊಳ್ಳಬಹುದಾಗಿದೆ. ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ವಿವಿಧ ಎಕ್ಟ್ರಾನಿಕ್ಸ್‌ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಇದೇ ಸಮಯದಲ್ಲಿ ನೀವು 50,000ರೂ. ಒಳಗೆ ಲ್ಯಾಪ್‌ಟಾಪ್‌ ಖರೀದಿಸಲು ಬಯಸಿದರೆ ನಿಮಗೆ ರಿಯಾಯಿತಿ ದರದಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ದೊರೆಯಲಿವೆ. ಹಾಗಾದ್ರೆ ಪ್ರಸ್ತುತ ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3 ಅಮೆಜಾನ್‌ನಲ್ಲಿ ದೀಪಾವಳಿ ಸೇಲ್‌ ಪ್ರಯುಕ್ತ 38% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು 44,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 15.5 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದ್ದು, 250ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ಗೆ ಬೆಂಬಲವನ್ನು ನೀಡಲಿದೆ. ಇದು AMD ರೈಜೆನ್‌ 5 5500U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB SSD ಸ್ಟೋರೇಜ್‌ ಬಲವನ್ನು ಪಡೆದುಕೊಂಡಿದೆ.

ಅಸುಸ್‌ ವಿವೋಬುಕ್‌ 14 (2021)

ಅಸುಸ್‌ ವಿವೋಬುಕ್‌ 14 (2021)

ಅಮೆಜಾನ್‌ ಸೇಲ್‌ನಲ್ಲಿ ಅಸುಸ್‌ ವಿವೋಬುಕ್‌ 14 (2021) ಲ್ಯಾಪ್‌ಟಾಪ್‌ 36% ಡಿಸ್ಕೌಂಟ್‌ ಪಡೆದಿದೆ. ಈ ಲ್ಯಾಪ್‌ಟಾಪ್‌ ರಿಯಾಯಿತಿ ದರದಲ್ಲಿ ಇದೀಗ 46,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ HD ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ವೇಗವನ್ನು ಪಡೆದಿದ್ದು, 8GB RAM ಮತ್ತು 256GB ಯ M.2 NVMe PCIe SSD ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ ಕೂಡ ಲೋ ಬ್ರೈಟ್‌ನೆಸ್‌ ನಲ್ಲಿ ಬರಲಿದೆ.

ಆಸ್ಪೈರ್ ವೆರೋ AV15-51

ಆಸ್ಪೈರ್ ವೆರೋ AV15-51

ಏಸರ್‌ ಕಂಪೆನಿಯ ಆಸ್ಪೈರ್ ವೆರೋ AV15-51 ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ ವಿಶೇಷ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 41,990ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 11 ನೇ Gen Intel Core i5 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ 7.5 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೆಚ್‌ಪಿ ಕೋರ್‌ i3 11ನೇ Gen

ಹೆಚ್‌ಪಿ ಕೋರ್‌ i3 11ನೇ Gen

ನೀವು 35,000ರೂ. ಒಳಗಿನ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗೆ ಹೆಚ್‌ಪಿ ಕೋರ್‌ i3 11ನೇ Gen ಮಾದರಿಯು ಸೂಕ್ತ ಆಯ್ಕೆಯಾಗಿದೆ. ಯಾಕೆಂದರೆ ಈ ಲ್ಯಾಪ್‌ಟಾಪ್‌ನ 8GB RAM + 256GB ಸ್ಟೋರೇಜ್ ಮಾದರಿಯನ್ನು ನೀವು ಪ್ರಸ್ತುತ ಇ-ಕಾಮರ್ಸ್‌ ಸೈಟ್‌ಗಳಲ್ಲಿ 35,899ರೂ. ಬೆಲೆಗೆ ಖರೀದಿಸಬಹುದಾಗಿದೆ. ಈ ಲ್ಯಾಪ್‌ಟಾಪ್‌ ವಿಂಡೋಸ್‌ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 14 ಇಂಚಿನ ಫುಲ್‌ ಹೆಚ್‌ಡಿ ಆಂಟಿ ಗ್ಲೇರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ USB ಟೈಪ್-C 5Gbps ಸಿಗ್ನಲಿಂಗ್ ರೇಟ್‌, 2 ಸೂಪರ್‌ಸ್ಪೀಡ್ USB ಟೈಪ್-A 5Gbps ಸಿಗ್ನಲಿಂಗ್ ರೇಟ್‌ ಅನ್ನು ಒಳಗೊಂಡಿದೆ.

ರೆಡ್ಮಿಬುಕ್‌ ಪ್ರೊ ಕೋರ್‌ i5 11th Gen

ರೆಡ್ಮಿಬುಕ್‌ ಪ್ರೊ ಕೋರ್‌ i5 11th Gen

ರೆಡ್ಮಿಬುಕ್‌ ಪ್ರೊ ಕೋರ್‌ i5 11th Gen ಲ್ಯಾಪ್‌ಟಾಪ್‌ ರಿಯಾಯಿತಿ ದರದಲ್ಲಿ 39,890ರೂ. ಬೆಲೆಯಲ್ಲಿ ಲಭ್ಯವಾಗ್ತಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಆಂಟಿ-ಗ್ಲೇರ್ ಫುಲ್ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು MS ಆಫೀಸ್ ಹೋಮ್ ಮತ್ತು ಸ್ಟೂಡೆಂಟ್ 2019 ಅನ್ನು ಒಳಗೊಂಡಿದೆ. ಇನ್ನು ಸ್ಟಿರಿಯೋ ಸ್ಪೀಕರ್‌ಗಳು, , ಹಗುರವಾದ ವಿನ್ಯಾಸವನ್ನು ಒಳಗೊಂಡಿದೆ.

Best Mobiles in India

English summary
Best laptops to buy under Rs 50,000 in India Right Now!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X