Airtel vs Jio vs Vi: 100 ರೂ, ಒಳಗಿನ ಬೆಸ್ಟ್‌ ಪ್ರಿಪೇಯ್ಡ್‌ ಪ್ಲ್ಯಾನ್‌ಗಳು!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ಆರ್ಭಟ ಜೋರಾಗಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯಗಳನ್ನು ನೀಡುವ ಮೂಲಕ ಖಾಸಗಿ ಟೆಲಿಕಾಂಗಳು ಗಮನ ಸೆಳೆದಿವೆ. ಇದರಲ್ಲಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ, ಮತ್ತು ವಿ ಟೆಲಿಕಾಂಗಳು ಹಲವು ಆಕರ್ಷಕ ಪ್ರಿಪೇಯ್ಡ್‌ ಹಾಗೂ ಪೊಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ 100ರೂ,ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಗಳು ಕೂಡ ಸೇರಿವೆ.

ಟೆಲಿಕಾಂ

ಹೌದು, ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಗಳು ಹಲವು ಆಯ್ಕೆಯಲ್ಲಿ 100ರೂ,ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಗಳನ್ನು ಸಹ ಹೊಂದಿವೆ. ಈ ಯೋಜನೆಗಳು ಡೇಟಾ ಅಥವಾ ಟಾಕ್‌ಟೈಮ್ ಪ್ರಯೋಜನಗಳನ್ನು ನೀಡುತ್ತವೆ, ಅಥವಾ ಕೆಲವೊಮ್ಮೆ ಎರಡನ್ನೂ ಕೂಡ ನೀಡುತ್ತವೆ. ಅಲ್ಲದೆ ತಮ್ಮ ಯೋಜನೆಗಳನ್ನು ಸಕ್ರಿಯವಾಗಿಡಲು ಬಯಸುವ ಬಳಕೆದಾರರಿಗೆ ಈ ಯೋಜನೆಗಳು ಸೂಕ್ತವಾಗಿವೆ. ಹಾಗಾದ್ರೆ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಗಳು ಹೊಂದಿರುವ 100ರೂ,ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಿಪೇಯ್ಡ್

100ರೂ,ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಗನ್ನು ಎಲ್ಲಾ ಖಾಸಗಿ ಟೆಲಿಕಾಂಗಳು ಪರಿಚಯಿಸಿವೆ. ತಮ್ಮ ಪ್ಲ್ಯಾನ್‌ಗಳನ್ನು ಆಕ್ಟಿವ್‌ ಆಗಿ ಇಡಲು ಬಯಸುವ ಬಳಕೆದಾರರಿಗೆ ಈ ಪ್ಲ್ಯಾನ್‌ಗಳು ಸೂಕ್ತ ಎನಿಸಲಿವೆ. ಮಾಸಿಕ, ವಾರ್ಷಿಕ ಪ್ಲ್ಯಾನ್‌ಗಳ ನಡುವೆ ಈ ಮಾದರಿಯ ಪ್ಲ್ಯಾನ್‌ಗಳು ಕೂಡ ಗ್ರಾಹಕರನ್ನು ಆಕರ್ಷಿಸಿದೆ. ಯಾರು ಅಲ್ಪಾವಧಿಯ ಪ್ರಯೋಜನಗಳನ್ನು ಮಾತ್ರ ಬಯಸುತ್ತಾರೆ ಅಂತಹವರಿಗೆ ಇವುಗಳು ಸೂಕ್ತ. ಆಡ್-ಆನ್ ಇಂಟರ್ನೆಟ್ ಪ್ರಯೋಜನಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಕೆಲವು ಯೋಜನೆಗಳು ಸಹ ಉಪಯುಕ್ತವಾಗಲಿವೆ.

ಏರ್‌ಟೆಲ್ ಟೆಲಿಕಾಂ 100 ರೂ.ಗಿಂತ ಕಡಿಮೆ ಬೆಲೆಯ ಪ್ಲ್ಯಾನ್‌ಗಳು!

ಏರ್‌ಟೆಲ್ ಟೆಲಿಕಾಂ 100 ರೂ.ಗಿಂತ ಕಡಿಮೆ ಬೆಲೆಯ ಪ್ಲ್ಯಾನ್‌ಗಳು!

ಏರ್‌ಟೆಲ್ ಟೆಲಿಕಾಂ 100 ರೂ.ಗಿಂತ ಕಡಿಮೆ ಬೆಲೆಯ ಅಡಿಯಲ್ಲಿ ರೀಚಾರ್ಜ್ ಪ್ಲಾನ್ ಗಳಲ್ಲಿ 19ರೂ, 48ರೂ, 49ರೂ, ಮತ್ತು 79ರೂ, ಪ್ಲ್ಯಾನ್‌ಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ 19ರೂ ಮತ್ತು 48ರೂ ಪ್ಲಾನ್ ಗಳು ಡೇಟಾವನ್ನು ಮಾತ್ರ ನೀಡುತ್ತವೆ. ಇದರಲ್ಲಿ ಎರಡು ದಿನಗಳವರೆಗೆ 200ಎಂಬಿ ಮತ್ತು 28 ದಿನಗಳವರೆಗೆ 3ಜಿಬಿ ಡೇಟಾ ದೊರೆಯಲಿದೆ. ಹಾಗೆಯೇ 49 ಮತ್ತು 79ರೂ, ಯೋಜನೆಗಳು ಕ್ರಮವಾಗಿ 100 MB ಮತ್ತು 200 MB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಗೆ ಟಾಕ್‌ಟೈಮ್‌ನೊಂದಿಗೆ ನೀಡುತ್ತವೆ.

