ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮ್ಯೂಸಿಕ್‌ ಅಪ್ಲಿಕೇಶನ್‌ಗಳು!

|

ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಕೂಡ ತಮಗಿಷ್ಟವಾದ ಮ್ಯೂಸಿಕ್‌ ಅನ್ನು ಆಲಿಸುವುದಕ್ಕೆ ಬಯಸುತ್ತಾರೆ. ಮ್ಯೂಸಿಕ್‌ ಆಲಿಸುತ್ತಾ ತಮ್ಮ ಬೇಸರವನ್ನು ಕಳೆಯುವುದಕ್ಕೆ ಮುಂದಾಗುತ್ತಾರೆ. ಇದಕ್ಕಾಗಿಯೇ ಪ್ಲೇ ಸ್ಟೋರ್‌ನಲ್ಲಿ ಹಲವು ಮ್ಯೂಸಿಕ್‌ ಅಪ್ಲಿಕೇಶನ್‌ಗಳನ್ನು ನಾವಿಂದು ಕಾಣಬಹುದಾಗಿದೆ. ಮ್ಯೂಸಿಕ್‌ ಅಪ್ಲಿಕೇಶನ್‌ಗಳ ಮೂಲಕ ನಿಮಗಿಷ್ಟವಾದ ಹಾಡನ್ನು ಕೇಳುವುದಕ್ಕೆ ಸಾಧ್ಯವಾಗಲಿದೆ. ಸದ್ಯ ಭಾರತದಲ್ಲಿಯೂ ಕೂಡ ಹಲವು ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಮ್ಯೂಸಿಕ್‌

ಹೌದು, ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಮ್ಯೂಸಿಕ್‌ ಅಪ್ಲಿಕೇಶನ್‌ಗಳ ನಿಮಗೆ ಲೋಕಲ್‌ ಮ್ಯೂಸಿಕ್‌ನಿಂದ ಹಿಡಿದು ಎಲ್ಲಾ ಮಾದರಿಯ ಮ್ಯೂಸಿಕ್‌ ಆಲಿಸುವ ಅವಕಾಶವನ್ನು ನೀಡುತ್ತವೆ. ಹೀಗೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಮ್ಯೂಸಿಕ್‌ ಅಪ್ಲಿಕೇಶನ್‌ಗಳಲ್ಲಿ ಸ್ಪಾಟಿಫೈ, ಯುಟ್ಯೂಬ್‌ ಮ್ಯೂಸಿಕ್‌, ಡೀಜರ್‌ನಂತಹ ಅಪ್ಲಿಕೇಶನ್‌ಗಳು ಸೇರಿವೆ. ಹಾಗಾದ್ರೆ ನಿಮ್ಮ ಮ್ಯೂಸಿಕ್‌ ಅನುಭವವನ್ನು ಉತ್ತಮಗೊಳಿಸುವ ಟಾಪ್‌ ಐದು ಅತ್ಯುತ್ತಮ ಮ್ಯೂಸಿಕ್‌ ಅಪ್ಲಿಕೇಶನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಪಾಟಿಫೈ

ಸ್ಪಾಟಿಫೈ

ಸ್ಪಾಟಿಫೈ ಮ್ಯೂಸಿಕ್‌ ಅಪ್ಲಿಕೇಶನ್‌ ಅತ್ಯುತ್ತಮ ಮ್ಯೂಸಿಕ್‌ ಅಪ್ಲಿಕೇಶನ್‌ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. ಇದು ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಮ್ಯೂಸಿಕ್‌ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಸ್ಪಾಟಿಫೈ ಅಪ್ಲಿಕೇಶನ್‌ನಲ್ಲಿ ನೀವು ವರ್ಡ್‌ ಮ್ಯೂಸಿಕ್‌ ಅನ್ನು ಸ್ಟ್ರೀಮ್ ಮಾಡಬಹುದು. ಜೊತೆಗೆ ಲೋಕಲ್‌ ಸ್ಟೋರೇಜ್‌ ಮಾಡಿರುವ ಮ್ಯೂಸಿಕ್‌ ಅನ್ನು ಕೂಡ ಪ್ಲೇ ಮಾಡುವುದಕ್ಕೆ ಅವಕಾಶ ಸಿಗಲಿದೆ. ಸ್ಪಾಟಿಫೈ ಅಪ್ಲಿಕೇಶನ್‌ ನಿಮಗೆ ಫ್ರೀ ಹಾಗೂ ಪಾವತಿಸಿದ ಮಾದರಿಯ ರೂಪದಲ್ಲಿಯೂ ಕೂಡ ಲಭ್ಯವಾಗಲಿದೆ. ಈ ಅಪ್ಲಿಕೇಶನ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾದ ಫೀಚರ್ಸ್‌ಗಳನ್ನು ಹೊಂದಿದ್ದು, ಅದ್ಭುತವಾದ ಮ್ಯೂಸಿಕ್‌ ಲೈಬ್ರರಿಯನ್ನು ಕಾಣಬಹುದಾಗಿದೆ. ಪಾಡ್‌ಕಾಸ್ಟ್‌ಗಳಿಗೆ ಬೆಂಬಲದಂತಹ ನಿಫ್ಟಿ ವಿಷಯಗಳು ಕೂಡ ಇದರಲ್ಲಿ ಲಭ್ಯವಿದೆ.

ಡೀಜರ್

ಡೀಜರ್

ಇನ್ನು ಜನಪ್ರಿಯ ಮ್ಯೂಸಿಕ್‌ ಅಪ್ಲಿಕೇಶನ್‌ಗಳಲ್ಲಿ ಡೀಜರ್‌ ಕೂಡ ಸೇರಿದೆ. ಇದು ಸ್ಪಾಟಿಫೈ ಮಾದರಿಯ ಫೀಚರ್ಸ್‌ಗಳನ್ನೇ ಒಳಗೊಂಡಿದೆ. ಇದು ಪ್ರೀಮಿಯಂ ಆವೃತ್ತಿಯ ಫೀಚರ್ಸ್‌ಗಳ ಸಂಖ್ಯೆಗೆ ಕಡಿಮೆಯಾಗಿದೆ. ಅಲ್ಲದೆ ಜಾಹೀರಾತು-ಬೆಂಬಲಿತ ಉಚಿತ ಆವೃತ್ತಿಯನ್ನು ಸಹ ಹೊಂದಿದೆ. ಇದರಲ್ಲಿ ಡೌನ್‌ಲೋಡ್‌ಗಳು, ಶಿಫಾರಸುಗಳು ಮತ್ತು ನೀವು ಆಯ್ಕೆ ಮಾಡಬಹುದಾದ ಮ್ಯೂಸಿಕ್‌ ಟ್ರ್ಯಾಕ್‌ಗಳು ಮತ್ತು ಪಾಡ್‌ಕಾಸ್ಟ್‌ಗಳ ವಿಶಾಲವಾದ ಲೈಬ್ರರಿ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ.

ಐಹಾರ್ಟ್‌ ರೇಡಿಯೋ

ಐಹಾರ್ಟ್‌ ರೇಡಿಯೋ

iHeartRadio ಅಪ್ಲಿಕೇಶನ್‌ ಸಾಂಪ್ರದಾಯಿಕ ಸ್ಟ್ರೀಮಿಂಗ್ ಅಪ್ಲಿಕೇಶನ್ಗಿಂತ ಸ್ವಲ್ಪ ವಿಭಿನ್ನವಾಗಿದೆ. ಇದರಲ್ಲಿ ಟ್ರೂಲಿ ಮ್ಯೂಸಿಕ್‌ ಅನ್ನು ಸ್ಟ್ರೀಮಿಂಗ್ ಮಾಡುವುದಕ್ಕಿಂತ ರೇಡಿಯೋವನ್ನು ಟ್ಯೂನ್‌ ಮಾಡಬಹುದಾಗಿದೆ. ಇದು ರೇಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ಆಗಿದ್ದು, ಜನರು ತಮ್ಮ ಆಯ್ಕೆಗೆ ತಕ್ಕ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಬಹುದು. ಇದು ರೇಡಿಯೋ ಕಾರ್ಯಕ್ರಮಗಳು, ಪಾಡ್‌ಕಾಸ್ಟ್‌ಗಳು, ಸುದ್ದಿ ಮತ್ತು ಕ್ರೀಡಾ ವಿಷಯವನ್ನು ಒಳಗೊಂಡಿದೆ.

