Subscribe to Gizbot

ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ಮಾಹಿತಿ ಪಡೆಯಿರಿ

Written By:

ಇಂದಿನ ಯುಗದಲ್ಲಿ ಇಂಟರ್ನೆಟ್ ಇಲ್ಲದೆಯೇ ಸಾಮಾನ್ಯ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಆದ್ದರಿಂದಲೇ ಇಂದು ಇಂಟರ್ನೆಟ್ ಅತ್ಯಗತ್ಯ ಅಂಶವಾಗಿರುವುದರಿಂದ ಇಂಟರ್ನೆಟ್ ಇಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲ ಎಂಬುದಂತೂ ದಿಟವಾಗಿದೆ. ಆದರೆ ಇಂಟರ್ನೆಟ್ ವ್ಯವಸ್ಥೆಯನ್ನು ಎಲ್ಲಾ ಸಮಯವೂ ಎಲ್ಲಾ ಕಾಲದಲ್ಲಿಯೂ ಪಡೆದುಕೊಳ್ಳುವುದು ಸಾಧಾರಣ ಮಾತಲ್ಲ. ನೆಟ್‌ವರ್ಕ್ ಇಲ್ಲದ ಸಮಯದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ನೀವು ಪಡೆದುಕೊಳ್ಳಲು ಸಾಧ್ಯವೇ ಇಲ್ಲ.

ಓದಿರಿ: ಇಂಟರ್ನೆಟ್ ಇಲ್ಲದಿದ್ದರೂ ಗೂಗಲ್ ಮ್ಯಾಪ್ಸ್ ಬಳಸಿ

ಹಾಗಿದ್ದರೆ ಇದಕ್ಕೆ ಪರಿಹಾರವೇನು ಎಂಬುದಾಗಿ ನೀವು ಆಲೋಚನೆ ಮಾಡುತ್ತಿದ್ದೀರಿ ತಾನೇ? ಹೆಚ್ಚು ಚಿಂತಿಸಬೇಡಿ ಕೆಲವೊಂದು ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ಗೆ ಅಳವಡಿಸುವ ಮೂಲಕ ಇಂಟರ್ನೆಟ್ ಸೌಲಭ್ಯವಿಲ್ಲ ಎಂಬ ತೊಡಕನ್ನು ನಿಮಗೆ ನೀಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಅಪ್ಲಿಕೇಶನ್‌ಗಳ ಬಗ್ಗೆ ತಿಳಿದುಕೊಳ್ಳುವ ನಿಮ್ಮದಾದಲ್ಲಿ ಕೆಳಗಿನ ಸ್ಲೈಡರ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೀಡ್‌ಮಿ

ಆಫ್‌ಲೈನ್‌ನಲ್ಲಿ ನ್ಯೂಸ್ ಓದಲು

ಅತ್ಯದ್ಭುತ ಫೀಡ್‌ಮಿ ಅಪ್ಲಿಕೇಶನ್ ಅಧಿಕೃತ ಆಫ್‌ಲೈನ್ ನ್ಯೂಸ್ ಆಪ್ ಆಗಿದೆ. ಆಫ್‌ಲೈನ್ ಸಿಂಕಿಂಗ್ ಅನ್ನು ಇದರಲ್ಲಿ ನಿರ್ವಹಿಸಲಾಗಿದೆ. ಎಲ್ಲಾ ಪಠ್ಯಗಳು ಮತ್ತು ಇಮೇಜ್‌ಗಳು ನಿಮ್ಮ ಫೋನ್‌ಗೆ ಸಿಂಕ್ ಆಗುತ್ತವೆ. ಇಂಟರ್ನೆಟ್ ಸೌಲಭ್ಯವಿಲ್ಲದೆಯೇ ನಿಮ್ಮ ಸುದ್ದಿಗಳನ್ನು ತಲುಪಬಹುದಾಗಿದೆ.

ಪ್ಲೇಯರ್ ಎಫ್‌ಎಮ್

ಪೋಡ್‌ಕಾಸ್ಟ್ ಆಲಿಸಲು

ಪ್ಲೇಯರ್ ಎಫ್‌ಎಮ್ ಆಕರ್ಷಕ ಉಚಿತ ಪೋಡ್‌ಕಾಸ್ಟ್ ಅಪ್ಲಿಕೇಶನ್ ಆಗಿದ್ದು ಯಾವುದೇ ಜಾಹೀರಾತುಗಳಿಲ್ಲದೆ ನಿಮಗೆ ಬೇಕಾದ ಪೋಡ್‌ಕಾಸ್ಟ್ ಆಲಿಸಬಹುದಾಗಿದೆ.