ವಿ ಟೆಲಿಕಾಂ 100 ರೂ.ಗಿಂತ ಕಡಿಮೆ ಬೆಲೆಯ ಪ್ಲ್ಯಾನ್‌ಗಳು!

ವಿ ಟೆಲಿಕಾಂ 100 ರೂ.ಗಿಂತ ಕಡಿಮೆ ಬೆಲೆಯ ಪ್ಲ್ಯಾನ್‌ಗಳು!

ವಿ ಟೆಲಿಕಾಂನಲ್ಲಿ 100 ರೂ.ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳ ಶ್ರೇಣಿಯನ್ನು 16ರೂ, 19ರೂ, 39ರೂ, 48ರೂ, 49ರೂ, 79ರೂ, ಅಡಿಯಲ್ಲಿ ಕಾಣಬಹುದಾಗಿದೆ.
16ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಈ ರೀಚಾರ್ಜ್ ಯೋಜನೆಯು 1 ಜಿಬಿ ಡೇಟಾವನ್ನು 24 ಗಂಟೆಗಳವರೆಗೆ ಮತ್ತು ವಿ ಆಪ್‌ನಲ್ಲಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡುತ್ತದೆ.
19ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಈ ಪ್ಲಾನ್ 200 MB ಡೇಟಾ ಮತ್ತು 2 ದಿನಗಳ ವ್ಯಾಲಿಡಿಟಿಗೆ ಅನಿಯಮಿತ ಟಾಕ್‌ಟೈಮ್ ನೀಡುತ್ತದೆ.
39ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಇದು ಕಾಂಬೋ ಪ್ಲಾನ್ ಮತ್ತು ಟಾಕ್‌ಟೈಮ್ ಮತ್ತು 100MB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಗೆ ನೀಡುತ್ತದೆ.
48ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಇದು ಡೇಟಾ-ಮಾತ್ರ ರೀಚಾರ್ಜ್ ಮತ್ತು 28 ದಿನಗಳವರೆಗೆ 3 ಜಿಬಿ ಡೇಟಾವನ್ನು ನೀಡುತ್ತದೆ. ಫೋನ್ ಅಥವಾ ವೆಬ್ ಆಪ್ ಮೂಲಕ ರೀಚಾರ್ಜ್ ಮಾಡಿದರೆ ಈ ಯೋಜನೆ 200 MB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.
49ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಇದು ಕಾಂಬೊ ರೀಚಾರ್ಜ್ ಪ್ಲಾನ್ ಮತ್ತು 28 ದಿನಗಳವರೆಗೆ 300 MB ಡೇಟಾವನ್ನು ನೀಡುತ್ತದೆ.
79ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಈ ಪ್ಲಾನ್ 400 MB ಡೇಟಾ ಮತ್ತು 64 ದಿನಗಳ ಟಾಕ್‌ಟೈಮ್ ನೀಡುತ್ತದೆ. ಫೋನ್ ಅಥವಾ ವೆಬ್ ಆಪ್ ಮೂಲಕ ರೀಚಾರ್ಜ್ ಮಾಡಿದರೆ ಈ ಯೋಜನೆ 200 MB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.
98ರೂ, ಪ್ರಿಪೇಯ್ಡ್‌ ಪ್ಲ್ಯಾನ್‌: ಇದು ಡಬಲ್ ಡೇಟಾ ಆಫರ್ ಮತ್ತು 28 ದಿನಗಳವರೆಗೆ 12GB ಡೇಟಾವನ್ನು ನೀಡುತ್ತದೆ

ಜಿಯೋ

ಜಿಯೋ

ಇನ್ನು ಜಿಯೋ ಟೆಲಿಕಾಂನ 100 ರೂ.ಗಿಂತ ಕಡಿಮೆ ಬೆಲೆಯ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ 10ರೂ, 20ರೂ, 50ರೂ ಮತ್ತು 100ರೂ, ಪ್ಲ್ಯಾನ್‌ಗಳನ್ನ ಕಾಣಬಹುದಾಗಿದೆ. ಇವುಗಳು ಕ್ರಮವಾಗಿ 1ಜಿಬಿ, 2 ಜಿಬಿ, 5 ಜಿಬಿ ಮತ್ತು 10 ಜಿಬಿ ಡೇಟಾ ನೀಡುತ್ತದೆ. ಈ ಯೋಜನೆಗಳು 124, 249, 656 ಮತ್ತು 1362 ಐಯುಸಿ ನಿಮಿಷಗಳ ಟಾಕ್‌ಟೈಮ್ ಪ್ರಯೋಜನಗಳನ್ನು ನೀಡುತ್ತವೆ.

Best Mobiles in India

English summary
These plans offer data or talktime benefits, or sometimes they offer both and are ideal for users who are looking to keep their plans active or who only want short-term benefits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X