ಇಂಟರ್ನೆಟ್ ಇಲ್ಲದಿದ್ದರೂ ಗೂಗಲ್ ಮ್ಯಾಪ್ಸ್ ಬಳಸಿ

By Shwetha
|

ನೀವು ನಿಮ್ಮ ಪ್ರಯಾಣ ಸಮಯದಲ್ಲಿ ನಕ್ಷೆಗಳನ್ನು ಬಳಸಿಲ್ಲ ಎಂದಾದಲ್ಲಿ ಚಿಂತಿಸದಿರಿ. ಆನ್‌ಲೈನ್‌ನಲ್ಲಿ ನಿಮ್ಮ ಪ್ರಯಾಣಕ್ಕೆ ಅನುಕೂಲಕರವಾಗಿರುವ ಹಲವಾರು ಆಯ್ಕೆಗಳು ಲಭ್ಯವಿದ್ದು, ನಿಮ್ಮ ಪ್ರಯಾಣವನ್ನು ಈ ಸೌಲಭ್ಯಗಳು ಸರಳಗೊಳಿಸುವುದಂತೂ ನಿಜ. ಅದರಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಗೂಗಲ್ ಮ್ಯಾಪ್ಸ್ ಕುರಿತು ಇಂದಿನ ಲೇಖನದಲ್ಲಿ ನಾವು ನಿಮ್ಮನ್ನು ಸಮೀಪಿಸುತ್ತಿದ್ದೇವೆ.

ಓದಿರಿ: ರೋಗಿಯನ್ನು ಆರೋಗ್ಯವಂತನನ್ನಾಗಿಸುವ ಆಪಲ್ ವಾಚ್ ರಹಸ್ಯವೇನು?

ನಿಮ್ಮ ರೋಮಾಂಚಕ ಸಾಹಸಗಳು ಅಂತೆಯೇ ಮೋಜಿನ ಪ್ರಯಾಣದಲ್ಲಿ ಅತ್ಯುತ್ತಮ ಸಂಗಾತಿ ಎಂದೆನಿಸಿರುವ ಗೂಗಲ್ ಮ್ಯಾಪ್ಸ್ ಕುರಿತಾದ ರೋಚಕ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ಒದಗಿಸುತ್ತಿದ್ದೇವೆ.

ಗೂಗಲ್ ಮ್ಯಾಪ್ಸ್‌ನಲ್ಲಿ ಬೈಕ್ ಪಾತ್‌ಗಳು

ಗೂಗಲ್ ಮ್ಯಾಪ್ಸ್‌ನಲ್ಲಿ ಬೈಕ್ ಪಾತ್‌ಗಳು

ನೀವು ಬೈಕ್‌ನಲ್ಲಿ ಪ್ರಯಾಣವನ್ನು ಆಸ್ವಾದಿಸುವವರು ಎಂದಾದಲ್ಲಿ ನಿಮಗೆ ಸಂಚಾರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಇದು ಒದಗಿಸಿಕೊಡುತ್ತದೆ. ಈ ಆಯ್ಕೆ ಡೆಸ್ಕ್‌ಟಾಪ್‌ನಲ್ಲಿ ಮಾತ್ರ ಲಭ್ಯವಿದ್ದು, ಮೊಬೈಲ್‌ನಲ್ಲಿ ಬರಬೇಕಷ್ಟೇ.

ಸ್ನೇಹಿತರೊಂದಿಗೆ ನಿಮ್ಮ ಸ್ಥಳ ಹಂಚಿಕೊಳ್ಳಲು

ಸ್ನೇಹಿತರೊಂದಿಗೆ ನಿಮ್ಮ ಸ್ಥಳ ಹಂಚಿಕೊಳ್ಳಲು

ನೀವು ಇರುವ ಸ್ಥಳದ ನಿಖರ ವಿಳಾಸ ನಿಮಗೆ ತಿಳಿದಿಲ್ಲ ಎಂದಾದಲ್ಲಿ ಗೂಗಲ್ ಮ್ಯಾಪ್ಸ್ ಇದನ್ನು ಸುಲಭಗೊಳಿಸುತ್ತದೆ. ನಿಮ್ಮ ಫೋನ್‌ನಲ್ಲಿ ನಿಮ್ಮ ಸ್ಥಾನದ ಮೇಲೆ ಒತ್ತಿರಿ ಇಲ್ಲಿ ನಿಮಗೆ ಶೇರ್ ಆಪ್ಶನ್ ಲಭ್ಯವಿದ್ದು ನಿಮ್ಮ ಸ್ನೇಹಿತರಿಗೆ ರವಾನಿಸಬಹುದು.