ಗೂಗಲ್ ಮ್ಯಾಪ್ಸ್

ಆಫ್‌ಲೈನ್ ಪ್ರಯಾಣ

ಆಂಡ್ರಾಯ್ಡ್‌ಗಾಗಿ ಆಫ್‌ಲೈನ್‌ನಲ್ಲಿ ಗೂಗಲ್ ಮ್ಯಾಪ್ಸ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಈ ಫೀಚರ್ ಅನ್ನು ನೀವು ಬಳಸುವುದು ಖಂಡಿತ.

ಟ್ರಾನ್ಸಿಟ್ ಆಪ್

ಬಸ್ ಮತ್ತು ಟ್ರೈನ್ ವೇಳಾಪಟ್ಟಿ

ಟ್ರಾನ್ಸಿಟ್ ಆಪ್ ನಿಮಗೆ ಬೇಕಾದ ವೇಳಾಪಟ್ಟಿಯನ್ನು ಕ್ಷಣಾರ್ಧದಲ್ಲಿ ಒದಗಿಸುವಂತಹುದ್ದಾಗಿದೆ. ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮಗೆ ಬೇಕಾದ ಬಸ್ಸು ಅಥವಾ ಟ್ರೈನ್ ನಿಮಗೆ ಹತ್ತಿರದ ಸ್ಟಾಪ್‌ನಲ್ಲಿ ಯಾವಾಗ ತಲುಪುತ್ತದೆ ಎಂಬುದನ್ನು ಅರಿತುಕೊಳ್ಳಬಹುದು.

ಕಿವಿಕ್ಸ್

ವಿಕೀಪೀಡಿಯಾ ಆಫ್‌ಲೈನ್‌ನಲ್ಲಿ ಓದಲು

ನಿಮ್ಮ ಜ್ಞಾನವನ್ನು ವೃದ್ಧಿಸುವ ವಿಕೀಪೀಡಿಯಾ ಸೌಲಭ್ಯವನ್ನು ಆಫ್‌ಲೈನ್‌ನಲ್ಲಿ ಓದಲು ಕಿವಿಕ್ಸ್ ನಿಮಗೆ ಸಹಾಯ ಮಾಡುತ್ತದೆ.

ಎಸ್‌ಎಮ್‌ಎಸ್ ಮಾರ್ಟ್

ಪಠ್ಯ ಸಂದೇಶಗಳ ಮೂಲಕ ಇಂಟರ್ನೆಟ್

ಡೇಟಾ ಸಂಪರ್ಕವಿಲ್ಲದೆಯೇ ಇತ್ತೀಚಿನ ಟ್ವೀಟ್‌ಗಳು ಮತ್ತು ಪ್ರಸ್ತುತ ಸುದ್ದಿಗಳನ್ನು ಆಫ್‌ಲೈನ್‌ನಲ್ಲಿ ಓದಲು ಎಸ್‌ಎಮ್‌ಎಸ್ ಮಾರ್ಟ್ ಅಪ್ಲಿಕೇಶನ್ ಸಾಕು.

ಆಫ್‌ಲೈನ್‌

ಫೋನ್‌ ಅನ್ನು ಆಫ್‌ಲೈನ್‌ನಲ್ಲಿ ಬಳಸುವುದು ಹೇಗೆ?

ಮೊಬೈಲ್ ಡೇಟಾ ಬಳಕೆಯನ್ನು ಇಳಿಕೆ ಮಾಡುವ ಹಲವಾರು ಅಪ್ಲಿಕೇಶನ್ ಉಪಾಯಗಳನ್ನು ನಾವು ನಿಮಗೆ ತಿಳಿಸಿದ್ದು ಆಫ್‌ಲೈನ್‌ನಲ್ಲಿ ಫೋನ್ ಅನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚು ಉಚಿತ ವೈಫೈ ಬಳಸಲು ಕಲಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can find out some tricky way to find out using phone without internet. Yes Some applications helps you to fetch the facility without internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot