ಹಾಡು ಕೇಳಲು ಲಭ್ಯವಿರುವ ಐದು ಅತ್ಯುತ್ತಮ ಮ್ಯೂಸಿಕ್‌ ಆಪ್‌ಗಳು!

|

ಮ್ಯೂಸಿಕ್‌ ಈ ಒಂದು ಪದಕ್ಕೆ ಎಂತಹ ಶಕ್ತಿ ಇದೆ ಎಂದರೆ ಎಂತಹ ಬೇಸರವನ್ನಾದರೂ ಕ್ಷಣಮಾತ್ರದಲ್ಲಿ ಮರೆಸಬಲ್ಲದು. ನೆನಪುಗಳ ಜೊತೆಗೆ ಹಾಡಿನ ಮೂಲಕ ಪಯಣವನ್ನೇ ಹೊರಡಬಹುದು. ಮ್ಯೂಸಿಕ್‌ ಅಂದ್ರೆನೆ ಹಾಗೇ ಅದು ಒಂದು ಶಕ್ತಿ ಪ್ರೇರಣೆ ಎಲ್ಲವೂ ಕೂಡ. ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಮೇಲಿನ ಪ್ರೀತಿಯನ್ನ ಕಂಡು ಕೆಲವು ಆಪ್‌ಗಲು ಬಂದಿವೆ. ಮ್ಯೂಸಿಕ್‌ ಪ್ರಿಯರನ್ನೇ ಗುರಿಯಾಗಿರಿಸಿಕೊಂಡಿರುವ ಈ ಆಪ್‌ಗಳು ಬಳಕೆದಾರರು ಬಯಸುವ ಹಾಡುಗಳನ್ನ ಒದಗಿಸುವ ಮೂಲಕ ನೆಚ್ಚಿನ ಆಪ್‌ಗಳಾಗಿ ಗುರುತಿಸಿಕೊಂಡಿವೆ.

ಹೌದು

ಹೌದು, ನಾವು ನೀವು ಮಾತ್ರವಲ್ಲ ಬಹುತೇಕ ಇಂದಿನ ಯುವ ಜನಾಂಗ ಪ್ರಯಾಣವಿರಲಿ, ಏಕಾಂತತೆ ಇರಲಿ, ಎಲ್ಲ ಕಡೆಗೂ ಕಿವಿಗೊಂದು ಇಯರ್‌ಫೋನ್‌ ಹಾಕಿಕೊಂಡು ಹಾಡನ್ನ ಗುನುಗುತ್ತಾ ಹೊರಟು ಬಿಡುತ್ತಾರೆ. ಯುವ ಜನಾಂಗ ಆಲಿಸುವ, ಆನಂದಿಸುವ, ಪ್ರಸ್ತುತತೆ ಹಾಗೂ ಆಲ್‌ಟೈಂ ಫೇವರೀಟ್‌ ಹಾಡುಗಳನ್ನ ಕ್ಷಣಮಾತ್ರದಲ್ಲಿ ನಿಡುವ ಮ್ಯೂಸಿಕ್‌ ಆಪ್‌ಗಳು ಯುವಕರನ್ನ ಸೆಳೆದಿವೆ. ಸದ್ಯ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಹಲವಾರು ಮ್ಯೂಸಿಕ್‌ ಆಪ್‌ಗಳು ಕಾಣ ಸಿಗುತ್ತವೆ. ಆದರೆ ಅವುಗಳಲ್ಲಿ ಅತ್ಯುತ್ತಮವಾದ ಐದು ಆಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ನಾವು ತಿಳಿಸಿಕೊಡ್ತಿವಿ ಬನ್ನಿ.