ಟೈಡಲ್

ಟೈಡಲ್

ಟೈಡಲ್ ಅಪ್ಲಿಕೇಶನ್‌ ನಲ್ಲಿ ನೀವು FLAC ಫೈಲ್‌ಗಳನ್ನು ಡೌನ್‌ಲೋಡ್ ಮಾಡದೆಯೇ CD-ಗುಣಮಟ್ಟದ ಮ್ಯೂಸಿಕ್‌ ಅನ್ನು ಆಲಿಸಬಹುದಾಗಿದೆ. ಇನ್ನು ಈ ಟೈಡಲ್ 70 ಮಿಲಿಯನ್ ಮ್ಯೂಸಿಕ್‌ ರೈಟ್ಸ್‌ ಪಡೆದಿರುವ ಲೈಬ್ರರಿಯನ್ನು ಹೊಂದಿರುವುದರಿಂದ ಅನೇಕ ಹಾಡುಗಳನ್ನು ನೀವು ಆಲಿಸಬಹುದಾಗಿದೆ. ಸದ್ಯ ಆಡಿಯೊಫೈಲ್‌ಗಳಿಗೆ ವರದಾನವಾಗಿರುವ ಗುಣಮಟ್ಟದ ಕಾರಣಕ್ಕೆ ಇದು ಮಾರುಕಟ್ಟೆಯಲ್ಲಿ ಅತ್ಯುತ್ತಮ ಮ್ಯೂಸಿಕ್ ಪ್ಲೇಯರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಯುಟ್ಯೂಬ್‌ ಮ್ಯೂಸಿಕ್‌

ಯುಟ್ಯೂಬ್‌ ಮ್ಯೂಸಿಕ್‌

ಯುಟ್ಯೂಬ್‌ ಮ್ಯೂಸಿಕ್‌ ಅಪ್ಲಿಕೇಶನ್‌ ಯೂಟ್ಯೂಬ್‌ ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಇದರಲ್ಲಿ 40 ಮಿಲಿಯನ್ ಮ್ಯೂಸಿಕ್‌ ಲೈಬ್ರರಿಯನ್ನು ಹೊಂದಿದ್ದು, ನಿಮಗಿಷ್ಟವಾದ ಹಾಡಯಗಳನ್ನು ಆಲಿಸುವುದಕ್ಕೆ ಸೂಕ್ತ ವೇದಿಕೆಯಾಗಿದೆ. ಇದು ಉಚಿತವಾಗಿ ಕೂಡ ಲಭ್ಯವಿದೆ. ಆದರೆ ಇದರಲ್ಲಿ ಆಗಾಗ ಜಾಹಿರಾತು ಪ್ರಸಾರವಾಗಲಿದೆ. ಆದರೆ ನೀವು ಯುಟ್ಯೂಬ್‌ ಮ್ಯೂಸಿಕ್‌ ಪ್ರೀಮಿಯಂ ಅನ್ನು ಖರೀದಿಸಿದರೆ ಜಾಹಿರಾತು ಮುಕ್ತ ಮ್ಯೂಸಿಕ್‌ ಅನ್ನು ಅನುಭವಿಸುವುದಕ್ಕೆ ಸಾಧ್ಯವಾಗಲಿದೆ.

Best Mobiles in India

Read more about:
English summary
Best music player apps for Android smartphone and tablets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X