ವೈಫೈ ಲಭ್ಯವಿಲ್ಲದೇ ಇರುವ ಸಂದರ್ಭದಲ್ಲಿ

ವೈಫೈ ಲಭ್ಯವಿಲ್ಲದೇ ಇರುವ ಸಂದರ್ಭದಲ್ಲಿ

ನೀವು ಹೋಗಬೇಕೆಂದಿರುವ ಪ್ರದೇಶದಲ್ಲಿ ಫೋನ್ ಸೇವೆ ಅಥವಾ ವೈಫೈ ಸೌಲಭ್ಯ ಇಲ್ಲ ಎಂದ ಪಕ್ಷದಲ್ಲಿ ಮ್ಯಾಪ್ಸ್ ನಿಮಗೆ ಮಾರ್ಗದರ್ಶಕನಾಗುತ್ತದೆ. ಆಫ್‌ಲೈನ್ ಮ್ಯಾಪ್ ಬಳಸಿಕೊಂಡು ಆ ಸ್ಥಳವನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

ಹೋಮ್ ಮತ್ತು ವರ್ಕ್ ವಿಳಾಸ ಲೇಬಲ್ ಮಾಡಿ

ಹೋಮ್ ಮತ್ತು ವರ್ಕ್ ವಿಳಾಸ ಲೇಬಲ್ ಮಾಡಿ

ಮನೆ ಮತ್ತು ಕಚೇರಿ ವಿಳಾಸವನ್ನು ಲೇಬಲ್ ಮಾಡಿಕೊಳ್ಳಿ ಇದರಿಂದ ಆಗಾಗ್ಗೆ ನಿರ್ದಿಷ್ಟ ಸಂಖ್ಯೆಗಳು ಮತ್ತು ರಸ್ತೆಗಳನ್ನು ಟೈಪ್ ಮಾಡುವ ತಲೆನೋವು ಇರುವುದಿಲ್ಲ.

ಎಟಿಎಮ್ ಹುಡುಕಲು

ಎಟಿಎಮ್ ಹುಡುಕಲು

ನಿಮ್ಮ ಸ್ಥಳದ ಸಮೀಪವಿರುವ ಎಟಿಎಮ್‌ಗಳ ಮಾಹಿತಿಯನ್ನು ಗೂಗಲ್ ಮ್ಯಾಪ್ಸ್ ಕ್ಷಣದಲ್ಲಿ ನಿಮಗೆ ನೀಡಲಿದ್ದು ಇದರಿಂದ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡುವ ಸಂಭವ ಇರುವುದಿಲ್ಲ.

ವಾಹನ ಸೌಕರ್ಯ

ವಾಹನ ಸೌಕರ್ಯ

ಕೊನೆಯ ಟ್ರೈನ್ ಮಿಸ್ ಆಗಬಹುದೆಂಬ ಭಯ ಬೇಡ. ಗೂಗಲ್ ಮ್ಯಾಪ್ಸ್ ಬಳಸಿ ನಿಮ್ಮ ಕೊನೆಯ ಟ್ರೈನ್ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಸ್ಥಳದ ಮಾಹಿತಿ ಕಾಪಿಡಲು

ಸ್ಥಳದ ಮಾಹಿತಿ ಕಾಪಿಡಲು

ನಿಮ್ಮ ಫೋನ್‌ನಲ್ಲಿ ಗೂಗಲ್ ಮ್ಯಾಪ್ಸ್ ನೀವು ಪ್ರವೇಶಿಸಿದ ಸ್ಥಳದ ಮಾಹಿತಿಯನ್ನು ಕಾಪಿಡುತ್ತದೆ.

ನಿಮ್ಮ ಖರೀದಿಯ ಸ್ಥಳಗಳು

ನಿಮ್ಮ ಖರೀದಿಯ ಸ್ಥಳಗಳು

ಕಚೇರಿ ಕೆಲಸದ ನಂತರ ಶಾಪಿಂಗ್ ಯೋಜಿಸಿರುವಿರಾ? ಇದಕ್ಕೂ ಗೂಗಲ್ ಮ್ಯಾಪ್ಸ್‌ನಲ್ಲಿ ತಕ್ಕುದಾದ ಉತ್ತರ ಇದೆ.

ನಿಮ್ಮ ಇಷ್ಟದ ಸ್ಥಳವನ್ನು ಪಿನ್ ಮಾಡಲು

ನಿಮ್ಮ ಇಷ್ಟದ ಸ್ಥಳವನ್ನು ಪಿನ್ ಮಾಡಲು

ನಿಮ್ಮ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ನೀವು ಇಷ್ಟಪಟ್ಟಿರುವ ಸ್ಥಳವನ್ನು ಗೂಗಲ್ ಮ್ಯಾಪ್ಸ್ ಬಳಸಿ ಪಿನ್ ಮಾಡಬಹುದಾಗಿದೆ.

ಜೂಮ್ ಇನ್ ಜೂಮ್ ಔಟ್ ಮಾಡಲು

ಜೂಮ್ ಇನ್ ಜೂಮ್ ಔಟ್ ಮಾಡಲು

ನಕ್ಷೆಯಲ್ಲಿ ಸ್ಥಳವನ್ನು ಸ್ಪರ್ಶಿಸಿ ಮತ್ತು ಕೂಡಲೇ ಪುನಃ ಅದನ್ನು ಸ್ಪರ್ಶಿಸಿ. ನಿಮ್ಮ ಬೆರಳನ್ನು ತೆಗೆಯದೇ, ಜೂಮ್ ಮಾಡಲು ಕೆಳಕ್ಕೆ ಎಳೆಯಿರಿ ಮತ್ತು ಜೂಮ್ ಔಟ್ ಮಾಡಲು ಮೇಲಕ್ಕೆ ಎಳೆಯಿರಿ.

Best Mobiles in India

English summary
One of the most popular is Google Maps, so we've compiled a list of tips and tricks to make you a power user.See Google Maps tips and tricks you probably didn't know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X