ಸ್ಪಾಟಿಫೈ

ಸ್ಪಾಟಿಫೈ

ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ನಿಡುವ ಆಪ್‌ಗಳ ಬಗ್ಗೆ ಉಲ್ಲೇಖಿಸುವಾಗ ಸ್ಪಾಟಿಫೂ ಆಪ್‌ನ ಬಗ್ಗೆ ಹೇಳಲೇಬೇಕು. 2019 ರಲ್ಲಿ ಭಾರತಕ್ಕೆ ಕಾಲಿಟ್ಟು ಸ್ಪಾಟಿಫೈ ಪ್ರಸ್ತು ಅತ್ಯುತ್ತಮ ಮ್ಯೂಸಿಕ್‌ ಆಪ್‌ಗಳಲ್ಲಿ ಮೊದಲನೇ ಸ್ಥಾನವನ್ನ ಆಲಂಕರಿಸಿದೆ. ಬಳಕೆದಾರರ ಸ್ನೇಹಿ ಆಗಿರುವ ಈ ಆಪ್‌ ಬಳಕೆದಾರರ ಆಸಕ್ತಿಯ ಆಧಾರದ ಮೇಲೆ ಹಾಡುಗಳನ್ನ ಸಂಗ್ರಹಿಸುತ್ತದೆ. ಇನ್ನು ಇದರ ಫ್ರೀಮಿಯಮ್, 3 ತಿಂಗಳ ಪ್ರಾಯೋಗಿಕ ಅವಧಿ ಮತ್ತು ಪಾವತಿಸಿದ ಚಂದಾದಾರಿಕೆ ಯೋಜನೆಗಳು ಅತ್ಯುತ್ತಮವಾಗಿದೆ. ಇದರಲ್ಲಿ ತಿಂಗಳಿಗೆ 119.ರೂನ ಪ್ರೀಮಿಯಂ ಸೇವೆ ಕೂಡ ಸೇರಿದೆ. ಜಾಹೀರಾತು-ಮುಕ್ತ ಸಂಗೀತ ಅನುಭವ, ಆಫ್‌ಲೈನ್ ಪ್ಲೇಬ್ಯಾಕ್, ಜೊತೆಗೆ ಪಾಟ್‌ಕಾಸ್ಟ್‌ಗಳನ್ನು ಸೇರಿಸಲು ಸ್ಪಾಟಿಫೈನಲ್ಲಿ ಅವಕಾಶವಿದೆ.

ಜಿಯೋಸಾವ್ನ್

ಜಿಯೋಸಾವ್ನ್

ಪ್ರಾರಂಭದಲ್ಲಿ ಸಾವ್ನ್‌ ಎಂದು ಪ್ರಾರಂಭವಾದ ಈ ಮ್ಯೂಸಿಕ್‌ ಸ್ಟ್ರಿಮಿಂಗ್‌ ಆಪ್‌ ಇದೀಗ ಜಿಯೋ ಸಂಗೀತದೊಂದಿಗೆ ವಿಲೀನಗೊಳಿಸಲಾಗಿದ್ದು, ಜಿಯೋಸಾವ್ನ್ ಎಂದು ಹೆಸರಿಸಲಾಗಿದೆ. ಜಿಯೋಸಾವ್ನ್ ಮ್ಯೂಸಿಕ್‌ ಸ್ಟ್ರಿಮಿಂಗ್‌ ಆಪ್‌ ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ 45 ದಶಲಕ್ಷಕ್ಕೂ ಹೆಚ್ಚು ಹಾಡು ಸಂಗ್ರಹಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಬಳಕೆದಾರರು ತಮ್ಮ ಜಿಯೋ ಕಾಲರ್ ಟ್ಯೂನ್‌ಗಳನ್ನು 70, 90 ರ ದಶಕದ ವಿಶಾಲ ಮ್ಯೂಸಿಕ್‌ ಲೈಬ್ರರಿಯಿಂದ ಮತ್ತು ಪ್ರಸ್ತುತ ರಾಪ್ಸ್ / ರೀಮಿಕ್ಸ್‌ಗಳಿಂದ ಹೊಂದಿಸಲು ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಇದು ಕೂಡ ಫ್ರೀಮಿಯಮ್ ಮತ್ತು ಪ್ರೀಮಿಯಂ ಯೋಜನೆಗಳನ್ನ ಹೊಂದಿದ್ದು, ತಿಂಗಳಿಗೆ ₹ 99 ರಿಂದ ಪ್ರಾರಂಭವಾಗುತ್ತವೆ.

ಗಾನಾ

ಗಾನಾ

ಇನ್ನು 2010 ರಲ್ಲಿ ಪ್ರಾರಂಭವಾದ gaana.com ಪ್ರಸ್ತುತ 100 ಮಿಲಿಯನ್ ಗೂ ಅಧಿಕ ಮಾಸಿಕ ಬಳಕೆದಾರರನ್ನು ಹೊಂದಿರುವ ಭಾರತದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್ ಸೇವೆಯಾಗಿದೆ. ಟೈಮ್ಸ್ ಇಂಟರ್ನೆಟ್ ನ ಒಡೆತನದ ಈ ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ನಲ್ಲಿ 21 ಭಾಷೆಗಳ 45 ದಶಲಕ್ಷಕ್ಕೂ ಅಧಿಕ ಹಾಡುಗಳ ಸಂಗ್ರಹವಿದೆ. ಅಲ್ಲದೆ Gaana.com ತನ್ನ ಬಳಕೆದಾರರಿಗೆ ತಮ್ಮದೇ ಆದ ಪಬ್ಲಿಕ್‌ ಮ್ಯೂಸಿಕ್‌ ಲೀಸ್ಟ್‌ ಅನ್ನು ರಚಿಸಲು ಅವಕಾಶವನ್ನ ನೀಡಲಾಗಿದೆ. ಇದನ್ನು ಇತರ gaana.com ಬಳಕೆದಾರರು ಸಹ ಬಳಸಬಹುದಾಗಿದದೆ. ಇನ್ನು ಇದರ ಬ್ಯುಸಿನೆಸ್‌ ಮಾಡೆಲ್‌ ನೋಡುವುದಾದರೆ ಇದರಲ್ಲಿ ಫ್ರೀಮಿಯಮ್ ಮತ್ತು ಗಾನಾ ಪ್ಲಸ್ ಯೋಜನೆಗಳು ಇವೆ. ಗಾನಾ ಪ್ಲಸ್‌ ಯೋಜನೆಗಳು ತಿಂಗಳಿಗೆ ₹ 99 ರಿಂದ ಪ್ರಾರಂಭವಾಗುತ್ತವೆ. ಪಾವತಿಸಿದ ಚಂದಾದಾರಿಕೆ ಯೋಜನೆಯಲ್ಲಿ ಎಚ್‌ಡಿ ಮ್ಯೂಸಿಕ್ ಸ್ಟ್ರೀಮಿಂಗ್, ಅನಿಯಮಿತ ಹಾಡುಗಳ ಜೊತೆಗೆ ಆಫ್‌ಲೈನ್ ಡೌನ್‌ಲೋಡ್ ಸೇರಿವೆ. ಪಾಡ್‌ಕಾಸ್ಟ್‌ ಮತ್ತು ರೇಡಿಯೋ ಸ್ಟ್ರೀಮಿಂಗ್ ಸಹ ಲಭ್ಯವಿದೆ.

ಯೂಟ್ಯೂಬ್ ಮ್ಯೂಸಿಕ್‌

ಯೂಟ್ಯೂಬ್ ಮ್ಯೂಸಿಕ್‌

ಸದ್ಯ ಮ್ಯೂಸಿಕ್‌ ಆನಂದಿಸಲು ಲಭ್ಯವಿರುವ ಆಪ್‌ಗಳಲ್ಲಿ ಯುಟ್ಯೂಬ್‌ ಮ್ಯೂಸಿಕ್‌ ಆಪ್‌ ಕೂಡ ಒಂದಾಗಿದೆ. ಆಡ್‌ ಫ್ರಿ ಮ್ಯೂಸಿಕ್‌ ಸ್ಟ್ರೀಮಿಂಗ್‌, ಸ್ಕಿಪ್ಪಿಂಗ್ ಮತ್ತು ಸ್ಕ್ರಬ್ಬಿಂಗ್, ಆಫ್‌ಲೈನ್ ಮತ್ತು ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ಇದರಲ್ಲಿ ಆನಂದಿಸಬಹುದಾಗಿದೆ. ಜೊತೆಗೆ 256 ಕಿಬಿಟ್‌ಗಳು / ಸೆಕೆಂಡ್ ಅನ್ನು ಒಳಗೊಂಡಿರುವ ಯೂಟ್ಯೂಬ್ ಮ್ಯೂಸಿಕ್ ಪೇಯ್ಡ್‌ ಪ್ಲ್ಯಾನ್‌ ತಿಂಗಳಿಗೆ ₹ 99 ರಿಂದ ಪ್ರಾರಂಭವಾಗುತ್ತದೆ. ಒಂದೇ ಅಪ್ಲಿಕೇಶನ್‌ನಲ್ಲಿ ವೀಡಿಯೊ ಮತ್ತು ಸಂಗೀತವನ್ನು ಮಾತ್ರ ಪ್ಲೇಬ್ಯಾಕ್ ಮಾಡುವ ಆಯ್ಕೆಯು ಯೂಟ್ಯೂಬ್ ಸಂಗೀತದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ವಿಂಕ್ ಮ್ಯೂಸಿಕ್‌

ವಿಂಕ್ ಮ್ಯೂಸಿಕ್‌

ಇನ್ನು ಏರ್‌ಟೆಲ್ ಮಾಲೀಕತ್ವದ, ಫೀ ಡೌನ್‌ಲೋಡ್‌ ಫೀಚರ್ಸ್ ಅನ್ನು ಒಳಗೊಂಡಿರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ ಅಂದರೆ ಅದು ವಿಂಕ್‌ ಮ್ಯೂಸಿಕ್‌ ಆಪ್‌ ಆಗಿದೆ. ಮ್ಯೂಸಿಕ್‌ ಸ್ಟ್ರೀಮಿಂಗ್‌ ಮ್ಯೂಸಿಕ್‌ ಆಪ್ಲಿಕೇಶನ್‌ಗಳನ್ನ ನೋಡುವುದಾದರೆ ಮೊದಲಿಗೆ ಇಂತಹ ಆಪ್ಲಿಕೇಶನ್‌ ಅನ್ನು ಪ್ರಾರಂಭಿಸಿದ್ದೆ ಏರ್‌ಟೆಲ್‌ ಅದು ಕೂಡ ವಿಂಕ್‌ ಆಪ್‌ ಎಂದೇ ಹೇಳಬಹುದಾಗಿದೆ. ವಿಂಕ್ ಮ್ಯೂಸಿಕ್‌ ಭಾರತದ ಪ್ರಮುಖ ಎಲ್ಲಾ ಭಾಷೆಗಳ ಮ್ಯೂಸಿಕ್‌ ಲೈಬ್ರರಿಯನ್ನ ಹೊಂದಿದೆ. ಇನ್ನು ಪಾವತಿಸಿದ ಚಂದಾದಾರಿಕೆ ಯೋಜನೆಗಳು ತಿಂಗಳಿಗೆ ₹ 60 ರಿಂದ ಪ್ರಾರಂಭವಾಗಲಿದ್ದು, ಫ್ರೀ ಸ್ಟ್ರೀಮಿಂಗ್ ಜೊತೆಗೆ 1 ತಿಂಗಳ ಉಚಿತ ಟ್ರಯಲ್‌ ಪಿರಿಯಡ್‌ ಅನ್ನು ಸಹ ಒಳಗೊಂಡಿರುತ್ತದೆ.

Best Mobiles in India

English summary
Best Music Streaming Apps in India that you should Subscribe.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X